ಅನ್ನ ಬಿಟ್ಟು ಚಪಾತಿ ತಿನ್ತಿದ್ರೂ ಸಣ್ಣಗಾಗ್ತಿಲ್ವಾ ? ಹಿಟ್ಟನ್ನು ಹೀಗೆ ತಯಾರಿಸಿ, ಒಂದೇ ವಾರದಲ್ಲಿ ತೂಕ ಇಳಿಯುತ್ತೆ

By Suvarna NewsFirst Published Jun 12, 2022, 4:00 PM IST
Highlights

ಅನ್ನ ಬಿಟ್ಟು ಚಪಾತಿ (Chapathi) ತಿನ್ನೋದ್ರಿಂದ ಸುಲಭವಾಗಿ ತೂಕ (Weight) ಇಳಿಸಿಕೊಳ್ಬೋದು ಅನ್ನೊದು ಹಲವರ ಅಭಿಪ್ರಾಯ. ನೀವೂ ಹೀಗೆ ತೆಳ್ಳಗಾಗ್ಬೇಕು ಅಂತ ಚಪಾತಿ ಮಾತ್ರ ತಿನ್ತಿದ್ದೀರಾ ? ಆದ್ರೂ ತೂಕ ಮಾತ್ರ ಕಡಿಮೆಯಾಗ್ತಿಲ್ವಾ ? ಹಾಗಿದ್ರೆ ಯಾವ ರೀತಿಯ ಚಪಾತಿ ತಿಂದ್ರೆ ಈಝಿಯಾಗಿ ತೂಕ ಕಡಿಮೆ ಮಾಡ್ಕೋಬೋದು ತಿಳ್ಕೊಳ್ಳಿ.

ಇವತ್ತಿನ ದಿನಗಳಲ್ಲಿ ಅಧಿಕ ತೂಕ (Weight) ಹಲವರಲ್ಲಿ ಕಂಡು ಬರುವ ಸಮಸ್ಯೆ. ಅದಕ್ಕೆ ವ್ಯಾಯಾಮ (Exercise), ಡಯೆಟ್ (Diet), ಯೋಗ (Yoga) ಅಂತ ಏನೇನೋ ಮಾಡ್ತಾರೆ. ಆದ್ರೂ ತೂಕ ಕಡಿಮೆಯಾಗಲ್ಲ. ಕೆಲವೊಬ್ಬರು ತೂಕ ಇಳಿಸೋಕೆ ಅಂತಾನೇ ಅನ್ನ ತಿನ್ನೋದನ್ನೇ ಬಿಟ್ಬಿಟ್ಟು, ಚಪಾತಿ ಮಾತ್ರ ತಿನ್ತಾರೆ. ಭಾರತದಲ್ಲಿ, ಸಂಸ್ಕರಿಸಿದ ಗೋಧಿ ಹಿಟ್ಟಿನಿಂದ ಮಾಡಿದ ಮೃದುವಾದ ಚಪಾತಿಗಳಿಲ್ಲದ ಊಟವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅನ್ನ (Rice) ಬಿಟ್ಟು ಚಪಾತಿ ತಿನ್ನೋದ್ರಿಂದ ಸುಲಭವಾಗಿ ತೂಕ ಇಳಿಸಿಕೊಳ್ಬೋದು ಅನ್ನೊದು ಹಲವರ ಅಭಿಪ್ರಾಯ. ನೀವೂ ಹೀಗೆ ತೆಳ್ಳಗಾಗ್ಬೇಕು ಅಂತ ಚಪಾತಿ ಮಾತ್ರ ತಿನ್ತಿದ್ದೀರಾ ? ಆದ್ರೂ ತೂಕ ಮಾತ್ರ ಕಡಿಮೆಯಾಗ್ತಿಲ್ವಾ ? ಹಾಗಿದ್ರೆ ಯಾವ ರೀತಿಯ ಚಪಾತಿ ತಿಂದ್ರೆ ಈಝಿಯಾಗಿ ತೂಕ ಕಡಿಮೆ ಮಾಡ್ಕೋಬೋದು ತಿಳ್ಕೊಳ್ಳಿ.

ಚಪಾತಿ ತಿಂದು ತೂಕ ಇಳಿಸಿಕೊಳ್ಳೋದು ನೀವು ಗುರಿಯಾಗಿದ್ರೆ ಚಪಾತಿ ಹಿಟ್ಟಿನ ಆಯ್ಕೆ ಸರಿಯಾಗಿರಲಿ. ಗೋಧಿ ಹಿಟ್ಟನ್ನು ಬಿಟ್ಟು ಬೇರೆ ಯಾವ ರೀತಿಯ ಚಪಾತಿ ಆರೋಗ್ಯಕ್ಕೆ ಉತ್ತಮ ಮತ್ತು ಶೀಘ್ರ ತೂಕ ಇಳಿಸಿಕೊಳ್ಳಲು ಸಹಕಾರಿ ಎಂಬುದನ್ನು ತಿಳಿಯೋಣ.

ಚಪಾತಿ ಸ್ಮೂತ್ ಆಗಬೇಕಾ? Scratch meaning ಆಗದಂತೆ ಹೊಸ ಪಾತ್ರೆಯ ಸ್ಟಿಕ್ಕರ್ ತೆಗೀಬೇಕಾ?

ಹೆಸರುಕಾಳಿನ ಹಿಟ್ಟು (Bajra Flour)
ಬಜ್ರಾ ಕಾ ಅಟ್ಟಾ ಅಥವಾ ಹೆಸರುಕಾಳಿನ ಹಿಟ್ಟು ಹಲವಾರು ಭಾರತೀಯ ಪಾಕಪದ್ಧತಿಗಳ ಒಂದು ಭಾಗವಾಗಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ, ಇದನ್ನು ವಿಶೇಷ ಸಂದರ್ಭಗಳಲ್ಲಿ ರೊಟ್ಟಿ ಮತ್ತು ಖಿಚಡಿ ಮಾಡಲು ವ್ಯಾಪಕವಾಗಿ ಬಳಸುತ್ತಾರೆ. ಹೆಸರುಕಾಳಿನ ಹಿಟ್ಟು ಆರೋಗ್ಯಕ್ಕೂ ಅತ್ಯುತ್ತಮಬಾಗಿದೆ. ಇದರ ರುಚಿ, ಗ್ಲುಟನ್ ಮುಕ್ತ ಸಂಯೋಜನೆ ಮತ್ತು ಇ ಪೋಷಕಾಂಶಗಳಾದ ಪ್ರೋಟೀನ್, ಫೈಬರ್, ಮೆಗ್ನೀಸಿಯಮ್, ಕಬ್ಬಿಣ, ಇದು ಅತ್ಯಾಧಿಕತೆಯನ್ನು ನೀಡುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಹೆಸರುಕಾಳಿನ ಹಿಟ್ಟಿನ ಚಪಾತಿಯ ಸೇವನೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ದೇಹದಲ್ಲಿ ಒಟ್ಟಾರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 100 ಗ್ರಾಂನ ಈ ಅಟ್ಟಾದಲ್ಲಿ ಸುಮಾರು 12 ಗ್ರಾಂ ಪ್ರೋಟೀನ್ ಮತ್ತು 242 ಗ್ರಾಂ ಖನಿಜ ರಂಜಕವಿದೆ, ಇದು ದೇಹದ ಬೆಳವಣಿಗೆ, ಬೆಳವಣಿಗೆ ಮತ್ತು ಕೋಶ, ಅಂಗಾಂಶಗಳ ದುರಸ್ತಿಗೆ ಸಹಾಯ ಮಾಡುತ್ತದೆ.

ಜೋಳದ ಹಿಟ್ಟು (Jowar Flour)
ಚಪಾತಿ ಮಾಡುವಾಗ ಜೋಳದ ಹಿಟ್ಟನ್ನು ಬಳಸಿದರೆ ನಿಮ್ಮ ಹೆಚ್ಚು ಸುಲಭವಾಗಿ ತೂಕ ಕಳೆದುಕೊಳ್ಳಬಹುದು. ಜೋಳ ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಮೆಗ್ನೀಸಿಯಮ್, ನಿಯಾಸಿನ್, ರೈಬೋಫ್ಲಾವಿನ್, ಥಯಾಮಿನ್, ಫೋಲೇಟ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿರುತ್ತದೆ. ಜೋಳದಲ್ಲಿರುವ ಆಹಾರದ ನಾರಿನಂಶವು ಅತ್ಯಾಧಿಕತೆಯನ್ನು ಒದಗಿಸುತ್ತದೆ. ಹೀಗಾಗಿ ಇದು ಆಗಾಗ ಹಸಿವಾಗುತ್ತಾ ವಿನಾಕಾರಣ ಜಂಕ್‌ಫುಡ್ ಸೇವಿಸುವುದನ್ನು ತಪ್ಪಿಸುತ್ತದೆ. ತೂಕವನ್ನು ಕಳೆದುಕೊಳ್ಳಲು ಜೋಳದ ಚಪಾತಿ ಸೇವನೆ ಅತ್ಯುತ್ತಮವಾಗಿದೆ.

Food Recrod: ಗಿನ್ನಿಸ್ ದಾಖಲೆಯಲ್ಲಿ ಉಗಾಂಡದ ಎಗ್ ರೋಲೆಕ್ಸ್..ಏನಿದು ?

ರಾಗಿ ಹಿಟ್ಟು (Ragi Atta)
ಆರೋಗ್ಯ ತಜ್ಞರ ಪ್ರಕಾರ, ರಾಗಿಯನ್ನು ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಾಗಿಯನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಿದ್ದರೆ, ಸಮಾನ ಪ್ರಮಾಣದಲ್ಲಿ ಜೋಳ ಅಥವಾ ಗೋಧಿ ಹಿಟ್ಟನ್ನು ಬೆರೆಸುವುದು ಆಹಾರದ ಫೈಬರ್ ಮತ್ತು ಅಗತ್ಯ ಪೋಷಕಾಂಶಗಳ ಸೇವನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಓಟ್ಸ್ ಹಿಟ್ಟು (Oats Flour)
ಓಟ್ಸ್ ಮತ್ತು ಅದರ ಹಿಟ್ಟು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಅಲ್ಲಗಳೆಯುವಂತಿಲ್ಲ. 4 ವಾರಗಳ ವರೆಗೆ ಓಟ್ಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ತೂಕವನ್ನು ಕಳೆದುಕೊಳ್ಳಲು, ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಮಾತ್ರವಲ್ಲ ಇನ್ಸುಲಿನ್ ಸೂಕ್ಷ್ಮತೆಯನ್ನು ಸಮತೋಲನಗೊಳಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಗಮನಾರ್ಹವಾಗಿ ಸಹಾಯ ಮಾಡುತ್ತದೆ. ಫೈಬರ್ ರಕ್ತದ ಹರಿವಿನಲ್ಲಿ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.

ಇನ್ಯಾಕೆ ತಡ, ಚಪಾತಿ ತಿಂದ್ರೆ ತೂಕ ಕಡಿಮೆಯಾಗಲ್ಲ ಅನ್ನೋದನ್ನೆಲ್ಲಾ ನಂಬೋಕೆ ಹೋಗ್ಬೇಡಿ. ಹಿಟ್ಟನ್ನು ಬದಲಾಯಿಸಿ, ಟೇಸ್ಟೀ ಚಪಾತಿ ಮಾಡಿ ತಿನ್ನಿ. ಒಂದೇ ವಾರದಲ್ಲಿ ತೂಕ ಕಡಿಮೆಯಾಗದಿದ್ರೆ ಮತ್ತೆ ಹೇಳಿ.

click me!