ಮಧ್ಯಾಹ್ನ ಫುಡ್ ಆರ್ಡರ್ ಮಾಡ್ಬೇಡಿ ಎಂದ ಜೊಮೋಟೋ ಪೋಸ್ಟ್ ವೈರಲ್

By Roopa Hegde  |  First Published Jun 5, 2024, 1:30 PM IST

ಮಧ್ಯಾಹ್ನ ಮನೆಯಿಂದ ಹೊರಗೆ ಬೀಳೋದು ಕಷ್ಟ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಅನೇಕ ರಾಜ್ಯಗಳಲ್ಲಿ ಬಿಸಿಲು ಜನರನ್ನು ಬಲಿಪಡೆಯುತ್ತಿದೆ. ಆದ್ರೆ ಆನ್ಲೈನ್ ಫುಡ್ ಡೆಲಿವರಿ ಬಾಯ್ಸ್ ಗೆ ಮಾತ್ರ ವಿಶ್ರಾಂತಿ ಸಾಧ್ಯವಿಲ್ಲ. ಅದನ್ನರಿತ ಜೊಮೋಟೋ ಕಂಪನಿ ಎಕ್ಸ್ ನಲ್ಲಿ ಒಂದು ಪೋಸ್ಟ್ ಹಾಕಿದ್ದು, ಅದೀಗ ವೈರಲ್ ಆಗಿದೆ. 
 


ದೇಶದಲ್ಲಿ ಬಿಸಿಲ ಝಳವಿದೆ. ಜೂನ್ ತಿಂಗಳಲ್ಲೂ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ರಣಬಿಸಿಲು ಜನರನ್ನು ಹೈರಾಣ ಮಾಡಿದೆ. ಬಿಸಿಲಿಗೆ ಕೆಲವರು ಸಾವನ್ನಪ್ಪಿದ ಪ್ರಕರಣ ಕೂಡ ಬೆಳಕಿಗೆ ಬಂದಿದೆ. ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮನೆಯಿಂದ ಹೊರ ಬೀಳೋದು ಕಷ್ಟವಾಗಿದೆ. ಬಿಸಿಲಿನಲ್ಲಿ ಅನೇಕರು ಕೆಲಸ ಮಾಡೋದು ಅನಿವಾರ್ಯವಾಗಿದೆ. ಅದ್ರಲ್ಲಿ ಫುಡ್ ಡಿಲೆವರಿ ಬಾಯ್ಸ್ ಕೂಡ ಸೇರಿದ್ದಾರೆ. ಜನರು ಮನೆಯಲ್ಲಿ ಕುಳಿತು ಅಥವಾ ಕಚೇರಿಯಲ್ಲಿ ಕುಳಿತು ಜೊಮೋಟೋ ಸೇರಿದಂತೆ ಆನ್ಲೈನ್ ಫುಡ್ ಡಿಲೆವರಿ ವೆಬ್ಸೈಟ್ ನಲ್ಲಿ ಆಹಾರ ಆರ್ಡರ್ ಮಾಡ್ತಿದ್ದಾರೆ. ಅವರು ಕುಳಿತಲ್ಲೇ ಆಹಾರ ಬರುವ ಕಾರಣ ಜನರು ಬಿಸಿಲಿಗೆ ಹೋಗುವ ಅನಿವಾರ್ಯತೆ ಇರೋದಿಲ್ಲ. ಈಗಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಫುಡ್ ಆರ್ಡರ್ ಮಾಡೋರ ಸಂಖ್ಯೆ ಕೂಡ ವಿಪರೀತ ಹೆಚ್ಚಾಗಿದೆ. ಮಳೆ, ಬಿಸಿಲು ಎನ್ನದೆ ಜನರು ಆಹಾರ ಆರ್ಡರ್ ಮಾಡ್ತಾರೆ. ಮಳೆ ಬರ್ತಿದ್ದಂತೆ ಬಜ್ಜಿ, ಬೋಂಡಗಳನ್ನು ಆರ್ಡರ್ ಮಾಡುವ ಜನರು ಬಿಸಿಲು ಹೆಚ್ಚಾಗ್ತಿದ್ದಂತೆ ಐಸ್ ಕ್ರೀಂ ಸೇರಿದಂತೆ ಹಾಲಿನವರೆಗೆ ಎಲ್ಲವನ್ನೂ ಆನ್ಲೈನ್ ಬುಕ್ ಮಾಡ್ತಾರೆ. 

ಜನರು ಆನ್ಲೈನ್ (Online) ನಲ್ಲಿ ಆಹಾರ ಆರ್ಡರ್ ಮಾಡೋದ್ರಿಂದ ಆನ್ಲೈನ್ ಫುಡ್ ಡೆಲಿವರಿ (Delivery) ಕಂಪನಿಗಳಿಗೆ ಲಾಭವೇನೋ ಹೌದು. ಆದ್ರೆ ಆಹಾರವನ್ನು ಡೆಲಿವರಿ ಮಾಡುವ ಡೆಲಿವರಿ ಬಾಯ್ಸ್ ಗೆ ಕೆಲಸ ಕಷ್ಟವಾಗ್ತಿದೆ. ಮೈ ಸುಡುವ ಬಿಸಿಲಿನಲ್ಲಿ, ಕೊರೆಯುವ ಚಳಿಯಲ್ಲಿ, ಮೈ ಒದ್ದೆ ಮಾಡ್ಕೊಂಡು ಅವರು ಆಹಾರ ಡೆಲಿವರಿ ಮಾಡ್ತಿದ್ದಾರೆ. ಜೊಮೋಟೋ (Zomoto)  ತನ್ನ ಡೆಲಿವರಿ ಬಾಯ್ಸ್ ಸಮಸ್ಯೆಯನ್ನು ಅರಿತಿದೆ. ಅವರ ಪರ ಬ್ಯಾಟ್ ಬೀಸಿದೆ. ಸದ್ಯ ಅದು ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದೆ. ಆ ಪೋಸ್ಟ್ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

Latest Videos

undefined

ಮ್ಯಾಗಿ ಕೊಟ್ಟಿದ್ದೇಕೆ ರಾಕಿಂಗ್ ಸ್ಟಾರ್ ಯಶ್ ರಾಧಿಕಾ ಪಂಡಿತ್‌ಗೆ? ಏನಾಯ್ತು ಅಂಥದ್ದು?

ಮಧ್ಯಾಹ್ನ ಫುಡ್ ಆರ್ಡರ್ ಮಾಡ್ಬೇಡಿ ಎಂದು ಜೊಮೋಟೋ : ಜೊಮೋಟೋ ತನ್ನ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದೆ. ಮಧ್ಯಾಹ್ನದ ವೇಳೆ ಆದಷ್ಟು ಆಹಾರ ಆರ್ಡರ್ ಮಾಡ್ಬೇಡಿ ಎಂದು ಜೊಮೋಟೋ ಪೋಸ್ಟ್ ನಲ್ಲಿ ಹೇಳಿದೆ. ಅತ್ಯವಶ್ಯಕತೆ ಇಲ್ಲದ ಸಂದರ್ಭದಲ್ಲಿ ದಯವಿಟ್ಟು ಮಧ್ಯಾಹ್ನದ ವೇಳೆ ಆಹಾರ ಆರ್ಡರ್ ಮಾಡ್ಬೇಡಿ ಎಂದು ಜೊಮೋಟೋ ತನ್ನ ಬಳಕೆದಾರರಲ್ಲಿ ವಿನಂತಿ ಮಾಡಿಕೊಂಡಿದೆ. 

ನೀರು, ಹಾಲು ಬೇಕಾಬಿಟ್ಟಿ ಕುಡಿಬೇಡಿ, ಮೂಳೆಗಳನ್ನೇ ಹಾಳು ಮಾಡುತ್ತೆ ಹುಷಾರ್!

ಜೊಮೋಟೋ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. 9.60 ಲಕ್ಷಕ್ಕೂ ಹೆಚ್ಚು ಬಾರಿ ಈ ಪೋಸ್ಟ್ ವೀಕ್ಷಣೆ ಮಾಡಲಾಗಿದೆ. 972 ಜನರು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಜನರಿಗೆ ನೀವು ರಿಕ್ವೆಸ್ಟ್ ಮಾಡೋದಲ್ಲ, ಹೆಚ್ಚು ಆರ್ಡರ್ ಬರುವ ಸಮಯದಲ್ಲಿ ನೀವೇ ನಿಮ್ಮ ಅಪ್ಲಿಕೇಷನ್ ಲಾಕ್ ಮಾಡಿ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಜನರು ಆಹಾರದ ಅವಶ್ಯಕತೆ ಇದ್ದಾಗ ಮಾತ್ರ ಆರ್ಡರ್ ಮಾಡ್ತಾರೆ. ನೀವು ಡೆಲಿವರಿ ಬಾಯ್ಸ್ ಬಗ್ಗೆ ನಿಜವಾಗ್ಲೂ ಆಲೋಚನೆ ಮಾಡ್ತೀರಿ ಎಂದಾದ್ರೆ ನೀವೆ ಸೂಕ್ತ ಕ್ರಮಕೈಗೊಳ್ಳಿ ಎಂದು ಮತ್ತೊಬ್ಬ ಬಳಕೆದಾರ ಹೇಳಿದ್ದಾನೆ. ಗ್ರಾಹಕರ ಸೇವೆಗೆ ನೀವು ಸಿದ್ಧರಿಲ್ಲ ಎಂದಾದ್ಮೇಲೆ ನಿಮ್ಮ ಅಪ್ಲಿಕೇಷನ್ ಬಳಸಿ ಪ್ರಯೋಜನವಿಲ್ಲ ಎಂದು ಬಳಕೆದಾರರು ಕಮೆಂಟ್ ಮಾಡಿದ್ರೆ, ಕೆಲವರು ನಿಮ್ಮ ಅಪ್ಲಿಕೇಷನ್ ಡಿಲಿಟ್ ಮಾಡ್ತಿರೋದಾಗಿ ಹೇಳಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಿಮ್ಮ ಅಪ್ಲಿಕೇಷನ್ ಬಂದ್ ಮಾಡಿ. ನಮ್ಮ ಮಧ್ಯಾಹ್ನದ ಊಟವನ್ನು ರಾತ್ರಿಗೆ ಮುಂದೂಡಲು ಸಾಧ್ಯವಿಲ್ಲ ಎಂದು ಬಳಕೆದಾರರು ಬರೆದಿದ್ದಾರೆ. ಜೊಮೋಟೋ ಪೋಸ್ಟ್ ಗೆ ಬಳಕೆದಾರರಿಂದ ವಿರೋಧ ವ್ಯಕ್ತವಾಗಿದೆ. 

pls avoid ordering during peak afternoon unless absolutely necessary 🙏

— zomato (@zomato)
click me!