ರಸ್ತೆ ಬದಿ ಆಹಾರ ಮಾರಿ ಕೋಟ್ಯಾಧಿಪತಿಯಾದ ವ್ಯಕ್ತಿ, BMW ಕಾರಿನಲ್ಲ ಬಂದು ಫುಡ್‌ ಸರ್ವ್‌ ಮಾಡ್ತಾರೆ!

By Vinutha Perla  |  First Published Feb 11, 2024, 10:36 AM IST

ಸ್ಟ್ರೀಟ್‌ಫುಡ್ ಅಂದ್ರೆ ಸಾಕು ಎಲ್ಲರೂ ಬಾಯಿ ಚಪ್ಪರಿಸಿಕೊಂಡು ತಿನ್ತಾರೆ. ಅದರಲ್ಲೂ ಭಾರತದಲ್ಲಿ ಸ್ಟ್ರೀಟ್‌ಫುಡ್‌ಗೆ ಡಿಮ್ಯಾಂಡ್ ತುಸು ಹೆಚ್ಚಾಗಿಯೇ ಇದೆ. ಹೀಗೆಯೇ ಸಣ್ಣದಾಗಿ ಸ್ಟ್ರೀಟ್‌ಫುಡ್ ಸ್ಟಾಲ್ ಆರಂಭಿಸಿದಾತ ಈಗ ಹಲವು ಕೋಟಿಗಳ ಒಡೆಯ. BMW ಕಾರಿನಲ್ಲಿ ಬಂದು ಬೀದಿ ಬದಿ ಆಹಾರಗಳನ್ನು ಮಾರ್ತಾನೆ. ಆತನ ಬಗ್ಗೆ ಮಾಹಿತಿ ಇಲ್ಲಿದೆ.


ಭಾರತದಲ್ಲಿ, ಆಹಾರ ಉದ್ಯಮವು ವೇಗವಾಗಿ ವಿಸ್ತರಿಸುತ್ತಿದೆ. ಜನರು ಯಾವಾಗಲೂ ಏನನ್ನಾದರೂ ತಿನ್ನಬೇಕೆಂದು ಬಯಸುತ್ತಾರೆ. ಹೀಗಾಗಿ ಹೊಟೇಲ್‌, ರೆಸ್ಟೋರೆಂಟ್ ಅಥವಾ ಸ್ಟ್ರೀಟ್‌ಫುಡ್‌ ಬಿಸಿನೆಸ್ ಯಾವುದೇ ಆಗಿರಲಿ ಎಲ್ಲವೂ ಲಾಭದಾಯಕವಾಗಿ ಪರಿಣಮಿಸುತ್ತದೆ. ಆಹಾರೋದ್ಯಮದಲ್ಲಿ ಬಹಳಷ್ಟು ಮಂದಿ ಕೋಟಿಗಟ್ಟಲೆ ಸಂಪಾದಿಸುತ್ತಿದ್ದಾರೆ. ಹಾಗೆಯೇ ಬೀದಿ ಬದಿ ಅಂಗಡಿ ಹಾಕ್ಕೊಂಡವರು ಸೋತ ಉದಾಹರಣೆ ಕಡಿಮೆ. ದೆಹಲಿಯಲ್ಲೊಬ್ಬ ವ್ಯಕ್ತಿ ಬೀದಿ ಬದಿ ಆಹಾರವನ್ನು ಮಾರಿ ಕೋಟ್ಯಾಧಿಪತಿಯಾಗಿದ್ದಾನೆ. ದೈನಂದಿನ ಜೀವನದಲ್ಲಿ ಖರ್ಚು ಸರಿದೂಗಿಸಲು ಸ್ಟ್ರೀಟ್‌ಫುಡ್ ಸ್ಟಾಲ್ ಆರಂಭಿಸಿದಾತ ಈಗ ಹಲವು ಕೋಟಿಗಳ ಒಡೆಯ. BMW ಕಾರಿನಲ್ಲಿ ಬಂದು ಬೀದಿ ಬದಿ ಆಹಾರಗಳನ್ನು ಮಾರುತ್ತಾನೆ.

ದೆಹಲಿಯ ನೆಹರೂ ಪ್ಲೇಸ್‌ನಲ್ಲಿರುವ ಪ್ರಸಿದ್ಧ ಶರ್ಮಾ ಚಾಟ್ ತುಂಬಾ ಹೆಸರುವಾಸಿಯಾಗಿದೆ. ಇಲ್ಲಿಯೇ ಶರ್ಮಾಜಿ ದಹಿ ಭಲ್ಲ ಮಾರಾಟ ಮಾಡಿ ಕೋಟ್ಯಂತರ ರೂ. ಗಳಿಸುತ್ತಾರೆ. ಕೋಟ್ಯಾಧಿಪತಿ ದಹಿ ಭಲ್ಲೆ ವಾಲಾ ಶರ್ಮಾಜಿ, ಕರೋಡ್‌ಪತಿ ಚಾಟ್‌ವಾಲಾ ಎಂದೇ ಪ್ರಸಿದ್ಧರಾಗಿದ್ದಾರೆ.

Latest Videos

undefined

240 ಕೋಟಿಯ ಏರ್‌ಬಸ್‌, 451 ಕೋಟಿಯ ನೆಕ್ಲೇಸ್‌; ಅಂಬಾನಿ ಫ್ಯಾಮಿಲಿ ಕೊಡೋ ಗಿಫ್ಟ್ಸ್ ಸಿಕ್ಕಾಪಟ್ಟೆ ಕಾಸ್ಟ್ಲೀ!

BMW ಕಾರಿನಲ್ಲಿ ಬಂದು ಫುಟ್‌ಪಾತ್‌ನಲ್ಲಿ ದಹಿ ಪೂರಿ ಮಾರೋ ವ್ಯಾಪಾರಿ
ಶರ್ಮಾ ಜಿ ಚಾಟ್ ಭಂಡಾರ್ ತನ್ನ ಶುಚಿ-ರುಚಿ ತಿನಿಸಿಗೆ ಹೆಚ್ಚು ಫೇಮಸ್ ಆಗಿದೆ. ದಹಿ ಭಲ್ಲದ ವಿಶಿಷ್ಟವಾದ ಸುವಾಸನೆಯಿಂದಾಗಿ ಆಹಾರಪ್ರೇಮಿಗಳು ೀ ಚಾಟ್‌ನ್ನು ತುಂಬಾ ಇಷ್ಟಪಡುತ್ತಾರೆ. ತಮ್ಮ  BMW ಕಾರಿನಲ್ಲಿ ದಹಿ ಪೂರಿಗಳನ್ನು ತಂದು ಶರ್ಮಾ ಚಾಟ್ಸ್ ಮಾಡಿ ಮಾರುತ್ತಾರೆ. ದಿನಕ್ಕೆ ನೂರಾರು ದಹಿ ಭಲ್ಲಾಗಳನ್ನು ಮಾರಿ ಈಗ ಕೋಟ್ಯಾಧಿಪತಿಯಾಗಿದ್ದಾರೆ. ಜನರು ಅವರನ್ನು ಕರೋಡ್‌ಪತಿ ಭಲ್ಲಾವಾಲಾ ಎಂದೂ ಕರೆಯುತ್ತಾರೆ.

ಶರ್ಮಾ ಜಿಯವರ ಚಾಟ್ ತುಂಬಾ ರುಚಿಯಾಗಿರುವುದರಿಂದ ಇಲ್ಲಿ ಯಾವಾಗಲೂ ಜನರ ಸಾಲು ಇರುತ್ತದೆ. ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಳ್ಳುವ ಬದಲು, ಶರ್ಮಾ, ತಮ್ಮ ಕಾರಿನಲ್ಲೇ ಪರಿಕರಗಳನ್ನು ಇಟ್ಟುಕೊಳ್ಳುತ್ತಾರೆ. ಆಹಾರ ಸ್ಟ್ಯಾಂಡ್‌ನ್ನು ಹೊಂದಿಸಲು ಚಿಕ್ಕ ಟೇಬಲ್ ಬಳಸುತ್ತಾರೆ. ಮೊಸರು, ಐಸ್, ಮಸಾಲೆ, ಪೂರಿಗಳನ್ನು ಮೊದಲೇ ಸಿದ್ಧಪಡಿಸಿ ತಂದುಕೊಳ್ಳುತ್ತಾರೆ. ನೆಹರೂ ಪ್ಲೇಸ್‌ನಲ್ಲಿ ಶರ್ಮಾಜಿ ಟೇಬಲ್‌ನಲ್ಲಿ ಪಾತ್ರೆಯನ್ನು ಇಟ್ಟು ರುಚಿಕರವಾದ ದಹಿ ಭಲ್ಲಾವನ್ನು ಸರ್ವ್ ಮಾಡುತ್ತಾರೆ. 

ಬರೋಬ್ಬರಿ 7000 ಕೋಟಿ ಮೌಲ್ಯದ ಸಂಸ್ಥೆ ಸ್ಥಾಪಿಸಿ, ತನ್ನದೇ ಕಂಪನಿಯಿಂದ ವಜಾಗೊಂಡ ಮಹಿಳೆ!

ಕೇವಲ 2 ರೂ.ಗೆ ಮಾರಾಟವಾಗ್ತಿದ್ದ ದಹಿ ಭಲ್ಲಾ, ಈಗ 40 ರೂ.
ಈ ಫುಡ್ ಸ್ಟ್ಯಾಂಡ್ ಅನ್ನು 1989ರಿಂದ ಮುಕೇಶ್ ಕುಮಾರ್ ಶರ್ಮಾ ನಿರ್ವಹಿಸುತ್ತಿದ್ದಾರೆ. ಈ ಟೇಸ್ಟೀ ದಹಿ ಭಲ್ಲಾಗೆ ವರ್ಷಗಳ ಪರಂಪರೆಯಿದೆ. ಟೇಸ್ಟೀ ಚಾಟ್ಸ್‌ನ್ನು ಸವಿಯಲು ಜನರು ಹಲವೆಡೆಯಿಂದ ಇಲ್ಲಿಗೆ ಆಗಮಿಸುತ್ತಾರೆ. ವರ್ಷಗಳ ಹಿಂದೆ ದಹಿ ಭಲ್ಲಾವನ್ನು ಒಂದು ಪ್ಲೇಟ್ ಗೆ ಕೇವಲ 2 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಈಗ 40 ರೂ.ಗೆ ಮಾರಾಟವಾಗ್ತಿದೆ. ಶರ್ಮಾಜೀ ವರ್ಷದಿಂದ ವರ್ಷಕ್ಕೆ ಹೆಚ್ಚು ಲಾಭವನ್ನು ಗಳಿಸಿ ಕೋಟ್ಯಾಧಿಪತಿಗಳಾಗಿದ್ದಾರೆ.

click me!