ಹಣ್ಣಿಗೆ ಉಪ್ಪು, ಚಾಟ್‌ ಮಸಾಲ ಸಿಂಪಡಿಸಿ ತಿನ್ನೋ ಅಭ್ಯಾಸ ಒಳ್ಳೇದಾ ?

By Suvarna News  |  First Published Jul 12, 2022, 3:22 PM IST

ಹಣ್ಣುಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ಹಲವರಿಗೆ ಗೊತ್ತಿದೆ. ಆದ್ರೆ ಅದನ್ನು ತಿನ್ನುವ ಸಮಯ, ತಿನ್ನುವ ರೀತಿ ಎಲ್ಲವೂ ಸರಿಯಾಗಿದ್ದರಷ್ಟೇ ಅದು ಆರೋಗ್ಯಕರವಾಗಿರುತ್ತದೆ. ಹಾಗಿದ್ರೆ ನೀವು ಹಣ್ಣು ತಿನ್ನೋ ರೀತಿ ಸರಿಯಾಗಿದ್ಯಾ ಚೆಕ್ ಮಾಡ್ಕೊಳ್ಳಿ.


ಆರೋಗ್ಯದ ಬಗ್ಗೆ ಪ್ರತಿಯೊಬ್ಬರಿಗೂ ಕಾಳಜಿ ಇರುತ್ತದೆ. ಹೀಗಾಗಿಯೇ ಹೆಚ್ಚೆಚ್ಚು ಹಣ್ಣು, ತರಕಾರಿಗಳನ್ನು ತಿನ್ನೋ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಯಾಕೆಂದರೆ ಸೊಪ್ಪು ತರಕಾರಿಗಳು, ಹಣ್ಣುಗಳು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್‌, ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಮೆಡಿಕಲ್‌ನ್ಯೂಸ್‌ಟುಡೇ.ಕಾಮ್‌ನ ಪ್ರಕಾರ ಹಣ್ಣುಗಳು ಖನಿಜಗಳು ಮತ್ತು ವಿಟಮಿನ್‌ಗಳ ಸಮೃದ್ಧ ಮೂಲವಾಗಿದೆ ಮತ್ತು ಹೆಚ್ಚಿನ ಫೈಬರ್ ಅನ್ನು ಹೊಂದಿರುತ್ತವೆ. ಉತ್ಕರ್ಷಣ ನಿರೋಧಕಗಳ ಮೂಲವೂ ಹೌದು. ಹಣ್ಣುಗಳನ್ನು ತಿನ್ನುವುದು ಮಧುಮೇಹ, ಉರಿಯೂತ, ಹೃದಯ ಸಮಸ್ಯೆಗಳು ಇತ್ಯಾದಿಗಳ ಅಪಾಯಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆದ್ರೆ ಹಣ್ಣು ಆರೋಗ್ಯಕ್ಕೆ ಒಳ್ಳೇದು ಅಂತ ಬೇಕಾಬಿಟ್ಟಿ ತಿನ್ನೋ ಅಭ್ಯಾಸನೂ ಒಳ್ಳೇದಲ್ಲ. ಹಣ್ಣುಗಳನ್ನು ತಿನ್ನೋ ಸಮಯ, ಹಣ್ಣುಗಳನ್ನು ತಿನ್ನೋ ರೀತಿ ಎಲ್ಲವೂ ಸರಿಯಾಗಿದ್ದರಷ್ಟೇ ಆರೋಗ್ಯಕ್ಕೆ ಇದರ ಪ್ರಯೋಜನ ಸಿಗಲು ಸಾಧ್ಯ.  

ಹಣ್ಣುಗಳನ್ನು ತಿನ್ನುವಾಗ ಗರಿಷ್ಟ ಪೋಷಕಾಂಶಗಳನ್ನು ಪಡೆಯಲು ಹಣ್ಣನ್ನು (Fruits) ತಿನ್ನುವ ಸರಿಯಾದ ವಿಧಾನವನ್ನು ಅನುಸರಿಸಬೇಕು.  ಹಣ್ಣುಗಳನ್ನು ತಿನ್ನಲು ಸೂಕ್ತವಾದ ರೀತಿ ಮತ್ತು ಸಮಯ ಯಾವುದು ಎಂಬುದುನ್ನು ತಿಳಿದುಕೊಳ್ಳೋಣ. ಆಹಾರ ತಜ್ಞೆ ಮತ್ತು ಮಧುಮೇಹ ತಜ್ಞೆ  ನಿಹಾರಿಕಾ ಬುಧ್ವಾನಿ ಹಣ್ಣುಗಳನ್ನು ತಿನ್ನಲು ಸರಿಯಾದ ವಿಧಾನ ಯಾವುದು ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

Tap to resize

Latest Videos

Monsoon: ಸಿಕ್ಕಿದ್ದೆಲ್ಲ ಹಣ್ಣು ತಿಂದ್ರೆ ಆರೋಗ್ಯ ಕೆಡ್ಬಹುದು ಜೋಪಾನ

ಮೊದಲೇ ಕತ್ತರಿಸಿದ ಹಣ್ಣು ತಿನ್ನುವುದು ಒಳ್ಳೆಯದಲ್ಲ: ಹಣ್ಣುಗಳು ವಿಟಮಿನ್ (Vitamin) ಸಿಯ ಅತ್ಯುತ್ತಮ ಮೂಲಗಳಲ್ಲಿ ಒಂದಾಗಿದೆ. ಆದರೆ ಈ ವಿಟಮಿನ್ ಶಾಖದ ಪ್ರಮಾಣವನ್ನು ಒಳಗೊಂಡಿರುತ್ತದೆ. ಹೀಗಾಗಿ ಇದು ಗಾಳಿಗೆ ಒಡ್ಡಿಕೊಂಡಾಗ ಸುಲಭವಾಗಿ ಕ್ಷೀಣಿಸುತ್ತದೆ. ಹೀಗಾಗಿ ಕತ್ತರಿಸಿದ ಹಣ್ಣುಗಳನ್ನು ತುಂಬಾ ಹೊತ್ತು ಹಾಗೆಯೇ ಇಟ್ಟು ನಂತರ ತಿನ್ನುವುದು ವಿಟಮಿನ್‌ನ ಪ್ರಮಾಣ ಕಡಿಮೆಯಾಗಲು ಕಾರಣವಾಗುತ್ತದೆ. ಹೀಗಾಗಿ ಹಣ್ಣನ್ನು ಯಾವಾಗಲೂ ಕಟ್‌ ಮಾಡಿದ ಕೂಡಲೇ ತಿಂದು ಬಿಡಿ. ಬಹಳ ಹೊತ್ತು ಹಾಗೆಯೇ ಬಿಟ್ಟು ಮತ್ತೆ ತಿನ್ನುವ ಅಭ್ಯಾಸ ಒಳ್ಳೆಯದಲ್ಲ. 

ಅನಿಯಮಿತ ಪ್ರಮಾಣದಲ್ಲಿ ತಿನ್ಬೇಡಿ: ಕೆಲವು ತೂಕ ನಷ್ಟ ಯೋಜನೆಗಳು ನಿಮಗೆ ಬೇಕಾದಷ್ಟು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಅವಕಾಶ ನೀಡುತ್ತವೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಹಣ್ಣುಗಳು ಆರೋಗ್ಯಕ್ಕೆ ಉತ್ತಮವಾಗಿದ್ದರೂ ಇದನ್ನು ಅತಿಯಾಗಿ ತಿನ್ನುವುದು ಸೂಕ್ತವಲ್ಲ. ಹಣ್ಣುಗಳು ಸಿಹಿಯಾಗಿದ್ದು, ಇದರ ಅತಿಯಾದ ಸೇವನೆ ದೇಹದಲ್ಲಿ ಗ್ಲೂಕೋಸ್ ಮತ್ತು ಕ್ಯಾಲೊರಿಯನ್ನು ಹೆಚ್ಚಿಸಬಹುದು. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.ಹೀಗಾಗಿ ದಿನಕ್ಕೆ ಕೇವಲ ಅರ್ಧ ಕಪ್‌ನಷ್ಟು ಹಣ್ಣನ್ನು ಮಾತ್ರ ಸೇವಿಸುವ ಅಭ್ಯಾಸ ಒಳ್ಳೆಯದು. 

ಚಾಟ್ ಮಸಾಲಾ, ಉಪ್ಪು ಸಿಂಪಡಿಸಿ ತಿನ್ನುವುದು ಬೇಡ: ಹಣ್ಣುಗಳನ್ನು ತಿನ್ನುವಾಗ ಯಾವಾಗಲೂ ಹಾಗೆಯೇ ತಿನ್ನುವುದು ಒಳ್ಳೆಯದು. ಬದಲಿಗೆ ಚಾಟ್‌ ಮಸಾಲಾ (Chat masala), ಉಪ್ಪು (Salt) ಅಥವಾ ಸಕ್ಕರೆಯನ್ನು ಸೇರಿಸಿ ತಿನ್ನುವ ಅಭ್ಯಾಸ ಖಂಡಿತಾ ಒಳ್ಳೆಯದಲ್ಲ. ಇದು ದೇಹಕ್ಕೆ ಹೆಚ್ಚುವರಿ ಸಕ್ಕರೆಯನ್ನು ಸೇರಿಸುವುದರಿಂದ ನಿಮ್ಮ ಒಟ್ಟಾರೆ ಕ್ಯಾಲೊರಿ ಸೇವನೆಯನ್ನು ಹೆಚ್ಚಿಸುತ್ತದೆ.  ಉಪ್ಪು ಸೇರಿಸುವುದರಿಂದ ನಿಮ್ಮ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚಾಗುತ್ತದೆ. ಇವೆರಡೂ ಆರೋಗ್ಯದ ದೃಷ್ಟಿಯಿಂದ ಸೂಕ್ತವಲ್ಲ ಎಂದು ಅವರು ಹೇಳಿದರು.

ಹಣ್ಣು - ತರಕಾರಿ ಸಿಪ್ಪೆ ಬಿಸಾಕ್ತೀರ? ಹಣ್ಣಿಗಿಂತ ಹೆಚ್ಚ ಒಳ್ಳೇದು ಅದರ ಸಿಪ್ಪೆ

ಊಟದ ಜೊತೆಗೆ ಅಥವಾ ನಂತರ ಹಣ್ಣುಗಳನ್ನು ತಿನ್ನುವುದು: ಇದು ವ್ಯಕ್ತಿಯ ವೈಯಕ್ತಿಕ ಕ್ಯಾಲೋರಿ ಸೇವನೆಯನ್ನು ಅವಲಂಬಿಸಿರುತ್ತದೆ. ಆದರೆ ನಮ್ಮ ಊಟವು (Food) ಕಾರ್ಬೋಹೈಡ್ರೇಟ್‌ಗಳಿಂದ ಸಮೃದ್ಧವಾಗಿರುವುದರಿಂದ, ಊಟದೊಂದಿಗೆ ಹಣ್ಣುಗಳನ್ನು ಸೇರಿಸುವುದರಿಂದ ನಿರ್ದಿಷ್ಟ ಊಟದ ಕಾರ್ಬ್ ಮತ್ತು ಕ್ಯಾಲೋರಿ ಅಂಶವನ್ನು ಹೆಚ್ಚಿಸುತ್ತದೆ. ನೀವು ಊಟದ ನಡುವೆ ಹಣ್ಣುಗಳನ್ನು ಹೊಂದಲು ಆಯ್ಕೆ ಮಾಡಬಹುದು; ಅಥವಾ ನೀವು ಅದನ್ನು ನಿಮ್ಮ ಊಟದೊಂದಿಗೆ ಹೊಂದಲು ಬಯಸಿದರೆ, ನಿಮ್ಮ ಕ್ಯಾಲೊರಿ (Calorie) ಮಟ್ಟಕ್ಕೆ ಸರಿಹೊಂದಿಸಲು ಕೆಲವು ಕಾರ್ಬೋಹೈಡ್ರೇಟ್‌ಗಳನ್ನು ಕಡಿಮೆ ಮಾಡಿ ಎಂದು ಅವರು ಹೇಳಿದರು.

ಹಣ್ಣಿನ ಸಿಪ್ಪೆಯನ್ನು ತಿನ್ನದೇ ಇರುವುದು: ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿಗೆ ಬಂದಾಗ ಸಿಪ್ಪೆಯು ಉತ್ತಮ ಭಾಗವಾಗಿದೆ. ಉದಾಹರಣೆಗೆ, ಸೇಬಿನ ಸಿಪ್ಪೆಗಳು ಫೈಬರ್, ವಿಟಮಿನ್ ಸಿ ಮತ್ತು ವಿಟಮಿನ್ ಎಯಿಂದ ತುಂಬಿವೆ. ಇದು ಬೊಜ್ಜಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಹೀಗೆ ಎಲ್ಲಾ ರೀತಿಯ ಹಣ್ಣುಗಳೂ ಹಲವು ಆರೋಗ್ಯಕರ ಗುಣಗಳನ್ನು ಹೊಂದಿರುತ್ತವೆ. ಹೀಗಾಗಿ ಸಿಪ್ಪೆ ಸಮೇತ ಹಣ್ಣುಗಳನ್ನು ತಿನ್ನುವ ಅಭ್ಯಾಸ ತುಂಬಾ ಒಳ್ಳೆಯದು.

ಸಾವಯವ ಹಣ್ಣುಗಳನ್ನು ಖರೀದಿಸಿ: ಆರೋಗ್ಯಕ್ಕೆ ಒಳ್ಳಯದು ಅನ್ನೋ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಹಣ್ಣುಗಳನ್ನು ಖರೀದಿಸಬೇಡಿ. ಚೆನ್ನಾಗಿದೆಯಾ ಎಂದು ನೋಡಿ ಹಣ್ಣುಗಳನ್ನು ಆರಿಸಿಕೊಳ್ಳಿ. ಸಾವಯವ ಹಣ್ಣುಗಳು ಸ್ಪಲ್ಪ ಕಾಸ್ಟ್ಲೀಯಾಗಿದ್ದರೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೇಬುಗಳು, ದ್ರಾಕ್ಷಿಗಳು ಮುಂತಾದ ಹಣ್ಣುಗಳಲ್ಲಿ ಕೀಟನಾಶಕಗಳನ್ನು ಹೆಚ್ಚು ಬಳಸುತ್ತಾರೆ. ಹೀಗಾಗಿ ಸರಿಯಾಗಿ ಪರಿಶೀಲಿಸಿ ಹಣ್ಣುಗಳನ್ನು ಖರೀದಿಸಿ.

click me!