ಸ್ಟ್ರೀಟ್ ಫುಡ್ ಸ್ವಚ್ಛತೆ ವಿಷ್ಯದಲ್ಲಿ ವಿದೇಶಿಗರ ಬಾಯಿಗೆ ಭಾರತ ಆಹಾರವಾಗಿದೆ. ಸ್ಟ್ರೀಟ್ ಫುಡ್ ತಯಾರಿಕೆ ವಿಧಾನವನ್ನು ವಿದೇಶಿಗರು ಗೇಲಿ ಮಾಡಿದ್ದಾರೆ. ಇದ್ರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದೆ.
ಬೀದಿ ಬದಿ ವ್ಯಾಪಾರ ಹಾಗೂ ಸ್ವಚ್ಛತೆ ವಿರುದ್ಧ ಪದಗಳು ಎನ್ನುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ಟ್ರೀಟ್ ಫುಡ್ ತಯಾರಕರು ಸ್ವಚ್ಛತೆ ಕಾಯ್ದುಕೊಳ್ಳುತ್ತಿಲ್ಲ ಎನ್ನುವ ಗಂಭಿರ ಆರೋಪವಿದೆ. ಅನೇಕ ಕಡೆಯಲ್ಲಿ ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡಲಾಗಿದ್ದು, ಅದ್ರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿರುತ್ತವೆ. ಅಗತ್ಯಕ್ಕಿಂತ ಹೆಚ್ಚು ಎಣ್ಣೆ ಬಳಸುವುದು ಹಾಗೆ ಕಲಬೆರಿಕೆ ಎಣ್ಣೆ, ಆಹಾರ ಪದಾರ್ಥಗಳ ಬೆರೆಸುವಿಕೆ ಸೇರಿದಂತೆ ಸ್ಟ್ರೀಟ್ ಫುಡ್ ಗೆ ಸಂಬಂಧಿಸಿದ ಅನೇಕ ವಿಡಿಯೋಗಳನ್ನು ನೀವು ನೋಡ್ತಿರುತ್ತೀರಿ. ಸ್ವಚ್ಛತೆ ಇಲ್ಲದ ಕಾರಣ ಆರೋಗ್ಯ ಹದಗೆಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿಯೇ ಸ್ಟ್ರೀಟ್ ಫುಡ್ ಸೇವನೆಯಿಂದ ದೂರವಿರುವಂತೆ ತಜ್ಞರು ಸಲಹೆ ಕೂಡ ನೀಡ್ತಿರುತ್ತಾರೆ. ನಮ್ಮ ದೇಶದ ಈ ಅಸ್ವಸ್ಥತೆಯನ್ನು ಇಡೀ ವಿಶ್ವದ ಜನ ನೋಡಿದೆ. ಒಂದಿಷ್ಟು ಸ್ಟ್ರೀಟ್ ಫುಡ್ ತಯಾರಕರು ಮಾಡುವ ತಪ್ಪು ಕೆಲಸ ಎಲ್ಲ ವ್ಯಾಪಾರಸ್ಥರ ಮಾನ ತೆಗೆಯುತ್ತಿದೆ. ಬೇರೆ ದೇಶದ ಜನರು ಭಾರತದ ಎಲ್ಲ ಸ್ಟ್ರೀಟ್ ಫುಡ್ ತಯಾರಕರು ಕೊಳಕು ಎನ್ನುವ ನಿರ್ಧಾರಕ್ಕೆ ಬಂದಂತಿದೆ.
ಸದ್ಯ ಸಾಮಾಜಿಕ ಜಾಲತಾಣ (Social Network) ದಲ್ಲಿ ವಿಡಿಯೋ (Video) ಒಂದು ವೈರಲ್ ಆಗಿದೆ. ಆಫ್ರಿಕಾದ ಕೆಲವರು ಭಾರತದ ಸ್ಟ್ರೀಟ್ ಫುಡ್ (Street Food) ತಯಾರಕರನ್ನು ಗೇಲಿ ಮಾಡಿದ್ದಾರೆ. ಅವರು ಹೇಗೆ ಸ್ವಚ್ಛತೆಯನ್ನು ನಿರ್ಲಕ್ಷ್ಯ ಮಾಡ್ತಿದ್ದಾರೆ ಎಂಬುದನ್ನು ಅತಿಯಾಗಿ ತೋರಿಸಿದ್ದಾರೆ.
undefined
ಕೇವಲ ಕಡಲೆಯಲ್ಲ, ಈ ಆಹಾರಗಳನ್ನೂ ನೀರಲ್ಲ ನೆನೆಸಿ ತಿಂದ್ರೆ ಸಿಗುತ್ತೆ ಡಬಲ್ ಬೆನಿಫಿಟ್
ಟಿಕ್ ಟಾಕ್ ನಲ್ಲಿ ಹಂಚಿಕೊಂಡ ಈ ವಿಡಿಯೋ ಬೇರೆ ಸಾಮಾಜಿಕ ಜಾಲತಾಣದಲ್ಲೂ ವೈರಲ್ ಆಗಿದೆ. ಇದನ್ನು ನೋಡಿದ ಭಾರತೀಯರು ವಿಡಿಯೋವನ್ನು ಖಂಡಿಸಿದ್ದಾರೆ. ಒಂದೆಡೆ ಆಫ್ರಿಕಾದಲ್ಲಿ ಆಹಾರದ ಕೊರತೆ ಇದೆ. ಸಾಮಾನ್ಯ ನಾಗರಿಕರು ಹಸಿವಿನಿಂದ ಬಳಲುತ್ತಿದ್ದಾರೆ. ಇಷ್ಟಿದ್ರೂ ಜನರು ವಿಡಿಯೋ ಮಾಡುವ ನೆಪದಲ್ಲಿ ಆಹಾರವನ್ನು ಹಾಳು ಮಾಡ್ತಿದ್ದಾರೆಂದು ನೆಟ್ಟಿಗರು ಆಫ್ರಿಕನ್ನರನ್ನು ಖಂಡಿಸಿದ್ದಾರೆ.
ಈ ವಿಡಿಯೋದಲ್ಲಿ ವ್ಯಕ್ತಿ ತನ್ನ ಕಾಲುಗಳನ್ನು ಒಂದು ಪಾತ್ರೆಯೊಳಗೆ ಹಾಕಿದ್ದಾನೆ. ಪಾತ್ರೆಯಲ್ಲಿ ಕೆಲ ಆಹಾರ ಇದೆ. ಸುತ್ತಮುತ್ತ ಕೊಳಕಿಗೆ. ಆಹಾರ ಕೇಳಿ ಬರುವ ಗ್ರಾಹಕರಿಗೆ ಕಾಲು ಹಾಕಿರುವ ಪಾತ್ರೆಯಿಂದಲೇ ಆಹಾರ ತೆಗೆದು ನೀಡುವ ವ್ಯಕ್ತಿ, ಅಲ್ಲಿಯೇ ಕಾಲು ತೊಳೆಯುತ್ತಾನೆ. ತನ್ನ ದೇಹವನ್ನು ಮುಟ್ಟಿಕೊಳ್ತಾನೆ. ಗ್ಲೌಸ್ ಹಾಕದೆ ಹಣವನ್ನು ಪಡೆದು, ಆಹಾರ ನೀಡ್ತಾನೆ. ಈ ಸಂದರ್ಭದಲ್ಲಿ ಒಂದಿಷ್ಟು ಆಹಾರ ಹಾಳು ಮಾಡಿರೋದನ್ನು ನೀವು ನೋಡ್ಬಹುದು.
ಸಾಮಾಜಿಕ ಜಾಲತಾಣದಲ್ಲಿ 5.8 ದಶಲಕ್ಷಕ್ಕೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. 26 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಕಮೆಂಟ್ ಸೆಕ್ಷನ್ ನಲ್ಲಿ ಜನರು ಇದ್ರ ಬಗ್ಗೆ ಕಮೆಂಟ್ ಕೂಡ ಮಾಡಿದ್ದಾರೆ.
ಈಗ ಆಫ್ರಿಕಾ ಕೂಡ ಭಾರತೀಯ ಬೀದಿ ಆಹಾರವನ್ನು ಗೇಲಿ ಮಾಡುತ್ತಿದೆ ಎಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ. ವಿಡಿಯೋ ಮಾಡೋದಕ್ಕೆ ಒಂದಿಷ್ಟು ಆಹಾರ ಹಾಳು ಮಾಡಿದ್ದಾರೆ ಎಂದು ಒಬ್ಬರು ಬರೆದ್ರೆ, ಅನೇಕ ಭಾರತೀಯರು ಈ ವಿಡಿಯೋಕ್ಕೆ ಕಮೆಂಟ್ ಮಾಡಲು ಹಂಜರಿಯುತ್ತಿದ್ದಾರೆ, ಯಾಕೆಂದ್ರೆ ಈ ವಿಡಿಯೋದಲ್ಲಿ ತೋರಿಸಿರೋದ್ರಲ್ಲಿ ಸತ್ಯವಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ಅಲ್ಲದೆ ಪಕೋಡಾ ಮಾಡುತ್ತಿರುವ ವ್ಯಕ್ತಿಯೊಬ್ಬರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಭಾರತೀಯರು ಹಾಗೂ ಬೇರೆ ದೇಶದ ಜನರ ಮಧ್ಯೆ ಕಮೆಂಟ್ ನಲ್ಲಿಯೇ ಒಂದಿಷ್ಟು ವಾದ – ವಿವಾದಗಳಾಗಿವೆ.
400 ಕೋಟಿ ಜನರ ಹೊಟ್ಟೆ ತುಂಬಿಸುತ್ತೆ 12 ಗಿಡ.. ಐದು ಪ್ರಾಣಿ
ಬರೀ ಈ ವಿಡಿಯೋ ಮಾತ್ರವಲ್ಲ ಭಾರತೀಯ ಆಹಾರವನ್ನು ಗೇಲಿ ಮಾಡುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿದೆ. ಇನ್ನೊಂದು ವಿಡಿಯೋದಲ್ಲಿ ವ್ಯಕ್ತಿ ಸ್ಟ್ರೀಟ್ ಫುಡ್ ನೀಡುವ ವೇಳೆ ಬಳಸುವ ನೀರಿನಲ್ಲೇ ಮುಖ ತೊಳೆಯೋದನ್ನು ನೀವು ನೋಡ್ಬಹುದು.
Now even Africa is making fun of Indian street food. I can't handle 2023 😂😂😂
pic.twitter.com/LIuZoEp9jq