ಮುಖೇಶ್, ನೀತಾ ಅಂಬಾನಿ ನಿತ್ಯದ ಡಿನ್ನರ್ ನಲ್ಲಿ ಇದೊಂದು ಐಟಂ ಮಿಸ್ ಆಗಲೇಬಾರದು, ಏನದು?

By Anusha Shetty  |  First Published Jun 4, 2024, 12:15 PM IST

ಸಾಮಾನ್ಯವಾಗಿ ಮುಖೇಶ್ ಹಾಗೂ ನೀತಾ ಅಂಬಾನಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಅತಿಥಿಗಳಿಗೆ ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ಈ ದಂಪತಿ ಪ್ರತಿದಿನ ಇಂಥ ವಿಶೇಷ ಭೋಜನವನ್ನೇ ಸವಿಯುತ್ತಾರಾ? ಅವರ ನಿತ್ಯದ ಆಹಾರ ಕ್ರಮ ಹೇಗಿರುತ್ತೆ? ಇಲ್ಲಿದೆ ಮಾಹಿತಿ. 


ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ದ್ವಿತೀಯ ಪುತ್ರ ಅನಂತ್ ಅಂಬಾನಿ ಎರಡನೇ ಪ್ರೀವೆಡ್ಡಿಂಗ್ ಕಾರ್ಯಕ್ರಮ ಇತ್ತೀಚೆಗಷ್ಟೇ ಅದ್ದೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಗಳಿಗೆ ನಾನಾ ವಿಧದ ಖಾದ್ಯಗಳನ್ನು ಉಣಬಡಿಸಲಾಗಿತ್ತು. ಮೊದಲನೇ ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿ ಕೂಡ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಅಂಬಾನಿ ಕುಟುಂಬ ಆಗಾಗ ಆಯೋಜಿಸುವ ಪಾರ್ಟಿಗಳಲ್ಲಿ ಅತಿಥಿಗಳಿಗೆ ಸರ್ವ್ ಮಾಡುವ ಆಹಾರಗಳು ಕೂಡ ಆಗಾಗ ಸುದ್ದಿಯಾಗುತ್ತವೆ. ಅಂಬಾನಿ ಕುಟುಂಬ ಐಷಾರಾಮಿ ಜೀವನಶೈಲಿಯನ್ನು ನಿರ್ವಹಣೆ ಮಾಡುತ್ತದೆ. ಅವರು ಧರಿಸುವ ಬಟ್ಟೆಯಿಂದ ಹಿಡಿದು ಪ್ರತಿ ವಸ್ತುಗಳಲ್ಲಿ ಕೂಡ ಅದ್ದೂರಿತನವನ್ನು ನೋಡಬಹುದು. ಹೀಗಿರುವಾಗ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ನಿತ್ಯದ ಆಹಾರ ಕ್ರಮ ಹೀಗಿರುತ್ತದೆ ಎಂದು ತಿಳಿಯುವ ಕುತೂಹಲ ಸಹಜ. ಹಾಗಂತ ಪ್ರತಿದಿನ ಮುಖೇಶ್ ಹಾಗೂ ನೀತಾ ಅಂಬಾನಿ ಅವರು ಭರ್ಜರಿ ಭೋಜನವನ್ನೇ ಸವಿಯುತ್ತಾರೆ ಎಂದು ಭಾವಿಸಬೇಡಿ. ಅವರು ನಿತ್ಯದ ಊಟದಲ್ಲಿ ಸರಳ ಆಹಾರ ಕ್ರಮವನ್ನು ಅನುಸರಿಸುತ್ತಾರೆ. ಅದರಲ್ಲೂ ರಾತ್ರಿಯ ಊಟದಲ್ಲಿ ಮುಖೇಶ್ ಅಂಬಾನಿ ಅವರಿಗೆ ತಮ್ಮ ಇಷ್ಟದ ಒಂದು ಐಟಂ ಪ್ರತಿದಿನ ಇರಲೇಬೇಕು. ಹಾಗಾದ್ರೆ ಅದೇನು?

ಕಡಿಮೆ ಕ್ಯಾಲೋರಿ ಆಹಾರ
ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ತಮ್ಮ ನಿತ್ಯದ ಆಹಾರ ಕ್ರಮದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ಆರೋಗ್ಯಕ್ಕೆ ಹಿತಕರವಾದ ಆಹಾರಗಳಿಗೆ ಪ್ರಾಮುಖ್ಯತೆ ನೀಡುತ್ತಾರೆ. ಅವರ ಐಷಾರಾಮಿ ಬಂಗ್ಲೆ ಆಂಟಿಲಿಯಾದಲ್ಲಿ ಅಡುಗೆ ತಯಾರಿಗೆಂದೇ ಪರಿಣಿತ ಪಾಕತಜ್ಞರನ್ನು ಹೊಂದಿದ್ದಾರೆ. ಇವರು ಪ್ರತಿದಿನ ಅಂಬಾನಿ ಕುಟುಂಬ ಸದಸ್ಯರಿಗೆ ಅವರ ಇಷ್ಟದ ಆರೋಗ್ಯಕರ ಅಡುಗೆಯನ್ನು ಸಿದ್ಧಪಡಿಸಿ ಬಡಿಸುತ್ತಾರೆ.  ಬಾಣಸಿಗರು ಪ್ರತಿದಿನ ಕಡಿಮೆ ಕ್ಯಾಲೋರಿ ಆಹಾರಗಳನ್ನು ಸಿದ್ಧಪಡಿಸಿ ಮುಖೇಶ್ ಹಾಗೂ ನೀತಾ ಅಂಬಾನಿ ಅವರಿಗೆ ಬಡಿಸುತ್ತಾರೆ ಎನ್ನುವುದು ಆಪ್ತಮೂಲಗಳು ನೀಡಿರುವ ಮಾಹಿತಿ. 

Tap to resize

Latest Videos

undefined

ವಿಶ್ವದ ಅತ್ಯಂತ ದುಬಾರಿ ನೀರು ಕುಡಿಯುತ್ತಾರಂತೆ ನೀತಾ ಅಂಬಾನಿ; ಈ ಗೋಲ್ಡ್ ವಾಟರ್ ಬೆಲೆ ಅರ್ಧಕೋಟಿ!

ರಾತ್ರಿ ಊಟ ಒಟ್ಟಿಗೆ ಕುಳಿತು ಮಾಡುವ ದಂಪತಿ
ಮುಖೇಶ್ ಅಂಬಾನಿ ದೇಶದ ಶ್ರೀಮಂತ ಉದ್ಯಮಿ. ಬಿಡುವಿಲ್ಲದ ದಿನಚರಿ ಅವರದ್ದು. ಇನ್ನು ನೀತಾ ಅಂಬಾನಿ ಕೂಡ ಕಂಪನಿಯ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸುವ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಕಾರಣ ಅವರಿಬ್ಬರು ದಿನವಿಡೀ ಬ್ಯುಸಿ ಆಗಿರುತ್ತಾರೆ. ಹೀಗಾಗಿ ರಾತ್ರಿ ಊಟವನ್ನು ಮಾತ್ರ ಈ ಇಬ್ಬರು ಒಟ್ಟಿಗೆ ಕುಳಿತು ಮಾಡುತ್ತಾರಂತೆ. ರಾತ್ರಿ ಊಟಕ್ಕೆ ಮಾತ್ರ ಇವರು ತಪ್ಪದೇ ಮನೆಯ ಊಟವನ್ನೇ ತಿನ್ನುವ ಅಭ್ಯಾಸ ರೂಢಿಸಿಕೊಂಡಿದ್ದಾರಂತೆ. 

ರಾತ್ರಿ ಊಟಕ್ಕೆ ಗುಜರಾತಿ ಶೈಲಿ ದಾಲ್ ಬೇಕೇಬೇಕು
ಪ್ರತಿದಿನದ ರಾತ್ರಿ ಊಟಕ್ಕೆ ಅಂಬಾನಿ ದಂಪತಿ ಇದೊಂದು ಐಟಂ ಅನ್ನು ಮಿಸ್ ಮಾಡೋದಿಲ್ಲ. ಮುಖೇಶ್ ಅಂಬಾನಿ ಮೂಲತಃ ಗುಜರಾತ್ ನವರು. ಹೀಗಾಗಿ ಅವರಿಗೆ ರಾತ್ರಿ ಊಟಕ್ಕೆ ಗುಜರಾತ್ ಶೈಲಿಯ ದಾಲ್ ಇರಲೇಬೇಕು. 

ಹೇರ್ ಸ್ಟೈಲ್ ನಿರ್ವಹಣೆಗೂ ನೌಕರನ ನೇಮಿಸಿಕೊಂಡಿರುವ ನೀತಾ ಅಂಬಾನಿ;ದುಡ್ಡಿದ್ರೆ ಏನೂ ಮಾಡ್ಬಹುದೆಂದ ನೆಟ್ಟಿಗರು

ಅಂಬಾನಿ ದಂಪತಿ ಮೆಚ್ಚಿನ ಆಹಾರ ಇದೇ
ನೀತಾ ಹಾಗೂ ಮುಖೇಶ್ ಅಂಬಾನಿ ಅವರ ಎಲ್ಲ ಸಮಯದ ಮೆಚ್ಚಿನ ಆಹಾರ ಅಂದ್ರೆ ರೊಟ್ಟಿ ಜೊತೆಗೆ ರಾಜ್ಮ ಕರಿ ಹಾಗೂ ದಾಲ್. 

ಸೇವ್ ಪುರಿ ಇಷ್ಟ
ಮುಖೇಶ್ ಅಂಬಾನಿ ಅವರಿಗೆ ಸೇವ್ ಪುರಿ ಅಚ್ಚುಮಚ್ಚು. ಅದರಲ್ಲೂ ರಸ್ತೆಬದಿಗಳಲ್ಲಿನ ಸೇವ್ ಪುರಿಯನ್ನು ಸವಿಯಲು ಅವರು ಹೆಚ್ಚು ಇಷ್ಟಪಡುತ್ತಾರೆ. ಇನ್ನು ನೀತಾ ಹಾಗೂ ಮುಖೇಶ್ ಇಬ್ಬರೂ ಮುಂಬೈಯ ವಿಶಿಷ್ಟ ದಹಿ ಬಟಾಟ ಪುರಿಯನ್ನು ಸವಿಯಲು ಇಷ್ಟಪಡುತ್ತಾರೆ.

ಇಡ್ಲಿಪ್ರಿಯರು
ತಮ್ಮಿಬ್ಬರಿಗೂ ದಕ್ಷಿಣ ಭಾರತದ ತಿನಿಸುಗಳೆಂದ್ರೆ ಇಷ್ಟ ಎಂದು ನೀತಾ ಅಂಬಾನಿ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅದರಲ್ಲೂ ಮುಖೇಶ್ ಹಾಗೂ ನೀತಾ ಅಂಬಾನಿಗೆ ಇಡ್ಲಿ ಸಾಂಬಾರ್ ತುಂಬಾನೇ ಇಷ್ಟವಂತೆ. 


 

click me!