ಸಿಕ್ಕಾಪಟ್ಟೆ ಸಿಟ್ಟು ಬರುತ್ತಾ ? ಸರಿಯಾದ ಆಹಾರ ತಿನ್ನಿ, ಕೋಪ ಕಡಿಮೆ ಮಾಡಿಕೊಳ್ಳಿ

By Suvarna News  |  First Published May 29, 2022, 2:25 PM IST

Good food for good mood ಅನ್ನೋ ಮಾತೇ ಇದೆ. ಆಹಾರ (Food) ನಮ್ಮ ಮನಸ್ಥಿತಿಯನ್ನು ಉತ್ತಮಗೊಳಿಸುತ್ತದೆ ಅನ್ನೋದರಲ್ಲಿ ಸಂದೇಹವೇ ಇಲ್ಲ. ಸಿಹಿ, ಹುಳಿ, ಖಾರ, ಉಪ್ಪು ಹೀಗೆ ವಿವಿಧ ರುಚಿ ವಿವಿಧ ಭಾವನೆಯನ್ನು ಉಂಟು ಮಾಡುತ್ತದೆ. ಹಾಗೆಯೇ ಸಿಟ್ಟನ್ನು (Anger) ಸಹ ಸರಿಯಾದ ಆಹಾರವನ್ನು ಸೇವಿಸುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಸಿಟ್ಟನ್ನು ಕಡಿಮೆ ಮಾಡುವ ಆಹಾರಗಳು ಯಾವುವು ?


ಮನುಷ್ಯನಲ್ಲಿ ಹಲವು ಭಾವನೆ (Feelings)ಗಳಿರುತ್ತವೆ. ಆದರೆ ಅದರಲ್ಲೂ ಕೆಲವರಿಗೆ ಕೆಲವೊಂದು ಭಾವನೆಗಳು ಹೆಚ್ಚಾಗಿರುತ್ತವೆ. ಕೆಲವರಿಗೆ ಸಹನೆ ಹೆಚ್ಚಾದರೆ, ಕೆಲವರಿಗೆ ಸಿಟ್ಟು (Anger) ಹೆಚ್ಚು ಹೀಗೆ. ಒಬ್ಬ  ವ್ಯಕ್ತಿಯ ಜೀವನದಲ್ಲಿ ವಯಸ್ಸು ಹೆಚ್ಚಾದಂತೆ ಜವಾಬ್ದಾರಿಗಳು ಕೂಡಾ ಹೆಚ್ಚಾಗುತ್ತವೆ. ಜವಾಬ್ದಾರಿಗಳು ಹೆಚ್ಚಾದಂತೆ ಉದ್ವೇಗ, ಕೋಪ, ಕಿರಿಕಿರಿ ಸಾಮಾನ್ಯವಾಗುತ್ತದೆ. ಆದರೆ ಅತಿಯಾದ ಕಿರಿಕಿರಿಯಿಂದ, ಕೆಲಸದಲ್ಲಿನ ಸಮತೋಲನವು ಸಂಪೂರ್ಣವಾಗಿ ಹದಗೆಡುತ್ತದೆ. ಹೀಗಾದಾಗ ಮಾತು ಮಾತಿಗೂ ಕೋಪಗೊಳ್ಳುವುದು, ಕಿರುಚಾಡುವುದು ಮಾಡಲು ಶುರು ಮಾಡುತ್ತಾರೆ. ಹೀಗಾಗಿ ಅತಿಯಾಗಿ ಸಿಟ್ಟಿರುವವರನ್ನು ದೂರ್ವಾಸ ಮುನಿ, ಸಿಡುಕ ಎಂದೆಲ್ಲಾ ಕರೆಯುತ್ತಾರೆ.

ಮೂಗಿನ ಮೇಲೆ ಸಿಟ್ಟಿರುವ ಇಂಥವರನ್ನು ನಾವು ನಮ್ಮ ನಿತ್ಯ ಜೀವನದಲ್ಲಿ ಎಷ್ಟೋ ಬಾರಿ ನೋಡುತ್ತೇವೆ. ವಿನಾಕಾರಣ ಅವರಿಗೆ ಕೋಪ ಬರುತ್ತದೆ. ಅವರ ಮುಂದೆ ಯಾರಿಗೂ ಮಾತನಾಡಲು ಸಾಧ್ಯವಾಗುವುದಿಲ್ಲ. ಹೀಗೆ ಸಿಟ್ಟು ಬರಲು ಕಾರಣಗಳು ಹಲವಿರಬಹುದು. ಸಾಮಾಜಿಕ ಒತ್ತಡ, ಆರ್ಥಿಕ ಸಮಸ್ಯೆ ಹೀಗೆ ಹಲವು ಕಾರಣಗಳಿಂದ ಶಾರ್ಟ್ ಟೆಂಪರ್ ಸಮಸ್ಯೆಯನ್ನು ಅನುಭವಿಸುತ್ತಾರೆ. ಈ ಅತಿಯಾದ ಸಿಟ್ಟನ್ನು ಕಡಿಮೆ ಮಾಡಲು ಏನು ಮಾಡಬಹುದು ನಾವ್ ಹೇಳ್ತೀವಿ.

Tap to resize

Latest Videos

Parenting An Angry Teen: ಹರೆಯದ ಮಕ್ಕಳು ಕೋಪ ತರಿಸುತ್ತಾರೆಯೇ? ಹೀಗ್ಮಾಡಿ

ಕೋಪ ಹೆಚ್ಚಾಗಲು ಕಾರಣವೇನು ?
ದೇಹದಲ್ಲಿ ಟ್ರಾನ್ಸ್ ಫ್ಯಾಟಿ ಆಸಿಡ್  ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದಾಗ, ವ್ಯಕ್ತಿಯ ಕೋಪವೂ ಹೆಚ್ಚಾಗುತ್ತದೆ. ಇದು ವ್ಯಕ್ತಿಯ ಮೆದುಳಿನ (Brain) ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದ ಎನ್ನುವ ಅಂಶ ಅನೇಕ ಸಂಶೋಧನೆಗಳಲ್ಲಿ ಕಂಡುಬಂದಿದೆ. ಇದಕ್ಕೆ ವಿರುದ್ಧವಾಗಿ, ಒಮೆಗಾ 3 ಫ್ಯಾಟಿ ಆಸಿಡ್ ಕೋಪವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನಮ್ಮ ದೇಹ ಒಮೆಗಾ 3 ಫ್ಯಾಟಿ ಆಸಿಡ್ ಪಡೆಯಬೇಕಾದರೆ ಕೆಲವೊಂದು ಆಹಾರ ವಸ್ತುಗಳನ್ನು ಸೇವಿಸಬೇಕು. 

ಸಿಟ್ಟನ್ನು ಕಡಿಮೆ ಮಾಡಲು ಏನು ತಿನ್ನಬೇಕು ?
ಆಹಾರದಲ್ಲಿ ಹೆಚ್ಚು ಹಣ್ಣುಗಳು (Fruits) ಮತ್ತು ತರಕಾರಿಗಳನ್ನು (Vegetables) ಸೇವಿಸಿ. ಅಣಬೆ, ಬೀಜ, ವಾಲ್‌ನಟ್‌ಗಳಂತಹ ಒಮೆಗಾ 3 ಫ್ಯಾಟಿ ಆಸಿಡ್ ಇರುವಂಥಹ ಆಹಾರವನ್ನು ಸೇವಿಸಿ. ಮೊಟ್ಟೆ, ಮೀನು ಮತ್ತು ಕೋಳಿಯಂತಹ ಡೋಪಮೈನ್ ಆಹಾರವು ಕೋಪವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಸೂರ್ಯಕಾಂತಿ ಬೀಜಗಳು, ಕುಂಬಳಕಾಯಿ ಬೀಜಗಳು, ಪಾಲಕ್ ಮುಂತಾದ ಮೆಗ್ನೀಸಿಯಮ್ ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ. ಸಾಧ್ಯವಾದಷ್ಟು,  ಸಿಹಿ ಪದಾರ್ಥಗಳನ್ನು ತಿನ್ನುವುದನ್ನು  ಕಡಿಮೆ ಮಾಡಿ.  ಹಣ್ಣನ್ನು ಜ್ಯೂಸ್ ತೆಗೆದು ಕುಡಿಯುವ ಬದಲು, ಹಾಗೆಯೇ ತಿನ್ನಿ. ವಿಟಮಿನ್ ಡಿ ಪಡೆಯಲು ನಿಮ್ಮ ದೇಹವನ್ನು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳಿ.

Parenting Tips : ಮಕ್ಕಳು ಮೊಂಡ ಹಠ ಮಾಡುತ್ತಿದ್ದಾರ? ಹೀಗೆ ಮಾಡಿದ್ರೆ ಕ್ಷಣದಲ್ಲಿ ಕೋಪ ಮಾಯ

ಕೋಪವನ್ನು ನಿಯಂತ್ರಿಸಬೇಕಾದರೆ ಈ ಆಹಾರವನ್ನು ಸೇವಿಸಬೇಡಿ 
ಟೊಮೇಟೊ:
ದೇಹದ ಉಷ್ಣತೆಯನ್ನು ಹೆಚ್ಚಿಸಲು ಕಾರಣವಾಗುವ 'ಬಿಸಿ' ಆಹಾರವೆಂದು ಪರಿಗಣಿಸಲಾಗಿದೆ, ಟೊಮೆಟೊಗಳು (Tomato) ಕೋಪವನ್ನು ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ ಆಯುರ್ವೇದದಲ್ಲಿ, ಬಿಸಿ ಆಹಾರಗಳು ಸಾಮಾನ್ಯವಾಗಿ ಕೋಪಕ್ಕೆ ಸಂಬಂಧಿಸಿವೆ. ಹೀಗಿದ್ದೂ ಟೊಮೇಟೋ ತಿನ್ನಬೇಕೆಂದರೆ ತೆಂಗಿನಕಾಯಿ, ಕೊತ್ತಂಬರಿ ಸೊಪ್ಪು ಮುಂತಾದ ತಂಪಾಗಿಸುವ ಆಹಾರಗಳೊಂದಿಗೆ ಅವುಗಳನ್ನು ಸಂಯೋಜಿಸಿ. 

ಬದನೆ: ಬದನೆಕಾಯಿಯನ್ನು ಹೆಚ್ಚಿನ  ಪ್ರಮಾಣದಲ್ಲಿ ತಿನ್ನಬೇಡಿ. ಏಕೆಂದರೆ ಅದು ಕೋಪವನ್ನು ಹೆಚ್ಚಿಸುತ್ತದೆ. ಬದನೆಕಾಯಿ (Brinjal)ಯಲ್ಲಿ ಆಮ್ಲೀಯತೆ ಹೆಚ್ಚಿರುವುದರಿಂದ, ಇದು ಕೋಪ ಅಥವಾ ಹತಾಶೆಯ ಭಾವನೆಗಳಿಗೆ ಕಾರಣವಾಗಬಹುದು. ಬದನೆಕಾಯಿಯನ್ನು ಸೇವಿಸುವುದರಿಂದ ನಿಮಗೆ ಆಗಾಗ್ಗೆ ಕೋಪ ಬರುತ್ತದೆ ಎಂದು ನೀವು ಭಾವಿಸಿದರೆ, ಸೇವನೆಯನ್ನು ಕಡಿಮೆ ಮಾಡಿ ಮತ್ತು ಯಾವುದೇ ಬದಲಾವಣೆಗಳನ್ನು ಗಮನಿಸಿ 

Cool Tips: ಪದೇ ಪದೇ ನೀವೂ ಕಿರುಚಾಡ್ತೀರಾ? ಆರೋಗ್ಯಕ್ಕೆ ಒಳ್ಳೇದಲ್ಲ ಬಿಟ್ಟು ಬಿಡಿ

ಹೂಕೋಸು: ಕೋಸುಗಡ್ಡೆ ಮತ್ತು ಹೂಕೋಸು (Cauliflower), ಎಲೆಕೋಸು, ಬ್ರಸಲ್ಸ್ ಮೊಗ್ಗುಗಳು ಮುಂತಾದ ಆಹಾರಗಳು ವ್ಯವಸ್ಥೆಯಲ್ಲಿ ಹೆಚ್ಚುವರಿ ಗಾಳಿಯ ಬೆಳವಣಿಗೆಯನ್ನು ಉಂಟುಮಾಡಬಹುದು, ಇದು ಅನಿಲ ಮತ್ತು ಉಬ್ಬುವಿಕೆಗೆ ಕಾರಣವಾಗುತ್ತದೆ. ಮತ್ತು ಇದು ಕೋಪವನ್ನು ಪ್ರಚೋದಿಸುತ್ತದೆ.

ಡ್ರೈ ಫ್ರುಟ್ಸ್: ಡ್ರೈ ಫ್ರುಟ್ಸ್ ಗಳು (Dry fruits) ಬಹಳ ಹೀಟ್ ಆಗಿರುತ್ತವೆ. ಇದನ್ನು ಸೇವಿಸುವುದರಿಂದ ಮನಸ್ಸಿನಲ್ಲಿ ಕೋಪ ಹೆಚ್ಚಾಗಬಹುದು. ಹಾಗಾಗಿ ಡ್ರೈ ಫ್ರುಟ್ಸ್  ಅನ್ನು ಹಾಗೆಯೇ ತಿನ್ನಬೇಡಿ. ಇದನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಎದ್ದ ನಂತರ ತಿನ್ನುವುದು ಉತ್ತಮ.

ಚೂಯಿಂಗ್ ಗಮ್ ಮತ್ತು ಮಿಠಾಯಿಗಳು: ಗಮ್ ಅನ್ನು ನಿರಂತರವಾಗಿ ಅಗಿಯುವುದು ಮತ್ತು ಕೃತಕವಾಗಿ ಸಿಹಿಗೊಳಿಸಿದ ಮಿಠಾಯಿಗಳನ್ನು ಸೇವಿಸುವುದರಿಂದ ಒತ್ತಡ-ಸಂಬಂಧಿತ ಜೀರ್ಣಕಾರಿ ಸಮಸ್ಯೆಗಳನ್ನು ಪ್ರಚೋದಿಸಬಹುದು ಮತ್ತು ಹದಗೆಡಿಸಬಹುದು, ಇದು ಪ್ರತಿಯಾಗಿ ಕಿರಿಕಿರಿಯನ್ನು ಉಂಟುಮಾಡಬಹುದು. 

ಡೈರಿ ಉತ್ಪನ್ನಗಳು: ಹಾಲು, ಮೊಸರು, ಚೀಸ್, ಮಿಲ್ಕ್‌ಶೇಕ್‌ಗಳು ಇತ್ಯಾದಿಗಳು ಅನೇಕ ಜನರಲ್ಲಿ ಮೆದುಳಿನ ಮಂಜು ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ಆದಾಗ್ಯೂ, ಮೆಣಸು, ಶುಂಠಿ ಇತ್ಯಾದಿ ಪೌಷ್ಟಿಕಾಂಶದಂತಹ ಮಸಾಲೆಯುಕ್ತ ಆಹಾರಗಳನ್ನು ಸೇರಿಸುವ ಮೂಲಕ ಅದನ್ನು ನಿರ್ವಹಿಸಬಹುದು. 

click me!