Types Of Tea: ಹಾಲಿನ ಚಹಾ ಕುಡಿದು ಬೋರಾಗಿದ್ಯಾ ? ಕಲರ್‌ ಕಲರ್ ಟೀ ಕುಡೀರಿ

Suvarna News   | Asianet News
Published : Jan 30, 2022, 02:10 PM ISTUpdated : Jan 30, 2022, 02:24 PM IST
Types Of Tea: ಹಾಲಿನ ಚಹಾ ಕುಡಿದು ಬೋರಾಗಿದ್ಯಾ ?  ಕಲರ್‌ ಕಲರ್ ಟೀ ಕುಡೀರಿ

ಸಾರಾಂಶ

ಬ್ಲ್ಯಾಕ್ ಟೀ (BlacK Tea), ಮಿಲ್ಕ್ ಟೀ (Milk Tea) ಹೀಗೆ ಯಾವಾಗ್ಲೂ ಒಂದೇ ತರ ಟೀ ಕುಡಿದು ಬೋರಾಗಿದ್ಯಾ ? ಡೋಂಟ್ ವರಿ, ಇಲ್ಲಿದೆ ನೀವು ಟೇಸ್ಟ್ (Taste) ಮಾಡಬಹುದಾದ ಕೆಲವೊಂದು ಕಲರ್ ಫುಲ್ ಟೀಗಳು. ಬ್ಲೂ (Blue), ಪಿಂಕ್, ಯೆಲ್ಲೋ ಯಾವ ಕಲರ್ ಟೀ ಬೇಕೋ ಚ್ಯೂಸ್ ಮಾಡ್ಕೊಳ್ಳಿ.

ಭಾರತೀಯ ದಿನಚರಿಯಲ್ಲಿ ಟೀಯಂತೂ ಕಡ್ಡಾಯವಾಗಿ ಇರುತ್ತದೆ. ಜನರು ಏನನ್ನು ಮರೆತರೂ ಬೆಳಗ್ಗೆ, ಸಂಜೆ ಟೀ ಕುಡಿಯವುದನ್ನು ಮಾತ್ರ ತಪ್ಪಿಸುವುದಿಲ್ಲ. ಹಾಲಿನ ಚಹಾ, ಶುಂಠಿ ಚಹಾ, ಮಸಾಲೆ ಚಹಾ, ಕಪ್ಪು ಚಹಾ. ಹೀಗೆ ಇಷ್ಟಕ್ಕನುಸಾರವಾಗಿ ವಿವಿಧ ರೀತಿಯ ಚಹಾ ಮಾಡಿ ಕುಡಿಯುತ್ತಾರೆ. ವಿವಿಧ ಸಸ್ಯಗಳು ಮತ್ತು ಹೂವುಗಳನ್ನು ಬಳಸಿ ವೈವಿಧ್ಯಮಯ ಟೀ ತಯಾರಿಸಲಾಗುತ್ತಿದೆ. ಆದರೆ ನಾವು ಇಂದು ಅನೇಕರು ಕೇಳಿರದ ಅಥವಾ ನೋಡದ ಕೆಲವು ವಿಧದ ಚಹಾಗಳ ಬಗ್ಗೆ ತಿಳಿಸುತ್ತೇವೆ.

ಕೆಂಪು ಚಹಾ (Red Tea)
ಕೆಂಪು ಆಕರ್ಷಕವಾಗಿರುವ ಬಣ್ಣ. ರೆಡ್ ಕಲರ್ ಹಲವರ ಫೇವರಿಟ್ ಕೂಡಾ ಹೌದು. ಹೀಗಿದ್ದಾಗ ರೆಡ್ ಟೀ ಅಂದ್ರೆ ನೋಡಿದ ಕೂಡಲೇ ಅಟ್ರ್ಯಾಕ್ಟಿವ್ ಆಗಿ ಕಾಣಿಸೋದು ಗ್ಯಾರಂಟಿ. ಈ ಕೆಂಪು ಚಹಾವನ್ನು ಹಲವೆಡೆ ರೂಯಿಬೋಸ್ ಟೀ ಎಂದೂ ಕರೆಯುತ್ತಾರೆ.

ಕೆಂಪು ಚಹಾವು ದಕ್ಷಿಣ ಆಫ್ರಿಕಾದಲ್ಲಿ ಬೆಳೆಯುವ 'ಆಸ್ಪಲಾಥಸ್' ಎಂಬ ಮರದಿಂದ ಬರುತ್ತದೆ. ಹಸಿರು ಚಹಾಕ್ಕೆ ಹೋಲಿಸಿದರೆ ಇದು 50% ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವುದರಿಂದ ಆರೋಗ್ಯ (Health)ಕ್ಕೆ ತುಂಬಾ ಒಳ್ಳೆಯದು. ಕೆಂಪು ಚಹಾ ಸೇವನೆ ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೂದಲಿನ ಬೇರುಗಳನ್ನು ಹೆಚ್ಚು ಗಟ್ಟಿಯಾಗಿಸುತ್ತದೆ ಮತ್ತು ಸೊಂಪಾಗಿ ಕೂದಲು ಬೆಳೆಯಲು ಕಾರಣವಾಗುತ್ತದೆ. ರೆಡ್ ಟೀ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೀಗಾಗಿ ಕೊರೋನಾ ಸೋಂಕು ಹರಡುತ್ತಿರುವ ಈ ಸಂದರ್ಭದಲ್ಲಿ ಕೆಂಪು ಚಹಾ ಸೇವನೆ ಅತ್ಯುತ್ತಮವಾಗಿದೆ.

Health Tips: ಹೆಚ್ಚು ಹಾಲು ಹಾಕಿದ ಟೀ ಕುಡಿದ್ರೆ ಆರೋಗ್ಯ ಸಮಸ್ಯೆನೂ ಹೆಚ್ಚು

ನೀಲಿ ಚಹಾ (Blue Tea)
ಈ ಚಹಾವನ್ನು ಅಪರಾಜಿತ ಎಂಬ ನೀಲಿ ಹೂವಿನ ದಳಗಳಿಂದ ತಯಾರಿಸಲಾಗುತ್ತದೆ. ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಅಪರಾಜಿತ ಸುಂದರವಾದ ರಾಯಲ್ ನೀಲಿ ಬಣ್ಣವನ್ನು ಹೊಂದಿದೆ. ಬ್ಲೂ ಟೀ, ಕೆಫೀನ್ ಮುಕ್ತ ಹರ್ಬಲ್ ಟೀ ಆಗಿರುವುದರಿಂದ ಅನೇಕರು ಇಷ್ಟಪಡುತ್ತಾರೆ. ಅಲ್ಲದೆ, ಬ್ಲೂ ಟೀ ಸೇವನೆಯಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಬ್ಲೂ ಟೀ ಕುಡಿಯುವುದು ನೆನಪಿನ ಶಕ್ತಿ ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೆ ಜ್ವರವನ್ನು ಕಡಿಮೆ ಮಾಡುತ್ತದೆ. ಅಸ್ತಮಾವನ್ನು ನಿವಾರಿಸುತ್ತದೆ.  ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತದೆ. ಅಷ್ಟೇ ಅಲ್ಲ ಮಧುಮೇಹವನ್ನು ನಿಯಂತ್ರಿಸುವುದಕ್ಕೂ ನೀಲಿ ಚಹಾ ಸೇವನೆ ಅತ್ಯುತ್ತಮ.  

ಗ್ರೀನ್ ಟೀ (Green Tea)
ಗ್ರೀನ್ ಟೀ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ತೂಕ (Weight) ಇಳಿಸಲು ಪ್ರಯತ್ನಿಸುತ್ತಿರುವವರು ಮುಖ್ಯವಾಗಿ ಬೆಳಗ್ಗೆ, ಸಂಜೆಯ ಹೊತ್ತು ಗ್ರೀನ್ ಟೀ ಕುಡಿಯುತ್ತಾರೆ. ತೂಕವನ್ನು ಕಡಿಮೆ ಮಾಡುವಲ್ಲಿ ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಮಧುಮೇಹ (Diabetes) ಸೇರಿದಂತೆ ಹಲವು ರೋಗಗಳ ವಿರುದ್ಧ ಹೋರಾಡುವ ಶಕ್ತಿ ಗ್ರೀನ್ ಟೀಗಿದೆ. ಇದಲ್ಲದೆ, ಗ್ರೀನ್ ಟೀಯಲ್ಲಿ ಆಂಟಿ ಆಕ್ಸಿಡೆಂಟ್ ಸಮೃದ್ಧವಾಗಿದ್ದು, ಇದು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಶೀತ ಮತ್ತು ಜ್ವರದಿಂದ ರಕ್ಷಣೆ ನೀಡುತ್ತದೆ. ಗ್ರೀನ್ ಟೀಯನ್ನು ನಿಯಮಿತವಾಗಿ ಕುಡಿದರೆ ಚರ್ಮ ಮತ್ತು ಕೂದಲಿನ ಆರೋಗ್ಯ ವೃದ್ಧಿಯಾಗುತ್ತದೆ.

Hibiscus Benefits : ದಾಸವಾಳ ಚಹಾದಲ್ಲಿದೆ ಹಲವು ಗುಣ..!

ಪಿಂಕ್ ಟೀ (Pink Tea)
ಪಿಂಕ್ ಟೀಯನ್ನು ದಾಸವಾಳದ ಹೂವಿನಿಂದ ತಯಾರಿಸಲಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಇದು ತುಂಬಾ ಉಪಯುಕ್ತವಾಗಿದೆ. ಇದು ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ಅತಿಸಾರ ಸೇರಿದಂತೆ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಹಳದಿ ಚಹಾ (Yellow Tea)
ಇದು ಹಸಿರು ಚಹಾದ ನಂತರ ಹೆಚ್ಚು ವ್ಯಾಪಕವಾಗಿ ಸೇವಿಸುವ ಚಹಾವಾಗಿದೆ. ಇದನ್ನು ಹಳದಿ ಬಣ್ಣಕ್ಕೆ ತಿರುಗಿದ ಚಹಾ ಎಲೆಗಳಿಂದ ತಯಾರಿಸಲಾಗುತ್ತದೆ. ಆದರೆ, ಹಸಿರು ಚಹಾದಂತೆಯೇ, ಇದರ ರುಚಿಯು ಕಹಿಯಾಗಿರುವುದಿಲ್ಲ.  ಬದಲಾಗಿ, ಇದು ರುಚಿಯಲ್ಲಿ ಸ್ವಲ್ಪ ಸಿಹಿಯಾಗಿರುತ್ತದೆ. ಇದು ಹಸಿರು ಚಹಾದಲ್ಲಿ ಕಂಡುಬರುವ ಎಲ್ಲಾ ಉತ್ಕರ್ಷಣ ನಿರೋಧಕ ಅಂಶಗಳು ಸಹ ಹಳದಿ ಚಹಾ ಹೊಂದಿರುತ್ತದೆ. ಹಸಿರು ಚಹಾದಂತೆ, ಹಳದಿ ಚಹಾವನ್ನು ಚೀನಾದಲ್ಲಿ ಹೆಚ್ಚಾಗಿ ಕುಡಿಯಲಾಗುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

World Idli Day: ಇಡ್ಲಿ ದಿನದಂದೇ ದೋಸೆ ತಿಂದ ಕಥೆ ನಿಮಗೆ ಗೊತ್ತಾ? ದೀಪಿಕಾ ಪಡುಕೋಣೆ ಈ ಯಡವಟ್ಟು ಮಾಡಿದ್ಯಾಕೆ?
ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ