Gold Plated Mithai: ಒಂದು ಕೆಜಿ ಸ್ವೀಟ್ಸ್ ಬೆಲೆ ಬರೋಬ್ಬರಿ 16,000 ರೂ. !

ಸ್ವೀಟ್ಸ್ (Sweets) ಬೆಲೆ ಕೆಜಿಗೆ 500 ರೂ, 1000 ರೂ. ಇರೋದು ನೀವು ಕೇಳಿರ್ಬೋದು. ಆದ್ರೆ ದೆಹಲಿಯಲ್ಲಿ ಸಿಗ್ತಿರೋ ಈ ಸ್ಪೆಷಲ್ (Special) ಸ್ವೀಟ್ಸ್ ಬೆಲೆ ಕೆಜಿಗೆ ಭರ್ತಿ 16,000 ರೂ. ನಂಬೋಕೆ ಕಷ್ಟ ಆದ್ರೂ ಇದು ನಿಜ. ಅಷ್ಟಕ್ಕೂ ಆ ಸ್ವೀಟ್ಸ್ ಸ್ಪೆಷಾಲಿಟಿ ಏನು ?


ಸ್ವೀಟ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಎಷ್ಟು ಬೇಕಾದ್ರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಅದರಲ್ಲೂ ಬೇಕರಿಗಳಲ್ಲಿ ಹೋಗಿ ನಿಂತ್ರೆ ಕಲರ್ ಕಲರ್, ಹಲವು  ವೆರೈಟಿಯ ಸ್ವೀಟ್ಸ್‌ಗಳು ಕಣ್ ಸೆಳೆಯುತ್ತವೆ. ಅಟ್ರ್ಯಾಕ್ಟಿವ್ ಡಿಸೈನ್, ಲುಕ್ ನೋಡಿಯೇ ಒಮ್ಮೆ ಟೇಸ್ಟ್ ಮಾಡಿಬಿಡೋಣ ಅನಿಸುತ್ತದೆ. ಲಡ್ಡು, ಜಿಲೇಬಿ, ಹೋಳಿಗೆ ಇವೆಲ್ಲಾ ಒಂದೆಡೆಯಾದರೆ ಜನಸಾಮಾನ್ಯರ ಕೈಗೆಟುಕದ ಕಾಜೂ ಬರ್ಫಿ, ಹಲ್ವಾ ಮೊದಲಾದವು ಇನ್ನೊಂದು ಕಡೆ. ತಿನ್ನೋಕೆ ಸ್ವೀಟ್ಸ್ ಇಷ್ಟ ಇದ್ರೂ ಬೆಲೆ ಕೇಳಿಯೇ ಬಾಯಿ ಕಹಿ ಕಹಿಯಾಗೋ ಪರಿಸ್ಥಿತಿ. ಒಂದು ಕೆಜಿ ಕಾಜೂ ಬರ್ಫಿ1500 ರೂ. ವರೆಗೂ ಇರುತ್ತೆ ಅಂತ ನೀವು ಬೆಚ್ಚಿಬಿದ್ದಿದ್ದೀರಾ. ಹಾಗಾದ್ರೆ ದೆಹಲಿಯಲ್ಲಿ ಸಿಗುವ ಈ ಕಾಸ್ಟ್ಲೀ ಸ್ವೀಟ್ ಬಗ್ಗೆ ಕೇಳಿದ್ರೆ ಹೀಗೂ ಉಂಟಾ ಅಂತ ಅಚ್ಚರಿ ಪಡೋದು ಖಂಡಿತ.

ಹೌದು, ಸ್ವೀಟ್ಸ್ ಗೆ ಕೆಜಿಗೆ 500 ರೂ, 1000 ರೂ. ಇರೋದು ನೀವು ಕೇಳಿರ್ಬೋದು. ಆದ್ರೆ ದೆಹಲಿಯಲ್ಲಿ ಸಿಗ್ತಿರೋ ಈ ಸ್ಪೆಷಲ್ ಸ್ವೀಟ್ಸ್ ಬೆಲೆ ಕೆಜಿಗೆ ಭರ್ತಿ 16,000 ರೂ. ನಂಬೋಕೆ ಕಷ್ಟ ಆದ್ರೂ ಇದು ನಿಜ. ದೆಹಲಿಯ ಮೌಜ್‌ಪುರದ ಶಗುನ್ ಸ್ವೀಟ್ಸ್ ಸ್ಟಾಲ್‌ನಲ್ಲಿ ಈ ಸಿಹಿ ಮಿಠಾಯಿಗಳು ಸಿಗುತ್ತವೆ. ಸಾಮಾನ್ಯವಾಗಿ ಕಾಸ್ಟ್ಲೀಯಾಗಿರುವ ತಿಂಡಿಗಳನ್ನು ತಯಾರಿಸಲು ತುಪ್ಪ, ಬೆಣ್ಣೆ ಹೀಗೆ ಬೆಲೆ ಹೆಚ್ಚಾಗಿರುವ ಪದಾರ್ಥಗಳನ್ನು ಬಳಸುವ ಕಾರಣ ತಿಂಡಿಯ ಬೆಲೆಯೂ ಹೆಚ್ಚಾಗಿರುತ್ತದೆ. ಆದ್ರೆ ಬೆಲೆ ಎಷ್ಟು ಹೆಚ್ಚಾದ್ರೂ 16,000 ಸ್ವೀಟ್ಸ್‌ ಅಂದ್ರೆ ಸುಮ್ನೇನಾ. ಇಷ್ಟಕ್ಕೂ ಆ ಸ್ವೀಟ್ ಎಂಥದ್ದು, ಆ ಸ್ವೀಟ್‌ ಯಾವುದ್ರಲ್ಲಿ ಮಾಡಿರೋದು ತಿಳಿಯೋಣ.

 
 
 
 
 
 
 
 
 
 
 
 
 
 
 

Latest Videos

A post shared by Arjun Chauhan 🧿 (@oye.foodieee)

Malai Sweets: ಹಾಲಿನ ಕೆನೆಯಿಂದ ಮಾಡ್ಬೋದು ಬಾಯಲ್ಲಿಟ್ರೆ ಕರಗೋ ಸ್ವೀಟ್ಸ್

ಚಿನ್ನದ ಮೇಲೆ ಜನರಿಗಿರುವ ಮೋಹ ಇವತ್ತು ನಿನ್ನೆಯದ್ದಲ್ಲ. ಕಿವಿಯೋಲೆ, ಸರ, ನೆಕ್ಲೇಸ್, ಬ್ರೇಸ್ ಲೆಟ್ ಅಂತ ತರಹೇವಾರಿ ಚಿನ್ನದೊಡವೆಗಳನ್ನು ಮಾಡಿ ಹಾಕಿಕೊಳ್ತಾರೆ. ಆಗರ್ಭ ಶ್ರೀಮಂತರು ಚಿನ್ನದ ಬಟ್ಟಲು, ಲೋಟವನ್ನೂ ಬಳಸುತ್ತಾರೆ. ಮನೆಯಲ್ಲಿಯೇ ಚಿನ್ನದ ದೇವರ ಮೂರ್ತಿ, ದೇವರನ್ನೂ ಇಟ್ಟುಕೊಳ್ಳುತ್ತಾರೆ. ಮನುಷ್ಯನಿಗೂ ಹಳದಿ ಲೋಹಕ್ಕೂ ಇರುವ ನಂಟು ಅಂಥದ್ದೇ. ಅರೆ, ಸ್ವೀಟ್ಸ್‌ (Sweets)ಗೂ ಚಿನ್ನಗೂ ಏನು ನಂಟು ಅಂತೀರಾ. ವಿಷಯ ಇರೋದೆ ಇಲ್ಲಿ, ಕೆಜಿಗೆ ಭರ್ತಿ 16,000 ರೂ. ಬೆಲೆಬಾಳುವ ಈ ಸ್ವೀಟ್ಸ್ ಅಂತಿಂಥಾ ಸ್ವೀಟ್ಸ್ ಅಲ್ಲ. ಇದು ಚಿನ್ನದ ಬಣ್ಣ ಲೇಪಿತ ಸ್ವೀಟ್ಸ್.

2021ರಲ್ಲಿ ಚಿನ್ನದ ಲೇಪಿತ ವಡಾ ಪಾವ್ ಮತ್ತು ಚಿನ್ನದ ಲೇಪಿತ ಬರ್ಗರ್ (Burger) ಸುದ್ದಿಯಾಗಿತ್ತು.  ಸದ್ಯ ಚಿನ್ನದ ಲೇಪಿತ ಮಿಠಾಯಿ ವೈರಲ್ (Viral) ಆಗ್ತಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ದೆಹಲಿಯ ಮೌಜ್‌ಪುರದ ಶಗುನ್ ಸ್ವೀಟ್ಸ್ ಅನ್ನು ಉಲ್ಲೇಖಿಸಿ ಮಾಡಿರುವ ವೀಡಿಯೋದಲ್ಲಿ ಈ ಸ್ಪೆಷಲ್ ಸ್ವೀಟ್ಸ್ ಬಗ್ಗೆ ಹೇಳಲಾಗಿದೆ. ಶಗುನ್ ಸ್ವೀಟ್ಸ್ ಸ್ಟಾಲ್‌ನಲ್ಲಿ ಚಿನ್ನದ ಲೇಪಿತ ಮಿಠಾಯಿಯನ್ನು ಕೆಜಿಗೆ 16000 ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ಫುಡ್ ಬ್ಲಾಗರ್ (Food Blogger) ಅರ್ಜುನ್ ಚೌಹಾಣ್ ಇನ್ ಸ್ಟಾಗ್ರಾಂನಲ್ಲಿ ಈ ಪೋಸ್ಟ್ ಮಾಡಿದ್ದು, ಕಾಸ್ಟ್ಲೀ ಸ್ವೀಟ್ಸ್ ವೀಡಿಯೋಗೆ 11 ಮಿಲಿಯನ್ ವೀಕ್ಷಣೆಗಳು, 5 ಲಕ್ಷ ಲೈಕ್‌ಗಳು ಮತ್ತು ಸಾವಿರಾರು ಕಾಮೆಂಟ್‌ಗಳನ್ನು ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಬೆಲೆಬಾಳುವ ಸ್ವೀಟ್ಸ್ ವೀಡಿಯೋ ಫುಲ್ ವೈರಲ್ ಆಗುತ್ತಿದೆ.

ವೀಡಿಯೋದ ಪ್ರಕಾರ, ಈ ಸ್ವೀಟ್ಸ್ ಅಂಗಡಿಯವರು ಗೋಲ್ಡ್ ಮಿಠಾಯಿಯನ್ನು ಮಾರಾಟ ಮಾಡುತ್ತಿದ್ದಾರೆ. ವೀಡಿಯೊದಲ್ಲಿ, ಅಂಗಡಿಯವನು ಎರಡು ಚಿನ್ನದ ಬಣ್ಣದ ಶೀಟ್‌ಗಳನ್ನು ತೆಗೆದು ಮಿಠಾಯಿ ಸೇರಿಸುತ್ತಾನೆ. ನಂತರ ಅವರು ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳುವುದನ್ನು ನೋಡಬಹುದು.

Poha Laddu Recipe: ಬೆಸನ್- ಮೋತಿಚೂರ್ ಲಡ್ಡು ಬಿಡಿ, ಈ ಪೋಹಾ ಲಡ್ಡು ಮಾಡಿ ನೋಡಿ...

ಈ ಕಾಸ್ಟ್ಲೀ ಸ್ವೀಟ್ಸ್ ವೀಡಿಯೋ (Video)ಗೆ ಭಿನ್ನ-ವಿಭಿನ್ನ ಕಾಮೆಂಟ್ ಗಳು ಬಂದಿವೆ. ಕೆಲವರು ಇದು ಖಂಡಿತಾ ಟೇಸ್ಟ್ ಮಾಡಲೇಬೇಕಾದ ಸ್ವೀಟ್ಸ್ ಎಂದು ಹೊಗಳಿದ್ದಾರೆ. ಇನ್ನು ಕೆಲವರು ನಾನು ನನ್ನ ಕಿಡ್ನಿಯನ್ನು ಮಾರಿದರೆ ಮಾತ್ರ ಇದನ್ನು ಖರೀದಿಸಿ ನನ್ನ ಸ್ನೇಹಿತರಿಗೆ ಹಂಚಲು ಸಾಧ್ಯ ಎಂದು ಬೆಲೆಯ ಬಗ್ಗೆ ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಮಿಠಾಯಿಗೆ ಇಷ್ಟು ಹಣವನ್ನು ಕೊಡುವುದರ ಬದಲು ಈ ಹಣವನ್ನು ಬಡವರಿಗೆ ಆಹಾರ ನೀಡಲು ಬಳಸಬಹುದು ಎಂದು ಪ್ರತಿಕ್ರಿಯಿಸಿದ್ದಾರೆ.

click me!