ಬಾಯಲ್ಲಿ ನೀರೂರಿಸೋ ಟೇಸ್ಟಿ ಬೆಳ್ಳುಳ್ಳಿ ಕಬಾಬ್‌, ವೀಕೆಂಡ್‌ಗೆ ಈ ಟ್ರೆಂಡಿಂಗ್ ರೆಸಿಪಿ ಟ್ರೈ ಮಾಡಿ

By Vinutha Perla  |  First Published Feb 10, 2024, 12:32 PM IST

ಸೋಷಿಯಲ್ ಮೀಡಿಯಾದಲ್ಲಿ ಸದ್ಯ ಸಖತ್ ಟ್ರೆಂಡ್ ಆಗ್ತಿರೋದು ಬೆಳ್ಳುಳ್ಳಿ ಕಬಾಬ್‌. ಹೀಗಿರುವಾಗ ಇಷ್ಟು ಟ್ರೆಂಡ್ ಆಗ್ತಿರೋಫುಡ್‌ ನೀವು ಮನೇಲಿ ಟ್ರೈ ಮಾಡದಿದ್ರೆ ಹೇಗೆ..ಹೇಗೋ ವೀಕೆಂಡ್, ನಾನ್‌ವೆಜ್‌ ತಿನ್ಬೇಕು ಅನಿಸ್ತಿರುತ್ತೆ. ಸಿಂಪಲ್ ಆಗಿರೋ ಈ ಬೆಳ್ಳುಳ್ಳಿ ಕಬಾಬ್‌ ರೆಸಿಪೀನ ಟ್ರೈ ಮಾಡಿ


ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚಿಗೆ ಸಖತ್ ಸೆನ್ಸೇಶನ್ ಆಗಿರೋ ವಿಚಾರಗಳಲ್ಲೊಂದು ಬೆಳ್ಳುಳ್ಳಿ ಕಬಾಬ್‌. ಸಾಮಾಜಿಕ ಜಾಲತಾಣಗಳಲ್ಲಿ ಬೆಳ್ಳುಳ್ಳಿ ಕಬಾಬ್‌ ವಿಚಾರ ಸಖತ್ ಟ್ರೆಂಡ್ ಆಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಯಾವಾಗ ನೋಡಿದರೂ ಕಾಣಿಸುವುದು ನಿಮ್ಮನೆ ಚಂದ್ರು ಬೆಳ್ಳುಳ್ಳಿ ಕಬಾಬ್ ವಿಡಿಯೋ. ವೆರೈಟಿ ವೆರೈಟಿ ಸಾಂಬಾರ್, ರಸಂ, ಚಾಪ್ಸ್‌ ಮತ್ತು ಡ್ರೈ ಐಟಂ ಮಾಡುವುದರಲ್ಲಿ ಚಂದ್ರು ಸಖತ್ ಫೇಮಸ್‌. ಇತ್ತೀಚಿಗೆ ಚಂದ್ರು ಸರಳ ಅಡುಗೆ ರೆಸಿಪಿಗಳು ಸಖತ್ ವೈರಲ್ ಆಗುತ್ತಿದೆ. ಬೆಂಗಳೂರಿನಲ್ಲಿ ಮಾತ್ರವಲ್ಲ ದೇಶ ವಿದೇಶಗಳಲ್ಲಿ ಚಂದ್ರು ರೆಸಿಪಿ ಟ್ರೈ ಮಾಡಿ ಕರೆ ಮಾಡುತ್ತಿದ್ದಾರೆ. ಅಷ್ಟೇ ಸಾಲದು ಅಂತ ಅವರ ಹೋಟೆಲ್‌ಗೆ ಭೇಟಿ ನೀಡಿ ಸೆಲ್ಫಿ ತಗೋಳದು ಏನು ಎಲ್ಲಾ ಚಿಕನ್ ಮಟನ್ ಐಟಂ ಟ್ರೈ ಮಾಡೋದು ಏನು. ಜನನೋ ಜನ.

ಹೀಗಿರುವಾಗ ಇಷ್ಟು ಟ್ರೆಂಡ್ ಆಗ್ತಿರೋ ಈ ಬೆಳ್ಳುಳ್ಳಿ ಕಬಾಬ್‌ನ್ನು ನೀವು ಮನೇಲಿ ಟ್ರೈ ಮಾಡದಿದ್ರೆ ಹೇಗೆ..ಹೇಗೋ ವೀಕೆಂಡ್, ನಾನ್‌ವೆಜ್‌ ತಿನ್ಬೇಕು ಅನಿಸ್ತಿರುತ್ತೆ. ಸಿಂಪಲ್ ಆಗಿರೋ ಈ ಬೆಳ್ಳುಳ್ಳಿ ಕಬಾಬ್‌ ರೆಸಿಪೀನ ಟ್ರೈ ಮಾಡಿ.

Tap to resize

Latest Videos

undefined

ಸಂಡೇ ಸ್ಪೆಷಲ್‌, ಮಂಗಳೂರಿನ ಟೇಸ್ಟೀ ಟೇಸ್ಟೀ ಚಿಕನ್ ಸುಕ್ಕಾ ಟ್ರೈ ಮಾಡಿ

ಬೇಕಾದ ಪದಾರ್ಥಗಳು
ಚಿಕನ್‌
ಜೋಳದ ಹಿಟ್ಟು
ಮೈದಾ
ಅಕ್ಕಿ ಹಿಟ್ಟು
ಎಣ್ಣೆ
ಮೊಟ್ಟೆ 
ಮೊಸರು
ಕಸ್ತೂರಿ ಮೇಥಿ

ಪೇಸ್ಟ್ ಮಾಡಲು ಬೇಕಾದ ಪದಾರ್ಥಗಳು
ಶುಂಠಿ
ಚಕ್ಕೆ
ಲವಂಗ
ಕರಿಬೇವು
ಹಸಿಮೆಣಸು

Chicken Recipes: ಜಗತ್ತಿನ ಅತ್ಯುತ್ತಮ ಚಿಕನ್ ರೆಸಿಪಿ ಯಾವುದು ಗೊತ್ತಾ?

ಮಾಡುವ ವಿಧಾನ
-ಪಾತ್ರೆಗೆ ಅಕ್ಕಿಹಿಟ್ಟು, ಜೋಳದ ಹಿಟ್ಟು, ಮೈದಾ ಹಿಟ್ಟು, ಅಕ್ಕಿ ಹಿಟ್ಟು, ಕಡಲೇಹಿಟ್ಟು, ಕಸ್ತೂರಿ ಮೇಥಿ, ಎಣ್ಣೆ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಬೇಕು.

-ನಂತರ ಶುಂಠಿ, ಚಕ್ಕೆ, ಕರಿಬೇವು, ಕರಿಮೆಣಸು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. 

-ನಂತರ ರುಬ್ಬಿದ ಮಸಾಲೆ ಹಾಗೂ ಮಿಕ್ಸ್ ಮಾಡಿಕೊಂಡ ಮಸಾಲೆಯನ್ನು ಮಿಕ್ಸ್‌ ಮಾಡಿ ಒಂದು ಮೊಟ್ಟೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

-ಈಗಾಗಲೇ ತಯಾರಿಸಿದ ಮಿಶ್ರಣಕ್ಕೆ ಚಿಕನ್ ಹಾಕಿ ರುಬ್ಬಿದ ಮಸಾಲೆ, ಉಪ್ಪು, ಅರಿಶಿನ ಹಾಕಿ ಮಿಶ್ರಣ ಮಾಡಿ ಅರ್ಧ ಗಂಟೆ ಹಾಗೆಯೇ ಇಟ್ಟುಕೊಳ್ಳಬೇಕು. 

-ಈಗ ಕಾದ ಎಣ್ಣೆಗೆ ಹಾಕಿ ಇದನ್ನು ರೋಸ್ಟ್ ಮಾಡಿದರೆ ಬಿಸಿಬಿಸಿ ಬೆಳ್ಳುಳ್ಳಿ ಕಬಾಬ್ ಸವಿಯಲು ಸಿದ್ಧ.

click me!