ಆಹಾರಕ್ಕೆ ಕಡಲೆಕಾಯಿ ಬಳಸ್ಬೇಕು ಎಂದಾಗ ಸಿಪ್ಪೆ ಟೆನ್ಷನ್ ಶುರುವಾಗುತ್ತೆ. ಫಟಾಫಟ್ ಆಗುವ ಅಡುಗೆಗೆ ಸಿಪ್ಪೆ ತಡೆಯೊಡ್ಡುತ್ತೆ. ಶೇಂಗಾ ಸಿಪ್ಪೆ ತೆಗೆಯೋದು ತಲೆನೋವು ಅನ್ನೋರು ನೀವೂ ಆಗಿದ್ರೆ ಈ ಸಲಹೆ ಓದಿ.
ಬಡವರ ಬಾದಾಮಿ ಎಂದೇ ಕಡಲೆಕಾಯಿ ಪ್ರಸಿದ್ಧಿ ಪಡೆದಿದೆ. ಇದನ್ನು ಶೇಂಗಾ ಸೇರಿದಂತೆ ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಈ ಕಡಲೆಕಾಯಿಯನ್ನು ಬೇಸಿಗೆ ಇರಲಿ ಮಳೆಗಾಲವಿರಲಿ ಎಲ್ಲ ಋತುವಿನಲ್ಲಿ ತಿನ್ನಲು ಜನರು ಇಷ್ಟಪಡ್ತಾರೆ. ಒಗ್ಗರಣೆ ಅವಲಕ್ಕಿ,ಲೆಮನ್ ರೈಸ್ ಸೇರಿದಂತೆ ಖಿಚಡಿ ರುಚಿಯನ್ನು ಕಡಲೆಕಾಯಿ ಹೆಚ್ಚಿಸುತ್ತದೆ. ಅನೇಕರು ಕಡಲೆಕಾಯಿಯನ್ನು ಹುರಿದು ಹಾಗೇ ಸೇವನೆ ಮಾಡ್ತಾರೆ. ಮತ್ತೆ ಕೆಲವರು ಫ್ರೈ ಮಾಡಿ ತಿನ್ನುತ್ತಾರೆ. ಕಡಲೆಕಾಯಿ ರುಚಿ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಕಡಲೆಕಾಯಿ ತಿನ್ನೋದ್ರಿಂದ ದೇಹಕ್ಕೆ ಫೈಬರ್ ಸಿಗುತ್ತದೆ. ಹೊಟ್ಟೆ ನೋವು ಸೇರಿದಂತೆ ಹೊಟ್ಟೆ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ. ರಕ್ತ ಪರಿಚಲನೆ ಸುಧಾರಿಸೋದಲ್ಲದೆ, ಹೃದಯದ ಆರೋಗ್ಯವನ್ನು ವೃದ್ಧಿಸುತ್ತದೆ. ಕಡಲೆಕಾಯಿ ಖಾದ್ಯ ತಯಾರಿಸೋವಾಗ ಅದ್ರ ಸಿಪ್ಪೆ ತೆಗೆಯೋದು ದೊಡ್ಡ ಸವಾಲು.
ಕೆಲ ಆಹಾರ (Food) ತಯಾರಿಸುವ ವೇಳೆ ಕಡಲೆಕಾಯಿ (Peanut) ಸಿಪ್ಪೆ ತೆಗೆಯೋದು ಅನಿವಾರ್ಯ. ಸಿಪ್ಪೆ (Peel) ಆಹಾರದ ರುಚಿ ಕೆಡಿಸುತ್ತದೆ. ಆದ್ರೆ ಈ ಸಿಪ್ಪೆ ತೆಗೆಯೋದೇ ದೊಡ್ಡ ತಲೆನೋವಿನ ಕೆಲಸ. ದೊಡ್ಡ ಪ್ರಮಾಣದಲ್ಲಿ ಶೇಂಗಾ ಬಳಸುವ ವೇಳೆ ಒಂದೊಂದೇ ಶೇಂಗಾದ ಸಿಪ್ಪೆ ತೆಗೆಯುತ್ತ ಕೂರಲು ಸಾಧ್ಯವಿಲ್ಲ. ನೀವು ಇದಕ್ಕೆ ಐಡಿಯಾ ಹುಡುಕ್ತಾ ಇದ್ರೆ ಮಾಸ್ಟರ್ ಚೆಫ್ ರಣವೀರ್ ಬ್ರಾರ್ ಹೇಳುವ ಟಿಪ್ಸ್ ಫಾಲೋ ಮಾಡಿ. ಇದ್ರಿಂದ ನೀವು ಶೇಂಗಾ ಸಿಪ್ಪೆ ತೆಗೆಯೋದು ಸುಲಭ.
undefined
ಮುಖೇಶ್, ನೀತಾ ಅಂಬಾನಿ ನಿತ್ಯದ ಡಿನ್ನರ್ ನಲ್ಲಿ ಇದೊಂದು ಐಟಂ ಮಿಸ್ ಆಗಲೇಬಾರದು, ಏನದು?
ಕಡಲೆಕಾಯಿ ಸಿಪ್ಪೆ ತೆಗೆಯೋದು ಹೀಗೆ?: ರಣವೀರ್ ಬ್ರಾರ್ ಪ್ರಕಾರ, ಮೊದಲು ನೀವು ಒಂದು ಬಾಣಲೆಗೆ ಕಡಲೆಕಾಯಿಯನ್ನು ಹಾಕಿ. ಗ್ಯಾಸ್ ಹಚ್ಚಿ, ಸಣ್ಣ ಉರಿಯಲ್ಲಿ ಕಡಲೆಕಾಯಿಯನ್ನು ಲಘುವಾಗಿ ಹುರಿಯಿರಿ. ಕಡಲೆಕಾಯಿ ಗರಿಯಾಗ್ತಿದ್ದಂತೆ ಅದನ್ನು ಒಂದು ಶುದ್ಧವಾದ ಬಟ್ಟೆಯಲ್ಲಿ ಹಾಕಿ ಮುಚ್ಚಿ. ನಂತ್ರ ಒಂದು ಕೈನಲ್ಲಿ ಶೇಂಗಾ ಹೊರಗೆ ಬರದಂತೆ ಬಟ್ಟೆ ಹಿಡಿದುಕೊಂಡು ಇನ್ನೊಂದು ಕೈನಲ್ಲಿ ಬಟ್ಟೆಯನ್ನು ಚೆನ್ನಾಗಿ ಒತ್ತಿ ಇಲ್ಲವೆ ತಿಕ್ಕಿ. ನೀವು ಸರಿಯಾಗಿ ಉಜ್ಜುತ್ತಿದ್ದಂತೆ ಸಿಪ್ಪೆ ಬಿಡಿಸಿಕೊಳ್ಳುತ್ತದೆ. ಒಂದ್ವೇಳೆ ಇಷ್ಟು ಮಾಡಿದ್ರೂ ಸಿಪ್ಪೆ ಬೇಗ ಬೇರ್ಪಡುತ್ತಿಲ್ಲ ಎಂದಾದ್ರೆ ಬಟ್ಟೆಯೊಳಗೆ ಉಪ್ಪನ್ನು ಹಾಕಿ, ಚೆನ್ನಾಗಿ ಉಜ್ಜಬೇಕು. ಆ ನಂತ್ರ ನೀವು ಒಂದು ಪಾತ್ರೆಗೆ ಕಡಲೆಕಾಯಿಯನ್ನು ಹಾಕಿ. ಸಿಪ್ಪೆಯನ್ನು ಬೇರ್ಪಡಿಸಿ. ನೀವು ಪಾತ್ರೆಗೆ ಹಾಕಿ ಗಾಳಿ ಬೀಸಿದ್ರೆ ಸಿಪ್ಪೆಯೆಲ್ಲ ಸುಲಭವಾಗಿ ಬೇರ್ಪಡುತ್ತದೆ ಎನ್ನುತ್ತಾರೆ ರಣವೀರ್ ಬ್ರಾರ್.
ಈ ವಿಧಾನವನ್ನೂ ಮಾಡಿನೋಡಿ :
ಮೈಕ್ರೋವೇವ್ (Microwave) ಬಳಸಿ : ಬಾಣಸಿಗ ರಣವೀರ್ ಬ್ರಾರ್ ಅವರ ಸಲಹೆಯಲ್ಲದೆ ನೀವು ಇನ್ನು ಕೆಲ ವಿಧಾನದ ಮೂಲಕ ಶೇಂಗಾ ಸಿಪ್ಪೆ ತೆಗೆಯಬಹುದು. ಮೈಕ್ರೋವೇವ್ ಸಹಾಯದಿಂದ ಕಡಲೆಕಾಯಿಯ ಸಿಪ್ಪೆಯನ್ನು ತೆಗೆಯುವುದು ಸುಲಭ. ಮೊದಲು ಶೇಂಗಾವನ್ನು ಟ್ರೇನಲ್ಲಿಟ್ಟು ಅದನ್ನು ಮೈಕ್ರೋವೇವ್ ನಲ್ಲಿಡಿ. ಸ್ವಲ್ಪ ಹೊತ್ತಿನ ನಂತ್ರ ಶೇಂಗಾವನ್ನು ಹೊರಗೆ ತೆಗೆಯಿರಿ. ಕಡಲೆಕಾಯಿ ತಣ್ಣಗಾದ ಮೇಲೆ ನಿಮ್ಮ ಅಂಗೈ ಸಹಾಯದಿಂದ ಶೇಂಗಾವನ್ನು ಉಜ್ಜಿ ಸಿಪ್ಪೆ ತೆಗೆಯಿರಿ.
ನೀರು, ಹಾಲು ಬೇಕಾಬಿಟ್ಟಿ ಕುಡಿಬೇಡಿ, ಮೂಳೆಗಳನ್ನೇ ಹಾಳು ಮಾಡುತ್ತೆ ಹುಷಾರ್!
ಈ ವಿಧಾನ ಬಳಸಿ ನೋಡಿ : ಶೇಂಗಾ ಹುರಿದ ಮೇಲೆ ಕೈನಿಂದ ಅದ್ರ ಸಿಪ್ಪೆ ಬಿಡಿಸೋದು ಕಷ್ಟ ಎನ್ನುವವರು ಮಿಕ್ಸರ್ ಬಳಸಬಹುದು. ಹುರಿದ ಶೇಂಗಾವನ್ನು ಮಿಕ್ಸಿ ಜಾರ್ ಗೆ ಹಾಕಿ ಒಂದು ಸುತ್ತು ತಿರುಗಿಸಿ. ನಂತ್ರ ಒಂದು ಪ್ಲೇಟ್ ಗೆ ಶೇಂಗಾ ಹಾಕಿ, ಗಾಳಿ ಬೀಸಿದ್ರೆ ಸಿಪ್ಪೆ ಬೇರ್ಪಡುತ್ತದೆ. ಆದ್ರೆ ಶೇಂಗಾ ಮಿಕ್ಸಿಯಲ್ಲಿರುವಾಗ ತುಂಬಾ ಹೊತ್ತು ಅದನ್ನು ಗ್ರೈಂಡ್ ಮಾಡಬೇಡಿ. ನೀವು ಹೀಗೆ ಮಾಡಿದ್ರೆ ಶೇಂಗಾ ಪುಡಿಯಾಗುತ್ತದೆ ಎಂಬುದು ನೆನಪಿರಲಿ.