ಉಂಡು ಹೋಗಿ ಕೊಂಡು ಹೋಗಿ... ಪ್ಲೇಟಲ್ಲಿರೋದು ಖಾಲಿ ಮಾಡಿ: 8 ಲಕ್ಷ ಗೆಲ್ಲಿ

By Suvarna News  |  First Published Jan 14, 2022, 6:10 PM IST
  • ಭೋಜನ ಪ್ರಿಯರಿಗೆ ಹೊಟೇಲೊಂದರ ಚಾಲೆಂಜ್‌
  • ಬಾಹುಬಲಿ ಹೆಸರಿನ ದೈತ್ಯ ಥಾಲಿಯ ತಿಂದು ಮುಗಿಸುವ ಸವಾಲು
  • ಪ್ಲೇಟ್ ಖಾಲಿ ಮಾಡಿ 8  ಲಕ್ಷ  ಗೆಲ್ಲಿ

ನವದೆಹಲಿ(ಜ.14): ರುಚಿ ರುಚಿಯಾದ ತಿನಿಸು ಯಾರಿಗಿಷ್ಟ ಇಲ್ಲ ಹೇಳಿ. ಆಹಾರ ಎಂದರೆ ಎಲ್ಲರೂ ಬಾಯ್ಬಿಡುವುದು ಸಾಮಾನ್ಯ. ಆದರೆ ರುಚಿ ರುಚಿಯಾದ ಹೋಟೇಲ್‌ ತಿನಿಸುಗಳನ್ನು ತಿನ್ನಬೇಕು ಎಂದರೆ ಕೈಯಲ್ಲಿ ಅಷ್ಟೇ ಕಾಸಿರಬೇಕು. ಆದರೆ  ನೀವು ಭೋಜನ ಪ್ರೇಮಿಯಾಗಿದ್ದಲ್ಲಿ ದೆಹಲಿಯ ಹೋಟೆಲೊಂದು ನಿಮಗೆ ಉಚಿತವಾಗಿ ಊಟ ತಿನ್ನುವುದರ ಜೊತೆಗೆ  8 ಲಕ್ಷ ರೂಪಾಯಿಯನ್ನು ನೀಡಲಿದೆ. ಹೌದು ಹೊಟೇಲ್‌ ನೀಡುವ ಅಷ್ಟು ಆಹಾರವನ್ನು ನೀವು 40 ನಿಮಿಷದಲ್ಲಿ ಖಾಲಿ ಮಾಡಬೇಕು. ಆದರೆ ಮಾತ್ರ ಹೊಟೇಲ್‌ ನಿಮಗೆ  8 ಲಕ್ಷ  ರೂಪಾಯಿ ನೀಡಲಿದೆ. 

ಇಂಡಿಯನ್‌ ಥಾಲಿ ಬಗ್ಗೆ ನಿಮಗೆ ಗೊತ್ತಿರಬಹುದು. ಹೋಟೇಲ್‌ಗಳಿಗೆ ಹೋದರೆ ಉತ್ತರ ಭಾರತ ಥಾಲಿ, ದಕ್ಷಿಣ ಭಾರತ ಥಾಲಿ ಎಂದೆಲ್ಲಾ ನೀವು ಕೇಳಿರಬಹುದು. ಆದರೆ ಹೊಟೇಲ್‌ ಸಿದ್ಧಪಡಿಸಿರುವುದು ಬಾಹುಬಲಿ ಥಾಲಿ. ಟೇಬಲ್‌ ಆಕಾರದಷ್ಟು ದೊಡ್ಡ ಬಟ್ಟಲಿನಲ್ಲಿ ಇಡೀ ದೇಶದ ಆಹಾರ ವೈವಿಧ್ಯತೆಯನ್ನೇ ಕಾಣಬಹುದು. ಇಷ್ಟೊಂದು ವಿವಿಧ ಬಗೆಯ ಆಹಾರವನ್ನು ನೀವು 40 ನಿಮಿಷದಲ್ಲಿ ತಿಂದು ಮುಗಿಸಬೇಕಿದೆ. 

Latest Videos

ಭಾರತೀಯ ಥಾಲಿಯ ಪರಿಕಲ್ಪನೆಯು ದೇಶದ ಉದ್ದ ಮತ್ತು ಅಗಲಗಳನ್ನು ದಾಟಿದೆ. ನೀವು ಭಾರತದ ಯಾವುದೇ ರಾಜ್ಯದಲ್ಲಿರಬಹುದು, ಆ ಪ್ರದೇಶದ ವಿವಿಧ ಭಕ್ಷ್ಯಗಳೊಂದಿಗೆ ಅನನ್ಯವಾದ ಥಾಲಿಯನ್ನು ನೀವು ಕಾಣಬಹುದು. ಹೆಚ್ಚಿನ ಥಾಲಿಗಳು ಬೆಳೆಕಾಳುಗಳು, ತರಕಾರಿಗಳು, ಅಕ್ಕಿ ಮತ್ತು ಬ್ರೆಡ್‌ಗಳ ಸಂಯೋಜನೆಯನ್ನು ನೀಡುತ್ತವೆ. ಆದರೆ, ಇತ್ತೀಚೆಗೆ ದೆಹಲಿಯ ಹೊಟೇಲೊಂದು ವಿಶಿಷ್ಟ 'ಬಾಹುಬಲಿ' ಥಾಲಿ ಮೂಲಕ ಗಮನ ಸೆಳೆದಿದೆ. ಈ ಭಾರಿ ಗಾತ್ರದ ಥಾಲಿಯು ಅನೇಕ ಭಕ್ಷ್ಯಗಳ ಭವ್ಯವಾದ ಭಾಗಗಳನ್ನು ಹೊಂದಿದೆ. ಅಲ್ಲದೇ ಈ ದೊಡ್ಡ ಥಾಲಿಯನ್ನು ತಿಂದು ಮುಗಿಸುವುದರಿಂದ ನೀವು 8 ಲಕ್ಷ ರೂ. ಬಹುಮಾನದ ಹಣವನ್ನು ಗೆಲ್ಲಬಹುದು. ಈ ಬಾಹುಬಲಿ ಥಾಲಿಯ ವೀಡಿಯೊವನ್ನು ಯೂಟ್ಯೂಬ್‌ನಲ್ಲಿ ಫುಡ್ ಬ್ಲಾಗರ್ ರಜನೀಶ್ ಗ್ಯಾನಿ ಅವರು ಹಂಚಿಕೊಂಡಿದ್ದಾರೆ. 

Fish Cake Recipe: ಟೇಸ್ಟೀ ಫಿಶ್ ಕೇಕ್ ತಯಾರಿಸುವುದು ಹೇಗೆ ?

undefined

ಬಾಹುಬಲಿ ಥಾಲಿಯ ವಿಡಿಯೋ ಕೆಲವೇ ದಿನಗಳಲ್ಲಿ ವೈರಲ್ ಆಗಿದ್ದು, 2 ಮಿಲಿಯನ್ ಜನ ಇದನ್ನು ವೀಕ್ಷಿಸಿದ್ದಾರೆ. ನವದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿರುವ (Connaught Place) ಅಥವಾ ರಾಜೀವ್‌ ಚೌಕ್‌ (Rajiv Chowk) ಎಂದು ಕರೆಯಲ್ಪಡುವ ಸ್ಥಳದಲ್ಲಿ ಈ ಹೊಟೇಲ್‌ ಇದ್ದು. ಆರ್ಡರ್ 2.1 ಎಂಬ ಹೆಸರಿನ ರೆಸ್ಟೋರೆಂಟ್‌ ಈ ಆಹಾರ ತಿನ್ನುವ ಸವಾಲು ಹಾಕಿದೆ. ಈ ವಿಡಿಯೋದಲ್ಲಿ  ರಜನೀಶ್ ಜ್ಞಾನಿ ಎಂಬವರು ತಮ್ಮ ಸ್ನೇಹಿತನೊಂದಿಗೆ ಈ ಸವಾಲನ್ನು ಸ್ವೀಕರಿಸಿದ್ದಾರೆ. 

ಸುಮಾರು 15 ನಿಮಿಷಗಳ ಸುದೀರ್ಘ ವಿಡಿಯೋದಲ್ಲಿ ಬ್ಲಾಗರ್‌ಗಳು ಹೋಟೇಲ್‌ ನೀಡಿದ ಸವಾಲನ್ನು ಪೂರ್ಣಗೊಳಿಸುತ್ತಿರುವ ದೃಶ್ಯವಿದೆ . ಈ ಫುಡ್‌ ಬ್ಲಾಗರ್‌ಗಳು ಹೋಟೇಲ್‌ ಸವಾಲನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. ಹೀಗಾಗಿ ಬಹುಮಾನದ ಮೊತ್ತ ರೂ. 8 ಲಕ್ಷ ಅವರಿಗೆ ಸಿಕ್ಕಿದ್ದು, ಆ ಹಣವನ್ನು ಅವರು ಚಾರಿಟಿಗೆ ದಾನ ಮಾಡುವುದಾಗಿ ಹೇಳಿದರು.

Table Manners: ಊಟ ಮಾಡೋಕೂ ರೀತಿ ನೀತಿ ಉಂಟು!

ಈ ದೈತ್ಯ ಬಾಹುಬಲಿ ಥಾಲಿಯು ಹಲವಾರು ಉತ್ತರ ಭಾರತದ ಖಾದ್ಯಗಳನ್ನು ಒಳಗೊಂಡಿದೆ. ಮೊದಲಿಗೆ, ಸಂಪೂರ್ಣ ಥಾಲಿಯನ್ನು ಜೋಡಿಸಲಾಯಿತು. ಈ ಥಾಲಿಯಲ್ಲಿ ತಮಟರ್ ಕಾ ಶೋರ್ಬಾ, ಪಾಪ್ಡಿ ಚಾಟ್, ಗೋಭಿ ಮಟರ್, ದಾಲ್ ತಡ್ಕಾ, ಕಧಿ ಪಕೋಡ, ಆಲೂ ಪಾಲಕ್, ಮಲೈ ಕೋಫ್ತಾ, ಸೋಯಾ ಚಾಪ್ ಮಸಾಲಾ, ಕಡಾಯಿ ಪನೀರ್, ದಾಲ್ ಮಖಾನಿ, ದಮ್ ಆಲೂ, ಸಾಗ್ ಮತ್ತು ಪನೀರ್ ಟಿಕ್ಕಾ ಮಸಾಲಾ. ವೆಜ್ ಬಿರಿಯಾನಿ, ಹಬೆಯಲ್ಲಿ ಬೇಯಿಸಿದ ಅನ್ನ ಮತ್ತು ಬಗೆಬಗೆಯ ರೊಟ್ಟಿಗಳು ಊಟಕ್ಕೆ ಮೆರಗು ನೀಡಿದವು. ಜೊತೆಗೆ  ಹಪ್ಪಳ, ಸಲಾಡ್‌ಗಳು, ರೈತಾ ಮತ್ತು ಉಪ್ಪಿನಕಾಯಿ ಈರುಳ್ಳಿಯನ್ನು ಸಹ ನೋಡಬಹುದು. ಥಾಲಿಯಲ್ಲಿ ಪಾನೀಯವಾಗಿ ಜಲ್ಜೀರಾ ಮತ್ತು ಗುಲಾಬಿ ಶರಬತ್ತುಗಳನ್ನು ಸಹ ನೀಡಲಾಯಿತು. ಸಿಹಿತಿಂಡಿಗಳಿಗಾಗಿ, ಗುಲಾಬ್ ಜಾಮೂನ್‌ ಕೂಡ ಇತ್ತು. 

click me!