ಜಿಟಿಜಿಟಿ ಮಳೆ (Rain0, ತಂಪಾದ ವಾತಾವರಣದಲ್ಲಿ ಬಿಸಿಬಿಸಿಯಾಗಿ ಏನಾದ್ರೂ ತಿನ್ತಿರ್ಬೇಕು ಅನ್ಸುತ್ತೆ. ಹೀಗಿರುವಾಗ ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಕೇರಳದ ಕೆಲವು ಟೇಸ್ಟಿ ಫುಡ್ (Food)ಗಳನ್ನು ಟೇಸ್ಟ್ ಮಾಡಿದ್ದಾರೆ.
ದಕ್ಷಿಣ ಭಾರತದ ಆಹಾರವು (South Indian Food) ನಾವು ಸೇವಿಸಲು ಇಷ್ಟಪಡುವ ಅತ್ಯಂತ ಆರಾಮದಾಯಕವಾದ ಪಾಕಪದ್ಧತಿಗಳಲ್ಲಿ ಒಂದಾಗಿದೆ. ಬೆಳಗಿನ ಉಪಾಹಾರಕ್ಕಾಗಿ ಮೃದುವಾದ ಇಡ್ಲಿಗಳು ಮತ್ತು ಸಾಂಬಾರ್ (Idli sambar), ಮಧ್ಯಾಹ್ನದ ಊಟಕ್ಕೆ ಅನ್ನ, ರಸಂ ಅಥವಾ ಇತರ ರೈಸ್ ಬಾತ್ ಆಯ್ಕೆ ಮಾಡಲು ಹಲವು ಅವಕಾಶಗಳಿವೆ. ದಕ್ಷಿಣ ಭಾರತೀಯ ಪಾಕಪದ್ಧತಿಯ ಸ್ವಾದ (Taste) ಸಾಮಾನ್ಯವಾಗಿ ಎಲ್ಲಾ ವಯೋಮಾನದವರಿಗೂ ಇಷ್ಟವಾಗುತ್ತದೆ. ಮಲೈಕಾ ಅರೋರಾ (Malaika Arora) ಕೂಡಾ ದಕ್ಷಿಣ ಭಾರತೀಯ ಆಹಾರವನ್ನು ಇಷ್ಟಪಡುತ್ತಾರೆ ಎಂಬುದು ಈಗಾಗ್ಲೇ ಹಲವು ಬಾರಿಗೆ ಸಾಬೀತಾಗಿದೆ. ಈ ಬಾರಿಯ ಮಳೆಗಾಲದಲ್ಲೂ ಮಲೈಕಾ ರುಚಿಕರವಾದ ಕೇರಳದ ತಿಂಡಿಗಳನ್ನು ಸವಿದಿದ್ದಾರೆ. ಮುರುಕ್ಕು (Murukku), ಅವಿಯಲ್ (Avial) ಮೊದಲಾದ ಖಾದ್ಯಗಳೊಂದಿಗೆ ದಕ್ಷಿಣ ಭಾರತದ ಆಹಾರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ಮಲೈಕಾ ಅರೋರಾ ವಿಶೇಷವಾಗಿ ಮಳೆಗಾಲದಲ್ಲಿ ದಕ್ಷಿಣ ಭಾರತದ ಆಹಾರದತ್ತ ಚಿತ್ತ ಹರಿಸುತ್ತಿದ್ದಾರೆ. ಇತ್ತೀಚೆಗೆ ಅವರು ಕೇರಳ ಶೈಲಿಯ ರುಚಿಕರವಾದ ಭೋಜನವನ್ನು ಆನಂದಿಸಿದರು. ಅದು ದಕ್ಷಿಣ ಭಾರತದ ಆಹಾರ ಪ್ರಿಯರಿಗೆ ನಿಜವಾಗಿಯೂ ಸ್ವರ್ಗವಾಗಿತ್ತು. ಅವರು ಹಂಚಿಕೊಂಡ ಚಿತ್ರದಲ್ಲಿ ವಡಾ, ಸಾಂಬಾರ್ ಚಟ್ನಿ, ಮುರುಕ್ಕು, ಆವಿಯಲ್ ಸಹ ಸೇರಿತ್ತು. ಮನೆಯಲ್ಲಿ ತಯಾರಿಸಿದ ಮುರುಕ್ಕುಗಳು ಈ ತಂಪಾದ ಹವಾಮಾನಕ್ಕೆ ಪರಿಪೂರ್ಣವಾದ ಸ್ನ್ಯಾಕ್ಸ್ ಎಂದು ನಟಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಮಲೈಕಾ ಸ್ವಂತ ಅಡುಗೆಮನೆಯಲ್ಲಿ ಮಾಡಿದ ಕೆಲವು ಗರಿಗರಿಯಾದ ಮತ್ತು ರುಚಿಕರವಾದ ಮುರುಕ್ಕುಗಳನ್ನು ನಾವು ನೋಡಬಹುದು. ಕೇರಳ ಶೈಲಿಯ ಮುರುಕ್ಕು ಮಾಡೋದು ಹೇಗೆ ? ರೆಸಿಪಿ ಇಲ್ಲಿದೆ.
ಮಳೆಗಾಲದಲ್ಲಿ ಬೆಚ್ಚಗಿರಬೇಕು ಅಂದ್ರೆ ಇಂಥದ್ದನ್ನೆಲ್ಲಾ ತಿನ್ಬೇಕು
ಬೇಕಾದ ಪದಾರ್ಥಗಳು
4 ಕಪ್ ಅಕ್ಕಿ ಹಿಟ್ಟು
1 ಕಪ್ ಕರಿಬೇವು
1 ಟೇಬಲ್ ಸ್ಪೂನ್ ಜೀರಿಗೆ
1 ಚಮಚ ಎಳ್ಳು
ಇಂಗು ಸ್ವಲ್ಪ
500 ಗ್ರಾಂ ತೆಂಗಿನ ಎಣ್ಣೆ
ಅಗತ್ಯಕ್ಕೆ ತಕ್ಕಂತೆ ಉಪ್ಪು
ಮಾಡುವ ವಿಧಾನ
ಕೇರಳ ಶೈಲಿಯ ಮುರುಕು ತಯಾರಿಸಲು, ಮೊದಲು ಅಕ್ಕಿ ಹಿಟ್ಟನ್ನು ಬಿಸಿ ಮಾಡಿ. ಎಲ್ಲಾ ಕಾಳುಗಳನ್ನು ತಿಳಿ ಗೋಲ್ಡನ್ ಬ್ರೌನ್ ಆಗುವವರೆಗೆ ಬಿಸಿ ಮಾಡಿ. ಕರಿಬೇವನ್ನು 1 1/2 ಲೋಟ ನೀರಿನಲ್ಲಿ ಬೇಯಿಸಿ. ಇದನ್ನು ತಣ್ಣಗಾಗಲು ಬಿಡಿ ಮತ್ತು ಅದನ್ನು ಪೇಸ್ಟ್ ಮಾಡಲು ಮಿಕ್ಸರ್ ಗ್ರೈಂಡರ್‌ನಲ್ಲಿ ರುಬ್ಬಿಕೊಳ್ಳಿ. ಮೇಲಿನ ಕರಿಬೇವಿನ ಪೇಸ್ಟ್, ಅಕ್ಕಿ ಹಿಟ್ಟು ಮತ್ತು ಉಪ್ಪನ್ನು ಜೀರಿಗೆ, ಎಳ್ಳು ಮತ್ತು ಇಂಗು ಸೇರಿಸಿ ಮಿಶ್ರಣ ಮಾಡಿ. ಸ್ವಲ್ಪ ನೀರು ಸೇರಿಸಿ ಮತ್ತು ಈ ಮಿಶ್ರಣವನ್ನು ಹಿಟ್ಟನ್ನು ಮಾಡಲು ಚೆನ್ನಾಗಿ ಬೆರೆಸಿಕೊಳ್ಳಿ. ಹಿಟ್ಟನ್ನು ಉಂಡೆಯನ್ನಾಗಿ ಮಾಡಿ ಚಕ್ಕುಲಿ ಮೇಕರ್‌ನಲ್ಲಿ ಹಾಕಿ ಒತ್ತಿರಿ.ಬಾಳೆ ಎಲೆಯಿಂದ ಮುರುಕು ಆಕಾರವನ್ನು ಎಣ್ಣೆಯಲ್ಲಿ ಹಾಕಿ ಕರಿಯಿರಿ. ಕೈ ಬೆರಳುಗಳ ಮೂಲಕ ತಟ್ಟಿ ಸಹ ಮುರುಕನ್ನು ತಯಾರಿಸಬಹುದಾಗಿದೆ.
ಮಲೈಕಾ ಅರೋರಾ ದಕ್ಷಿಣ ಭಾರತದ ಸ್ಪೆಷಲ್ ಅವಿಯಲ್ ಕರಿಯನ್ನು ಸಹ ಆಸ್ವಾದಿಸಿದ್ದಾರೆ. ಇದರ ಫೋಟೋವನ್ನು ಸಹ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. 'ಗೆಲುವಿಗಾಗಿ ಅವಿಯಲ್" ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ. ದಕ್ಷಿಣ ಭಾರತೀಯ ಶೈಲಿಯ ಆಲೂಗೆಡ್ಡೆ ಸಲಾಡ್ ಕೂಡಾ ಪಕ್ಕದಲ್ಲಿದೆ. ಕೇರಳ ಶೈಲಿಯ ಆವಿಯಲ್ ಮಾಡೋದು ಹೇಗೆ ? ರೆಸಿಪಿ ಇಲ್ಲಿದೆ.
ಬೇಕಾದ ಪದಾರ್ಥಗಳು
1 ಕಪ್ ಸೋರೆಕಾಯಿ
2 ಡ್ರಮ್ ಸ್ಟಿಕ್
2 ಕ್ಯಾರೆಟ್
10 ಹಸಿರು ಬೀನ್ಸ್
1 ಹಸಿ ಬಾಳೆಹಣ್ಣು
2 ಆಲೂಗಡ್ಡೆ
1/2 ಟೀ ಚಮಚ ಅರಿಶಿನ ಪುಡಿ
ಉಪ್ಪು, ರುಚಿಗೆ ತಕ್ಕಷ್ಟು
ತೆಂಗಿನಕಾಯಿ ಗ್ರೇವಿಗೆ ಬೇಕಾಗುವ ಪದಾರ್ಥಗಳು
1-1/2 ಕಪ್ ತಾಜಾ ತೆಂಗಿನಕಾಯಿ
3 ಹಸಿರು ಮೆಣಸಿನಕಾಯಿ
ಕರಿಬೇವಿನ ಎಲೆಗಳು
1 ಟೀಚಮಚ ಜೀರಿಗೆ
1 ಟೇಬಲ್ ಸ್ಪೂನ್ ತೆಂಗಿನ ಎಣ್ಣೆ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ
ಕೇರಳ ಶೈಲಿಯ ಅವಿಯಲ್ ರೆಸಿಪಿಯನ್ನು ತಯಾರಿಸಲು ಪ್ರಾರಂಭಿಸಲು, ನಾವು ಮೊದಲು ಎಲ್ಲಾ ತರಕಾರಿಗಳನ್ನು ಉದ್ದವಾಗಿ ಕತ್ತರಿಸಿ ಉಪ್ಪು ಸೇರಿಸಿ ಎರಡು ವಿಶಲ್ ಬರುವ ವರೆಗೆ ಬೇಯಿಸಿಕೊಳ್ಳಬೇಕು. ಎರಡು ಸೀಟಿಗಳ ನಂತರ, ಉರಿಯನ್ನು ಕಡಿಮೆ ಮಾಡಿ ಮತ್ತು ಸುಮಾರು 3 ರಿಂದ 4 ನಿಮಿಷಗಳ ಕಾಲ ಕುದಿಸಿ ಮತ್ತು ಉರಿಯನ್ನು ಆಫ್ ಮಾಡಿ. ಬೇಯಿಸಿದ ತರಕಾರಿಗಳನ್ನು ಸರ್ವಿಂಗ್ ಬೌಲ್‌ಗೆ ವರ್ಗಾಯಿಸಿ.
ಜಿಟಿಜಿಟಿ ಮಳೆಗೆ ಬಿಸಿಬಿಸಿ ಪಕೋಡಾ, ಇಲ್ಲಿದೆ ಸಿಂಪಲ್ ರೆಸಿಪಿ
ಮುಂದಿನ ಹಂತ, ನಾವು ಕೇರಳದ ಅವಿಯಲ್‌ಗಾಗಿ ತೆಂಗಿನಕಾಯಿ ಬೇಸ್ ಅನ್ನು ತಯಾರಿಸುತ್ತೇವೆ. ಇದನ್ನು ಮಾಡಲು, ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಜೀರಿಗೆಯನ್ನು ಮಿಕ್ಸರ್‌ಗೆ ಹಾಕಿ. ಸ್ವಲ್ಪ ಬೆಚ್ಚಗಿನ ನೀರನ್ನು ಸೇರಿಸಿ ಮತ್ತು ಬಹುತೇಕ ನಯವಾದ ಪೇಸ್ಟ್ ಮಾಡಲು ಮಿಶ್ರಣ ಮಾಡಿ. ಆವಿಯಲ್ಲಿ ಬೇಯಿಸಿದ ತರಕಾರಿಗಳಿಗೆ ತೆಂಗಿನ ಮಿಶ್ರಣವನ್ನು ಸೇರಿಸಿ, ಒಂದು ಚಮಚ ತೆಂಗಿನ ಎಣ್ಣೆ, ಹರಿದ ಕರಿಬೇವಿನ ಎಲೆಗಳನ್ನು ಸೇರಿಸಿ ಮತ್ತು ಕೇರಳ ಅವಿಯಲ್ ಅನ್ನು ಬೆರೆಸಿ. ನಿಮ್ಮ ರುಚಿಗೆ ತಕ್ಕಂತೆ ಉಪ್ಪನ್ನು ಹೊಂದಿಸಿ.