
ಬೆಂಗಳೂರಲ್ಲಿ ಉತ್ತರ ಭಾರತದ ಹೋಟೆಲ್, ರೆಸ್ಟೋರೆಂಟ್‌ಗಳ ರುಚಿ ನೋಡಿ ನೋಡಿ ಸಾಕಾಗಿದೆ, ಹೊಸ ರುಚಿ ಬಗ್ಗೆ ಸಿಲಿಕಾನ್ ಸಿಟಿ ಮಂದಿ ಹುಡುಕುತ್ತಲೇ ಇರ್ತಾರೆ. ಉತ್ತರ ಕರ್ನಾಟಕ, ಅದರಲ್ಲೂ ಬೆಳಗಾವಿ ಭಾಗದ ಸವಾಜಿ ಖಾನಾವಳಿಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇದರ ಪರಿಣಾಮವಾಗಿ ಸವಾಜಿ ಖಾನಾವಳಿಯ ಘಮ ರುಚಿ ಉತ್ತರ ಕರ್ನಾಟಕದಿಂದ ಬೆಂಗಳೂರಿಗೂ ಹರಡಿದೆ. ಈಗ ಪ್ರತಿಯೊಬ್ಬರು ಗೂಗಲ್‌ನಲ್ಲಿ 'Savji khanavali near me' ಅಂತ ಹುಡುಕುವವರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಬೆಂಗಳೂರಲ್ಲಿ ಸವಾಜಿ ಖಾನಾವಳಿ ಸಿಗುವುದು ಕೂಡ ಅಪರೂಪ .
ಸಾವಜಿ ಖಾನಾವಳಿ ವಿಶೇಷ ಅಂದ್ರೇನೆ ಅತಿ ಖಾರದ ಮತ್ತು ಮಸಾಲೆಯುಕ್ತ ಚಿಕನ್ ಮಟನ್‌ಗೆ ಎಗ್ ಶೇರ್ವಾಗೆ ಹೆಸರುವಾಸಿ. ಸಾವಜಿ ಖಾನಾವಳಿಗಳಲ್ಲಿ ಮುಖ್ಯವಾಗಿ ಮಟನ್ ಚಿಕನ್ ಸಿಕ್ಕರೂ ಕೆಲವು ಸಾವಜಿ ಖಾನಾವಳಿಗಳಲ್ಲಿ ಮೊಟ್ಟೆ ಶೇರ್ವ. ಮಸಾಲೆ, ಸಾಂಬ್ರಾಣಿ ರುಚಿ.ಜೋಳದ ರೊಟ್ಟಿ, ಅನ್ನ ಆಹಾ ಎಲ್ಲ ಸೇರಿಸಿ ತಿಂದರೆ ಸ್ವರ್ಗಕ್ಕೆ ಮೂರೇ ಗೇಣು ಅಂತೀರಿ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಅನಿಸುವ ರುಚಿ. ಇಲ್ಲಿ ಮೊಟ್ಟೆಯೇ ಮೇನ್ ಕಾಂಬಿನೇಷನ್.
ಇಂದು ನಾವು ಮನೆಯಲ್ಲೇ ಸವಾಜಿ ಹೋಟೆಲ್ ಸ್ಟೈಲ್, ಅದರಲ್ಲೂ ಬಾಯಲ್ಲಿ ನೀರೂರಿಸುವ ಎಗ್ ಶೋರ್ವಾ ಮಾಡೋಣ. ಇದರ ವಿಶೇಷತೆ ಎಂದರೆ ನೀವಿದನ್ನ ಬಿರಿಯಾನಿ, ಪರೋಟ, ಚಪಾತಿ, ದೋಸೆ, ಜೋಳದ ರೊಟ್ಟಿ ಅಥವಾ ಅನ್ನದ ಜೊತೆಗೆ ಈ ಶೋರ್ವಾ ಸೂಪರ್ ಕಾಂಬಿನೇಷನ್ ಇರುತ್ತೆ.
ತಯಾರಿಸುವ ಹಂತ:
ಮೊದಲು 5–6 ಮೊಟ್ಟೆಗಳನ್ನು ಚೆನ್ನಾಗಿ ಬೇಯಿಸಿ ಸಿಪ್ಪೆ ಸುಳಿದು ರೆಡಿ ಮಾಡಿಟ್ಕೊಳ್ಳಿ. ನಂತರ ಪ್ರತಿಯೊಂದು ಮೊಟ್ಟೆಯನ್ನ ಚಾಕುವಿನಿಂದ ಸಣ್ಣ ಸಣ್ಣದಾಗಿ(ಪೀಸ್ ಮಾಡುವುದು ಬೇಡ) ಕಟ್ ಹಾಕಿ. ಹೀಗೆ ಮಾಡಿದರೆ ಮಸಾಲೆ ಚೆನ್ನಾಗಿ ಒಳಗೆ ಸೇರುತ್ತದೆ.
ಹಂತ 2: ಮಸಾಲೆ ಫ್ರೈ
ಗ್ಯಾಸ್ ಹಚ್ಚಿಕೊಳ್ಳಿ, ಸಣ್ಣಗೆ ಬೆಂಕಿಯ ಉರಿ ಇಟ್ಕೊಳ್ಳಿ. ಒಂದು ಪಾತ್ರೆಗೆ ಎಷ್ಟು ಬೇಕಾಗುತ್ತೆ ಅಷ್ಟು ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಸಾಸಿವೆ, ಜೀರಿಗೆ, ದಾಲ್ಚಿನ್ನಿ, ಲವಂಗ, ಏಲಕ್ಕಿ ಹಾಕಿ. ನಂತರ ಸಣ್ಣದಾಗಿ ಕತ್ತರಿಸಿದ ಈರುಳ್ಳಿ ಹಾಕಿ ಅದು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಅದಾದ ಬಳಿಕ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ.
ಮೂರನೇ ಹಂತ ಗ್ರೇವಿ ತಯಾರಿ
ಈಗ ಸಣ್ಣದಾಗಿ ಕತ್ತರಿಸಿದ ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಣ್ಣೆ ಬಿಡುವವರೆಗೆ ಹುರಿಯಿರಿ. ಈಗ ಶೇರ್ವಾ ರೆಡಿ ಆಗಿರುತ್ತೆ.
ಈಗ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಕುದಿಯಲು ಬಿಡಿ. ಶೇರ್ವಾ ಸ್ವಲ್ಪ ತೆಳುವಾಗಿದ್ದರೆ ಹೋಟೆಲ್ ಸ್ಟೈಲ್ ರುಚಿ ಬರುತ್ತದೆ.
ಈಗ ಕಟ್ ಮಾಡಿಟ್ಟ ಬೇಯಿಸಿದ ಮೊಟ್ಟೆಗಳನ್ನು ಗ್ರೇವಿಗೆ ಹಾಕಿ 8–10 ನಿಮಿಷ ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. ಇದರಿಂದ ಮಸಾಲೆ ಮೊಟ್ಟೆಯೊಳಗೆ ಚೆನ್ನಾಗಿ ಸೇರಿಕೊಳ್ಳುತ್ತದೆ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಚಿಟಿಕೆ ಕರಿಮೆಣಸಿನ ಪುಡಿ ಹಾಗೂ ಬೇಕಾದರೆ ಸ್ವಲ್ಪ ತುಪ್ಪ ಹಾಕಿದರೆ ರುಚಿ ಇನ್ನಷ್ಟು ಹೆಚ್ಚಾಗುತ್ತದೆ. ಬಿಸಿ ಬಿಸಿ ಎಗ್ ಶೇರ್ವಾವನ್ನು ಚಪಾತಿ, ರೊಟ್ಟಿ, ಬಿರಿಯಾನಿ ಜೊತೆಗೆ ಸವಿದರೆ ಮತ್ತೆ ಮಧ್ಯಾಹ್ನನಕ್ಕೆ ಪದೇಪದೆ ಸಮಯ ನೋಡುವಂತಾಗುತ್ತೆ.
ಈ ರೆಸಿಪಿ ಇಷ್ಟವಾದರೆ ನಿಮ್ಮ ನೆರೆಯವರಿಗೂ ಶೇರ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.