ಪ್ಯಾಕೇಜ್ಡ್ ಆಹಾರ ಲೇಬಲ್‌ನಲ್ಲಿ ಒಟ್ಟು ಸಕ್ಕರೆ, ಸ್ಯಾಚುರೇಟೆಡ್‌ ಕೊಬ್ಬು, ಉಪ್ಪಿನ ಪ್ರತ್ಯೇಕ ವಿವರ ಕಡ್ಡಾಯ: ಸುಪ್ರೀಂ

Gowthami K   | Kannada Prabha
Published : Nov 27, 2026, 11:11 AM IST
Packaged Foods

ಸಾರಾಂಶ

ಅನೇಕ ಸಂದರ್ಭಗಳಲ್ಲಿ ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲಿರುವ ಪೌಷ್ಟಿಕಾಂಶದ ಮಾಹಿತಿ ಗ್ರಾಹಕರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಹೀಗಾಗಿ ಪ್ಯಾಕೇಜ್‌ ಮಾಡಲಾದ ಆಹಾರ ಪದಾರ್ಥಗಳ ಮುಂಭಾಗದ ಲೇಬಲ್‌ಗಳಲ್ಲಿ ಪೌಷ್ಟಿಕಾಂಶದ ಮಾಹಿತಿಯನ್ನು ಹೆಚ್ಚು ಸ್ಪಷ್ಟವಾಗಿ ಪ್ರಕಟಿಸುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ.

ನವದೆಹಲಿ: ಚಿಪ್ಸ್‌, ಬಿಸ್ಕೆಟ್‌, ತಂಪುಪಾನೀಯದಂಥ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳ ಮೇಲೆ ಮುದ್ರಿಸುವ ಪೌಷ್ಟಿಕಾಂಶದ ಲೇಬಲ್‌ಗಳಲ್ಲಿ, ‘ಸೇರಿಸಲಾದ ಸಕ್ಕರೆ’ ಮತ್ತು ‘ಸೇರಿಸಲಾದ ಕೊಬ್ಬು’ ಬದಲಿಗೆ ‘ಒಟ್ಟು ಸಕ್ಕರೆ’ ಮತ್ತು ‘ಸ್ಯಾಚುರೇಟೆಡ್‌ ಕೊಬ್ಬು’ ಅನ್ನು ಸ್ಪಷ್ಟವಾಗಿ ಮುಂಭಾಗದ ಲೇಬಲ್‌ನಲ್ಲಿ ಮುದ್ರಿಸಬೇಕು. ಜೊತೆಗೆ ಮೂರೂ ಅಂಶಗಳನ್ನು ಪ್ರತ್ಯೇಕ ಷಡ್ಬುಜಾಕೃತಿ ಲೇಬಲ್‌ನಲ್ಲಿ ಪ್ರಕಟಿಸಬೇಕು ಎಂದು ಸುಪ್ರೀಂಕೋರ್ಟ್‌ ಸೂಚಿಸಿದೆ.

ಸದ್ಯ ಕರಡು ನಿಯಮಗಳಲ್ಲಿ ಕೇವಲ ಒಂದು ಷಡ್ಬುಜಾಕೃತಿ ಲೇಬಲ್‌ನಲ್ಲಿ ಎಲ್ಲಾ ಅಂಶಗಳನ್ನು ಮುದ್ರಿಸುವ ಪ್ರಸ್ತಾಪ ಇದೆ. ಆದರೆ ಅದರ ಬದಲಾಗಿ ಮೂರು ಪ್ರತ್ಯೇಕ ಲೇಬಲ್‌ನಲ್ಲಿ ಚಿತ್ರಸಹಿತವಾಗಿ ಈ ಉತ್ಪನ್ನವು ಹೆಚ್ಚಿನ ಕೊಬ್ಬು, ಹೆಚ್ಚಿನ ಸಕ್ಕರೆ ಮತ್ತು ಹೆಚ್ಚಿನ ಕೊಬ್ಬಿನ ಅಂಶಗಳನ್ನು ಒಳಗೊಂಡಿದೆ ಎಂದು ನಮೂದಿಸಬೇಕು. ಇಂಥ ಸ್ಪಷ್ಟ ಮಾಹಿತಿಯು ಗ್ರಾಕರಿಗೆ ಉತ್ಪನ್ನಗಳ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ಮತ್ತು ಅವುಗಳ ಖರೀದಿಯ ಬಗ್ಗೆ ನಿರ್ಧರಿಸಲು ನೆರವು ನೀಡುತ್ತದೆ. ಇಂಥ ನಿಯಮಗಳು ಸೂಕ್ತವಾಗಿ ಪಾಲನೆಯಾಗುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಮುಂಭಾಗದ ಲೇಬಲ್‌ನಲ್ಲಿ ತಪ್ಪದೆ ಮುದ್ರಿಸಬೇಕು

ಲೇಬಲ್‌ ಮೇಲಿನ ಷಡ್ಬುಜಾಕೃತಿಯ ಗುರುತಿನೊಳಗೆ ಉತ್ಪನ್ನವು ಹೆಚ್ಚಿನ ಕೊಬ್ಬು, ಹೆಚ್ಚಿನ ಸಕ್ಕರೆ, ಹೆಚ್ಚಿನ ಉಪ್ಪಿನ ಅಂಶಗಳನ್ನು ಒಳಗೊಂಡಿದೆ ಎಂಬ ಸ್ಪಷ್ಟ ಮಾಹಿತಿ ನಮೂದಿಸಬೇಕು. ಇಂಥ ಸ್ಪಷ್ಟ ಮಾಹಿತಿಯು ಗ್ರಾಕರಿಗೆ ಉತ್ಪನ್ನಗಳ ಬಗ್ಗೆ ನಿಖರ ಮಾಹಿತಿ ನೀಡುವಲ್ಲಿ ಮತ್ತು ಅವುಗಳ ಖರೀದಿಯ ಬಗ್ಗೆ ನಿರ್ಧರಿಸಲು ನೆರವು ನೀಡುತ್ತದೆ. ಇಂಥ ನಿಯಮಗಳು ಸೂಕ್ತವಾಗಿ ಪಾಲನೆಯಾಗುವುದನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಖಚಿತಪಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ.

ಗೊಂದಲ ಮೂಡಿಸುವ ಯಾವುದೇ ಚಿಹ್ನೆಗಳನ್ನು ಬಳಸುವಂತಿಲ್ಲ

ಅಲ್ಲದೆ, ಪ್ರತಿಯೊಂದು ಪೋಷಕಾಂಶದ ಮಿತಿಗಳನ್ನು ಮರುಪರಿಶೀಲಿಸಬೇಕು. ನಿಗದಿತ ಮಿತಿಯನ್ನು ಮೀರದ ಸಿಹಿ ಪಾನೀಯಗಳ ಪ್ಯಾಕೇಜ್‌ಗಳ ಮೇಲೆ, ಗೊಂದಲ ಮೂಡಿಸುವ ಯಾವುದೇ ಚಿಹ್ನೆಗಳನ್ನು ಬಳಸದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದೆ.

ಪರಿಷ್ಕೃತ ಅಂಶಗಳನ್ನು ಒಳಗೊಂಡ ಕಾನೂನು ಜಾರಿ ಕುರಿತು ಆಹಾರ ಸುರಕ್ಷತಾ ಪ್ರಾಧಿಕಾರವು ಆದೇಶ ಹೊರಡಿಸಿದ 4 ತಿಂಗಳಲ್ಲಿ ಹೊಸ ನಿಯಮ ಜಾರಿಗೆ ಬರಬೇಕು. ಬಳಿಕ ಕಂಪನಿಗಳಿಗೆ ಹೊಸ ಅಂಶಗಳನ್ನು ಪಾಲಿಸಲು 1 ವರ್ಷ ಅವಧಿ ಸಿಗಲಿದೆ ಎಂದು ನ್ಯಾಯಾಲಯ ಹೇಳಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

‌ಎಲೆಕ್ಟ್ರಿಕ್ ಮೇಕರ್ vs ಸಾಂಪ್ರದಾಯಿಕ ಸ್ಟವ್ ಟಾಪ್ ಪಾಟ್‌; ಮೃದುವಾದ ಇಡ್ಲಿ ಮಾಡಲು ಯಾವ ಪಾತ್ರೆ ಬೆಸ್ಟ್?
ಚಳಿಗಾಲದಲ್ಲಿ ಮನೆಯಲ್ಲೇ ಸುಲಭವಾಗಿ ತಯಾರಿಸಿ ಬಿಸಿ ಬಿಸಿಯಾದ, ರುಚಿಕರವಾದ ಸ್ಪೆಷಲ್ ಟೊಮೆಟೊ ರಸಂ