ಲಾಬ್‌ಸ್ಟರ್ (ಕಡಲ ಏಡಿ) ಯನ್ನು ಆಹಾರವಾಗಿ ಇಷ್ಟಪಡುವವರು ಇದ್ದಂತೆಯೇ ಅಸಹ್ಯ ಪಡುವವರೂ ತುಂಬಾ ಮಂದಿ. ಈ ವಿಶಿಷ್ಟ ಫುಡ್ ಬಗ್ಗೆ ನಿಮಗಿವು ಗೊತ್ತಿರಲಿ...
ಲಾಬ್‌ಸ್ಟರ್ (Lobster) ಅಥವಾ ಕಡಲ ಏಡಿ ಇಂದು ಸುಲಭವಾಗಿ ದೊರೆಯದ, ದುಬಾರಿ ಆಹಾರ. ಫೈವ್‌ಸ್ಟಾರ್ (Fivestar) ಹೋಟೆಲ್‌ಗಳಲ್ಲಿ ಮೊದಲೇ ಆರ್ಡರ್ ಮಾಡಿದರೆ ದೊರೆಯಲೂಬಹುದು. ಭಾರತದಲ್ಲಿ ಮರ್ಧಯಮ ವರ್ಗದಲ್ಲಿ ಈ ಆಹಾರದ ಬಳಕೆ ಕಡಿಮೆಯಾದರೂ, ಶ್ರೀಮಂತರ ಹೈಫೈ ಊಟದ ಮೆನುವಿನ ಜೊತೆಗೆ ಇದು ಜೋಡಿಕೊಂಡಿರುತ್ತದೆ.
ಕಡಲ ಏಡಿ ಚಿಪ್ಪಿನ ಜೀವಿ. ಒಳಗೆ ಮೂಳೆ ರಕ್ತ ಏನೂ ಇರುವುದಿಲ್ಲ. ಬದಲಿಗೆ ಇದರ ಮಾಂಸ ನಾರು ನಾರಾಗಿರುತ್ತದೆ. ಈ ಚಿಪ್ಪುಗಳು ಕೊಂಚ ಗಟ್ಟಿಯಾಗಿದ್ದು ಬರಿಗೈಯಲ್ಲಿ ಒಡೆಯುವುದು ಕಷ್ಟ ಹಾಗೂ ಸಾಕಷ್ಟು ಹರಿತವಾಗಿರುವ ಕಾರಣ ಗಾಯವೂ ಆಗಬಹುದು, ಇವನ್ನು ಏನಿದ್ದರೂ ಉಪಕರಣಗಳನ್ನು ಉಪಯೋಗಿಸಿಯೇ ಒಡೆಯಬೇಕು. ಇವುಗಳನ್ನು ಒಡೆಯಲೆಂದೇ ಲಾಬ್‌ಸ್ಟರ್ ಫೋರ್ಕ್ಸ್ ಎಂಬ ಮುಳ್ಳು ಚಮಚ ಲಭ್ಯವಿದೆ. ಇವನ್ನು ಚೆನ್ನಾಗಿ ತೊಳೆದು ಚಿಪ್ಪಿನ ಸಹಿತವೇ ಅಡುಗೆ ಮಾಡಲಾಗುತ್ತದೆ. ತಿನ್ನುವಾಗ ಈ ಮುಳ್ಳುಚಮಚಗಳಿಂದ ಚಿಪ್ಪಿನ ಒಳಗಿರುವ ಮಾಂಸವನ್ನು ಹೊರತೆಗೆದು ತಿನ್ನಲಾಗುತ್ತದೆ.
ಇವನ್ನು ಬರಿಯ ನೀರಿನಲ್ಲಿ ಬೇಯಿಸಿದರೂ ಸಾಕು, ಹಾಗೇ ತಿನ್ನಬಹುದು. ಬೆಣ್ಣೆ, ನಿಂಬೆರಸ ಹಾಕಿಯೂ ತಿನ್ನಬಹುದು. ಸೂಪ್ (Soup) ಮಾಡಿ ಅಥವಾ ಸಾರು ಮಾಡಿಕೊಂಡೂ ತಿನ್ನಬಹುದು. ಭಾರತೀಯ ಅಡುಗೆಗಳಂತೆ ಮಸಾಲೆ ಸೇರಿಸಿಯೂ ಸವಿಯಬಹುದು. ಕೆಲವೆಡೆ ಗ್ರಿಲ್ ಮಾಡಿಯೂ ಕೊಡಲಾಗುತ್ತದೆ. ಇವುಗಳ ಮಾಂಸ ಅತಿ ಮೃದುವಾಗಿರುವ ಕಾರಣ ಅಲ್ಪ ಸಮಯದಲ್ಲಿಯೇ ಬೇಯುತ್ತದೆ. ಒಟ್ಟಾರೆ ಖಾದ್ಯ ತಯಾರಿಸಲು ಹತ್ತು ನಿಮಿಷ ಸಾಕು. ಸಾಮಾನ್ಯವಾಗಿ ಇವುಗಳನ್ನು ಇಡಿಯಾಗಿಯೇ ಬೇಯಿಸಿ ತಿನ್ನುವಾಗ ಕತ್ತರಿಸಲಾಗುತ್ತದೆ. ಆಯ್ಕೆಗೆ ತಕ್ಕಂತೆ ಇವುಗಳ ಇಕ್ಕಳ ಮತ್ತು ಬಾಲವನ್ನು ಪ್ರತ್ಯೇಕವಾಗಿಯೇ ಬೇಯಿಸಿ ತಯಾರಿಸಬಹುದು.
ಬಡವರ ಆಹಾರ!
ನಿಮಗೆ ಗೊತ್ತೇ? ಇದು ಒಂದು ಕಾಲದಲ್ಲಿ ಬಡವರ ಆಹಾರ ಆಗಿತ್ತು. ಯುರೋಪ್ ಮತ್ತು ಅಮೆರಿಕದ ಕರಾವಳಿ ಪ್ರದೇಶಗಳಲ್ಲಿ ಇದು ಕರಾವಳಿ ವಾಸಿಗರ ಸರ್ವೇಸಾಮಾನ್ಯ ಆಹಾರ ಆಗಿತ್ತು. ಆದರೆ ಅಲ್ಲೂ, ಬಡವರು ಮಾತ್ರ ಅದನ್ನು ತಿನ್ನುತ್ತಿದ್ದರು. ಯಾಕೆಂದರೆ, ಆಗ ಲಾಬ್‌ಸ್ಟರ್‌ಗಳು ಹೇರಳವಾಗಿದ್ದವು ಮತ್ತು ಕಡಲ ತೀರಕ್ಕೆ ರಾಶಿ ರಾಶಿ ಬಂದು ಬೀಳುತ್ತಿದ್ದವು. ಕಡಿಮೆ ದರದಲ್ಲಿ ಸಿಗುತ್ತಿತ್ತು. ಇವುಗಳನ್ನು ಸುಲಭವಾಗಿ ಅರ್ಧ ಗಂಟೆಯೊಳಗೆ ಬೇಯಿಸಿ ತಿನ್ನಬಹುದಾದ್ದರಿಂದ, ಕಷ್ಟದ ಕೆಲಸಗಳಿಗೆ ಹೋಗುತ್ತಿದ್ದ ದುಡಿಮೆಗಾರರು ಇವನ್ನು ಶೀಘ್ರವಾಗಿ ಬೇಯಿಸಿ ತಿಂದು ಹೊರಟುಬಿಡುತ್ತಿದ್ದರು. ನಂತರ, ಒಳನಾಡುಗಳಿಂದ ಈ ಪ್ರದೇಶಕ್ಕೆ ರೈಲುಮಾರ್ಗಗಳನ್ನು ಹಾಕಿದಾಗ, ಅಲ್ಲಿಂದ ಕರಾವಳಿಗೆ ಬರುವ ಪ್ರವಾಸಿಗರಿಗೆ ಇದು ಇಲ್ಲಿನ ವಿಶೇಷ ಫುಡ್ ಎಂದು ರೈಲಿನಲ್ಲಿ ಲಾಬ್‌ಸ್ಟರ್ ಕೊಡತೊಡಗಿದರು. ಇದರ ರುಚಿಗೆ ಮನಸೋತವರು ನಂತರ ಇದನ್ನು ಒಳನಾಡಿಗೂ ತರಿಸಿ ತಿನ್ನತೊಡಗಿದರು. ಹೀಗೆ ರಫ್ತು ಶುರುವಾಯಿತು. ನಿಧಾನವಾಗಿ ಲಾಬ್‌ಸ್ಟರ್‌ಗಳು ಕಡಿಮೆಯಾದವು. ಮೊದಲಿನಂತೆ ತೀರಕ್ಕೆ ಬಂದು ಬೀಳುತ್ತಿರಲಿಲ್ಲ. ಹೀಗಾಗಿ ಇದರ ದರ ದುಬಾರಿಯಾಯಿತು.
undefined
ಸಮುದ್ರದ ಜಿರಳೆ!
ಈ ಲಾಬ್‌ಸ್ಟರ್ ಮಾಂಸವನ್ನು ಎಲ್ಲರೂ ಇಷ್ಡಪಡುತ್ತಾರೆ ಎಂದೇನಿಲ್ಲ. ಇದನ್ನು 'ಸಮುದ್ರದ ಜಿರಳೆ' ಎನ್ನುವವರೂ ಇದ್ದಾರೆ! ಇದು ಅತ್ತ ಕುರಕುರು ಸ್ಪೈಸಿಯಾಗಿಯೂ ಇರುವುದಿಲ್ಲ, ಚಿಕನ್ ಅಥವಾ ಮಟನ್‌ನಂತೆ ಜಗಿಯುವಂತೆಯೂ ಇರುವುದಿಲ್ಲ. ಇಡೀ ಜೀವಿಯನ್ನು ಹಾಗೇ ಬೇಯಿಸುವುದರಿಂದ, ಅದರಿಂದಲೇ ಮಾಂಸವನ್ನು ಚಮಚದಲ್ಲಿ ತೆಗೆದುಕೊಂಡು ತಿನ್ನವುದರಿಂದ, ತುಂಬಾ ಮಂದಿ ಹೇಸಿಗೆಪಟ್ಟುಕೊಳ್ಳುತ್ತಾರೆ ಕೂಡ. ಆದರೆ ಸ್ಟಾರ್‌ಗಳು ಈ ದುಬಾರಿ ಆಹಾರಕ್ಕೆ ಸ್ಟಾರ್ ವ್ಯಾಲ್ಯೂ ತಂದುಕೊಟ್ಟಿದ್ದಾರೆ.
ಬೇಸಿಗೆಯಲ್ಲಿ ತಿನ್ನೋಕೆ ಕಲ್ಲಂಗಡಿ ಒಳ್ಳೇದಾ ? ಕರಬೂಜ ಹಣ್ಣು ಒಳ್ಳೇದಾ ?
ಪ್ರೋಟೀನ್ ಸಮೃದ್ಧ ಆಹಾರ
ಕಡಲ ಏಡಿ ಕೇವಲ ರುಚಿಕರ ಮಾತ್ರವಲ್ಲ ಪ್ರೋಟೀನ್ (Proteine) ಸಮೃದ್ಧ ಆಹಾರವೂ ಆಗಿದೆ. ಜೊತೆಗೇ ಹಲವಾರು ಅಮೈನೋ ಆಮ್ಲಗಳಿದ್ದು ಇವು ಪ್ರೋಟೀನ್ ಉತ್ಪಾದನೆಗೆ ನೆರವಾಗುತ್ತವೆ. ವಿಶೇಷವಾಗಿ, ತೂಕ ಇಳಿಕೆಯ ಪ್ರಯತ್ನದಲ್ಲಿರುವ ವ್ಯಕ್ತಿಗಳಿಗೆ ಕಡಲ ಏಡಿ ಅತ್ಯುತ್ತಮ ಆಹಾರ. ಈ ಪ್ರೋಟೀನ್ ಜೀವ ರಾಸಾಯನಿಕ ಕ್ರಿಯೆಯನ್ನು ಚುರುಕುಗೊಳಿಸುವ ಜೊತೆಗೇ ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನೂ ಒದಗಿಸುತ್ತದೆ. ಹೆಚ್ಚು ಹೊತ್ತು ಹೊಟ್ಟೆ ತುಂಬಿರುವ ಭಾವನೆ ಮೂಡಿಸಿ ಅನಗತ್ಯ ಅಹಾರ ಸೇವನೆಯಿಂದ ತಡೆಯುತ್ತದೆ.
ಹೃದ್ರೋಗಗಳಿಂದ ರಕ್ಷಿಸಬಹುದು
ಈ ಉತ್ಪನ್ನದಲ್ಲಿರುವ 'ಐಕೋಸಪೆಂಟೇನೊಯಿಕ್' ಆಮ್ಲ ಅಥವಾ ಇಪಿಎ ಮತ್ತು 'ಡೊಕೊಸಾಹೆಕ್ಸೇನೊಯಿಕ್' ಆಮ್ಲ ಅಥವಾ ಡಿಎಚ್‌ಎ ಎಂಬ ಒಮೆಗಾ 3 ಕೊಬ್ಬಿನ ಆಮ್ಲಗಳು ಹೃದ್ರೋಗಗಳಿಂದ ರಕ್ಷಿಸಬಲ್ಲ ಗುಣ ಹೊಂದಿವೆ ಹಾಗೂ ಹಲವಾರು ಕಾಯಿಲೆಗಳ ವಿರುದ್ದ ತಡೆ ಒಡ್ಡುತ್ತವೆ. ಇವೆರಡೂ ಆಮ್ಲಗಳು ರಕ್ತದ ಒತ್ತಡವನ್ನು ಕಡಿಮೆಗೊಳಿಸಲು, ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟಗಳು ಕಡಿಮೆಯಾಗಲು ನೆರವಾಗುವ ಕಾರಣ ವೈದ್ಯರೂ ಒಮೆಗಾ 3 ಕೊಬ್ಬಿನ ಆಹಾರದ ಮೂಲಗಳಲ್ಲಿ ಲಾಬ್‌ಸ್ಟರ್ ಅನ್ನು ಪರಿಗಣಿಸುತ್ತಾರೆ. ಈ ಆಮ್ಲಗಳು ದೇಹದಲ್ಲಿ ಉರಿಯೂತದ ಪರಿಣಾಮವನ್ನು ತಡೆಯುತ್ತವೆ ಹಾಗೂ ಹೃದಯದ ಸಹಿತ ಹಲವು ಪ್ರಮುಖ ಅಂಗಗಳನ್ನು ಕಾಪಾಡುತ್ತವೆ.
Food Trend: ಐಸ್‌ಕ್ರೀಂ ಸೂಪ್ ನೂಡಲ್ಸ್ ಟೇಸ್ಟ್ ಮಾಡಿದ್ದೀರಾ ?
ಮಾನಸಿಕ ಆರೋಗ್ಯ ವೃದ್ದಿಸುತ್ತದೆ
ನಮ್ಮ ಜೀವಕೋಶಗಳ ಹೊರಪದರ ಮತ್ತು ವಿಶೇಷವಾಗಿ ಮೆದುಳಿನ ಜೀವಕೋಶಗಳ ಕಾರ್ಯನಿರ್ವಹಣೆಗೆ ಈ ಡಿ ಎಚ್ ಎ ಅತಿ ಅಗತ್ಯವಾಗಿ ಬೇಕಾಗಿರುವ ಅಮೈನೋ ಆಮ್ಲವಾಗಿದೆ. ಯಾವಾಗ ಈ ಒಮೆಗಾ 3 ಕೊಬ್ಬಿನ ಆಮ್ಲಗಳ ಕೊರತೆಯಾಯ್ತೋ ಆಗ ಮೆದುಳಿನ ಜೀವಕೋಶಗಳು ಸಾಯತೊಡಗುತ್ತವೆ. ಅಲ್ಜೀಮರ್ಸ್ ಕಾಯಿಲೆ, ಮರೆಗುಳಿತನ ಎದುರಾಗಲು ಇದು ಮುಖ್ಯ ಕಾರಣವಾಗಿದೆ. ಅಲ್ಲದೇ ಖಿನ್ನತೆ, ಉದ್ವೇಗ ಮೊದಲಾದ ಮಾನಸಿಕ ತೊಂದರೆಗಳೂ ಎದುರಾಗುತ್ತವೆ.
ಚಿನ್ನದ ಫ್ರೆಂಚ್ ಫ್ರೈಸ್ ಬಗ್ಗೆ ಕೇಳಿದ್ದೀರಾ..? ಒಂದು ಪ್ಲೇಟ್‌ಗೆ ಭರ್ತಿ 15000 ರೂ. !
ಆಹಾರದಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳಿದ್ದಷ್ಟೂ ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು. ಕಡಲೇಡಿಗಳಲ್ಲಿ ಇವು ಸಮೃದ್ಧವಾಗಿವೆ ಹಾಗೂ ವಿಟಮಿನ್ ಬಿ 12ನಂತಹ ಇತರ ಪೋಷಕಾಂಶಗಳೂ ಇವೆ. ಈ ಪೋಷಕಾಂಶದ ಕೊರತೆಯಿಂದಲೂ ಮೆದುಳಿಗೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು. ಆದ್ದರಿಂದ ಮೆದುಳು ಚುರುಕಾಗಲು ಹಾಗೂ ವೃದ್ದಾಪ್ಯದಲ್ಲಿಯೂ ಬುದ್ದಿ ಚುರುಕಾಗಿರಲು ಒಮೆಗಾ 3 ಕೊಬ್ಬಿನ ಆಮ್ಲಯುಕ್ತ ಅಹಾರಗಳನ್ನು, ವಿಶೇಷವಾಗಿ ಕಡಲೇಡಿಯನ್ನು ನಿಯಮಿತವಾಗಿ ಸೇವಿಸುವುದು ಒಳ್ಳೆಯದು.