Lookback 2023 : ಬದಲಾಗಿದ್ದಾರೆ ಜನ! ರುಚಿ ಜೊತೆ ಆರೋಗ್ಯಕ್ಕೂ ಆದ್ಯತೆ

By Suvarna News  |  First Published Dec 12, 2023, 12:55 PM IST

ನಮ್ಮ ಆರೋಗ್ಯ ನಾವು ಸೇವಿಸುವ ಆಹಾರದಲ್ಲಿದೆ. ಇದು ಗೊತ್ತಿದ್ರೂ ಜನರು ಬಾಯಿ ರುಚಿಗೆ ಹೆಚ್ಚು ಮಹತ್ವ ನೀಡ್ತಿದ್ದರು. ಆದ್ರೀಗ ಬಹುತೇಕರಿಗೆ ಜ್ಞಾನೋದಯವಾದಂತಿದೆ. ಆರೋಗ್ಯಕರ ಆಹಾರದತ್ತ ಜನರ ಮನಸ್ಸು ವಾಲಿದೆ.  
 


ಶರೀರವನ್ನು ಆರೋಗ್ಯವಂತವಾಗಿಡುವಲ್ಲಿ ಆಹಾರದ ಪಾತ್ರ ಬಹಳ ಮುಖ್ಯ. ಪೌಷ್ಟಿಕ ಆಹಾರ ಸೇವನೆಯಿಂದೇ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ನಮ್ಮ ಆಹಾರಕ್ರಮದಲ್ಲಿ ಕೊಂಚ ವ್ಯತ್ಯಾಸವಾದರೂ ಸಾಕು ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಇತ್ತೀಚೆಗೆ ಬಹುತೇಕ ಮಂದಿ ತಮ್ಮ ಆಹಾರಗಳ ಕುರಿತು ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಕೊರೊನಾ ನಂತ್ರ ಆಹಾರದ ಬಗ್ಗೆ ಜನರು ವಹಿಸುತ್ತಿರುವ ಕಾಳಜಿ ಎರಡು ಪಟ್ಟು ಹೆಚ್ಚಾಗಿದೆ. 

ಇನ್ನೇನು 2023 ಕಳೆದು 2024ನೇ ವರ್ಷಕ್ಕೆ ನಾವು ಕಾಲಿಡಲಿದ್ದೇವೆ. 2023 ನೇ ವರ್ಷದಲ್ಲಿ ಜನರು ಯಾವೆಲ್ಲ ಆಹಾರ (Food) ವನ್ನು ಹುಡುಕಿದ್ದಾರೆ ಎಂದು ಗೂಗಲ್ (Google) ಹೇಳಿದೆ. ಗೂಗಲ್ ಸರ್ಚ್ ಪ್ರಕಾರ, ಜನರು ರುಚಿಕರವಾದ ಆಹಾರದ ಜೊತೆಗೆ ಆರೋಗ್ಯಕರ ಆಹಾರ ಪದಾರ್ಥಗಳನ್ನು ಹುಡುಕಿದ್ದಾರೆ. ಇದರ ಜೊತೆಗೆ ಗೂಗಲ್, 2023ರಲ್ಲಿ ಅತಿ ಹೆಚ್ಚು ಹುಡುಕಾಟ ಮಾಡಿದ ಆಹಾರಗಳ ಪಟ್ಟಿಯನ್ನು ಕೂಡ ತಯಾರಿಸಿದೆ. ಈ ಪಟ್ಟಿಯಲ್ಲಿ ಮಿಲೆಟ್ಸ್, ಅವಕಾಡೋ, ಮಟನ್ ರೊಗನ್ ಜೋಶ್, ಕಾಟಿ ರೋಲ್ಸ್ ಮುಂತಾದವುಗಳಿವೆ. ಗೂಗಲ್ ನಲ್ಲಿ ಜನರು ಸರ್ಚ್ ಮಾಡಿದ ರೀತಿಯಿಂದ ಈಗ ಜನರು ರುಚಿಕರವಾದ ಆಹಾರದ ಜೊತೆಗೆ ಆರೋಗ್ಯಕರ ಹಾಗೂ ಪೌಷ್ಟಿಕ ಆಹಾರವನ್ನೂ ಇಷ್ಟಪಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ.

Tap to resize

Latest Videos

undefined

ಚಿಕನ್ ತೊಳೆದು ಬಳಸಬೇಕಾ? ಬೇಡ್ವೋ? ಗೊಂದಲಕ್ಕೆ ಹಾಕಿ ಬ್ರೇಕ್!

ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಏನೇನಿವೆ ಗೊತ್ತಾ? : ರಾಗಿ ಆರೋಗ್ಯಕರ ಆಹಾರ ಧಾನ್ಯಗಳಲ್ಲಿ ಒಂದಾಗಿದೆ. ರಾಗಿಯಲ್ಲಿ ಬಾಜ್ರಾ, ಕೋದ್ರಾ, ಕುಟ್ಕಿ ಮುಂತಾದ ಬಗೆಯ ರಾಗಿಗಳಿರುತ್ತವೆ. ಇವೆಲ್ಲವೂ ಆರೋಗ್ಯಕ್ಕೆ ಉತ್ತಮವಾಗಿವೆ ಮತ್ತು ಪೌಷ್ಟಿಕವೂ ಆಗಿದೆ. ಇದರಲ್ಲಿ ಪ್ರೊಟೀನ್, ಕಾರ್ಬೋಹೈಡ್ರೇಟ್, ವಿಟಮಿನ್, ಮಿನರಲ್, ಫೈಬರ್ ಮುಂತಾದ ಪೋಷಕ ತತ್ವಗಳಿವೆ. ಈ ಎಲ್ಲ ಗುಣಗಳನ್ನು ಹೊಂದಿರುವ ರಾಗಿ ನಮ್ಮ ಶರೀರವನ್ನು ಸ್ವಸ್ಥವಾಗಿಡಲು ಸಹಕಾರಿಯಾಗಿದೆ. ರಾಗಿಯನ್ನು ನಮ್ಮ ನಿತ್ಯದ ಜೀವನದ ಆಹಾರದಲ್ಲಿ ಅಳವಡಿಸಿಕೊಂಡರೆ ಇದು ನಮ್ಮನ್ನು ಶಕ್ತಿಯುತವಾಗಿ, ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಿಸುತ್ತದೆ. ಗೂಗಲ್ ಬಿಡಿಗಡೆಮಾಡಿರುವ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ರಾಗಿ ಅಗ್ರಸ್ಥಾನದಲ್ಲಿದೆ.

ಮಲಗೋ ಭಂಗಿಯಲ್ಲೇ ಇದೆ ಆರೋಗ್ಯ, ನಿಮ್ಮ ಮಲಗೋ ಭಂಗಿ ಸರಿಯಾಯೋ, ತಪ್ಪಾ ಚೆಕ್ ಮಾಡ್ಕೊಳ್ಳಿ!

ಈ ಹಣ್ಣುಗಳನ್ನು ಹೆಚ್ಚು ಹುಡುಕಲಾಗಿದೆ : ಅವಾಕಾಡೋ ಹಣ್ಣಿನಲ್ಲಿ ಹೆಚ್ಚು ಪೌಷ್ಟಿಕಾಂಶಗಳಿವೆ, ಆದ್ದರಿಂದ ಇದು ಆರೋಗ್ಯಕ್ಕೆ ಬಹಳ ಉತ್ತಮವಾಗಿದೆ. ಈ ಹಣ್ಣಿನಲ್ಲಿ ಆರೋಗ್ಯಕರ ಫ್ಯಾಟ್, ವಿಟಮಿನ್, ಮಿನರಲ್ಸ್ ಮತ್ತು ಫೈಬರ್ ಹೆಚ್ಚಿನ ಪ್ರಮಾಣದಲ್ಲಿವೆ. ಇದರಲ್ಲಿರುವ ಒಮೆಗಾ3 ಫ್ಯಾಟಿ ಎಸಿಡ್ ಹೃದಯದ ಆರೋಗ್ಯಕ್ಕೆ ಹೆಚ್ಚು ಉಪಯುಕ್ತವಾಗಿದೆ. ಅವಾಕಾಡೋ ಸೇವನೆಯಿಂದ ರಕ್ತದೊತ್ತಡ, ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ ಮತ್ತು ಇದು ಮೂಳೆ ಹಾಗೂ ಕಣ್ಣುಗಳಿಗೆ ಒಳ್ಳೆಯದಾಗಿದೆ. ಅವಾಕಾಡೋವನ್ನು ಪ್ರತಿನಿತ್ಯ ಸೇವಿಸುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ. ಜನರು ಕೂಡ ಗೂಗಲ್ ನಲ್ಲಿ ಇದನ್ನು ಹೆಚ್ಚು ಸರ್ಚ್ ಮಾಡಿದ್ದಾರೆ. ಗೂಗಲ್ ಆರೋಗ್ಯಕರ ಆಹಾರಗಳ ಪಟ್ಟಿಯಲ್ಲಿ ಅವಾಕಾಡೋ ಎರಡನೇ ಸ್ಥಾನದಲ್ಲಿದೆ.

ಮಟನ್ ರೋಗನ್ ಜೋಶ್ ಮತ್ತು ಕಾಥಿ ರೋಲ್ ಎರಡೂ ಹೆಚ್ಚು ರುಚಿಕರ ಮತ್ತು ಆರೋಗ್ಯಕ್ಕೆ ಉತ್ತಮವಾದ ಆಹಾರವಾಗಿದೆ. ಮಟನ್ ರೋಗನ್ ನಲ್ಲಿ ಮಟನ್ ಪ್ರೊಟೀನ್ ಮತ್ತು ಅವಶ್ಯಕ ಪೋಷಕಾಂಶ ಇದೆ. ಕಾಥಿ ರೋಲ್ ನಲ್ಲಿ ಪನೀರ್, ಚಿಕನ್ ಮತ್ತು ಇನ್ನಿತರ ಕೆಲವು ತರಕಾರಿಗಳಿರುತ್ತವೆ. ಇವು ಪ್ರೋಟೀನ್ ಗಳಿಂದ ಕೂಡಿರುತ್ತವೆ. ಇವು ಕೂಡ ಗೂಗಲ್ ಹೆಲ್ದಿ ಫುಡ್ ಪಟ್ಟಿಯಲ್ಲಿ ಸೇರಿಕೊಂಡಿವೆ.

ಆರೋಗ್ಯಕರ ಆಹಾರವನ್ನು ಜನರು ಹೆಚ್ಚು ಹುಡುಕಾಡಿದ್ದಾರೆ : ಪ್ರತಿ ವರ್ಷಕ್ಕಿಂತ 2023ರಲ್ಲಿ ಜನರು ಆರೋಗ್ಯಕರ ಆಹಾರದ ಬಗ್ಗೆ ಹೆಚ್ಚು ಒಲವು ತೋರಿಸಿದ್ದಾರೆ ಎಂದು ಗೂಗಲ್ ಹೇಳಿದೆ.  ಆರೋಗ್ಯದ ಕುರಿತು ಜನರ ವಿಚಾರಗಳು ಬದಲಾಗಿವೆ. ಅನೇಕ ಜನರು ಜಂಕ್ ಫುಡ್ ಗಳ ಸೇವನೆಯನ್ನು ಬಿಟ್ಟು ಆರೋಗ್ಯಕ್ಕೆ ಉತ್ತಮವಾದ ಆಹಾರದ ಹುಡುಕಿದ್ದು, ಇದು ಖುಷಿ ಸುದ್ದಿ.  

click me!