Food Trend: ಮ್ಯಾಗಿ ಕಣ ಕಣದಲ್ಲೂ ಕೇಸರಿಯ ಶಕ್ತಿ !

Published : Jun 12, 2022, 03:23 PM IST
Food Trend: ಮ್ಯಾಗಿ ಕಣ ಕಣದಲ್ಲೂ ಕೇಸರಿಯ ಶಕ್ತಿ !

ಸಾರಾಂಶ

ನಿಮ್ಗೆ ಮ್ಯಾಗಿ (Maggi) ಇಷ್ಟಾನ ? ಹಾಗಿದ್ರೆ ಮ್ಯಾಗಿಯ ಕಣ ಕಣದಲ್ಲೂ ಕೇಸರಿಯ ಮಿಶ್ರಣ ಆದ್ರೆ ಹೇಗಿರುತ್ತೆ ? ಅರೆ ಮ್ಯಾಗಿ ಅಂತಾರೆ, ಮತ್ತೆ ವಿಮಲ್ ಪಾನ್ ಮಸಾಲ (Vimal Pan Masala)ದ ಡೈಲಾಗ್‌ ಹೇಳ್ತಿದ್ದಾರೆ ಅಂತ ಗಾಬರಿಯಾದ್ರಾ. ವೈರಲ್‌ (Viral) ಆಗ್ತಿರೋ ಫುಡ್‌ ಟ್ರೆಂಡ್‌ (Food Trend) ಬೆಚ್ಚಿಬೀಳಿಸೋ ಹಾಗೆನೇ ಇದೆ. ಅದೇನು ತಿಳ್ಕೊಳ್ಳಿ.

ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರು. ಹೀಗಾಗಿಯೇ ವೆರೈಟಿ ವೆರೈಟಿ ಫುಡ್ (Food) ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸಮರಿಮೆಂಟ್ (Experiment) ಮಾಡುತ್ತಲೇ ಇರುತ್ತಾರೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ (Viral) ಆಗುತ್ತವೆ. ಆದರೆ ಇನ್ನು ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಇನ್‌ಸ್ಟ್ರಾಗ್ರಾಂ (Instagram), ಫುಡ್ ಬ್ಲಾಗರ್ಸ್ (Food Bloggers) ಶುರುವಾದ ನಂತರ ದೇಶದ ಮೂಲೆ ಮೂಲೆಯ ವಿಭಿನ್ನ ರೀತಿಯ ಆಹಾರಗಳು ಎಲ್ಲರಿಗೂ ಪರಿಚಯವಾಗುತ್ತಿದೆ. ಸದ್ಯ ಇದೇ ರೀತಿ ವೈರಲ್ ಆಗ್ತಿರೋದು ವಿಮನ್ ಪಾನ್ ಮಸಾಲ   (Vimal Pan Masala)ಸೇರಿಸಿರೋ ಮ್ಯಾಗಿ. 

ಪ್ರತಿಯೊಬ್ಬ ಭಾರತೀಯರ ನೆಚ್ಚಿನ ಆಹಾರ ಮ್ಯಾಗಿ ನೂಡಲ್ಸ್‌ (Maggi Noodles). ಆದರೆ ಇದರೊಂದಿಗೆ ವಿಮಲ್ ಪಾನ್ ಮಸಾಲವನ್ನು ಬೆರೆಸಿ ಸೇವಿಸಿರುವ ವಿಲಕ್ಷಣ ಆಹಾರ ಆವಿಷ್ಕಾರದ ವಿಡಿಯೋವೊಂದು ಸಾಮಾಜಿಕ ಜಾಲತಾಣ (Social Media)ದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ವಿಮಲ್ ಪಾನ್ ಮಸಾಲದ ಪ್ಯಾಕೆಟ್ ಅನ್ನು ತೆರೆದು ಮ್ಯಾಗಿಯ ಬಟ್ಟಲಿಗೆ ಸುರಿದು ವಿಶ್ರಣ ಮಾಡಿ ಬೈಕಿನಲ್ಲಿ ಕುಳಿತು ತಿನ್ನುವುದನ್ನು ನೋಡಬಹುದಾಗಿದೆ. 

ಫುಡ್‌ (Food)ನಲ್ಲಿ ಎಕ್ಸಪರಿಮೆಂಟ್ ಮಾಡೋದು ಇತ್ತೀಚಿಗೆ ಟ್ರೆಂಡ್ (Trend) ಆಗ್ತಿದೆ. ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ (Combination) ಮಾಡುತ್ತಾರೆ. ಈ ಹಿಂದೆಯೂ ಮ್ಯಾಗಿಯನ್ನು ಬಳಸಿ ವಿಚಿತ್ರ ಆಹಾರಗಳನ್ನು ತಯಾರಿಸಲಾಗಿತ್ತು. ಮ್ಯಾಂಗೋ ಮ್ಯಾಗಿ, ಚಾಕೊಲೇಟ್ ಮ್ಯಾಗಿ ತಯಾರಿಸುವ ವೀಡಿಯೋಗಳು ವೈರಲ್‌ ಆಗಿದ್ದವು. 

Idli Ice Cream: ಇಡ್ಲಿ ಮತ್ತು ಐಸ್‌ಕ್ರೀಂ ಮಿಕ್ಸ್ ಮಾಡಿದ್ರೆ ಹೇಗಿರುತ್ತೆ?

ಮ್ಯಾಗಿಯೊಂದಿಗೆ ತಂಬಾಕು ಆಧಾರಿತ ಪಾನ್ ಮಸಾಲಾ ಮಿಶ್ರಣವನ್ನು ವ್ಯಕ್ತಿಯೊಬ್ಬರು ತಿನ್ನುತ್ತಾರೆ. ವಿಚಿತ್ರ ಸಂಯೋಜನೆಯೊಂದಿಗೆ ನೆಟಿಜನ್‌ಗಳನ್ನು ಪ್ರಚೋದಿಸುವ ಉದ್ದೇಶದಿಂದ ವೀಡಿಯೋವನ್ನು ರಚಿಸಲಾಗಿದೆ ಎಂದು ತೋರುತ್ತದೆ. ಈ ವಿಡಿಯೋವನ್ನು ಕಂಟೆಂಟ್ ಕ್ರಿಯೇಟರ್ ರೋಹಿತ್ ಚೌಹಾಣ್ ಅವರು ಇನ್ಸ್ಟಾಗ್ರಾಮ್‌ (Instagram) ನಲ್ಲಿ ಹಂಚಿಕೊಂಡಿದ್ದಾರೆ. 'ದಾನೆ ದಾನೆ ಮೇ ಕೇಸರ್‌ ಕಾ ಧಮ್‌'  (ಕಣ ಕಣದಲ್ಲೂ ಕೇಸರಿಯ ಶಕ್ತಿ) ಎಂದು ಬರೆದುಕೊಂಡಿದ್ದಾರೆ. ಈ ರೀಲ್ ಈ ವರೆಗೂ 3.1 ಮಿಲಿಯನ್ ವೀಕ್ಷಣೆಗಳನ್ನು ಮತ್ತು 71 ಸಾವಿರ ಲೈಕ್‌ಗಳನ್ನು ಪಡೆದುಕೊಂಡಿದೆ. 

ವಿಚಿತ್ರ ಆಹಾರದ ವೀಡಿಯೋಗೆ ನೆಟ್ಟಿಗರು ಭಿನ್ನ-ವಿಭಿನ್ನ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಅನಾರೋಗ್ಯದ ಮುಖದ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ ಅನೇಕ ಇನ್‌ಸ್ಟಾಗ್ರಾಮ್ ಬಳಕೆದಾರರು ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವು ಬಳಕೆದಾರರು ವಿಮಲ್ ಅನ್ನು ಸೇವಿಸುವುದು ಅಪಾಯಕಾರಿ ಜೀವಕ್ಕೆ ಹಾನಿ ಉಂಟು ಮಾಡುವ ಕೆಲಸ ಮತ್ತು ಇದು ಹಾಸ್ಯ ಉದ್ದೇಶಗಳಿಗಾಗಿ ಕೂಡ ಮಾಡಬಾರದು ಎಂದು ಕಾಮೆಂಟ್ ಮಾಡಿದ್ದಾರೆ. ಅದೇನೆ ಇರ್ಲಿ, ಟ್ರೆಂಡ್ ಹೆಸರಲ್ಲಿ ಫುಡ್ ಟ್ರೆಂಡ್ ಎಲ್ಲರ ಆಕ್ರೋಶಕ್ಕೆ ಕಾರಣವಾಗ್ತಿರೋದಂತೂ ನಿಜ. 

Food Trend: ಐಸ್‌ಕ್ರೀಂ ಸೂಪ್‌ ನೂಡಲ್ಸ್‌ ಟೇಸ್ಟ್ ಮಾಡಿದ್ದೀರಾ ?

ಈ ಹಿಂದೆ ಮಹಿಳೆಯೊಬ್ಬರು ಮ್ಯಾಂಗೋ ಮ್ಯಾಗಿ ಮಾಡುವ ವೀಡಿಯೋ ವೈರಲ್ ಆಗಿತ್ತು. ಮಹಿಳೆ ಮೊದಲು ದೊಡ್ಡ ಪಾತ್ರೆಗೆ ತುಪ್ಪ ಹಾಕಿ ಮ್ಯಾಗಿ ಮಸಾಲೆ ಹಾಕಿಕೊಳ್ಳುತ್ತಾಳೆ. ನಂತರ ಇದಕ್ಕೆ ನೀರು ಸೇರಿಸಿ ಮ್ಯಾಗಿ ಸೇರಿಸುತ್ತಾಳೆ. ನಂತರ ಮಾವಿನ ಜ್ಯೂಸ್ ಸುರಿದು ಅದರಲ್ಲೇ ಮ್ಯಾಗಿಯನ್ನು ಬೇಯಿಸಿಕೊಳ್ಳುತ್ತಾಳೆ. ಬಳಿಕ ಮ್ಯಾಗಿಯನ್ನು ಪ್ಲೇಟ್‌ಗೆ ಹಾಕಿ ಮೇಲಿನಿಂದ   ಬಹಳಷ್ಟು ಮಾವಿನ ತುಂಡನ್ನು ಸೇರಿಸುತ್ತಾಳೆ. ನಂತರ ಮ್ಯಾಗಿಯನ್ನು ಸೇರಿಸುತ್ತಾಳೆ.ನಂತರ ಪ್ಲೇಟ್‌ನ ಬದಿಯಲ್ಲಿ ಮ್ಯಾಂಗೋ ರಸವನ್ನು ಸೇರಿಸುತ್ತಾಳೆ. ಈ ವೀಡಿಯೋಗೂ ಜನರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲವರು ತಮ್ಮ ನೆಚ್ಚಿನ ಹಣ್ಣನ್ನು ಮ್ಯಾಗಿಯಲ್ಲಿ ಏಕೆ ಸೇರಿಸಲಾಗಿದೆ ಎಂದು ಕೋಪಗೊಂಡ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Heart Problemಗೆ ಎಲ್ಲರೂ ಹೇಳೋ ಕಾರಣವಲ್ಲವೇ ಅಲ್ಲ, ಪೌಷ್ಟಿಕ ತಜ್ಞರ ಮಹಾವಂಚನೆ ಬಯಲಿಗೆ
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?