ಈ ರಸ್ತೆ ಬದಿಯ ಮಾರಾಟಗಾರ 1 ಪ್ಲೇಟ್ ಮ್ಯಾಗಿಗೆ ತೆಗೆದುಕೊಳ್ಳೋದು 1100 ರೂ.! ಏನಂಥಾ ವಿಶೇಷ?

By Reshma Rao  |  First Published May 25, 2024, 10:36 AM IST

10 ರೂ. ಮ್ಯಾಗಿನ ಏನೇನೋ ಸೇರಿಸಿ 100 ರೂ.ಗೆ ಮಾರೋದು ನೋಡಿರ್ತೀರಾ. ಆದ್ರೆ ದೆಲ್ಲಿಯ ಈ ರಸ್ತೆ ಬದಿ ಮಾರಾಟಗಾರ ಇದನ್ನು 1100 ರೂಪಾಯಿಗೆ ಮಾರುತ್ತಾನೆ. ಏನಿದರ ವಿಶೇಷ?


ಮ್ಯಾಗಿ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ ಆಮೇಲಿನ ವಿಚಾರ. ಆದರೆ ಇದು ಮಕ್ಕಳಿಂದ ಮುದುಕರವರೆಗೆ ಬಹಳ ಇಷ್ಟಪಟ್ಟು ತಿನ್ನೋ ನೂಡಲ್ಸ್ ಅನ್ನೋದಂತೂ ಸತ್ಯ. ಮ್ಯಾಗಿಯನ್ನು ಬೇರೆ ಬೇರೆ ರೀತಿಯ ತರಕಾರಿ ಹಾಕಿ ವಿಭಿನ್ನ ರೀತಿಯಲ್ಲಿ ಸವಿಯೋ ಅಭ್ಯಾಸಗಳು ಸಾಮಾನ್ಯವಾಗಿವೆ. ಇವುಗಳ ಮಧ್ಯೆ ಮ್ಯಾಗಿಯನ್ನು ಐಸ್ ಕ್ರೀಂ ಜೊತೆ, ಚಾಕೊಲೇಟ್-ಇನ್ಫ್ಯೂಸ್ಡ್ ಮ್ಯಾಗಿ, ಹಲ್ವಾ ಜೊತೆ ಬೆರೆಸಿ ವಿಚಿತ್ರ ಫ್ಯೂಶನ್‌ಗಳ ಮೂಲಕ ಸುದ್ದಿಯಾಗೋದೂ ಇದೆ. ಆದರೆ,  1 ಪ್ಲೇಟ್‌ಗೆ ಮ್ಯಾಗಿಗೆ 1100 ರೂ. ಅನ್ನೋದು ಮಾತ್ರ ನೀವು ಇದುವರೆಗೂ ಕೇಳಿರಲಾರಿರಿ. 

ಹೌದು, ದೆಹಲಿಯ ರಸ್ತೆ ಬದಿಯ ಮಾರಾಟಗಾರರೊಬ್ಬರು ಮ್ಯಾಗಿ ಖಾದ್ಯವನ್ನು ಪ್ಲೇಟ್‌ಗೆ 1,100 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಭಕ್ಷ್ಯವು ಮುಖ್ಯವಾಗಿ ಅದರ ದುಬಾರಿ ಬೆಲೆಗಾಗಿಯೇ ವೈರಲ್ ಆಗುತ್ತಿದೆ. ಇದನ್ನು ತಿಂದ ಬಳಿಕ ಗ್ರಾಹಕರು ತೃಪ್ತರಾಗುತ್ತಾರೆಂದ ಮೇಲೆ ಬೆಲೆ ಸರಿಯಾಗಿಯೇ ಇದೆ ಅನ್ನೋದು ಮಾರಾಟಗಾರನ ಆಂಬೋಣ. 


 

Latest Videos

undefined

ಹಾಗಿದ್ದರೆ ದೆಹಲಿಯ ಈ ವ್ಯಾಪಾರಿ ತಮ್ಮ ಗಾಡಿಯಿಂದ ಮಾರಾಟ ಮಾಡುವ ಈ ಮ್ಯಾಗಿಗೆ ಒಂದು ಪ್ಯಾಕೆಟ್ ನೂಡಲ್ಸ್‌ನೊಂದಿಗೆ ಏನು ಬೆರೆಸುತ್ತಾರೆ ಎಂದು ಆಶ್ಚರ್ಯಪಡುತ್ತೀರಾ? 

ಬಂಟಿ ಮೀಟ್ ವಾಲಾ ಅಲಿಯಾಸ್ ಬಿಎಂಡಬ್ಲ್ಯು ದೆಹಲಿಯ ಪಶ್ಚಿಮ್ ವಿಹಾರ್‌ನಲ್ಲಿ ತನ್ನ ಕಾರ್ಟ್‌ನಲ್ಲಿ ಸಾಕಷ್ಟು ಆತ್ಮವಿಶ್ವಾಸದಿಂದ ಮಾರಾಟ ಮಾಡುವ ಈ ವಿಶೇಷ ಮ್ಯಾಗಿ ಖಾದ್ಯದ ಬಗ್ಗೆ ಇಲ್ಲಿದೆ.

ಮ್ಯಾಗಿ ಪ್ಲೇಟ್‌ಗೆ 1,100 ರೂಪಾಯಿ ಏಕೆ?
ಬಂಟಿ ಮೀಟ್ ವಾಲಾ ಅವರು ಆಹಾರ ವ್ಲಾಗರ್‌ಗಳಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ.  ಬಂಟಿ ಅವರು ತಮ್ಮ ಕಥೆಯನ್ನು ಸಂತೋಷದಿಂದ ಹಂಚಿಕೊಳ್ಳುತ್ತಾರೆ ಮತ್ತು ಅವರು ತಮ್ಮ 'ಮಟನ್ ಮ್ಯಾಗಿ' ಕಥೆಯನ್ನು 'ಬಕ್ರೆ ಕೆ ನಖ್ರೆ ಮಗ್ಗಿ' ಎಂದು ಕರೆಯುತ್ತಾರೆ.

ಬಂಟಿ ಒಂದು ಪ್ಯಾಕೆಟ್ ಮ್ಯಾಗಿಯನ್ನು ಬಳಸುತ್ತಾರೆ, ಇದರ ಬೆಲೆ ಮಾರುಕಟ್ಟೆಯಲ್ಲಿ 14 ರೂ, ಒಂದು ಪ್ಲೇಟ್‌ಗೆ, ಮೊದಲೇ ಬೇಯಿಸಿದ ಗ್ರೇವಿ ಮತ್ತು ನಾಲ್ಕು ತುಂಡು ಮಟನ್ ಹಾಕುತ್ತಾರೆ.   

ಅವರು ಮ್ಯಾಗಿ ರೆಸಿಪಿಯನ್ನು ಎಬಿಪಿ ಅನ್‌ಕಟ್ ತಂಡದೊಂದಿಗೆ ಹಂಚಿಕೊಂಡಿದ್ದಾರೆ. ಮೇಲಿನ ವೀಡಿಯೊದಲ್ಲಿ ನೀವು ನೋಡುವಂತೆ, ನೂಡಲ್ಸ್ ಅನ್ನು ಮೊದಲು ಮಟನ್ ಗ್ರೇವಿಯಲ್ಲಿ ಬೇಯಿಸಲಾಗುತ್ತದೆ. ಒಮ್ಮೆ ಅದು 80% ಬೆಂದ ಬಳಿಕ, ಶುಂಠಿ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿರು ಮೆಣಸಿನಕಾಯಿಗಳು, ಚಾಟ್ ಮಸಾಲಾ, ಕಸೂರಿ ಮೇಥಿ ಮತ್ತು ಡೆಗಿ ಮಿರ್ಚ್ (ಬಣ್ಣಕ್ಕಾಗಿ) ಹಾಕುತ್ತಾರೆ. ಇದಕ್ಕೆ ಮೊದಲೇ ಬೇಯಿಸಿದ ಗ್ರೇವಿ ಮತ್ತು ಮಟನ್ ತುಂಡುಗಳನ್ನು ಸೇರಿಸಿ ಮತ್ತು ಸ್ವಲ್ಪ ಸಮಯದವರೆಗೆ ಒಟ್ಟಿಗೆ ಬೆರೆಸಿ ಕೊಡುತ್ತಾರೆ. 

ಪತಿಯ ಮಾಜಿ ಪ್ರೇಯಸಿ ದೀಪಿಕಾ ಪಡುಕೋಣೆ ಬೇಬಿ ಬಂಪ್ ಮತ್ತು ನಡಿಗೆ ಟ್ರೋಲ್ ಮಾಡಿದವರಿಗೆ ಆಲಿಯಾ ಭಟ್ ಕ್ಲಾಸ್!
 

ಅಗ್ಗದ ಆವೃತ್ತಿ ಲಭ್ಯವಿದೆಯೇ ಎಂದು ಕೇಳಿದಾಗ, ಅರ್ಧ ತಟ್ಟೆಗೆ 600 ರೂ ಬೆಲೆಯಿದೆ ಮತ್ತು ಎರಡು ತುಂಡು ಮಟನ್ ಬರುತ್ತದೆ ಎಂದು ಅವರು ಹೇಳುತ್ತಾರೆ.

ಅವರು ಇತರ ಮಟನ್ ಖಾದ್ಯಗಳನ್ನು ಒಂದು ಪ್ಲೇಟ್‌ಗೆ 800-1,000 ರೂ.ಗೆ ಮಾರಾಟ ಮಾಡುತ್ತಾರೆ.

ಬಂಟಿ ತನ್ನ ವೈರಲ್ ಮ್ಯಾಗಿಯನ್ನು ಒಳಗೊಂಡಿರುವ ವೀಡಿಯೊಗಳಲ್ಲಿ ನಕಾರಾತ್ಮಕ ಕಾಮೆಂಟ್‌ಗಳನ್ನು ಬರೆಯುವ ಎಲ್ಲರಿಗೂ ಮೊದಲು ಬಂದು ಖಾದ್ಯವನ್ನು ರುಚಿ ನೋಡುವಂತೆ ಸವಾಲು ಹಾಕುತ್ತಾರೆ. 

 

click me!