ಮೈಸೂರಲ್ಲಿ ಶಿಲ್ಪಾ ಶೆಟ್ಟಿ ವೆರೈಟಿ ವೆರೈಟಿ ಮೈಸೂರ್ ಪಾಕ್​ ಸವಿತಿದ್ರೆ ನೋಡೋರ ಬಾಯಲ್ಲಿ ನೀರೋ ನೀರು!

By Suvarna News  |  First Published Nov 6, 2023, 10:34 PM IST

ಮೈಸೂರಿಗೆ ಶೂಟಿಂಗ್​ಗೆಂದು ಬಂದಿರುವ ನಟಿ ಶಿಲ್ಪಾ ಶೆಟ್ಟಿ, ಇಲ್ಲಿಯ ಬಗೆ ಬಗೆಯ ಮೈಸೂರು ಪಾಕ್​ ಸವಿದಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ. 
 


ಮೈಸೂರು ಎಂದಾಕ್ಷಣ ಆಹಾರ ಪ್ರಿಯರಿಗೆ ನೆನಪಿಗೆ ಬರುವುದು, ಅದಕ್ಕಿಂತಲೂ ಹೆಚ್ಚಾಗಿ ಕಣ್ಣ ಮುಂದೆ ಹಾದು ಹೋಗುವುದು ಮೈಸೂರು ಪಾಕ್​. ಬಗೆ ಬಗೆ ವೆರೈಟಿಗೆ ಮೈಸೂರು ಪಾಕ್​ಗಳು ಇಲ್ಲಿ ಲಭ್ಯ. ಬೇರೆ ಬೇರೆ ಊರುಗಳಲ್ಲಿ ಮೈಸೂರು ಪಾಕ್​ ಸಿಕ್ಕರೂ ಮೈಸೂರಿನ ಒರಿಜಿನಲ್​ ಮೈಸೂರು ಪಾಕ್​ ತಿಂದವರಿಗೇ ಗೊತ್ತು, ಅದರ ರುಚಿ. ಇದೀಗ ಬಾಲಿವುಡ್​​ ನಟಿ ಶಿಲ್ಪಾ ಶೆಟ್ಟಿ ಶೂಟಿಂಗ್​ಗಾಗಿ ಮೈಸೂರಿಗೆ ಬಂದಿದ್ದು, ಮೈಸೂರು ಪಾಕ್​ ಸವಿದಿದ್ದಾರೆ. ಜೊತೆಗೆ ಜಹಾಂಗೀರ್​ ಸೇರಿದಂತೆ ವಿವಿಧ ಸಿಹಿ ಪದಾರ್ಥಗಳನ್ನು ಸವಿದಿದ್ದು ಅದರ ವಿಡಿಯೋ ವೈರಲ್​ ಆಗಿದೆ.

ಅಷ್ಟಕ್ಕೂ ಮೈಸೂರು ಪಾಕ್​ ಉಗಮಕ್ಕೂ ವಿಶಿಷ್ಟ ಹಿನ್ನೆಲೆ ಇದೆ. ವಿಶ್ವ ಖ್ಯಾತಿ ಪಡೆದಿರುವ ಮೈಸೂರು ಪಾಕ್​ನ ಹಿನ್ನೆಲೆ ಕೆಲವೇ ಕೆಲವರಿಗೆ ತಿಳಿದಿರಬಹುದು. ಮೈಸೂರು ಪಾಕ್ ಜನ್ಮ ತಾಳಿದ್ದು ಮೈಸೂರಿನ ಅರಮನೆಯ ಪಾಕಶಾಲೆಯಲ್ಲಿ! ಹೌದು.  ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಪ ಇದರ ರೂವಾರಿ. ಇವರು  ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯಲ್ಲಿ ಸಿಹಿ ತಿಂಡಿ ತಯಾರಿಸುವ ಕೆಲಸದ ಜವಾಬ್ದಾರಿ ವಹಿಸಿಕೊಂಡಿದ್ದರು. ಇವರು ಒಮ್ಮೆ ತಲೆಗೆ ತೋಚಿದ್ದೆಲ್ಲಾ ಹಾಕಿ ಮಾಡಿದ ಸಿಹಿ ತಿನಿಸೇ  ಮೈಸೂರು ಪಾಕು ಆಗಿದ್ದು ಎಂದರೆ ನಂಬುವಿರಾ? ನಂಬಲೇಬೇಕು. 

Tap to resize

Latest Videos

undefined

ಮಗಳ ಪಾದ ತೊಳೆದು ಪೂಜೆ ಮಾಡಿದ ಶಿಲ್ಪಾಶೆಟ್ಟಿ- ರಾಜ್​ ಕುಂದ್ರಾ: ವಿಡಿಯೋ ವೈರಲ್​

ಅಷ್ಟಕ್ಕೂ ಆಗಿದ್ದೇನೆಂದರೆ,  ಒಮ್ಮೆ ಮಹಾರಾಜರು ತಿಂಡಿ ತಯಾರಿಸುವಂತೆ ಇವರಿಗೆ ಹೇಳಿದ್ದರು. ಅದು ಹೊಸ ಬಗೆಯ ತಿಂಡಿಗೆ ಆರ್ಡರ್​ ಮಾಡಲಾಗಿತ್ತು.  ಹೀಗಾಗಿ ಏನು ಹೊಸ ತಿಂಡಿ ತಯಾರಿಸುವುದು ಎಂದು ಅವರು ಆಲೋಚಿಸ ತೊಡಗಿದರು. ತಮಗೆ ತೋಚಿದ ತಿಂಡಿ ತಯಾರಿಸಲು ಕಾಕಾಸುರ ಮಾದಪ್ಪ ಮುಂದಾದರು. ಕಡಲೆ ಹಿಟ್ಟು, ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಕೊಟ್ಟರು. ಇದರ ರುಚಿ ನೋಡಿದ ಮಹಾರಾಜರಿಗೆ ತುಂಬಾ ಖುಷಿಯಾಯಿತು. ಆಗ ಇದಕ್ಕೆ ಏನು ಹೆಸರು ಇಡುವುದು ಎಂದು ಯೋಚನೆ ಮಾಡಿದಾಗ,  ಮೈಸೂರು ಪಾಕ ಇಡಬಹುದು ಎನ್ನಿಸಿತ್ತಂತೆ. ಮೈಸೂರಲ್ಲಿ ತಯಾರಾದದ್ದು, ಹಾಗೆಯೇ  ರುಚಿಯಾದ ಅಡುಗೆಗೆ ನಳಪಾಕ ಎನ್ನುತ್ತೇವೆ. ಇದನ್ನೆರಡೂ ಸೇರಿಸಿ ಮೈಸೂರು ಪಾಕ ಎಂದು ಹೆಸರು ಇಟ್ಟಿದ್ದಾರೆ.


 
ಇದಿಷ್ಟು ಈ ತಿನಿಸಿನ ಹಿನ್ನೆಲೆಯಾದರೆ,  ಇನ್ನು ಶಿಲ್ಪಾ ಶೆಟ್ಟಿ ಅವರ ವಿಚಾರಕ್ಕೆ ಬರುವುದಾದರೆ, ಫಿಟ್​ನೆಸ್​ ಬೆಡಗಿ ಶಿಲ್ಪಾ ಸಿಹಿ ಪದಾರ್ಥಗಳಿಂದ ದೂರವೇ ಉಳಿದವರು. ಆದರೂ ಅವರು ಆಗಾಗ್ಗೆ ಇಂಥ ಸಿಹಿಗಳನ್ನು ತಿನ್ನುವುದು ಉಂಟು. ಅಷ್ಟಕ್ಕೂ ಅವರಿಗೆ ಕರ್ನಾಟಕವೇನೂ ಹೊಸದಲ್ಲವಲ್ಲ. ಮಂಗಳೂರಿನ ಬೆಡಗಿ ಕನ್ನಡತಿ ಇವರು. ಇಲ್ಲಿಯ ಪರಿಚಯವೂ ಚೆನ್ನಾಗಿಯೇ ಇದೆ. ಇದೀಗ ಮೈಸೂರಿನ ಮೈಸೂರು ಪಾಕ್​ ಮತ್ತು ಇತರ ಖಾದ್ಯಗಳನ್ನು ತಮ್ಮ ತಂಡದ ಜೊತೆ ಸವಿದಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಅವರು ತಿನ್ನುವುದನ್ನು ನೋಡುತ್ತಿದ್ದರೆ, ನೋಡುಗರಿಗೆ ಬಾಯಲ್ಲಿ ನೀರು ಬರುವುದಂತೂ ದಿಟ. 

ಶಿಲ್ಪಾ ಶೆಟ್ಟಿ ಪತಿ ಸಪರೇಟ್‌ ಆಗಿದ್ದು ಯಾಕೆ? ವಿಡಿಯೋ ಮೂಲಕ ಮೌನ ಮುರಿದ ರಾಜ್‌ ಕುಂದ್ರಾ!

click me!