ಮನೆ (Home)ಯಲ್ಲಾಗಲಿ ಅಥವಾ ರೆಸ್ಟೋರೆಂಟ್ (Restaurant) ಗಳಲ್ಲಿ ಆಗಿರಲಿ ಊಟ ಮಾಡುವಾಗ ಟೇಬಲ್ ಮ್ಯಾನರ್ಸ್ (Table Manners) ಗೊತ್ತಿರಬೇಕಾದುದು ಬಹಳ ಮುಖ್ಯ. ಇಲ್ಲವಾದರೆ, ನಿಮ್ಮ ವರ್ತನೆಯಿಂದ ಕೇವಲ ನಿಮಗೆ ಮಾತ್ರವಲ್ಲ ಇತರರಿಗೂ ಮುಜುಗರವಾಗಬಹುದು. ಹಾಗಿದ್ರೆ ಊಟ ಮಾಡುವಾಗ ಟೇಬಲ್ ಮ್ಯಾನರ್ಸ್ ಹೇಗಿರಬೇಕು ?
ರೆಸ್ಟೋರೆಂಟ್‌ನಲ್ಲಿ ಸ್ನೇಹಿತರೊಂದಿಗೆ ಊಟ ಮಾಡುತ್ತಿರಲಿ ಅಥವಾ ಮನೆಯಲ್ಲಿ ಆತ್ಮೀಯ ಸ್ನೇಹಿತರು, ಕುಟುಂಬದವರೊಂದಿಗೆ ಊಟ ಮಾಡುತ್ತಿರಲಿ ಪ್ರತಿಯೊಬ್ಬರು ಡೈನಿಂಗ್ ಟೇಬಲ್‌ನಲ್ಲಿ ಘನತೆಯನ್ನು ಕಾಪಾಡಿಕೊಳ್ಳಬೇಕು. ಟೇಬಲ್ ನಡತೆಗಳು ಸರಿಯಾಗಿದ್ದರೆ ಜತೆಯಾಗಿ ಕುಳಿತು ತಿಂದ ನೆನಪು ಯಾವತ್ತೂ ಸುಂದರ ನೆನಪಾಗಿರುತ್ತದೆ. ನೀವು ಯಾರೊಂದಿಗಾದರೂ ಊಟವನ್ನು ಹಂಚಿಕೊಂಡಾಗ, ಅದು ಇಬ್ಬರು ಜನರ ನಡುವೆ ಉತ್ತಮ ಸಂಬಂಧವನ್ನು ರೂಪಿಸುತ್ತದೆ. ಬದಲಾಗಿ ಊಟ ಮಾಡುವಾಗ ನೀವು ಟೇಬಲ್ ಮ್ಯಾನರ್ಸ್ ಇಲ್ಲದವರಂತೆ ವರ್ತಿಸಿದರೆ, ಅಂಥಹಾ ಸಂದರ್ಭಗಳಲ್ಲಿ ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ ಬರುವ ಸಾಧ್ಯತೆಯೇ ಹೆಚ್ಚು. ಊಟ ಮಾಡುವಾಗ ಹೇಗೆ ವರ್ತಿಸಬೇಕು, ಯಾವ ರೀತಿ ವರ್ತಿಸಬಾರದು ಎಂಬುದನ್ನು ಟೇಬಲ್ ಮ್ಯಾನರ್ಸ್ ಎನ್ನುತ್ತೇವೆ.
ದೊಡ್ಡದಾಗಿ ಬಾಯಿ ತೆಗೆದು ಆಹಾರವನ್ನು ಜಗಿಯುವುದು
ಊಟ ಮಾಡುವಾಗ ಯಾವತ್ತೂ ದೊಡ್ಡದಾಗಿ ಬಾಯಿ ತೆಗೆದು ಊಟ ಮಾಡದಿರಿ. ಸ್ಪಲ್ಪ ಸ್ವಲ್ಪವಾಗಿ ನಿಧಾನವಾಗಿ ಆಹಾರವನ್ನು ಸೇವಿಸಿ. ದೊಡ್ಡ ಪ್ರಮಾಣದಲ್ಲಿ ಊಟವನ್ನು ತೆಗೆದುಕೊಂಡು ಆಹಾರವನ್ನು ಗುಳುಂ ಗುಳುಂ ನುಂಗುವುದು ಒಳ್ಳೆಯ ಅಭ್ಯಾಸವಲ್ಲ.
ಬೇಗ ಬೇಗ ತಿನ್ನುವುದು
ಆಹಾರವನ್ನು ಸೇವಿಸುವಾಗ ಯಾವತ್ತೂ ಆತುರಬೇಡ, ಅದು ಸಭ್ಯತೆಯಲ್ಲ. ನೀವು ತುಂಬಾ ಹಸಿದಿದ್ದರೂ, ಆಹಾರವನ್ನು ಟೇಸ್ಟ್ ಮಾಡಲು ಹಾತೊರೆಯುತ್ತಿದ್ದರೂ ಮಧ್ಯಮ ವೇಗದಲ್ಲಿ ಊಟ ಮಾಡಿ. ಇದರಿಂದ ಇತರರಿಗೂ ಮುಜುಗರ ಆಗುವುದು ತಪ್ಪುತ್ತದೆ. ಟೇಬಲ್‌ನಲ್ಲಿ ಕುಳಿತಿದ್ದಾಗ ಎಲ್ಲರಿಗೂ ಫುಡ್ ಸರ್ವ್ ಆಗುವ ವರೆಗೂ ಕಾಯಿರಿ. ನಿಮ್ಮ ಪ್ಲೇಟ್‌ಗೆ ಆಹಾರ ಬಡಿಸಿಯಾದ ಕೂಡಲೇ ಗಬಗಬನೇ ತಿನ್ನಲು ಶುರು ಮಾಡಬೇಡಿ.
ರಾತ್ರಿ ಊಟದಲ್ಲಿ ಸೌತೆಕಾಯಿ ತಿನ್ನುವುದಾದರೆ ನಿಮ್ಮ ಅಭ್ಯಾಸ ಬದಲಾಯಿಸಿಕೊಳ್ಳಿ...
ತಿನ್ನುವಾಗ ಶಬ್ದ ಬರುವಂತೆ ಜಗಿಯುವುದು
ಊಟಕ್ಕೆ ಕುಳಿತಾಗ, ಸುತ್ತಲೂ ನಾಲ್ಕು ಜನರು ಕುಳಿತಿದ್ದಾಗ ಸ್ನ್ಯಾಕ್ಸ್ (Snacks) ಇತರ ತಿಂಡಿಗಳನ್ನು ಶಬ್ದ ಬರುವಂತೆ ಜಗಿಯುವುದು ಮಾಡಬೇಡಿ. ಇದರಿಂದ ಸುತ್ತಮುತ್ತಲಿಗೂ ಕಿರಿಕಿರಿಯುಂಟಾಗುತ್ತದೆ. ಹೀಗಾಗಿ ಸಾಧ್ಯವಾದಷ್ಟೂ ನಿಧಾನವಾಗಿ, ಮೆತ್ತಗೆ ಆರಾಮವಾಗಿ ತಿನ್ನಿ.
ತಿನ್ನುವಾಗ ಮಾತನಾಡುವುದು
ನೀವು ಸ್ನೇಹಿತರು (Friends) ಅಥವಾ ಕುಟುಂಬದೊಂದಿಗೆ ಊಟ ಮಾಡುವಾಗ, ಯಾರೂ ತಪ್ಪಿಸಲು ಸಾಧ್ಯವಾಗದ ಒಂದು ವಿಷಯವೆಂದರೆ ಮಾತನಾಡುವುದು. ಸಮಯವನ್ನು ಕಳೆಯುವಾಗ ಸಂಭಾಷಣೆಯು ಉತ್ತಮವಾದ ವಿಷಯವಾಗಿದ್ದರೂ, ನೀವು ಮಾತನಾಡುವ ಸಮಯದಲ್ಲಿ ತಿನ್ನುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಯಾರಾದರೂ ನಿಮ್ಮೊಂದಿಗೆ ಮಾತನಾಡುತ್ತಿದ್ದರೆ ಮತ್ತು ನಿಮ್ಮ ಬಾಯಿಯಲ್ಲಿ ಆಹಾರವಿದ್ದರೆ, ಅದು ಮುಗಿದ ನಂತರವಷ್ಟೇ ಮಾತನಾಡಿ.
ಬೆರಳುಗಳನ್ನು ನೆಕ್ಕುವುದು
ಊಟ ಮುಗಿದ ಮೇಲೆ ಬೆರಳುಗಳನ್ನು ನೆಕ್ಕುವುದು ತುಂಬ ಮಂದಿಯ ಅಭ್ಯಾಸ, ಗುಂಪಲ್ಲಿ ಊಟಕ್ಕೆ ಕುಳಿತಾಗ ಬೆರಳುಗಳನ್ನು ನೆಕ್ಕುವುದನ್ನು ಮಾಡಬೇಡಿ. ಬೆರಳುಗಳ ಮೇಲೆ ಸಾಸ್ (Sauce) ಅಥವಾ ಕರಿ ಇತರ ಯಾವುದೇ ಆಹಾರ ಬಿದ್ದರೆ, ಅದನ್ನು ಯಾವಾಗಲೂ ನಿಮ್ಮ ಕರವಸ್ತ್ರದಿಂದ ಒರೆಸಿಕೊಳ್ಳಿ. ಅಥವಾ ನಿಮ್ಮ ಕೈಗಳನ್ನು ತೊಳೆದುಕೊಳ್ಳಿ.
ರಾತ್ರಿ ವೇಳೆ ಅಗತ್ಯಕ್ಕಿಂತ ಹೆಚ್ಚು ಊಟ ಮಾಡಿದ್ರೆ ಏನಾಗುತ್ತೆ ?
ಕೈಯಲ್ಲಿ ಆಹಾರವನ್ನು ಹಿಡಿದು ಮಾತನಾಡಬೇಡಿ
ಕೈಯಲ್ಲಿ ಆಹಾರ (Food), ಸ್ಪೂನ್ ಹಿಡಿದುಕೊಂಡು ಮಾತನಾಡಬೇಡಿ. ಇದನ್ನು ಸೂಕ್ತವಲ್ಲದ ಟೇಬಲ್ ವಿಧಾನವೆಂದು ಪರಿಗಣಿಸಲಾಗುತ್ತದೆ. ಮಾತನಾಡುವ ಮುನ್ನ ಕೈಯಲ್ಲಿರುವ ಆಹಾರವನ್ನು ತಟ್ಟೆಯಲ್ಲಿಡಿ, ಸ್ಪೂನ್, ನೈಫ್, ಫೋರ್ಕ್ ಅನ್ನು ಬದಿಗಿಡಿ. ಯಾವುದೇ ರೀತಿಯ ಡಿನ್ನರ್ ಆಗಿದ್ದರೂ, ಯಾರಿಗೂ ಇರಿಸು ಮುರಿಸು ಆಗದಂತೆ ನೋಡಿಕೊಳ್ಳಿ. ಊಟದ ಮಧ್ಯೆ ಕೆಮ್ಮುವುದು, ಸೀನುವುದು, ತೇಗುವುದನ್ನೆಲ್ಲಾ ಮಾಡಬೇಡಿ.
ಉಳಿದಿದ್ದನ್ನು ಬಾಚಿ ತಿನ್ನುವುದು
ಪಾತ್ರೆಯಲ್ಲಿ ಉಳಿದ ಸಾಸ್‌ಗಳನ್ನು, ಕರಿಯನ್ನು ಬಾಚಿ ತಿನ್ನುವುದು ಮಾಡದಿರಿ. ಆ ಫುಡ್ ನಿಮ್ಮ ಫೇವರಿಟ್ ಆಗಿದ್ದರೂ ಟೇಬಲ್ ಮ್ಯಾನರ್ಸ್ (Table Manners) ಅನುಸರಿಸಿ. ಬೇಕಾದಷ್ಟೇ ಹಾಕಿಕೊಂಡು ತಿನ್ನಿ. ಸ್ಪೂನ್ ಪಾತ್ರೆಗೆ ಹಾಕಿ ಶಬ್ದ ಬರುವಂತೆ ಎಲ್ಲಾ ಫುಡ್‌ನ್ನು ಸೇರಿಸಿ ಪ್ಲೇಟ್‌ಗೆ ಹಾಕಿಕೊಳ್ಳುವುದು ಮಾಡಬೇಡಿ.