ಬ್ರೆಡ್ (Bread) ಎಂದಾಗ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದು ತಿನ್ನುವ ಒಂದು ಆಹಾರ (Food)ವಾಗಿಯಷ್ಟೇ. ಆದರೆ, ಬ್ರೆಡ್, ಅಡುಗೆ ಮನೆಯಲ್ಲಿ ಕ್ಲೀನಿಂಗ್ (Cleaning)ಗೂ ಬಳಕೆಯಾಗುತ್ತೆ ಅನ್ನೋದು ನಿಮಗೆ ಗೊತ್ತಾ. ಅದ್ಹೇಗೆ ತಿಳಿದುಕೊಳ್ಳೋಣ.
ಬ್ರೆಡ್ (Bread) ಅಂದ್ರೆ ಹಲವರ ಪಾಲಿಗೆ ಬೆಳಗ್ಗಿನ ಬ್ರೇಕ್‌ಫಾಸ್ಟ್. ಇನ್ನು ಕೆಲವರ ಪಾಲಿಗೆ ರೋಗಿಗಳನ್ನು ನೋಡಲು ಹೋಗುವಾಗ ತೆಗೆದುಕೊಂಡು ಹೋಗುವ ಆಹಾರ. ಸ್ನ್ಯಾಕ್ಸ್ ಅಂಗಡಿಯವರಿಗೆ ಬ್ರೆಡ್ ಆಮ್ಲೆಟ್, ಸ್ಯಾಂಡ್‌ವಿಚ್ ಹೀಗೆ ತರಹೇವಾರಿ ಸ್ನ್ಯಾಕ್ಸ್ ತಯಾರಿಸಬಹುದಾದ ಪದಾರ್ಥ. ಆದ್ರೆ, ಈ ಬ್ರೆಡ್ ತುಂಡು ಅಡುಗೆ ಮನೆ (Kitchen)ಯಲ್ಲಿ ಕ್ಲೀನಿಂಗ್‌ಗೂ ಬಳಕೆಯಾಗುತ್ತೆ ಅನ್ನೋದು ನಿಮಗೆ ಗೊತ್ತಾ ? ಹೌದು, ತಿನ್ನುವದಕ್ಕೆ ಮಾತ್ರವಲ್ಲದೆ, ಬ್ರೆಡ್ ಅನ್ನು ಈ ರೀತಿ ಸಂಪೂರ್ಣ ವಿಭಿನ್ನವಾಗಿಯೂ ಬಳಸಬಹುದು.
ಅಡುಗೆ ಮನೆಯಲ್ಲಿ ಈಗೀಗ ಗಾಜುಗಳನ್ನು ಪಾತ್ರೆಯನ್ನು ಬಳಸುವುದು ಸಾಮಾನ್ಯ. ಗಾಜಿನ ಪಾತ್ರೆ ಅಂದಾಗ ಹೇಳ್ಬೇಕಾ, ಪಿಂಗಾಣಿ, ಟೀ ಕಪ್‌ಗಳು ಆಕಸ್ಮಿಕವಾಗಿ ಕೈ ಜಾರಿ ಬಿದ್ದು ಬಿಡುತ್ತವೆ. ಹೀಗೆ ಒಡೆದ ಪಾತ್ರೆಗಳು ಸ್ಟೀಲ್ ಆಗಿದ್ದಾಗ ಹೆಕ್ಕಿ ತೊಳೆದಿಡುವುದು ಸುಲಭ. ಆದ್ರೆ ಗಾಜಿನ ಪಾತ್ರೆಗಳು ಹೀಗೆ ಬಿದ್ದಾಗ ಕ್ಲೀನ್ (Clean) ಮಾಡುವುದು ಕಷ್ಟ. ಗಾಜು ಮೇಲಿನಿಂದ ನೆಲಕ್ಕೆ ಬಿದ್ದಾಗ ಅದರ ಚೂರುಗಳು ದೂರ ದೂರದ ವರೆಗೆ ಹರಡಿ ಬಿಡುತ್ತವೆ. ದೊಡ್ಡ ದೊಡ್ಡ ಗ್ಲಾಸ್ ಪೀಸ್ ಹಾಕಿದರೂ ಅದರ ಚೂರುಗಳನ್ನು ಸುಲಭವಾಗಿ ಹೆಕ್ಕಿ ತೆಗೆಯಲು ಆಗುವುದಿಲ್ಲ.
Onion Hacks: ಬರೀ ರುಚಿ ಮಾತ್ರವಲ್ಲ, ಅಡುಗೆ ಮನೆ ಕ್ಲೀನ್ ಮಾಡುತ್ತೆ ಈರುಳ್ಳಿ!
ಗಾಜಿನ ಚೂರುಗಳನ್ನು ತೆಗೆಯಲು ಬಳಸಬಹುದು
ಒಡೆದ ಗಾಜುಗಳ ತುದಿಗಳು ಚೂಪಾಗಿರುವ ಕಾರಣ ಕೈ, ಕಾಲಿಗೆ ತಗುಲಿ ಅಪಾಯವಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಮೊದಲಿಗೆ ಇವುಗಳನ್ನು ಕ್ಲೀನ್ ಮಾಡುವುದು ಮುಖ್ಯ. ಆದ್ರೆ ಗಾಜಿನ ಚೂರುಗಳನ್ನು ಕಸ ತೆಗೆದಂತೆ ಸುಲಭವಾಗಿ ಹೆಕ್ಕಿ ತೆಗೆಯಲು ಸಾಧ್ಯವಾಗುವುದಿಲ್ಲ. ಹೀಗಿದ್ದಾಗ ಗಾಜಿನ ಪೀಸ್‌ಗಳನ್ನು ಹೆಕ್ಕಲು ಬ್ರೆಡ್‌ನ್ನು ಬಳಸಬಹುದು. ಬ್ರೆಡ್‌ನ್ನು ಗಾಜಿನ ಚೂರಿಗೆ ಪ್ರೆಸ್ ಮಾಡಿ ಸುಲಭವಾಗಿ ತೆಗೆದು ಡಸ್ಟ್ ಬಿನ್‌ಗೆ ಹಾಕಬಹುದು.
ಇನ್ನು ಗಾಜಿನ ಚೂರುಗಳನ್ನು ತೆಗೆಯಲು ಸಹ ಇದೇ ವಿಧಾನವನ್ನು ಅನುಸರಿಸಬಹುದು. ನೆಲದಲ್ಲಿ ಬಿದ್ದ ಗಾಜಿನ ಚೂರುಗಳು (Glass piece) ಸುಲಭವಾಗಿ ಕಣ್ಣಿಗೆ ಸಹ ಕಾಣುವುದಿಲ್ಲ. ಹೀಗಿದ್ದಾಗ ಸಾಮಾನ್ಯವಾಗಿ ಈ ಚೂರುಗಳನ್ನು ಹೆಕ್ಕಲು ಪೇಪರ್ ಅಥವಾ ಟಿಶ್ಯೂವನ್ನು ಬಳಸುತ್ತಾರೆ. ಕೆಲವೊಬ್ಬರು ಬಟ್ಟೆಯಲ್ಲಿ ಒರೆಸಿ ತೆಗೆಯುತ್ತಾರೆ. ಆದರೆ ಇದಕ್ಕಿಂತ ಉತ್ತಮ ಆಯ್ಕೆ ಬ್ರೆಡ್ ಬಳಸುವುದು. ನೆಲದ ಮೇಲೆ ಇನ್ನೂ ಕೆಲವು ಸೂಕ್ಷ್ಮವಾದ ಗಾಜಿನ ಧೂಳು ಬಿದ್ದಿದ್ದಾಗ, ಬ್ರೆಡ್ ಅನ್ನು ನೆಲಕ್ಕೆ ಪ್ರೆಸ್ ಮಾಡಿ ಹಿಡಿದು ಈ ಗಾಜಿನ ಚೂರುಗಳನ್ನು ತೆಗೆಯಲು ಸಾಧ್ಯವಾಗುತ್ತದೆ. ಬ್ರೆಡ್‌ನ ಮೃದುವಾದ ಮತ್ತು ಸ್ಪಂಜಿನ ವಿನ್ಯಾಸದಿಂದಾಗಿ ಈ ಗಾಜಿನ ಚೂರುಗಳನ್ನು ತೆಗೆಯುವುದು ಸುಲಭವಾದ ಕೆಲಸವಾಗಿದೆ.
ಬ್ರೆಡ್ ತಿಂದು, ಸೈಡ್ ಎಸೆಯೋ ಬದಲು ಈ ರುಚಿಯಾದ ತಿಂಡಿ ಮಾಡಿ
ಗೋಡೆಗಳ ಮೇಲಿನ ಕಲೆಗಳನ್ನು ಸ್ವಚ್ಛಗೊಳಿಸುತ್ತದೆ
ಮಕ್ಕಳನ್ನು ಆಟವಾಡುತ್ತಾ ಗೋಡೆಯಲ್ಲಿ ಫಿಂಗರ್‌ಪ್ರಿಂಟ್‌ಗಳನ್ನು ಮೂಡಿಸಿರುತ್ತಾರೆ. ಇಂಥಹಾ ಕಲೆಯನ್ನು ಹೋಗಲಾಡಿಸಲು ನೀವು ಬ್ರೆಡ್ ತುಂಡನ್ನು ಬಳಸಿಕೊಳ್ಳಬಹುದು. ತೈಲ ವರ್ಣಚಿತ್ರ ಅಥವಾ ವಾಲ್ ಪೈಂಟಿಂಗ್ (Painting)ನಂತಹಾ ಅಮೂಲ್ಯವಾದ ಕಲಾಕೃತಿಯನ್ನು ಸಹ ಬ್ರೆಡ್ ತುಂಡು ಬಳಸಿ ಸ್ವಚ್ಛಗೊಳಿಸುವುದು, ತೈಲ ವರ್ಣಚಿತ್ರಗಳು ಬೆಳೆ ಬಾಳುವದ್ದು ಮತ್ತು ಸೂಕ್ಷ್ಮವಾಗಿರುವ ಕಾರಣ ಯಾವುದೇ ಕೆಮಿಕಲ್ ಅಂಶವಿರುವ ಸ್ಪ್ರೇ ಬಳಸಿ ಇದನ್ನು ಕ್ಲೀನ್ ಮಾಡುವುದು ಕಷ್ಟ. ಆದರೆ, ಅವುಗಳನ್ನು ಬ್ರೆಡ್‌ನೊಂದಿಗೆ ಒರೆಸಿ. ಇದು ನಿಜವಾಗಿ ಚೆನ್ನಾಗಿ ಕೆಲಸ ಮಾಡುತ್ತದೆ. ಕಾಫಿ ಫಿಲ್ಟರ್ ಸ್ವಚ್ಛಗೊಳಿಸಲು ಸಹ ಬ್ರೆಡ ಸ್ಲೈಸ್ ಅನ್ನು ಬಳಸಬಹುದು