Temples In India: ಈ ದೇವಾಲಯಗಳು ಪ್ರಸಾದದಿಂದಲೇ ಫೇಮಸ್‌

Suvarna News   | Asianet News
Published : Dec 29, 2021, 08:54 PM ISTUpdated : Dec 29, 2021, 09:02 PM IST
Temples In India: ಈ ದೇವಾಲಯಗಳು ಪ್ರಸಾದದಿಂದಲೇ ಫೇಮಸ್‌

ಸಾರಾಂಶ

ದೇವಾಲಯ (Temple)ಗಳಿಗೆ ಹೋದಾಗ ಹೂವಾಗಲೀ, ಗಂಧವಾಗಲೀ ಪ್ರಸಾದ (Prasadam)ದ ರೂಪದಲ್ಲಿ ಸಿಗುತ್ತದೆ. ಕೆಲವೊಂದು ದೇವಸ್ಥಾನಗಳಲ್ಲಿ ಪುಳಿಯೋಗರೆ, ಪಾಯಸ, ಅನ್ನ-ಸಾಂಬಾರನ್ನು ಪ್ರಸಾದದ ರೂಪದಲ್ಲಿ ನೀಡುತ್ತಾರೆ. ಇಷ್ಟೇ ಮಾತ್ರವಲ್ಲ ಕೆಲವೊಂದು ದೇವಸ್ಥಾನಗಳು ರುಚಿಕರವಾದ, ವಿಭಿನ್ನವಾದ ಪ್ರಸಾದವನ್ನು ವಿತರಿಸುತ್ತವೆ. ಆ ದೇವಾಲಯಗಳು ಯಾವೆಲ್ಲಾ..?

ಭಾರತವು ಕಲೆ, ಸಂಸ್ಕೃತಿ ಮತ್ತು ಸಂಪ್ರದಾಯದಲ್ಲಿ ಭಿನ್ನವಾಗಿರುವಂತೆಯೇ ಆಹಾರದ ವಿಚಾರದಲ್ಲಿಯೂ ವಿಶಿಷ್ಟವಾಗಿ ಗುರುತಿಸಿಕೊಂಡಿದೆ. ಹಾಗೆಯೇ ರುಚಿಕರವಾದ ಅಡುಗೆಯನ್ನು ತಯಾರಿಸುವಲ್ಲೂ ಭಾರತೀಯರು ಎತ್ತಿದ ಕೈ. ಇಲ್ಲಿನ ದೇವಾಲಯಗಳಲ್ಲೂ ವೈವಿಧ್ಯಮಯ ರೀತಿಯ ಪ್ರಸಾದ ಹಂಚುವುದನ್ನು ನೋಡಿರಬಹುದು. ಭಾರತದಲ್ಲಿನ ದೇವಾಲಯಗಳು ಅತ್ಯಂತ ರುಚಿಕರವಾದ ಆಹಾರವನ್ನು ನೀಡುತ್ತವೆ. ಕೆಲವು ದೇವಾಲಯಗಳು ನಿಮಗೆ ಪ್ರಸಾದವನ್ನು ನೀಡುತ್ತವೆ. ಕೆಲವು ಆರೋಗ್ಯಕರವಾದ ಭೋಜನವನ್ನು ನೀಡುತ್ತವೆ. ಹಾಗಾದರೆ ಅತ್ಯಂತ ರುಚಿಕರವಾದ, ವಿಭಿನ್ನವಾದ ಪ್ರಸಾದನ್ನು ವಿತರಿಸುವ ಭಾರತದ ದೇವಾಲಯಗಳು ಯಾವೆಲ್ಲಾ..?

ಅನ್ನಪೂರ್ಣೇಶ್ವರಿ ದೇವಸ್ಥಾನ, ಹೊರನಾಡು
400 ವರ್ಷಗಳಷ್ಟು ಹಳೆಯದಾದ ಈ ದೇವಾಲಯವು ಅನ್ನಪೂರ್ಣೇಶ್ವರಿಗೆ ಸಮರ್ಪಿತವಾಗಿದ್ದು, ಕರ್ನಾಟಕದಲ್ಲಿದೆ. ಅನ್ನಪೂರ್ಣೇಶ್ವರಿ, ಎಂದರೆ ಎಲ್ಲರಿಗೂ ಅನ್ನ ನೀಡುವವಳು ಎಂದರ್ಥ. ಪ್ರತಿನಿತ್ಯ ಈ ದೇವಾಲಯದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯುತ್ತದೆ. 

ಗೋಲ್ಡನ್ ಟೆಂಪಲ್, ಅಮೃತಸರ
ಇದು ಭಾರತದ ಅತ್ಯಂತ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ. ಇದು ರುಚಿಕರವಾಗಿ ನೀಡುವ ಪ್ರಸಾದ (Prasadam)ದಿಂದಲೂ ಹೆಸರುವಾಸಿಯಾಗಿದೆ. ವಿದೇಶಗಳಿಂದ ಸಹ ಜನರು ಪ್ರಸಾದವನ್ನು ಸವಿಯಲು ಗೋಲ್ಡನ್ ಟೆಂಪಲ್‌ಗೆ ಭೇಟಿ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ, ದಾಲ್, ರೊಟ್ಟಿ, ಅನ್ನ, ಮಿಶ್ರಿತ ಸಬ್ಜಿ ಮತ್ತು ಶೀರಾವನ್ನು ಒಳಗೊಂಡಿರುವ ಪ್ರಸಾದವನ್ನು ಇಲ್ಲಿ ತಯಾರಿಸಲಾಗುತ್ತದೆ.

Temple Special: ಶಿಲ್ಪಕಲೆಯ ಶ್ರೀವೀಡು ಬೇಲೂರು ಚೆನ್ನಕೇಶವ ದೇವಾಲಯ

ಹೆಮಿಸ್ ಮೊನಾಸ್ಟರಿ, ಹೆಮಿಸ್ 
ಹೆಮಿಸ್ ಮಠವು ಲಡಾಖ್‌ನ ಅತಿದೊಡ್ಡ ಮಠಗಳಲ್ಲಿ ಒಂದಾಗಿದೆ. ಇದು ರುಚಿಕರವಾದ ಊಟ ಮತ್ತು ಸ್ಥಳೀಯ ಬೆಣ್ಣೆ ಚಹಾವನ್ನು ಸಹ ನೀಡುತ್ತದೆ. ಪ್ರಸಾದದ ರೂಪದಲ್ಲಿ ಚಹಾವನ್ನು ನೀಡುವುದಕ್ಕೇ ಇದು ಪ್ರಸಿದ್ಧಿ ಹೊಂದಿದೆ. ಮಠದ ವಸತಿ ನಿಲಯಗಳಲ್ಲಿ ಪ್ರಯಾಣಿಕರಿಗೆ ತಂಗಲು ಅವಕಾಶವಿದೆ.

ಇಸ್ಕಾನ್ ದೇವಸ್ಥಾನ, ಮುಂಬೈ
ಸಾಕಷ್ಟು ರುಚಿಯನ್ನು ಹೊಂದಿರುವ ಸಾತ್ವಿಕ ಆಹಾರವು ನಿಮ್ಮನ್ನು ಹೆಚ್ಚು ಆಕರ್ಷಿಸುವುದಾದರೆ, ನೀವು ಮುಂಬೈ ಮತ್ತು ಇತರ ನಗರಗಳಲ್ಲಿನ ಇಸ್ಕಾನ್ ದೇವಾಲಯಕ್ಕೆ ಭೇಟಿ ನೀಡಬೇಕು. ಇಲ್ಲಿಯ ಇಸ್ಕಾನ್ ದೇವಾಲಯ (Temple)ಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿಯ ಊಟ ಎರಡನ್ನೂ ಪೂರೈಸುತ್ತಾರೆ. ಮಹಾ ಆರತಿ ಮುಗಿದ ನಂತರ ಭೋಜನಾಲಯವು ಭಕ್ತರಿಗೆ ತೆರೆಯುತ್ತದೆ. 

ಶಿರಡಿ ಸಾಯಿಬಾಬಾ ಮಂದಿರ ಪ್ರಸಾದಾಲಯ, ಶಿರಡಿ
ಶಿರಡಿ ಸಾಯಿಬಾಬಾ ಮಂದಿರ ಪ್ರಸಾದಾಲಯವು ಜನರಿಗೆ ಆಹಾರವನ್ನು ಒದಗಿಸಲು ಸೌರಶಕ್ತಿಯಿಂದ ನಡೆಸಲ್ಪಡುವ ಏಷ್ಯಾದ ಅತಿದೊಡ್ಡ ಅಡುಗೆಮನೆಯಾಗಿದೆ. ಇಲ್ಲಿನ ಅಡುಗೆಮನೆಯಲ್ಲಿ ಪ್ರತಿದಿನ ಸುಮಾರು 2000 ಕೆಜಿ ಬೇಳೆ ಮತ್ತು ಅಕ್ಕಿಯನ್ನು ಇತರ ತರಕಾರಿ (Vegetables)ಗಳೊಂದಿಗೆ ಬೇಯಿಸಲಾಗುತ್ತದೆ.

Temple Special: ಈ ಶ್ರೀಮಂತ ದೇವಸ್ಥಾನಗಳ ಆಸ್ತಿ ಎಷ್ಟು ಬಲ್ಲಿರಾ?

ತಿರುಮಲ ತಿರುಪತಿ ದೇವಸ್ಥಾನ
ತಿರುಪತಿ ದೇವಸ್ಥಾನವು ತನ್ನ ರುಚಿಕರವಾದ ಲಡ್ಡು ಪ್ರಸಾದಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಅಡುಗೆಮನೆಗಳು ಸುಸಜ್ಜಿತವಾಗಿ ನಿರ್ಮಾಣಗೊಂಡಿದ್ದು, ದಿನವೊಂದಕ್ಕೆ 1100 ಮಂದಿ ಅಡುಗೆಯವರು ನಿರ್ವಹಿಸುತ್ತಿದ್ದಾರೆ. ಅವರು ಪ್ರತಿದಿನ ದಕ್ಷಿಣ ಭಾರತೀಯ ಭಕ್ಷ್ಯಗಳ ಒಂದು ಶ್ರೇಣಿಯನ್ನು ತಯಾರಿಸುತ್ತಾರೆ, ಇದನ್ನು ಸಾವಿರಾರು ಭಕ್ತರಿಗೆ ನೀಡಲಾಗುತ್ತದೆ. .

ಜಗನ್ನಾಥ ದೇವಾಲಯ, ಪುರಿ
ಪುರಿಯ ಜಗನ್ನಾಥ ದೇವಾಲಯದಲ್ಲಿ ಪ್ರತಿದಿನ 56 ಭಕ್ಷ್ಯಗಳ ತಟ್ಟೆ(ಛಪಾನ್ ಭೋಗ್)ಯನ್ನು ದೇವರಿಗೆ ಬಡಿಸಲಾಗುತ್ತದೆ, ನಂತರ ಅದನ್ನು ಭಕ್ತರಿಗೆ ವಿತರಿಸಲಾಗುತ್ತದೆ. ದೇವಾಲಯದ ಅಡುಗೆಮನೆಯಲ್ಲಿ ಪ್ರತಿನಿತ್ಯ ನೂರಾರು ಅಡುಗೆ ತಯಾರಕರು ಕಾರ್ಯ ನಿರ್ವಹಿಸುತ್ತಾರೆ. ಮಹಾಪ್ರಸಾದವನ್ನು ಟನ್ ಗಟ್ಟಲೆ ಅಕ್ಕಿ, ಉದ್ದಿನಬೇಳೆ, ಕೆಂಪು ಕುಂಬಳಕಾಯಿ, ಬದನೆ, ಗೆಣಸು ಮತ್ತು ಹೆಚ್ಚಿನ ತರಕಾರಿಗಳನ್ನು ಬಳಸಿ ತಯಾರಿಸಲಾಗುತ್ತದೆ. 

ದಕ್ಷಿಣೇಶ್ವರ್, ಕೋಲ್ಕತ್ತಾ
ಕೋಲ್ಕತ್ತಾದ ದಕ್ಷಿಣೇಶ್ವರದಲ್ಲಿ ನೀವು ಭಾರತದ ಆರಾಮದಾಯಕ ಆಹಾರವನ್ನು ಸವಿಯಬಹುದು. ಅನ್ನ, ಸಾಂಬಾರು (Sambar), ಚಟ್ನಿ, ಕಿಚಡಿಯನ್ನು ಇಲ್ಲಿ ಪ್ರಸಾದದ ರೂಪದಲ್ಲಿ ನೀಡಲಾಗುತ್ತದೆ.

ಬ್ಯಾಂಕ್ ಬಿಹಾರಿ, ವೃಂದಾವನ
ವೃಂದಾವನದಲ್ಲಿರುವ ಬ್ಯಾಂಕ್ ಬಿಹಾರಿ ದೇವಾಲಯದಲ್ಲಿ ಪ್ರಸಾದದ ರೂಪದಲ್ಲಿ ಕಚೋರಿಯನ್ನು ನೀಡಲಾಗುತ್ತದೆ. ಇದು ದಾಲ್ ಹಾಗೂ ಆಲೂ ಮಿಶ್ರಣವನ್ನು ಒಳಗೊಂಡಿರುತ್ತದೆ. ಬೆಳಗ್ಗೆ ಇದನ್ನು ಕೃಷ್ಣನಿಗೆ ಸಮರ್ಪಿಸಿ ನಂತರ ಭಕ್ತರಿಗೆ ಹಂಚಲಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಂಬೆಯಿಂದ ಮೊಟ್ಟೆ ಸಿಪ್ಪೆ ತೆಗೆಯೋದು, ಎಣ್ಣೆ ರಹಿತ ಕ್ರಿಸ್ಪಿ ಪೂರಿ.. 2025ರಲ್ಲಿ ಜನ ಮೆಚ್ಚಿದ Food Hacks
ಆರೋಗ್ಯಕರ ತುಳಸಿ ಅಗೆದು ತಿಂದ್ರೆ ಅಪಾಯ, ಧರ್ಮ- ಆಯುರ್ವೇದ ಹೇಳೋದೇನು?