ತೆಂಗಿನ ಚಿಪ್ಪಿನಲ್ಲಿ ಟೀ, 2 ರೂ.ಗೆ ಮಸಾಲೆ ದೋಸೆ; 2023ರಲ್ಲಿ ಆಹಾರದ ಬಗ್ಗೆ ಸುದ್ದಿಯಾದ ವಿಚಾರಗಳಿವು

By Vinutha Perla  |  First Published Dec 12, 2023, 6:09 PM IST

ಫುಡ್ ಅಂದ್ರೆ ಎಲ್ಲರಿಗೂ ಆಸಕ್ತಿಯ ವಿಚಾರನೇ..ಹೀಗಾಗಿಯೇ ವರ್ಷದಿಂದ ವರ್ಷಕ್ಕೆ ಆಹಾರ ವಿಚಾರದಲ್ಲಿ ಹೊಸ ಫುಡ್ ಕಾಂಬಿನೇಷನ್‌, ಟ್ರೆಂಡ್ ಬರ್ತಾನೆ ಇರುತ್ತೆ. ಹಾಗೆಯೇ ಕೆಲವೊಬ್ಬರಿಗೆ ಆಹಾರ ತಿಂದು ಫುಡ್‌ ಪಾಯ್ಸನಿಂಗ್‌ ಆಗೋದು ಇದೆ.  2023ರಲ್ಲಿ ಆಹಾರದ ಬಗ್ಗೆ ಸುದ್ದಿಯಾದ ಕೆಲವು ವಿಚಾರಗಳು ಇಲ್ಲಿವೆ.


ಫುಡ್ ಅಂದ್ರೆ ಎಲ್ಲರಿಗೂ ಆಸಕ್ತಿಯ ವಿಚಾರನೇ..ಹೀಗಾಗಿಯೇ ವರ್ಷದಿಂದ ವರ್ಷಕ್ಕೆ ಆಹಾರ ವಿಚಾರದಲ್ಲಿ ಹೊಸ ಫುಡ್ ಕಾಂಬಿನೇಷನ್‌, ಟ್ರೆಂಡ್ ಬರ್ತಾನೆ ಇರುತ್ತೆ. ಹಾಗೆಯೇ ಕೆಲವೊಬ್ಬರಿಗೆ ಆಹಾರ ತಿಂದು ಫುಡ್‌ ಪಾಯ್ಸನಿಂಗ್‌ ಆಗೋದು ಇದೆ.  2023ರಲ್ಲಿ ಆಹಾರದ ಬಗ್ಗೆ ಸುದ್ದಿಯಾದ ಕೆಲವು ವಿಚಾರಗಳು ಇಲ್ಲಿವೆ.

2 ಮಸಾಲೆ ದೋಸೆ, 2 ಕಾಫಿ ಬೆಲೆ ಎರಡೇ ರೂಪಾಯಿ
ಇಂದು ಸಾಧಾರಣ ಹೋಟೆಲ್​ನಲ್ಲಿ ಒಂದು ಮಸಾಲೆ ದೋಸೆ ತಿನ್ನಬೇಕೆಂದರೆ ಏನಿಲ್ಲಾಂದ್ರೂ 60 ರೂ. ಖರ್ಚಾಗುತ್ತದೆ. ಆದರೆ 1971ರಲ್ಲಿ? ಇದೀಗ ವೈರಲ್ ಆಗುತ್ತಿರುವ ದೆಹಲಿಯ ಮೋತಿ ಮಹಲ್​ ರೆಸ್ಟೋರೆಂಟ್​ನ ಬಿಲ್‌ನಲ್ಲಿ ಮಸಾಲೆ ದೋಸೆ ಹಾಗೂ ಕಾಫಿಯ ಬೆಲೆಯನ್ನು ಕೇವಲ ಎರಡು ರೂಪಾಯಿಯೆಂದು ತಿಳಿಸಲಾಗಿದೆ. ಇದರಲ್ಲಿ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್‌ನ 28.06.1971ರಲ್ಲಿ  2 ಮಸಾಲೆ ದೋಸೆ ಮತ್ತು 2 ಕಾಫಿಗೆ ಕೇವಲ ಎರಡು ರೂಪಾಯಿ ಬಿಲ್ ಆಗಿರುವುದಾಗಿ ತಿಳಿಸಲಾಗಿದೆ. ಬಿಲ್ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್‌ನದ್ದಾಗಿದ್ದು, 51 ವರ್ಷಗಳಿಗಿಂತಲೂ ಹಿಂದಿನದು. ಫೆಬ್ರವರಿ 2017ರಲ್ಲಿ ಟ್ವಿಟರ್‌ನಲ್ಲಿ ಬಿಲ್ ಅನ್ನು ಪೋಸ್ಟ್ ಮಾಡಲಾಗಿದ್ದು, ಈ ವರ್ಷ ವೈರಲ್ ಆಗಿತ್ತು.

Tap to resize

Latest Videos

undefined

ತೆಂಗಿನ ಚಿಪ್ಪಿನಲ್ಲಿ ಟೀ ತಯಾರಿಸಿದ ಮಹಿಳೆ, ವೀಡಿಯೋ ವೈರಲ್‌;
ನೀವು ತುಂಬಾ ಡಿಫರೆಂಟ್ ಆದ ಟೀ ಕುಡಿಯಲು ಬಯಸಿದರೆ ನೀವು ಕೊಕೋನೆಟ್ ಶೆಲ್ ಬಳಸಿ ಟೀ ತಯಾರಿಸಿ ಕುಡಿಯಬಹುದು. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಮಹಿಳೆಯೊಬ್ಬರು ಒಲೆಯ ಮೇಲೆ ಟೊಳ್ಳಾದ ತೆಂಗಿನ ಚಿಪ್ಪನ್ನು ಇಟ್ಟು ಟೀ ತಯಾರಿಸುತ್ತಾರೆ. ಹಾಲು ಬಿಸಿಯಾದ ನಂತರ ಸ್ವಲ್ಪ ನೀರು, ಶುಂಠಿ, ಹಾಲು, ಏಲಕ್ಕಿ ಮತ್ತು ಸಕ್ಕರೆಯನ್ನು ಸೇರಿಸುತ್ತಾರೆ. ಅಲ್ಲಿಗೆ ಪರಿಪೂರ್ಣವಾದ ತೆಂಗಿನ ಚಹಾ ರೆಡಿಯಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಕೋಕೊನೆಟ್ ಶೆಲ್ ಟೀ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Lookback 2023 : ಬದಲಾಗಿದ್ದಾರೆ ಜನ! ರುಚಿ ಜೊತೆ ಆರೋಗ್ಯಕ್ಕೂ ಆದ್ಯತೆ

ಸಂಕ್ರಾಂತಿಗೆ ಮನೆಗೆ ಬಂದ ಹೊಸ ಅಳಿಯ, ಅತ್ತೆ-ಮಾವನಿಂದ 379 ಬಗೆಯ ಖಾದ್ಯ
ಸಂಕ್ರಾಂತಿ ಹಬ್ಬದಂದು ಅಳಿಯಂದಿರನ್ನು ಉಪಚರಿಸುವುದು ಆಂಧ್ರದ ಹಲವು ಮನೆಗಳಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಆದ್ರೆ ಆಂಧ್ರದಲ್ಲೊಂದು ಕುಟುಂಬ ಸಂಕ್ರಾಂತಿಗೆ ಬರೋಬ್ಬರಿ 379 ಆಹಾರಗಳನ್ನು ಸಿದ್ಧಪಡಿಸಿತ್ತು. ಏಲೂರು ಪೇಟೆಯಲ್ಲಿ ದಂಪತಿ 379 ಪದಾರ್ಥಗಳೊಂದಿಗೆ ಜಂಬೂ ಭೋಜನ ನೀಡಿ ಅಳಿಯನಿಗೆ ಅಚ್ಚರಿ ಮೂಡಿಸಿದ್ದಾರೆ. ಮದುವೆಯ ನಂತರದ ಮೊದಲ ಸಂಕ್ರಾಂತಿ ಇದಾಗಿದ್ದರಿಂದ ಮಗಳು ಮತ್ತು ಅಳಿಯ ಹಬ್ಬಕ್ಕೆ ಬಂದಿದ್ದರು. ಹೀಗಾಗಿ ಗೋದಾವರಿ ಆತಿಥ್ಯವನ್ನು ತೋರಿಸಲು ದಂಪತಿಗಳು ಅಳಿಯನಿಗೆ 379 ಆಹಾರ ಪದಾರ್ಥಗಳನ್ನು ಬಡಿಸಿದ್ದಾಗಿ ಅವರು ಹೇಳಿದ್ದಾರೆ. 

ಮೊಟ್ಟೆಯಿಂದ ತಯಾರಿಸುವ ಮೇಯನೇಸ್ ಉತ್ಪಾದನೆ ನಿಷೇಧಿಸಿದ ಕೇರಳ ಸರಕಾರ
ಹಸಿ ಮೊಟ್ಟೆಯ ಮೇಯನೇಸ್ ಉತ್ಪಾದನೆ, ಸಂಗ್ರಹಣೆ ಮತ್ತು ಮಾರಾಟವನ್ನು ನಿಷೇಧಿಸಿ ಕೇರಳ ಸರ್ಕಾರದ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿತು. ಹಸಿ ಮೊಟ್ಟೆಗಳಿಂದ ತಯಾರಿಸುವ ಮೇಯನೇಸ್‌ನ್ನು ಶೇಖರಿಸಿಟ್ಟು ತಿನ್ನುವುದು ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ ತುಂಬಾ ಅಪಾಯಕಾರಿ ಅನ್ನೋ ಕಾರಣಕ್ಕೆ  ಎಫ್ಎಸ್ಎಸ್ಎ ಕಾಯ್ದೆಯಡಿ ತುರ್ತಾಗಿ ಆದೇಶ ಹೊರಡಿಸಿತು. ಆದೇಶವು ಪಾಶ್ಚರೀಕರಿಸಿದ ಮೊಟ್ಟೆಗಳಿಂದ ತಯಾರಿಸಿದ ತರಕಾರಿ ಮೇಯನೇಸ್ ಗೆ ವಿನಾಯಿತಿ ನೀಡುತ್ತದೆ.

Throwback 2023: ದೀಪಿಕಾ ಪಡುಕೋಣೆ - ಖುಷಿ ಕಪೂರ್‌ವರೆಗೆ ಅತ್ಯಂತ ಸ್ಟೈಲಿಶ್ ಸೆಲೆಬ್ರಿಟೀಸ್!

ಒಂದೇ ಒಂದು ಮೀನಿನ ಬೆಲೆ ಭರ್ತಿ 2 ಕೋಟಿ ರೂ. 
ಮೀನಿನ ಬೆಲೆ ಸಾಮಾನ್ಯವಾಗಿ ಸಾವಿರದಲ್ಲಿ ಇರುತ್ತೆ. ಆದ್ರೆ ಜಪಾನ್‌ನಲ್ಲಿ ಬ್ಲೂಫಿನ್ ಟ್ಯೂನ ಎಂಬ ಮೀನು ಭರ್ತಿ 2 ಕೋಟಿ ರೂ.ಗೆ ಮಾರಾಟವಾಗಿತ್ತು. ಬ್ಲೂಫಿನ್ ಟ್ಯೂನವನ್ನು ಪ್ರಪಂಚದಾದ್ಯಂತದ ಉನ್ನತ-ಮಟ್ಟದ ಸುಶಿ ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಖಾದ್ಯವಾಗಿ ಸಿದ್ಧಪಡಿಸುತ್ತಾರೆ. ಹರಾಜಿನಲ್ಲಿ ಬ್ಲೂಫಿನ್ ಟ್ಯೂನ ಮೀನು 2 ಕೋಟಿ ರೂ.ಗೂ ಹೆಚ್ಚು ಬೆಲೆಗೆ ಮಾರಾಟವಾಗಿತ್ತು. ವರ್ಷದ ಮೊದಲ ಮಾರಾಟವು ಕಳೆದ ವರ್ಷದ ಬೆಲೆ ಗಿಂತ ಎರಡು ಪಟ್ಟು ಹೆಚ್ಚಾಗಿದೆ.

ಪರೋಟಾ ತಿಂದು ಫುಡ್ ಅಲರ್ಜಿ, ಕೇರಳದ ವಿದ್ಯಾರ್ಥಿನಿ ಸಾವು
ಬಹುಕಾಲದಿಂದ ತಿನ್ನದಿದ್ದ ಆಹಾರವೊಂದನ್ನು ದಿಢೀರ್ ತಿಂದ ಕಾರಣ ಯುವತಿಯೊಬ್ಬಳಿಗೆ ಫುಡ್ ಅಲರ್ಜಿ ಉಂಟಾಗಿ ಆಕೆ ಸಾವನ್ನಪ್ಪಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ತೋಡಪುಳದಲ್ಲಿ ನಡೆದಿತ್ತು. ಪರೋಟ ತಿಂದ ಬಳಿಕ ಫುಡ್​ ಅಲರ್ಜಿಯಿಂದಾಗಿ ಪಿಯು ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ತೋಡಪುಳ ಸಮೀಪದ ವಾಜತೊಪ್ಪುವಿನ ನಿವಾಸಿ ನಯನಮರಿಯಾ (16) ಮೃತ ವಿದ್ಯಾರ್ಥಿನಿ.

click me!