ಬಾಹ್ಯಾಕಾಶಕ್ಕೆ ಹಾರಿದ ಪಾಕಿಸ್ತಾನದ ಮೊದಲ ಗಗನಯಾತ್ರಿ! ಜೊತೆಗೆ ಚೀನಾ ಕಳುಹಿಸಿದ ಆ ವಿಶೇಷ ಆಹಾರವೇನು ಗೊತ್ತಾ?

Published : Nov 26, 2026, 10:20 PM IST
Pakistan's First Astronaut Takes Off For Space With A Special Food Menu

ಸಾರಾಂಶ

ಪಾಕಿಸ್ತಾನ ವಾಯುಪಡೆಯ ಪೈಲಟ್ ಮುಹಮ್ಮದ್ ಜೀಶನ್ ಅಲಿ ಚೀನಾದ ಶೆನ್‌ಝೌ-24 ಮಿಷನ್ ಮೂಲಕ ಬಾಹ್ಯಾಕಾಶಕ್ಕೆ ಹಾರಿದ್ದಾರೆ. ಇವರು ಬಾಹ್ಯಾಕಾಶ ತಲುಪಿದ ಮೊದಲ ಪಾಕಿಸ್ತಾನಿ ಪ್ರಜೆ ಹಾಗೂ ಚೀನಾದ ಪ್ರಾಜೆಕ್ಟ್‌ನಲ್ಲಿ ಭಾಗವಹಿಸಿದ ಮೊದಲ ವಿದೇಶಿ ಗಗನಯಾತ್ರಿ.

ಕರಾಚಿ: ಪಾಕಿಸ್ತಾನ ವಾಯುಪಡೆಯ ಪೈಲಟ್ ಮುಹಮ್ಮದ್ ಜೀಶನ್ ಅಲಿ ಚೀನಾದ ಶೆನ್‌ಝೌ-24 ಮಿಷನ್‌ನಲ್ಲಿ (Shenzhou-24) ಬಾಹ್ಯಾಕಾಶಕ್ಕೆ ಹಾರಿದ್ದಾರೆ. 40 ವರ್ಷದ ಜೀಶನ್ ಅಲಿ ಬಾಹ್ಯಾಕಾಶ ತಲುಪಿದ ಮೊದಲ ಪಾಕಿಸ್ತಾನಿ ಪ್ರಜೆ ಆಗಿದ್ದಾರೆ.

ಚೀನಾದ ಮಾನವಸಹಿತ ಬಾಹ್ಯಾಕಾಶ ಪ್ರಾಜೆಕ್ಟ್‌ನಲ್ಲಿ ಭಾಗವಹಿಸಿದ ಮೊದಲ ವಿದೇಶಿ ಗಗನಯಾತ್ರಿ ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಜಿಯುಕ್ವಾನ್ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿ ಉಡಾವಣೆ ಆಗಿದ್ದು, ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಜೀಶನ್ ಬಾಹ್ಯಾಕಾಶದಲ್ಲಿ ಹಲವು ಪ್ರಯೋಗಗಳನ್ನ ಮಾಡಲಿದ್ದಾರೆ.

ಯಾರು ಜೀಶನ್ ಅಲಿ?

ಮುಹಮ್ಮದ್ ಜೀಶನ್ ಅಲಿ ಪಾಕಿಸ್ತಾನ ವಾಯುಪಡೆಯ ವಿಂಗ್ ಕಮಾಂಡರ್. ಪಾಕಿಸ್ತಾನದ ಬಾಹ್ಯಾಕಾಶ ಸಂಸ್ಥೆ SUPARCO ಮತ್ತು CMSA ನಡುವಿನ ಜಂಟಿ ಕಾರ್ಯಕ್ರಮದಡಿಯಲ್ಲಿ ಏಪ್ರಿಲ್ 2026ರಲ್ಲಿ ಜೀಶನ್ ಅಲಿ ಮತ್ತು ಖುರ್ರಂ ದಾವೂದ್ ಅವರನ್ನು ಬಾಹ್ಯಾಕಾಶ ತರಬೇತಿಗೆ ಆಯ್ಕೆ ಮಾಡಲಾಗಿತ್ತು. ನಂತರ ಜೀಶನ್ ಅಲಿಯನ್ನು ಶೆನ್ಝೌ-24 ಕಾರ್ಯಾಚರಣೆಗೆ ಆಯ್ಕೆ ಮಾಡಲಾಯಿತು. CMSA ಪ್ರಕಾರ, ಜೀಶನ್ ಅಲಿ ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದಲ್ಲಿ ಸುಮಾರು ಒಂದು ವಾರ ಕಳೆಯುತ್ತಾರೆ ಮತ್ತು ವಿವಿಧ ವೈಜ್ಞಾನಿಕ ಪ್ರಯೋಗಗಳನ್ನ ಮಾಡುತ್ತಾರೆ.

ಚೀನಾದ ಗಗನಯಾತ್ರಿಗಳಾದ ಟ್ಯಾಂಗ್ ಹಾಂಗ್ಬೊ ಮತ್ತು ವು ಯಿ ಕೂಡ ಜೀಶನ್ ಅಲಿ ಇರುವ ಮಷಿನ್‌ನಲ್ಲಿದ್ದಾರೆ. ಟ್ಯಾಂಗ್ ಹಾಂಗ್ಬೊ ಕಾರ್ಯಾಚರಣೆಗೆ ಕಮಾಂಡರ್ ಆಗಿದ್ದಾರೆ. ವು ಯಿ ಮಿಷನ್ ಪೈಲಟ್ ಆಗಿ ಸೇವೆ ಸಲ್ಲಿಸುತ್ತಾರೆ. ಜೀಶನ್ ಅಲಿ ಪೇಲೋಡ್ ತಜ್ಞರಾಗಿ ಕಾರ್ಯನಿರ್ವಹಿಸಲಿದ್ದಾರೆ. ಪಾಕಿಸ್ತಾನದ ವೈಜ್ಞಾನಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪ್ರಯೋಗಗಳನ್ನು ನಡೆಸುವುದು ಅವರ ಪ್ರಾಥಮಿಕ ಜವಾಬ್ದಾರಿ ಆಗಿದೆ.

ಬಾಹ್ಯಾಕಾಶ ಪ್ರಯಾಣದ ವೇಳೆ ಜೀಶನ್ ಅಲಿಗೆ ಹಲಾಲ್ ಆಹಾರ ಒದಗಿಸಲಾಗುತ್ತಿದೆ. ಚೀನಾ ಗಗನಯಾತ್ರಿ ಸಂಶೋಧನೆ ಮತ್ತು ತರಬೇತಿ ಕೇಂದ್ರವು 100ಕ್ಕೂ ಹೆಚ್ಚು ಬಗೆಯ ವಿಶೇಷ 'ಹಲಾಲ್' ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ಕಳುಹಿಸಿದೆ. ಪಾಕಿಸ್ತಾನದ ಆಹಾರ ಸಂಸ್ಕೃತಿ, ಪೋಷಕಾಂಶಗಳ ಅಗತ್ಯತೆ ಹಾಗೂ ಅಲಿ ಅವರ ಇಷ್ಟದ ರುಚಿಗಳನ್ನು ಗಮನದಲ್ಲಿಟ್ಟುಕೊಂಡು ಬಟರ್ ಚಿಕನ್, ಲ್ಯಾಂಬ್ ಕುರ್ಮಾ, ಬೀಫ್ ನಿಹಾರಿ ಮತ್ತು ಕಡಲೆಕಾಳು ಕರಿ (ಚೋಲೆ) ಸೇರಿದಂತೆ ಪಾಕಿಸ್ತಾನಿ ಶೈಲಿಯ ಸಾಂಪ್ರದಾಯಿಕ ಖಾದ್ಯಗಳನ್ನು ತಯಾರಿಸಲಾಗಿದೆ. ಅರಿಶಿನ ಮತ್ತು ಕರಿ ಮಸಾಲೆಗಳನ್ನು ಬಳಸಿ ತಯಾರಿಸಲಾದ ಈ ಆಹಾರದ ಉತ್ಪಾದನೆಯಿಂದ ಹಿಡಿದು ಪ್ಯಾಕಿಂಗ್‌ವರೆಗೂ ಸಂಪೂರ್ಣವಾಗಿ ಹಲಾಲ್ ನಿಯಮಗಳನ್ನು ಪಾಲಿಸಲಾಗಿದೆ. ಹಲವು ಬಾರಿ ರುಚಿ ಪರೀಕ್ಷಿಸಿದ ಬಳಿಕ ಈ ಮೆನುವನ್ನು ಅಂತಿಮಗೊಳಿಸಲಾಗಿದೆ. ಆರಂಭದಲ್ಲಿ ಪಾಕಿಸ್ತಾನಿ ಮಸಾಲಾ ಹಾಲಿನ ಚಹಾವನ್ನು ಯೋಜಿಸಲಾಗಿತ್ತಾದರೂ, ಚೀನಾದಲ್ಲಿದ್ದಾಗ ಅಲಿ ಅವರು ಚೀನೀ ಬ್ಲ್ಯಾಕ್ ಟೀ ಮತ್ತು ಅನ್ನವನ್ನು ಇಷ್ಟಪಟ್ಟ ಕಾರಣ ಅವರ ಕೋರಿಕೆಯ ಮೇರೆಗೆ ಅವುಗಳನ್ನು ಸಹ ಈ ಆಹಾರ ಪಟ್ಟಿಯಲ್ಲಿ ಹೆಚ್ಚುವರಿಯಾಗಿ ಸೇರಿಸಲಾಗಿದೆ ಎಂದು ವರದಿಯಾಗಿದೆ.

ಮಿಷನ್ ಕಾರ್ಯಾಚರಣೆಯ ಸೂಚನೆಗಳನ್ನು ಚೈನೀಸ್ ಮತ್ತು ಇಂಗ್ಲಿಷ್ ಎರಡರಲ್ಲೂ ಸಿದ್ಧಪಡಿಸಲಾಗಿದೆ. ಬಾಹ್ಯಾಕಾಶದಲ್ಲಿ 90ಕ್ಕೂ ಹೆಚ್ಚು ವೈಜ್ಞಾನಿಕ ಪ್ರಯೋಗ ನಡೆಯಲಿದೆ. ಪಾಕಿಸ್ತಾನ ಬಾಹ್ಯಾಕಾಶ ಸಂಸ್ಥೆ ಪ್ರಕಾರ, ಜೀಶನ್ ಅಲಿ ಅವರು ಮೈಕ್ರೋಆಲ್ಗೆಗಳ ಕೃಷಿಗೆ ಸಂಬಂಧಿಸಿದ ಪ್ರಯೋಗ ನಡೆಸಲಿದ್ದಾರೆ. ಇವುಗಳನ್ನು ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳಿಗೆ ಆಹಾರ ಮತ್ತು ಆಮ್ಲಜನಕದ ಸಂಭಾವ್ಯ ಮೂಲವೆಂದು ಪರಿಗಣಿಸಲಾಗುತ್ತಿದೆ. ಕ್ವಿನೋವಾ ಬೀಜಗಳ ಮೇಲೆ ಬಾಹ್ಯಾಕಾಶ ಪರಿಸರದ ಪರಿಣಾಮಗಳನ್ನು ಸಹ ಅಧ್ಯಯನ ಮಾಡಲಿದ್ದಾರೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Fridge: ಫ್ರಿಜ್‌ನಲ್ಲಿ ಮೊಟ್ಟೆ, ಚಿಕನ್, ಮಟನ್ ಸ್ಟೋರ್ ಮಾಡೋದು ಹೇಗೆ? ಎಷ್ಟು ದಿನಗಳವರೆಗೆ ಇಡಬಹುದು?
ರೈಲ್ವೇ ಪ್ರಯಾಣಿಕರಿಗೆ ಅಚ್ಚರಿಯ ಸುದ್ದಿ: 'Flight-Style' ಮಾದರಿಯ ಊಟ ಪರಿಚಯಿಸಿದ ರೈಲ್ವೇ ಇಲಾಖೆ