Pizza Robot Restaurant: ಜಸ್ಟ್ 45 ಸೆಕೆಂಡಿನಲ್ಲಿ ಪಿಜ್ಜಾ ತಯಾರಿಸುತ್ತೆ ರೋಬೋಟ್..!

By Suvarna News  |  First Published Dec 28, 2021, 5:39 PM IST

ಪಿಜ್ಜಾ (Pizza) ಹಲವರ ಫೇವರಿಟ್. ಆದ್ರೆ ಪಿಜ್ಜಾ ಮಾಡೋಕೆ ತುಂಬಾ ಟೈಂ ಬೇಕು. ಪಿಜ್ಜಾ ಶಾಪ್‌ (Shop)ಗೆ ಹೋದ್ರೆ ಆರ್ಡರ್ ಕೊಟ್ಟು ಗಂಟೆಗಟ್ಟಲೆ ಕಾಯಬೇಕು ಅನ್ನೋದು ಹಲವರ ಗೋಳು. ಆದ್ರೆ ಇಲ್ಲೊಂದು ಪಿಜ್ಜಾ ರೋಬೋಟ್ (Robot) ಇದೆ. ಇದು ಜಸ್ಟ್ 45 ಸೆಕೆಂಡಿಗೆ ಪಿಜ್ಜಾ ತಯಾರಿಸಿ ಟೇಬಲ್ ಮೇಲಿಡುತ್ತೆ.
.


ಜಂಕ್‌ಫುಡ್ ಪ್ರಿಯರ ಫೇವರಿಟ್ ಲಿಸ್ಟ್‌ನಲ್ಲಿ ಮೊದಲ ಸಾಲಲ್ಲಿ ನಿಲ್ಲುವುದು ಪಿಜ್ಜಾ. ಬರ್ತ್‌ಡೇ, ಪಾರ್ಟಿ, ಗೆಟ್ ಟುಗೆದರ್ ಹೀಗೆ ಕಾರಣ ಹಲವಿದ್ದರೂ ಪಿಜ್ಜಾ ಮೊದಲ ಆಪ್ಶನ್ ಮತ್ತು ಸೆಲೆಕ್ಷನ್ ಆಗಿರುತ್ತದೆ. ಪಿಜ್ಜಾ ಇಟಾಲಿಯನ್ ಮೂಲದ ಖಾದ್ಯವಾಗಿದ್ದು, ಟೊಮೇಟೋ, ಚೀಸ್ ಮತ್ತು ಇತರ ಅನೇಕ ಪದಾರ್ಥದೊಂದಿಗೆ ಹುದುಗಿಸಿದ ಗೋಧಿ ಆಧಾರಿತ ಹಿಟ್ಟಿನ ಆಹಾರವಾಗಿದೆ. ಸಾಮಾನ್ಯವಾಗಿ ರೌಂಡ್ ಶೇಪ್‌ನಲ್ಲಿದ್ದು, ಚಪ್ಪಟೆಯಾದ ಬೇಸ್ ಅನ್ನು ಒಳಗೊಂಡಿರುತ್ತದೆ. ಸಾಂಪ್ರದಾಯಿಕವಾಗಿ ಇದನ್ನು ಮರದ ಒಲೆಯಲ್ಲಿ ತಯಾರಿಸಲಾಗುತ್ತಿತ್ತು. ಈಗ ಸುಲಭವಾಗಿ ಎಲೆಕ್ಟ್ರಿಕ್ ಡೆಕ್ ಓವನ್, ಕನ್ವೇಯರ್ ಬೆಲ್ಟ್ ಓವನ್‌ನಲ್ಲಿ ಪಿಜ್ಜಾವನ್ನು ಬೇಯಿಸಲಾಗುತ್ತದೆ. 

ಪಿಜ್ಜಾದಲ್ಲಿ ವೆಜ್, ನಾನ್ ವೆಜ್ ಅಲ್ಲದೆಯೂ ಹಲವು ವೆರೈಟಿ ಸಿಗುವ ಕಾರಣ ಎಲ್ಲರೂ ಇದನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುವವರೇ. ಸುಮ್ಮನೆ ಬೋರ್ ಅನಿಸಿದಾಗ, ಅಡುಗೆ ಮಾಡಲು ಬೇಜಾರು ಅನಿಸಿದಾಗ ಪಿಜ್ಜಾ ಆರ್ಡರ್ ಮಾಡಿದರಾಯಿತು. ಕೆಲವೇ ನಿಮಿಷಗಳಲ್ಲಿ ಡೆಲಿವರಿ ಬಾಯ್ ಮನೆ ಮುಂದಿರುತ್ತಾನೆ. ಮತ್ತೇನಿದ್ರೂ ಕಿತ್ತಾಡಿಕೊಂಡು ಪಿಜ್ಜಾ ತಿನ್ನೋ ಕೆಲಸ. ಆದ್ರೆ ಅದೇ ಪಿಜ್ಜಾವನ್ನು ಹೊರಗಡೆ ಶಾಪ್‌ಗೆ ಹೋಗಿ ತಿನ್ನೋಣ ಎಂದರೆ ಆರ್ಡರ್ ಮಾಡಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ. 
ಆದರೆ, ಇದೆಲ್ಲದರ ಮಧ್ಯೆ ಅಚ್ಚರಿ ಎಂಬಂತೆ ಲಾಸ್ ಏಂಜಲೀಸ್‌ನಲ್ಲಿ ಮೂವರು ಮಾಜಿ ಸ್ಪೇಸ್‌ಎಕ್ಸ್ ಎಂಜಿನಿಯರ್‌ಗಳು ಪಿಜ್ಜಾ ತಯಾರಿಸುವ ರೋಬೋಟ್ ಯಂತ್ರವನ್ನು ತಯಾರಿಸಿದ್ದು, ಹೊಸ ರೆಸ್ಟೋರೆಂಟ್‌ವೊಂದನ್ನು ಆರಂಭಿಸಿದ್ದಾರೆ. ಈ ರೆಸ್ಟೋರೆಂಟ್‌ನಲ್ಲಿರುವ ರೋಬೋಟ್ ಜಸ್ಟ್ 45 ಸೆಕೆಂಡಿಗೆ ಪಿಜ್ಜಾವನ್ನು ತಯಾರಿಸಿ ಟೇಬಲ್‌ನಲ್ಲಿಡುತ್ತದೆ.

Tap to resize

Latest Videos

undefined

ಪಿಜ್ಜಾ, ಫ್ರೆಂಚ್ ಫ್ರೈಸ್ ಪ್ರಿಯರೇ, ನಿಮ್ಮ ಆರೋಗ್ಯದ ಕಡೆ ಇರಲಿ ಗಮನ

ಜಸ್ಟ್ 45 ಸೆಕೆಂಡಿನಲ್ಲಿ ಪಿಜ್ಜಾ ತಯಾರಿಸುವ ರೋಬೋಟ್

ನಂಬೋಕೆ ಕಷ್ಟವೆನಿಸಿದ್ರೂ ಇದು ನಿಜ. ಇಲ್ಲಿರುವ ರೋಬೋಟ್ (Robot) ಗ್ರಾಹಕರು ಆರ್ಡರ್ ಮಾಡಿದ ಪ್ರತಿ 45 ಸೆಕೆಂಡಿಗೆ ಪಿಜ್ಜಾ ತಯಾರಿಸುತ್ತದೆ. ಪಿಜ್ಜಾ ತಯಾರಿಸುವ ರೋಬೋಟ್ ಇರುವ ಈ ರೆಸ್ಟೋರೆಂಟ್ ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡಲಿದೆ. ಸ್ಟೆಲ್ಲರ್ ಪಿಜ್ಜಾ ಎಂಬ ಈ ಕಂಪೆನಿಯನ್ನು ಮೇ 2019ರಲ್ಲಿ ಮೂವರು ಮಾಜಿ ಸ್ಪೇಸ್‌ಎಕ್ಸ್ ಎಂಜಿನಿಯರ್‌ಗಳಾದ ಬೆನ್ಸನ್ ತ್ಸೈ, ಬ್ರಿಯಾನ್ ಲ್ಯಾಂಗೋನ್ ಮತ್ತು ಜೇಮ್ಸ್ ವಹಾವಿಸನ್ ಸ್ಥಾಪಿಸಿದರು.

ಸ್ಟೆಲ್ಲರ್ ಪಿಜ್ಜಾದ ಸಿಇಒ ಬೆನ್ಸನ್ ತ್ಸೈ ಅವರು ಎಲೋನ್ ಮಸ್ಕ್‌ನ ಕಂಪೆನಿಯೊಂದರಲ್ಲಿ ಐದು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದರು. ಅಲ್ಲಿ ಅವರು ರಾಕೆಟ್‌ಗಳು ಮತ್ತು ಉಪಗ್ರಹಗಳಿಗಾಗಿ ಸುಧಾರಿತ ಬ್ಯಾಟರಿ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದರು. ಟ್ರಕ್‌ನ ಹಿಂಭಾಗಕ್ಕೆ ಹೊಂದಿಕೊಳ್ಳುವ ಸ್ವಯಂಚಾಲಿತ, ಪಿಜ್ಜಾ ತಯಾರಿಸುವ ಯಂತ್ರವನ್ನು ನಿರ್ಮಿಸಲು ಅವರು 23ಕ್ಕೂ ಹೆಚ್ಚು ಮಾಜಿ ಸ್ಪೇಸ್‌ಎಕ್ಸ್ ಉದ್ಯೋಗಿಗಳನ್ನು ಒಟ್ಟುಗೂಡಿಸಿದರು. ಇವರೆಲ್ಲರ ಪ್ರಯತ್ನದ ಫಲವಾಗಿಯೇ ಪಿಜ್ಜಾ (Pizza) ತಯಾರಿಸುವ ರೊಬೋಟ್ ಅನ್ನು ತಯಾರಿಸಲಾಯಿತು.

ಪಿಜ್ಜಾದ ಒಂದು ಸ್ಲೈಸ್ ಜೀವನದ 8 ನಿಮಿಷವನ್ನು ಕಡಿಮೆ ಮಾಡುತ್ತಂತೆ

ರೋಬೋಟ್, ಪಿಜ್ಜಾ ತಯಾರಿಸುವ ವಿಧಾನ

ಸ್ಟೆಲ್ಲರ್ ಪಿಜ್ಜಾದ ರೋಬೋಟಿಕ್ ಯಂತ್ರ (Machine) ಪಿಜ್ಜಾವನ್ನು ತಯಾರಿಸಿ, ಬೇಯಿಸಿ, ಸರ್ವ್ ಮಾಡಲು ಸಿದ್ಧಪಡಿಸಿ ಕೊಡುತ್ತದೆ. ಮೊದಲಿಗೆ ಈಗಾಗಲೇ ಸಿದ್ಧಪಡಿಸಿಟ್ಟಿರುವ ಪಿಜ್ಜಾ ಹಿಟ್ಟನ್ನು ಯಂತ್ರಕ್ಕೆ ಹಾಕಲಾಗುತ್ತದೆ, ಅಲ್ಲಿ ಅದನ್ನು ಒತ್ತಿ ಮತ್ತು ದುಂಡಗಿನ ಆಕಾರದಲ್ಲಿ ಅಚ್ಚು ಮಾಡಲಾಗುತ್ತದೆ. ಹಿಟ್ಟು ಸಿದ್ಧವಾದ ನಂತರ, ಯಂತ್ರವು ಸಾಸ್ ಮತ್ತು ಇತರ ಪದಾರ್ಥಗಳೊಂದಿಗೆ ಪಿಜ್ಜಾವನ್ನು ಮೇಲಕ್ಕೆತ್ತುತ್ತದೆ. ಕಚ್ಚಾ ಪಿಜ್ಜಾವನ್ನು ನಂತರ ರೋಬೋಟಿಕ್ ಯಂತ್ರದಲ್ಲಿ ತಾಪಮಾನದ ಓವನ್‌ (Oven)ಗೆ ಸೇರಿಸಲಾಗುತ್ತದೆ.

ಸ್ಟೆಲ್ಲರ್ ಪಿಜ್ಜಾದ ಉದ್ಯೋಗಿಗಳಲ್ಲಿ ಒಬ್ಬರಾದ, ಸ್ಪೇಸ್‌ಎಕ್ಸ್‌ನ ಮಾಜಿ ಕಾರ್ಯ ನಿರ್ವಾಹಕ ಶೆಫ್, ಟೆಡ್ ಸಿಜ್ಮಾ ಅವರು ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಸಿಬ್ಬಂದಿಗಾಗಿ ರಾಕೆಟ್ ಕಂಪನಿಯ ಆಹಾರ ಸೇವಾ ಕ್ರಮವನ್ನು ರಚಿಸಿದರು. ಸ್ಟೆಲ್ಲರ್ ಪಿಜ್ಜಾಕ್ಕಾಗಿ ಉತ್ತಮ, ಗುಣಮಟ್ಟದ ಮತ್ತು ಕೈಗೆಟುಕುವ ಪಿಜ್ಜಾಗಳನ್ನು ತಯಾರಿಸುವ ಪ್ರಯತ್ನದಲ್ಲಿ ಸಿಜ್ಮಾ ಪಿಜ್ಜಾ ಸಲಹೆಗಾರ ನೋಯೆಲ್ ಬ್ರೋನರ್ ಅವರೊಂದಿಗೆ ಸೇರಿಕೊಂಡರು.

ಕಂಪನಿಯು ಪೆಪ್ರೋನಿ ಅಥವಾ ಸುಪ್ರೀಮ್ ಪಿಜ್ಜಾವನ್ನು ತಯಾರಿಸಿ ಕೊಡುತ್ತದೆ. ಅಲ್ಲದೆ ಗ್ರಾಹಕರು (Customer) ತಾವೇ ಆಯ್ಕೆ ಮಾಡಿ ತಮ್ಮ ಪಿಜ್ಜಾಗೆ ಏನು ಬೇಕು ಎಂಬುದನ್ನು ನಿರ್ಧರಿಸಿಕೊಳ್ಳಬಹುದು. ಈರುಳ್ಳಿ, ಬೇಕನ್, ಚಿಕನ್ (Chicken) ಮತ್ತು ಆಲಿವ್‌ಗಳನ್ನು ಒಳಗೊಂಡಂತೆ ತಾಜಾ ಮೇಲೋಗರಗಳೊಂದಿಗೆ ತಮ್ಮದೇ ಆದ ಪಿಜ್ಜಾವನ್ನು ರೆಡಿ ಮಾಡಿಕೊಳ್ಳಬಹುದು.

click me!