ಬೆಣ್ಣೆಯ ಸಮೋಸಾ ವೀಡಿಯೋ ವೈರಲ್‌, ತಣ್ಣಗಿದ್ದಾಗಲೇ ತಿನ್ನೋಕೆ ಟೇಸ್ಟ್‌

By Suvarna News  |  First Published Mar 17, 2022, 2:17 PM IST

ಸಮೋಸಾ (Samosa) ಬಿಸಿ ಬಿಸಿಯಾಗಿದ್ರೆ ತಾನೇ ತಿನ್ನೋಕೆ ಟೇಸ್ಟ್‌. ಆದ್ರೆ ಅಲ್ಲ ಅಂತಿದ್ದಾರೆ ಮುಂಬೈ ಫುಡ್‌ ಲವರ್ಸ್‌. ಯಾಕಂದ್ರೆ ಇಲ್ಲಿ ಸದ್ಯ ಟ್ರೆಂಡ್ (Trend) ಆಗ್ತಿರೋದು ತಣ್ಣಗಿರೋ ಬೆಣ್ಣೆ ಲೇಪಿಸಿದ ಮ್ಯಾಗಿ (Maggi) ಸಮೋಸಾ. ಅರೆ ಏನಿದು ಅಂತ ಅಚ್ಚರಿಪಡ್ತಿದ್ದೀರಾ. ನ್ಯೂ ಫುಡ್ ಟ್ರೆಂಡ್ ಬಗ್ಗೆ ನೀವು ಕೂಡಾ ತಿಳ್ಕೊಳ್ಳಿ.


ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ. ಇಲ್ಲಿ ಆಯಾ ರಾಜ್ಯಕ್ಕೆ ಅಲ್ಲಿಯ ಭಾಷೆ, ಸಂಸ್ಕೃತಿ. ಆಚಾರ-ವಿಚಾರಗಳು ಇರುವ ಹಾಗೆಯೇ ಪ್ರತ್ಯೇಕವಾದ ಆಹಾರಪದ್ಧತಿಯೂ ಇದೆ. ಭಾರತೀಯರು ಪುರಾತನ ಕಾಲದಿಂದಲೂ ಆಹಾರಪ್ರಿಯರು. ವೆರೈಟಿ ವೆರೈಟಿ ಫುಡ್ (Food) ಮಾಡಿ ತಿನ್ನಲು ಇಷ್ಟಪಡುತ್ತಾರೆ. ಹಳೆಯ ಕಾಲದಿಂದಲೂ ಸೇವಿಸಿಕೊಂಡು ಬಂದಿರುವ ಆಹಾರಗಳನ್ನು ಮಾತ್ರವಲ್ಲದೆ ಹೊಸದಾಗಿಯೂ ಏನನ್ನಾದರೂ ಎಕ್ಸಮರಿಮೆಂಟ್ ಮಾಡುತ್ತಲೇ ಇರುತ್ತಾರೆ.ಯಾವುದೋ ಫುಡ್‌ನ್ನು ಇನ್ಯಾವುದರೊಂದಿಗೂ ಸೇರಿಸಿ ಹೊಸ ಕಾಂಬಿನೇಶನ್ ಮಾಡುತ್ತಾರೆ. ಇಂಥಹಾ ಫುಡ್ ಕಾಂಬಿನೇಷನ್ ಕೆಲವೊಮ್ಮೆ ಸಿಕ್ಕಾಪಟ್ಟೆ ವೈರಲ್ ಆದರೆ, ಕೆಲವೊಮ್ಮೆ ಸಿಕ್ಕಾಪಟ್ಟೆ ನೆಗೆಟಿವ್ ಕಮೆಂಟ್ಸ್ ಗಳಿಸುತ್ತವೆ. ಹಾಗೆ ಸದ್ಯ ವೈರಲ್ ಆಗ್ತಿರೋ ಫುಡ್ ಸಮೋಸಾ ಮ್ಯಾಗಿ ಚಾಟ್.

ಕೆಲವು ತಿಂಗಳುಗಳ ಹಿಂದಷ್ಟೇ ಮೊಮೊಸ್ ಐಸ್‌ಕ್ರೀಂ, ಮಸಾಲೆ ದೋಸೆ ಐಸ್ ಕ್ರೀಂ ರೋಲ್ ರೆಸಿಪಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸದ್ಯ ಮುಂಬೈ ಬೀದಿ ಬದಿ ವ್ಯಾಪಾರಿಯೊಬ್ಬರು ತಯಾರಿಸ್ತಿರೋ ಸಮೋಸಾ (Samosa) ಮ್ಯಾಗಿ ಚಾಟ್ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.

Tap to resize

Latest Videos

ಸಮೋಸಾ ಅಲ್ಲ, ಮ್ಯಾಗಿನೂ ಅಲ್ಲ, ಚಾಟ್‌ ಕೂಡಾ ಅಲ್ಲ. ಅರೆ ಇದೇನಪ್ಪಾ ಸಮೋಸಾ ಮ್ಯಾಗಿ ಚಾಟ್ ಅಂತ ಅಚ್ಚರಿಪಡ್ಬೇಡಿ. ಇದು ಸದ್ಯ ಮುಂಬೈನ ಬೀದಿ ಬೀದಿಗಳಲ್ಲಿ ಟ್ರೆಂಡ್ ಆಗ್ತಿರೋ ಫುಡ್‌. ಸಮೋಸಾವನ್ನು ಸಾಮಾನ್ಯವಾಗಿ ಎಲ್ರೂ ಬಿಸಿಬಿಸಿಯಾಗಿ ತಿನ್ನೋಕೆ ಇಷ್ಟಪಟ್ರೆ ಈ ಸ್ಪೆಷಲ್ ಸಮೋಸಾವನ್ನು ಎಲ್ರೂ ತಣ್ಣಗೆ ತಿನ್ನೋಕೆ ಇಷ್ಟಪಡ್ತಿದ್ದಾರೆ.

Food Trend: ವೈರಲ್ ಆಗ್ತಿದೆ ಮೊಮೋಸ್ ಐಸ್‌ಕ್ರೀಂ ರೋಲ್‌

ಈ ಸ್ಪೆಷಲ್ ಸಮೋಸಾವನ್ನು ಬೆಣ್ಣೆ (Butter)ಯನ್ನು ಸೇರಿಸಿ ತಯಾರಿಸಲಾಗುತ್ತದೆ. ಸಾಮಾನ್ಯವಾಗಿ ಸಿಗುವ ಸಮೋಸಾ ಡೀಪ್-ಫ್ರೈಡ್ ಮೈದಾ ಹೊದಿಕೆಯನ್ನು ಹೊಂದಿದ್ದಕ್ಕೆ, ಈ ಸಮೋಸಾದ ಹೊರಭಾಗ ಸಂಪೂರ್ಣವಾಗಿ ಮಕ್ಖಾನ್‌ನಿಂದ ಮಾಡಲ್ಪಟ್ಟಿದೆ. ಈ ಸಮೋಸಾ ಮ್ಯಾಗಿ ಚಾಟ್‌ನ್ನು ತಯಾರಿಸುವ ಹಂತದಲ್ಲಿ ವ್ಯಾಪಾರಿಗಳನ್ನು ಬೆಣ್ಣೆಯನ್ನು ಮೈದಾ ಹಿಟ್ಟಿನಂತೆಯೇ ಬೆರೆಸುತ್ತಾರೆ. ನಂತರ ಸಣ್ಣ ರೊಟ್ಟಿಗಳಂತೆ  ಸುತ್ತಿಕೊಳ್ಳುತ್ತಾರೆ.

 
 
 
 
 
 
 
 
 
 
 
 
 
 
 

A post shared by Vansh🇮🇳 (@eatthisagra)

ನಂತರ ಸಮೋಸಾದಲ್ಲಿ ಗುಲ್ಕಂದ್ ಮತ್ತು ಒಣ ಹಣ್ಣುಗಳ ಸಿಹಿ ಸ್ಟಫಿಂಗ್ ಅನ್ನು ಇರಿಸಲಾಗುತ್ತದೆ. ಸಾಮಾನ್ಯ ಸಮೋಸಾದಂತಲ್ಲದೆ, ಈ ಸಮೋಸಾವನ್ನು ಡೀಪ್ ಫ್ರೈ ಮಾಡಲಾಗುವುದಿಲ್ಲ ಏಕೆಂದರೆ ಅದು ಬಿಸಿ ಎಣ್ಣೆಯ ಸಂಪರ್ಕಕ್ಕೆ ಬಂದರೆ ಬೆಣ್ಣೆ ಕರಗುತ್ತದೆ. ಈ ಮಕ್ಖಾನ್ ಕಾ ಸಮೋಸವು ಆಕಾರವನ್ನು ಉಳಿಸಿಕೊಂಡಿದೆ ಎಂದು ಖಚಿತಪಡಿಸಿಕೊಳ್ಳಲು ತಣ್ಣನೆಯ ನೀರಿನಲ್ಲಿ ಅದ್ದಿ. ತಣ್ಣಗೆ ಬಡಿಸಲಾಗುತ್ತದೆ.

Food Trend: ವೈರಲ್ ಆಗ್ತಿದೆ ಮಸಾಲೆ ದೋಸೆ ಐಸ್ ಕ್ರೀಂ ರೋಲ್

ಇಂಟರ್‌ನೆಟ್‌ನಲ್ಲಿರುವ ಜನರು ಈ ರೀತಿಯ ಸಮೋಸಾ ಅಸ್ತಿತ್ವದಲ್ಲಿದೆ ಎಂದು ನಂಬಲು ಹಿಂಜರಿಯುತ್ತಾರೆ. ಕೆಲವೊಬ್ಬರು ಈ ಡಿಫರೆಂಟ್ ಸಮೋಸಾಗೆ ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವೊಬ್ಬರು ಇದಂಥಾ ಆಹಾರ ಎಂದು ಟೀಕಿಸಿದ್ದಾರೆ. ಮತ್ತೂ ಕೆಲವರು ಈ ಸಮೋಸಾವನ್ನು ಹೇಗೆ ಫ್ರೈ ಮಾಡಿದಿರಿ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಫುಡ್‌ ಟ್ರೆಂಡಿಗ್‌ನಲ್ಲಿ ಈ ಹಿಂದೆಯೂ ವಿಲಕ್ಷಣವಾದ ಆಹಾರ ಸಂಯೋಜನೆಗಳು ವೈರಲ್ ಆಗಿವೆ. ಚಾಕೊಲೇಟ್ ಬಿರಿಯಾನಿ, ಗುಲಾಬ್ ಜಾಮೂನ್ ದೋಸೆ, ಮಸಾಲಾ ದೋಸೆ ಐಸ್ ಕ್ರೀಮ್ ರೋಲ್ ಈ ಹಿಂದೆ ಟ್ರೆಂಡ್ ಆಗಿದ್ದವು. ಸದ್ಯ ಸಮೋಸಾ ಮ್ಯಾಗಿ ಚಾಟ್‌ ನೆಟ್ಟಿಗರ ಹುಬ್ಬೇರಿಸುತ್ತಿದೆ. ಒಟ್ನಲ್ಲಿ ನೋಡಲು ಅಟ್ರ್ಯಾಕ್ಟಿವ್‌ ಹಾಗೂ ತಿನ್ನಲು ಟೇಸ್ಟೀ ಆಗಿರುವ ಈ ಸ್ಪೆಷಲ್ ಸಮೋಸಾ ಫುಡ್‌ ಪ್ರಿಯರಿಗೆ ಫೇವರಿಟ್‌ ಆಗಿರೋದಂತೂ ನಿಜ.

click me!