ಜೇನು ಆರೋಗ್ಯಕ್ಕೆ ಒಳ್ಳೇದು ನಿಜ, ಹಾಗಂತ ಬೇಕಾಬಿಟ್ಟಿ ತಿನ್ಬೇಡಿ !

By Suvarna News  |  First Published Sep 7, 2022, 9:43 AM IST

ಆಯುರ್ವೇದದಲ್ಲಿ ಜೇನುತುಪ್ಪವು ತೂಕವನ್ನು ಕಡಿಮೆ ಮಾಡಲು ಸೂಕ್ತವಾಗಿದೆ ಎಂದು ವಿವರಿಸಲಾಗಿದೆ. ಇದರೊಂದಿಗೆ ಜೇನುತುಪ್ಪವನ್ನು ಇತರ ಗಿಡಮೂಲಿಕೆಗಳೊಂದಿಗೆ ಬಳಸಿದಾಗ ಅದು ಔಷಧೀಯ ಗುಣಗಳನ್ನು ಹೆಚ್ಚಿಸುತ್ತದೆ. ಆದ್ರೆ ತಪ್ಪಾದ ರೀತಿಯಲ್ಲಿ ಜೇನನ್ನು ತಿನ್ನೋ ಅಭ್ಯಾಸ ವಿಷಕಾರಿಯಾಗಿ ಪರಿಣಮಿಸಬಹುದು ಅನ್ನೋದು ನಿಮ್ಗೊತ್ತಾ ?


ಜೇನುತುಪ್ಪವನ್ನು ಸಕ್ಕರೆಗೆ ಆರೋಗ್ಯಕರ ಪರ್ಯಾಯವೆಂದು ಪರಿಗಣಿಸಲಾಗುತ್ತದೆ. ಇದು ಸಕ್ಕರೆ ಅಂಶವನ್ನು ಹೊಂದಿದ್ದರೂ, ಸಂಸ್ಕರಿಸಿದ ಸಕ್ಕರೆಯಾಗಿರುವ ಕಾರಣ ಆರೋಗ್ಯಕ್ಕೆ ಹೆಚ್ಚಿನ ತೊಂದರೆಯಿಲ್ಲ. ಇದಲ್ಲದೆ, ಜೇನುತುಪ್ಪವು ಆರೋಗ್ಯಕರ ಜೀವಸತ್ವಗಳು ಮತ್ತು ಖನಿಜಗಳನ್ನು ಸಹ ಒಳಗೊಂಡಿದೆ. ಸಂಸ್ಕರಿಸಿದ ಸಕ್ಕರೆಗಳು ಕ್ಯಾಲೊರಿಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದು ದೀರ್ಘಾವಧಿಯಲ್ಲಿ ಸ್ಥೂಲಕಾಯತೆಗೆ ಕಾರಣವಾಗುತ್ತದೆ. ಇಂಥಾ ಪರಿಸ್ಥಿತಿಯಲ್ಲಿ ಜೇನುತುಪ್ಪವನ್ನು ಸೇವಿಸುವುದರಿಂದ ಈ ಸಮಸ್ಯೆ ಕಾಡುವುದಿಲ್ಲ. ಮಾತ್ರವಲ್ಲ ಜೇನುತುಪ್ಪದ ಸೇವನೆ ತೂಕ ಕಡಿಮೆ ಮಾಡಲು ಸಹ ನೆರವಾಗುತ್ತದೆ. 

ತಪ್ಪಾದ ರೀತಿಯಲ್ಲಿ ಜೇನುತುಪ್ಪ ಸೇವಿಸಿದ್ರೆ ವಿಷಕಾರಿ
ಆಯುರ್ವೇದದಲ್ಲಿ ಜೇನುತುಪ್ಪವು (Honey) ತೂಕವನ್ನು ಕಡಿಮೆ ಮಾಡಲು ಸೂಕ್ತವಾಗಿದೆ ಎಂದು ವಿವರಿಸಲಾಗಿದೆ. ಇದರೊಂದಿಗೆ ಜೇನುತುಪ್ಪವನ್ನು ಇತರ ಗಿಡಮೂಲಿಕೆಗಳೊಂದಿಗೆ ಬಳಸಿದಾಗ ಅದು ಔಷಧೀಯ ಗುಣಗಳನ್ನು ಹೆಚ್ಚಿಸುತ್ತದೆ ಮತ್ತು ಆಳವಾದ ಅಂಗಾಂಶಗಳನ್ನು ತಲುಪಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆದರೆ ಜೇನುತುಪ್ಪವನ್ನು ಸರಿಯಾಗಿ ಬಳಸಿದಾಗ ಮಾತ್ರ ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಸಾಧ್ಯ. ತಪ್ಪಾದ ರೀತಿಯಲ್ಲಿ ಜೇನುತುಪ್ಪವನ್ನು ಸೇವಿಸುವುದು ವಿಷಕಾರಿಯಾಗಿ ಬದಲಾಗಬಹುದು. ಇದು ಜೀರ್ಣಕ್ರಿಯೆಯ (Digestion) ಪ್ರಕ್ರಿಯೆಯಲ್ಲಿ ಸಹಾಯ ಮಾಡುವ ಕಿಣ್ವಗಳ ನಾಶವನ್ನು ಒಳಗೊಂಡಿರುತ್ತದೆ, ದೇಹದಲ್ಲಿ ಅಮಾ (ಟಾಕ್ಸಿನ್) ಅನ್ನು ಉತ್ಪಾದಿಸುತ್ತದೆ.

Latest Videos

undefined

ವರ್ಷದೊಳಗಿನ ಮಗುವಿಗೆ ಜೇನುತುಪ್ಪ ಕೊಡಬಹುದಾ?

ಆಯುರ್ವೇದ ತಜ್ಞ ಡಾ.ದೀಕ್ಷಾ ಭಾವಸರ್ ಮಾತನಾಡಿ, ಜೇನುತುಪ್ಪವನ್ನು ಆಂತರಿಕ ಮತ್ತು ಬಾಹ್ಯ ಅನ್ವಯಿಕೆಗಳಿಗೆ ಬಳಸಲಾಗುತ್ತದೆ. ಆದರೆ ಜೇನುತುಪ್ಪದ ಸೇವನೆ ಕೆಲವೊಮ್ಮೆ ದೇಹದ (Body) ಮೇಲೆ ಕೆಟ್ಟ ಪರಿಣಾಮವನ್ನು ಸಹ ಬೀರಬಹುದು. ಹೀಗಾಗಿ ಇದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಂತೆ ಸೂಚಿಸುತ್ತಾರೆ. ಹಾಗಿದ್ರೆ ಯಾವ ರೀತಿ ಜೇನು ತುಪ್ಪ ತಿನ್ಬಾರ್ದು ಅನ್ನೋದನ್ನು ತಿಳಿಯೋಣ.

ಜೇನುತುಪ್ಪವನ್ನು ಬಳಸುವಾಗ ಈ ತಪ್ಪನ್ನು ಮಾಡಬೇಡಿ
ಜೇನುತುಪ್ಪವನ್ನು ಬಿಸಿ ಆಹಾರ (Food) ಅಥವಾ ನೀರಿನಲ್ಲಿ ಬೆರೆಸಬಾರದು: ತೂಕ  (Weight)ಕಡಿಮೆ ಮಾಡ್ಕೊಳ್ಳೋಕೆ ಜೇನು ತುಪ್ಪವನ್ನ ಸೇವಿಸೋದೇನು ಸರಿ. ಆದರೆ ಇದನ್ನು ಅತಿಯಾಗಿ ಬಿಸಿಯಾಗಿರುವ ನೀರಿಗೆ ಅಪ್ಪಿತಪ್ಪಿಯೂ ಬಿಸಿ ಮಾಡಬೇಡಿ. ಇದು ವಿಷಕಾರಿಯಾಗಿ (Poison) ಪರಿಣಮಿಸಬಹುದು. ಬದಲಿಗೆ ತಣ್ಣೀರು ಅಥವಾ ಕುದಿಸಿದ ತಣ್ಣಗಾದ ನೀರಿಗೆ ಜೇನುತುಪ್ಪ ಬೆರೆಸಿ ಕುಡಿಯಿರಿ.

ಬಿಸಿ ವಾತಾವರಣದಲ್ಲಿ ಕೆಲಸ ಮಾಡುವಾಗ ಜೇನುತುಪ್ಪವನ್ನು ಸೇವಿಸಬಾರದು: ಬಿಸಿ ವಾತಾವರಣದಲ್ಲಿದ್ದಾಗ ನಮ್ಮ ದೇಹ ಈಗಾಗಲೇ ಶಾಖವನ್ನು ಒಳಗೊಂಡಿರುತ್ತದೆ. ಹೀಗಾಗಿ ಇಂಥಾ ಪರಿಸ್ಥಿತಿಯಲ್ಲಿ ಜೇನುತುಪ್ಪದ ಸೇವೆನ ಆರೋಗ್ಯಕ್ಕೆ (Health) ಹಾನಿಯನ್ನುಂಟು ಮಾಡಬಹುದು. ಹೀಗಾಗಿ ಬಿಸಿ ವಾತಾವರಣದಲ್ಲಿದ್ದಾಗ ಜೇನು ಅಥವಾ ಜೇನನ್ನು ಒಳಗೊಂಡ ಯಾವುದೇ ಪದಾರ್ಥವನ್ನು ತಿನ್ನುವುದನ್ನು ಅವಾಯ್ಡ್ ಮಾಡಿ. 

ದಿನಾ ಜೇನು ತುಪ್ಪ ತಿನ್ನಿ, ಆರೋಗ್ಯ ಸಮಸ್ಯೆ ಕಾಡೋ ಭಯವಿಲ್ಲ

ಜೇನುತುಪ್ಪವನ್ನು ಎಂದಿಗೂ ಮಸಾಲೆಯುಕ್ತ ಆಹಾರದೊಂದಿಗೆ ಬೆರೆಸಬಾರದು: ಜೇನುತುಪ್ಪವನ್ನು ಎಂದಿಗೂ ತುಪ್ಪದೊಂದಿಗೆ ಮಿಕ್ಸ್ ಮಾಡಬೇಕಿ. ಇದು ವಿಷಕಾರಿಯಾಗಿ ಪರಣಮಿಸುತ್ತೆದೆ. ಮಾತ್ರವಲ್ಲ ಬಿಸಿ, ಮಸಾಲೆಯುಕ್ತ (Spice) ಆಹಾರದೊಂದಿಗೆ ಸಹ ಜೇನನ್ನು ಬೆರೆಸಬಾರದು.

ಜೇನುತುಪ್ಪವನ್ನು ಬಳಸುವ ಆರೋಗ್ಯಕರ ವಿಧಾನ
ನೀವು ಜೇನುತುಪ್ಪವನ್ನು ಬಳಸಿ ಬೊಜ್ಜು ಕಡಿಮೆ ಮಾಡಲು ಬಯಸಿದರೆ, ಸಾಮಾನ್ಯ ಲೋಟ ನೀರಿಗೆ 1 ಚಮಚ ಹೊಸ ಜೇನುತುಪ್ಪವನ್ನು ಬಳಸುವುದು ನಿಮಗೆ ಪ್ರಯೋಜನಕಾರಿ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅದೇ ಸಮಯದಲ್ಲಿ, ನೀವು ಕೆಮ್ಮು, ಶೀತ, ಸೈನುಟಿಸ್, ರೋಗನಿರೋಧಕ ಶಕ್ತಿಗೆ (Immunity power) ಜೇನುತುಪ್ಪವನ್ನು ಬಳಸಲು ಬಯಸಿದರೆ, ನೀವು ಅದನ್ನು 1 ಟೀಚಮಚ ಜೇನುತುಪ್ಪವನ್ನು ಒಂದು ಟೀಚಮಚ ಅರಿಶಿನ ಮತ್ತು 1 ಕರಿಮೆಣಸಿನೊಂದಿಗೆ (Black pepper) ಬೆರೆಸಿ ಸೇವಿಸಬಹುದು ಎಂದು ಸೂಚಿಸುತ್ತಾರೆ. 

click me!