
ಬೆಳಿಗ್ಗೆ ಎದ್ದು ಒಂದು ಬೆಳ್ಳುಳ್ಳಿ ಜಗಿದು ನೀರು ಕುಡಿದ್ರೆ ಆರೋಗ್ಯ ಸುಧಾರಿಸುತ್ತೆ ಎನ್ನಲಾಗಿದೆ. ಈ ಬೆಳ್ಳುಳ್ಳಿ ಬರೀ ನಿಮ್ಮ ಆರೋಗ್ಯವನ್ನು ಕಾಪಾಡೋದು ಮಾತ್ರವಲ್ಲ ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಬಹುತೇಕ ಎಲ್ಲ ಮಸಾಲೆ ಖಾದ್ಯಗಳಲ್ಲಿ ಬೆಳ್ಳುಳ್ಳಿ ಬಳಕೆಯಾಗುತ್ತದೆ. ಪ್ರತಿಯೊಬ್ಬರ ಮನೆಯಲ್ಲಿ ಬೆಳ್ಳುಳ್ಳಿಯನ್ನು ನೀವು ನೋಡ್ಬಹುದು. ಸದ್ಯ ಮಾರುಟ್ಟೆಯಲ್ಲಿ ಬೆಳ್ಳುಳ್ಳಿ ಬೆಲೆ ಗಗನಕ್ಕೇರಿದೆ. ಅದೇನೇ ಇರಲಿ, ಹಿಂದೆ ಒಂದು ದೇಶದಲ್ಲಿ ಬೆಳ್ಳುಳ್ಳಿಯನ್ನು ನೌಕರರಿಗೆ ಸಂಬಳ ರೂಪದಲ್ಲಿ ನೀಡುತ್ತಿದ್ದರು.
ಬೆಳ್ಳುಳ್ಳಿ (Garlic) ಗೆ ಪುರಾತನ ನಂಟಿದೆ. ಬೆಳ್ಳುಳ್ಳಿಯನ್ನು 5,000 ವರ್ಷಗಳ ಹಿಂದೆಯೇ ಬೆಳೆಯಲು ಶುರು ಮಾಡಿದ್ದರು. ಬೆಳ್ಳುಳ್ಳಿಯನ್ನು ಮೆಡಿಟರೇನಿಯನ್ ಕರಾವಳಿಯಲ್ಲಿ ಸುಮೇರಿಯನ್ನರು ಇದನ್ನು ಬೆಳೆದಿದ್ದರು ಎನ್ನುವ ದಾಖಲೆ ಇದೆ. ಮಧ್ಯ ಏಷ್ಯಾ (Central Asia ) ದಿಂದ ಭಾರತಕ್ಕೆ ಬೆಳ್ಳುಳ್ಳಿ ಬಂದಿತ್ತು. ಅದೂ ಸಾವಿರಾರು ವರ್ಷಗಳ ಹಿಂದೆ. 4500 ವರ್ಷಗಳ ಹಿಂದೆ ಭಾರತ (India) ದಲ್ಲಿ ಬೆಳ್ಳುಳ್ಳಿ ಬೆಳೆಯಲಾಗ್ತಿತ್ತು ಎಂಬ ಮಾಹಿತಿ ಇತಿಹಾಸದಲ್ಲಿದೆ. ಸಿಂಧೂ ಕಣಿವೆಯ ಫರ್ಮಾನಾದಲ್ಲಿ ಬೆಳ್ಳುಳ್ಳಿ ಕಂಡು ಬಂದಿದೆ.
ಬಾಯಲ್ಲಿ ನೀರೂರಿಸೋ ಟೇಸ್ಟಿ ಬೆಳ್ಳುಳ್ಳಿ ಕಬಾಬ್, ವೀಕೆಂಡ್‌ಗೆ ಈ ಟ್ರೆಂಡಿಂಗ್ ರೆಸಿಪಿ ಟ್ರೈ ಮಾಡಿ
ಕ್ರಿಸ್ತ ಪೂರ್ವ 1325ರಲ್ಲಿ ಈಜಿಪ್ಟ್ ನಲ್ಲಿ ಬೆಳ್ಳುಳ್ಳಿ ಕಂಡು ಬಂದಿತ್ತಂತೆ. ಅದನ್ನು ಅತ್ಯಂತ ಎಚ್ಚರಿಕೆಯಿಂದ ಸಂಗ್ರಹಿಸಲಾಗಿತ್ತು. ಜನರು ಬೆಳ್ಳುಳ್ಳಿಯನ್ನು ಆಗ್ಲೇ ಔಷಧಿಗಳ ರೂಪದಲ್ಲಿ ಬಳಸುತ್ತಿದ್ದರು. ಪಿರಾಮಿಡ್‌ಗಳನ್ನು ನಿರ್ಮಿಸುವ ಕೆಲಸಗಾರರು ಮತ್ತು ಗುಲಾಮರಲ್ಲಿ ಇದು ತುಂಬಾ ಜನಪ್ರಿಯವಾಗಿತ್ತು, ಬೆಳ್ಳುಳ್ಳಿ ಇಲ್ಲದ ಕಾರಣ ಪಿರಾಮಿಡ್ ನಿರ್ಮಾಣವೇ ಬಂದ್ ಆಗಿತ್ತು. ಇಷ್ಟೇ ಅಲ್ಲ ಈಜಿಪ್ಟ್ ನಲ್ಲಿ ಪಿರಾಮಿಡ್ ನಿರ್ಮಾಣ ಮಾಡುವ ಕಾರ್ಮಿಕರಿಗೆ ಬೆಳ್ಳುಳ್ಳಿಯನ್ನು ಸಂಬಳದ ರೂಪದಲ್ಲಿ ನೀಡುತ್ತಿದ್ದರು. ಗ್ರೀಕ್ ಒಲಿಂಪಿಯನ್‌ಗಳಿಂದ ಹಿಡಿದು ರೋಮನ್ ಗ್ಲಾಡಿಯೇಟರ್‌ಗಳವರೆಗಿನ ಅನೇಕ ಕ್ರೀಡಾಪಟುಗಳು ತಮ್ಮ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೆಳ್ಳುಳ್ಳಿ ಸೇವನೆ ಮಾಡುತ್ತಿದ್ದರು ಎನ್ನುವ ವಿಷ್ಯ ಕೂಡ ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.
'ಸ್ತ್ರೀಯ ಸೆಕ್ಸ್ ಹೀಗಿರುತ್ತೆ....' ಇದನ್ನು ಹೇಳಿದವರು ಚಾಣಕ್ಯರಲ್ಲ, ವಾತ್ಸಾಯನನೂ ಅಲ್ಲ, ಮತ್ಯಾರು?
ಬೆಳ್ಳುಳ್ಳಿ ಮಹತ್ವದ ಬಗ್ಗೆ ಸಾವಿರಾರು ವರ್ಷಗಳ ಹಿಂದೆಯೇ ಜನರು ಅರಿತಿದ್ದರು. ಇದೇ ಕಾರಣಕ್ಕೆ ಅವರು ಬೆಳ್ಳುಳ್ಳಿ ಬೆಳೆ ಬೆಳೆಯಲು ಶುರು ಮಾಡಿದ್ದರು. ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಇದ್ರ ಕೃಷಿ ಶುರುವಾಗಿತ್ತು. ಕ್ರಿಸ್ತಪೂರ್ವ 4000ರ ಬೆಳ್ಳುಳ್ಳಿಯ ಅತ್ಯಂತ ಹಳೆಯ ಅವಶೇಷಗಳು ಇಸ್ರೇಲ್‌ನ ಐನ್ ಗೆಡಿಯಲ್ಲಿನ ಗುಹೆಯಲ್ಲಿ ಸಿಕ್ಕಿತ್ತು.
ಈಜಿಪ್ಟ್ ನಲ್ಲಿ ಬೆಳ್ಳುಳ್ಳಿಗೆ ಹೆಚ್ಚು ಮಹತ್ವ ನೀಡಲಾಗಿತ್ತು. ಇದೇ ಕಾರಣಕ್ಕೆ ಬೆಳ್ಳುಳ್ಳಿಯನ್ನು ಮಮ್ಮಿಗಳ ಜೊತೆ ಸಂರಕ್ಷಣೆ ಮಾಡಲಾಗುತ್ತದೆ. ಕ್ರಿಸ್ತಪೂರ್ವ ಆರನೇ ಶತಮಾನದ ಅವಧಿಯಲ್ಲಿ ಸಂಕಲಿಸಲಾದ ಜೊರಾಸ್ಟ್ರಿಯನ್ ಪವಿತ್ರ ಬರಹಗಳಲ್ಲೂ ಬೆಳ್ಳುಳ್ಳಿ ಬಗ್ಗೆ ಮಾಹಿತಿ ಇದೆ.
ಬೆಳ್ಳುಳ್ಳಿಯನ್ನು ಭಾರತದಲ್ಲಿ ಮಾತ್ರವಲ್ಲ ಅನೇಕ ದೇಶಗಳಲ್ಲಿ ಔಷಧಿ ರೂಪದಲ್ಲಿ ಬಳಸಲಾಗುತ್ತದೆ. ಈಜಿಪ್ಟ್, ಜಪಾನ್, ಚೀನಾ, ರೋಮ್ ಮತ್ತು ಗ್ರೀಸ್‌ನಂತಹ ವಿವಿಧ ಸಂಸ್ಕೃತಿಗಳಲ್ಲಿ ಬೆಳ್ಳುಳ್ಳಿಯನ್ನು ಸಾಂಪ್ರದಾಯಿಕ ಔಷಧಕ್ಕಾಗಿ ಬಳಸಲಾಗುತ್ತದೆ. ವಿಯೆಟ್ನಾಮೀಸ್, ಥಾಯ್, ಮ್ಯಾನ್ಮಾರ್, ಲಾವೊ, ಕಾಂಬೋಡಿಯನ್, ಸಿಂಗಾಪುರ್ ಮತ್ತು ಚೈನೀಸ್ ಪಾಕಶಾಸ್ತ್ರದಲ್ಲಿ ಹಸಿರು ಬೆಳ್ಳುಳ್ಳಿ ಹೆಚ್ಚು ಜನಪ್ರಿಯತೆಗಳಿಸಿದೆ. ಇಲ್ಲಿ ಬೆಳ್ಳುಳ್ಳಿಯನ್ನು ಕತ್ತರಿಸಿ, ಹುರಿದು ಸೇವನೆ ಮಾಡಲಾಗುತ್ತದೆ. ಇದಲ್ಲದೆ ಮಧ್ಯಪ್ರಾಚ್ಯ ಮತ್ತು ಅರೇಬಿಕ್ ಅಡುಗೆಯಲ್ಲೂ ಬೆಳ್ಳುಳ್ಳಿ ಇರ್ಲೇಬೇಕು.
ಬೆಳ್ಳುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯವನ್ನು ಕಾಪಾಡುತ್ತದೆ. ಭಾರತದಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತಿದೆ. ಬೆಳ್ಳುಳ್ಳಿ ಉತ್ಪಾದನೆಯು 2.16 ಲಕ್ಷ ಟನ್‌ಗಳಿಂದ 8.34 ಲಕ್ಷ ಟನ್‌ಗಳಿಗೆ ಏರಿಕೆಯಾಗಿದೆ. ಆದ್ರೂ ಭಾರತದಲ್ಲಿ ಬಳಸುವ ಬೆಳ್ಳುಳ್ಳಿ ಪ್ರಮಾಣ, ಉತ್ಪಾದನೆಗಿಂತ ಕಡಿಮೆ ಇದೆ. ಹಾಗಾಗಿಯೇ ಬೆಳ್ಳುಳ್ಳಿ ಆಮದಾಗುತ್ತಿದ್ದು, ಬೆಲೆಯಲ್ಲಿ ಏರಿಕೆಯಾಗಿದೆ. ಚೀನಾ ಬೆಳ್ಳುಳ್ಳಿ ಬೆಳೆಯಲ್ಲಿ ಮೊದಲ ಸ್ಥಾನದಲ್ಲಿದೆ. ಒಟ್ಟು ಬೆಳ್ಳುಳ್ಳಿಯ ಶೇಕಡಾ 73.8 ರಷ್ಟು ಪ್ರಮಾಣವನ್ನು ಚೀನಾದಲ್ಲಿ ಬೆಳೆಯಲಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.