Health Tips: ಹೆಚ್ಚು ಹಾಲು ಹಾಕಿದ ಟೀ ಕುಡಿದ್ರೆ ಆರೋಗ್ಯ ಸಮಸ್ಯೆನೂ ಹೆಚ್ಚು

By Suvarna News  |  First Published Jan 13, 2022, 6:48 PM IST

ಭಾರತದಲ್ಲಿ ಗುಡ್ ಮಾರ್ನಿಂಗ್ (Good Morning) ಶುರುವಾಗೋದೆ ಒಂದು ಕಪ್ ಚಹಾದೊಂದಿಗೆ. ಸಂಜೆ ಕುಟುಂಬ ಸದಸ್ಯರು, ಸ್ನೇಹಿತರ ಜತೆ ಹರಟೆ ಹೊಡೆಯುತ್ತಾ ಇನ್ನೊಂದು ಕಪ್ ಟೀ. ಒಟ್ನಲ್ಲಿ ಟೀ (Tea) ಸೇವನೆಯಿಲ್ಲದೆ ಭಾರತೀಯರ ದಿನಚರಿಯಿಲ್ಲ. ಆದ್ರೆ ನಿಮಗೆ ಗೊತ್ತಾ ಹೆಚ್ಚು ಹಾಲು (Milk) ಹಾಕಿದ ಟೀ ಕುಡಿಯವುದು ಆರೋಗ್ಯ (Health)ಕ್ಕೆ ಅಪಾಯ.


ಚಹಾವು ಜನಪ್ರಿಯ ಪಾನೀಯಗಳಲ್ಲಿ ಒಂದಾಗಿದೆ. ಅದರಲ್ಲೂ ಭಾರತದಲ್ಲಿ ಬೆಳಗ್ಗೆ, ಸಂಜೆ ಹೊತ್ತು ಗೊತ್ತಿನ ಪರಿವೆಯಿಲ್ಲದೆ ಚಹಾ ಕುಡಿಯುವವರಿದ್ದಾರೆ. ಟೀಯಲ್ಲೂ ಹಲವು ವಿಧಗಳಿವೆ. ಹಾಲಿನ ಚಹಾ, ಬ್ಲ್ಯಾಕ್ ಟೀ, ಜಿಂಜರ್ ಟೀ ಹೀಗೆ. ಇದರಲ್ಲಿ ಹೆಚ್ಚಿನವರು ಇಷ್ಟಪಟ್ಟು ಕುಡಿಯೋದು ಹಾಲಿನ ಚಹಾ. ಅದರಲ್ಲೂ ಹೆಚ್ಚು ಹಾಲು ಸೇರಿಸಿ ದಪ್ಪ ಚಹಾ ಮಾಡಿ ಕುಡಿಯುವುದು ಹಲವರಿಗೆ ಇಷ್ಟವಾಗುತ್ತದೆ. ಆದರೆ ನಿಮಗೆ ಗೊತ್ತಾ ಹೆಚ್ಚು ಹೆಚ್ಚು ಹಾಲು ಹಾಕಿ ತಯಾರಿಸುವ ಚಹಾ ಹೆಚ್ಚು ಹೆಚ್ಚು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಹಾಲಿನ ಚಹಾದ ಅಡ್ಡಪರಿಣಾಮಗಳು
ತೈವಾನ್, ಭಾರತ, ವಿಯೆಟ್ನಾಂ ಮತ್ತು ಕಾಂಬೋಡಿಯಾದಂತಹ ಹಲವಾರು ದೇಶಗಳಲ್ಲಿ ಹಾಲಿನ ಚಹಾ ಹೆಚ್ಚು ಜನಪ್ರಿಯವಾಗಿದೆ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಕಾರಣ ಎಲ್ಲರ ಮನೆಯಲ್ಲಯೂ ಸಾಮಾನ್ಯವಾಗಿ ಚಹಾವನ್ನು ತಯಾರಿಸುತ್ತಾರೆ. ಆದರೆ ಚಹಾ ಸೇವನೆಯಿಂದ ಹಲವಾರು ಪ್ರಯೋಜನಗಳಿರುವ ಹಾಗೆಯೇ ಆರೋಗ್ಯಕ್ಕೆ ತೊಂದರೆಯೂ ಇದೆ. ಹಾಗಿದ್ರೆಹಾಲಿನ ಚಹಾ ಕುಡಿದರೆ ಏನೆಲ್ಲಾ ಸಮಸ್ಯೆಗಳಾಗುತ್ತವೆ ತಿಳಿಯೋಣ.

Tap to resize

Latest Videos

ನಿದ್ರಾಹೀನತೆಯನ್ನು ಉಂಟು ಮಾಡುತ್ತದೆ
ಹಾಲಿನ ಚಹಾ (Milk Tea)ವನ್ನು ತಯಾರಿಸಲು ಸಾಮಾನ್ಯವಾಗಿ ಬಳಸುವ ಕಪ್ಪು ಚಹಾವು ಕೆಫೀನ್‌ನಲ್ಲಿ ಸಮೃದ್ಧವಾಗಿದೆ. ದೇಹವು ಹೆಚ್ಚಿನ ಕೆಫೀನ್‌ನನ್ನು ಹೊಂದಿದ್ದರೆ, ಅದು ನಿದ್ರಾಹೀನತೆಯಂತಹ ಸಮಸ್ಯೆಗೆ ಕಾರಣವಾಗಬಹುದು.

ಒತ್ತಡವನ್ನು ಹೆಚ್ಚಿಸುತ್ತದೆ
ಕೆಲವರು ಒತ್ತಡ ಹೆಚ್ಚಾದಾಗ ಟೀ, ಕಾಫಿ ಮಾಡಿ ಕುಡಿಯುತ್ತಾರೆ. ಆದರೆ ತಿಳಿದುಕೊಳ್ಳಿ, ಅತಿಯಾಗಿ ಹಾಲು ಬೆರೆಸಿದ ಟೀ ಸೇವನೆ ವಿನಾಕಾರಣ ಒತ್ತಡಕ್ಕೆ ಕಾರಣವಾಗುತ್ತದೆ. ಈ ಅಡ್ಡ ಪರಿಣಾಮಕ್ಕೆ ಮುಖ್ಯ ಕಾರಣವೆಂದರೆ ಚಹಾವು ಮೆದುಳಿನ ಕೋಶಗಳನ್ನು ಸಕ್ರಿಯಗೊಳಿಸಿ ವಿಶ್ರಾಂತಿ ನೀಡುತ್ತದೆ. ಆದರೆ ನೀವು ಹೆಚ್ಚು ಚಹಾ ಕುಡಿದಾಗ, ಇದು ಮೆದುಳಿನ ರಾಸಾಯನಿಕಗಳಲ್ಲಿ ಸ್ವಲ್ಪ ಅಸಮತೋಲನಕ್ಕೆ ಕಾರಣವಾಗಬಹುದು ಮತ್ತು ಆತಂಕ (Anxiety)ವನ್ನು ಉಂಟು ಮಾಡಬಹುದು.

Health Tips: ಅಧಿಕ ರಕ್ತದೊತ್ತಡ ಮತ್ತು ಹೃದ್ರೋಗದಿಂದ ರಕ್ಷಿಸಿಕೊಳ್ಳಲು ಬ್ಲ್ಯಾಕ್ ಟೀ ಕುಡಿಯಿರಿ

ಮೊಡವೆಗಳಿಗೆ ಕಾರಣವಾಗಬಹುದು
ಹಾಲಿನ ಚಹಾದ ಸಾಮಾನ್ಯ ಅಡ್ಡ ಪರಿಣಾಮವೆಂದರೆ ಮೊಡವೆಗಳು (Pimples). ಹೆಚ್ಚಿನ ಚಹಾ ಸೇವನೆ ತೀವ್ರವಾದ ಶಾಖವನ್ನು ಬಿಡುಗಡೆ ಮಾಡುತ್ತದೆ ಮತ್ತು ದೇಹದ ರಾಸಾಯನಿಕಗಳಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ, ಇದು ಮೊಡವೆಗಳನ್ನು ಉಂಟುಮಾಡಬಹುದು. ಅಷ್ಟೇ ಅಲ್ಲ, ಚಹಾದಲ್ಲಿರುವ ಕೆಫೀನ್ ಎಂಬ ರಾಸಾಯನಿಕ ಅಂಶವು ಮುಖದಲ್ಲಿ ಮೊಡವೆಗಳಾಗಲು ಕಾರಣವಾಗುತ್ತದೆ.

ಮಲಬದ್ಧತೆಗೆ ಕಾರಣವಾಗಬಹುದು
ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಇದು ಮಲ ವಿಸರ್ಜನೆ ಸುಲಭವಾಗಿ ಆಗಲು ಅಡ್ಡಿಪಡಿಸುತ್ತದೆ. ಅತಿಯಾದ ಹಾಲಿನ ಚಹಾವನ್ನು ಸೇವಿಸಿದಾಗ, ಇದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಇದರಿಂದ ಮಲಬದ್ಧತೆ (Constipation)ಗೆ ಉಂಟಾಗುತ್ತದೆ.

ರಕ್ತದೊತ್ತಡದ ಅಸಮತೋಲನವನ್ನು ಸೃಷ್ಟಿಸುತ್ತದೆ
ಹೆಚ್ಚು ಚಹಾವನ್ನು ಕುಡಿಯುವುದರಿಂದ ಉಂಟಾಗುವ ಅತ್ಯಂತ ಗಂಭೀರವಾದ ಅಡ್ಡಪರಿಣಾಮವೆಂದರೆ ರಕ್ತದೊತ್ತಡದಲ್ಲಿ ಅಸಮತೋಲನ ಉಂಟಾಗುವುದು. ಚಹಾವನ್ನು ಕಡಿಮೆ ಪ್ರಮಾಣದಲ್ಲಿ ತೆಗೆದುಕೊಂಡರೆ, ಇದು ರಕ್ತ (Blood) ಪರಿಚಲನೆ ಸುಧಾರಿಸುತ್ತದೆ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ, ಮೆದುಳು ಮತ್ತು ನರಗಳ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಹಾಲಿನ ಚಹಾದ ಅತಿಯಾದ ಸೇವನೆಯು ಹೃದಯ (Heart) ಬಡಿತವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಅಧಿಕ ರಕ್ತದೊತ್ತಡಕ್ಕೂ ಕಾರಣವಾಗುತ್ತದೆ.

ಶುಂಠಿ ಟೀ - ಶೀತ ಕೆಮ್ಮಿನಿಂದ ಹಿಡಿದು ಮುಟ್ಟಿನ ನೋವಿಗೂ ಬೆಸ್ಟ್‌ ಮನೆ ಮದ್ದು

ಗರ್ಭಪಾತದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ
ಚಹಾವು ನಿಮ್ಮ ದೇಹಕ್ಕೆ ಉತ್ತಮವಾಗಿದೆ. ಯಾಕೆಂದರೆ ಇದು ಸ್ನಾಯುಗಳು ವಿಶ್ರಾಂತಿ ಮಾಡಲು, ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಮತ್ತು ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ, ಗರ್ಭಾವಸ್ಥೆಯಲ್ಲಿ ಸ್ನಾಯುಗಳ ಅತಿಯಾದ ವಿಶ್ರಾಂತಿ ಮತ್ತು ಚಹಾದಲ್ಲಿರುವ ಕೆಫೀನ್ ಅಂಶ ಗರ್ಭಪಾತಕ್ಕೆ ಕಾರಣವಾಗಬಹುದು. ಆದ್ದರಿಂದ, ಗರ್ಭಿಣಿಯರು ಅಗತ್ಯವಿದ್ದರೆ ಮಾತ್ರ ಅಥವಾ ವೈದ್ಯರ ಸಲಹೆಯನ್ನು ಪಡೆದು ಚಹಾ ಕುಡಿಯುವಂತೆ ಸೂಚಿಸಲಾಗುತ್ತದೆ.

click me!