Latest Videos

ಹಸಿ ಮೆಣಸಿನ ಕಾಯಿ ಹಲ್ವಾ.. ಬಾಯಿ ಬದಲು ಕಣ್ಣಲ್ಲಿ ಬರುತ್ತೆ ನೀರು!

By Roopa HegdeFirst Published May 23, 2024, 5:40 PM IST
Highlights

ಹಲ್ವಾ ಅಂದ್ರೆ ಬಾಯಲ್ಲಿ ನೀರು ಬರುತ್ತೆ. ಸಿಹಿ ಖಾದ್ಯ ಇಷ್ಟ ಎನ್ನುವವರು ಅದೇ ಖುಷಿಯಲ್ಲಿ ಈ ಹಸಿರು ಹಲ್ವಾ ತಿಂದ್ರೆ ಕಥೆ ಮುಗಿದಂತೆ. ಈ ಹಲ್ವಾ ರುಚಿ ಸಿಹಿಗಿಂತ ಖಾರವಿರ್ಬೇಕು ಎನ್ನುತ್ತಿದ್ದಾರೆ ನೆಟ್ಟಿಗರು.. 
 

ಆಹಾರದಲ್ಲಿ ಪ್ರಯೋಗಗಳು ಈಗ ಹೆಚ್ಚಾಗ್ತಿವೆ. ಯಾವ್ ಯಾವ್ದೋ ಕಾಂಬಿನೇಷನ್ ನಲ್ಲಿ ಜನರು ಆಹಾರ ತಯಾರಿಸಿ ತಿನ್ನುತ್ತಾರೆ. ಕೆಲ ದಿನಗಳ ಹಿಂದಷ್ಟೆ ಪಾನಿಪುರಿಗೆ ಆಲ್ಕೋಹಾಲ್ ಸೇರಿಸಿ ತಿಂದ ವಿಡಿಯೋ ವೈರಲ್ ಆಗಿತ್ತು. ಈಗ ಮತ್ತೊಂದು ಇಂಥ ವಿಡಿಯೋ ಸುದ್ದಿ ಮಾಡಿದೆ. ಹಸಿ ಮೆಣಸಿನಕಾಯಿಯನ್ನು ಮಸಾಲೆಗೆ ಬಳಸ್ತೇವೆ. ಖಾರ ತಿನ್ನುವ ಜನರು ಹಸಿ ಮೆಣಸಿನಕಾಯಿಯನ್ನು ಆರಾಮಾಗಿ ಕಚ್ಚಿ ತಿನ್ನುತ್ತಾರೆ. ಹಾಗಂತ ಸಿಹಿ ಪದಾರ್ಥಕ್ಕೆ ಖಾರ ಬೆರೆಸಲು ಸಾಧ್ಯವಿಲ್ಲ. ನೀವು ಪಾಯಸ, ಖೀರ್, ಹಲ್ವಾಗೆ ಮೆಣಸು ಸೇರಿಸಿದ್ರೆ ರುಚಿ ಕೆಟ್ಟು ಹೋಗುತ್ತೆ. ಹಲ್ವಾ ಅಂದಾಗ ಅದು ಸಿಹಿಯಾಗಿರ್ಬೇಕು. 

ಹಲ್ವಾ (Halwa) ಹೆಸರು ಹೇಳ್ತಿದ್ದಂತೆ ಅನೇಕರ ಬಾಯಲ್ಲಿ ನೀರು ಬರುತ್ತೆ. ಕ್ಯಾರೆಟ್ (carrot) ಹಲ್ವಾ, ರವೆ ಹಲ್ವಾ, ಬಾಳೆಹಣ್ಣಿನ ಹಲ್ವಾ ಹೀಗೆ ನಾನಾ ಪದಾರ್ಥದಲ್ಲಿ ಹಲ್ವಾ ತಯಾರಿಸಬಹುದು. ಹಬ್ಬದ ದಿನ ಇರ್ಬೇಕು ಎಂದೇನಿಲ್ಲ, ಸಿಹಿ ಖಾದ್ಯ ಇಷ್ಟ ಅನ್ನೋರು ಸಾಮಾನ್ಯ ದಿನಗಳಲ್ಲೂ ಹಲ್ವಾ ತಯಾರಿಸಿಕೊಂಡು ತಿನ್ನುತ್ತಾರೆ. ಹಲ್ವಾ ಮಾಡೋಕೆ ಕ್ಯಾರೆಟ್ ಇಲ್ಲ ಅಂತ ಮೆಣಸಿನಕಾಯಿ ಸೇರಿಸಿದ್ರೆ..? ಇದು ಹೇಗೆ ಸಾಧ್ಯ ಎನ್ನಬೇಡಿ. ನಮ್ಮಲ್ಲಿ ಎಲ್ಲವೂ ಸಾಧ್ಯ. ಈಗ ವೈರಲ್ (Viral) ಆಗಿರೋ ವಿಡಿಯೋದಲ್ಲಿ ಖಾರದ ಹಲ್ವಾ ಮಾಡಲಾಗಿದೆ. ಅದೂ ಹಸಿಮೆಣಸಿನಕಾಯಿ ಹಲ್ವಾ. ಯಸ್, ನಾವು ಹೇಳ್ತಿರೋದು ಸತ್ಯ. ರುಚಿ ನೋಡೋಕೆ ಅಂತ ಅಲ್ಪಸ್ವಲ್ಪ ಹಲ್ವಾ ಇವರು ಮಾಡಿಲ್ಲ. ಸಂಪ್ರದಾಯದ ಪ್ರಕಾರ ಹಲ್ವಾ ಸಿದ್ಧಪಡಿಸಿದ್ದಾರೆ. ಹಸಿರು ಬಣ್ಣದಲ್ಲಿ ಕಾಣುವ ಹಲ್ವಾ ಮೇಲೆ ಅಲ್ಲಲ್ಲಿ ಡ್ರೈ ಫ್ರೂಟ್ಸ್ ನೋಡ್ಬಹುದು. ಇದನ್ನು ನೋಡ್ತಿದ್ದಂತೆ ತಿನ್ಮೇಕು ಅನ್ನಿಸದೆ ಇರೋದಿಲ್ಲ. ಆದ್ರೆ ತಿಂದ್ರೆ ಹೇಗಿರುತ್ತೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ.

ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿದೆ ಜಗತ್ತಿನ ಅತೀ ಉದ್ದದ ಕೋನ್‌ ಐಸ್‌ಕ್ರೀಂ, ಅಬ್ಬಬ್ಬಾ ಇಷ್ಟೊಂದು ಕೆಜಿನಾ?

ಇಂಡಿಯನ್ ಸ್ಟ್ರೀಟ್ ಫುಡ್ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಕಾರ್ಖಾನೆಯಲ್ಲಿ ಈ ಹಲ್ವಾ ತಯಾರಿಸೋದನ್ನು ನೀವು ನೋಡ್ಬಹುದು. ಕ್ಯಾಲಿಕಟ್‌ನಲ್ಲಿ ಹಸಿರು ಮಿರ್ಚಿ ಹಲ್ವಾ 120 ರೂಪಾಯಿ ಎಂದು ಶೀರ್ಷಿಕೆ ಹಾಕಲಾಗಿದೆ. 

ಹಸಿಮೆಣಸಿನಕಾಯಿ ಹಲ್ವಾ ಮಾಡುವ ವಿಧಾನ : ವಿಡಿಯೋದಲ್ಲಿ ತೋರಿಸಿರೋ ಪ್ರಕಾರ, ಮೊದಲು ಹಸಿಮೆಣಸಿನ ಕಾಯಿಯನ್ನು ಸಣ್ಣಗೆ ಕತ್ತರಿಸಲಾಗುತ್ತದೆ. ನಂತ್ರ ಅದನ್ನುಬಾಣಲೆಗೆ ಹಾಕಲಾಗುತ್ತದೆ. ಇನ್ನೊಂದು ಕಡೆ ಉರಿಯುತ್ತಿರುವ ಕಟ್ಟಿಗೆ ಒಲೆ ಮೇಲೆ ಈ ಬಾಣಲೆ ಇಟ್ಟು ಹಸಿಮೆಣಸಿನಕಾಯಿಯನ್ನು ಬಿಸಿ ಮಾಡಲಾಗುತ್ತದೆ. ನಂತ್ರ ಅದಕ್ಕೆ ಒಂದಿಷ್ಟು ಸಕ್ಕರೆ, ಹಾಲು ಮತ್ತು ಲೀಟರ್ ಹಾಲನ್ನು ಹಾಕಲಾಗುತ್ತದೆ. ನಂತ್ರಕಲರ್ ಸೇರಿಸಲಾಗುತ್ತದೆ. ಒಂದು ಯಂತ್ರದ ಸಹಾಯದಿಂದ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಪಾಕ ತರಿಸಲಾಗುತ್ತದೆ. ಕೊನೆಯಲ್ಲಿ ಅಚ್ಚಿಗೆ ಮಿಶ್ರಣವನ್ನು ಹಾಕಲಾಗುತ್ತದೆ. ಸ್ವಲ್ಪ ಸಮಯದ ನಂತ್ರ ಅದನ್ನು ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ. ತಿನ್ನಲು ಹಸಿಮೆಣಸಿನಕಾಯಿ ಹಲ್ವಾ ಸಿದ್ಧವಾಗುತ್ತದೆ.  

ಹಾಲಿನ ಚಹಾವನ್ನು ಮತ್ತೆ ಕುದಿಸಿ ಕುಡಿಯೋ ಮುನ್ನ ಈ ವಿಚಾರ ಗೊತ್ತಿರ್ಲಿ

ಸಾಮಾಜಿಕ ಜಾಲತಾಣದಲ್ಲಿ ವೈರಲ್ : ಈ ಹಸಿಮೆಣಸಿನಕಾಯಿ ಹಲ್ವಾ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಳಕೆದಾರರು ಕೂಡ ಈ ಹಲ್ವಾ ತುಂಬಾ ಸುಂದರವಾಗಿ ಕಾಣ್ತಿದೆ ಎಂದು ಕಮೆಂಟ್ ಮಾಡಿದ್ದಾರೆ. ಇದು ಖಾರವಾಗಿರುತ್ತಾ ಇಲ್ಲ ಸಿಹಿಯಾಗಿರುತ್ತಾ ಎಂದು ಮತ್ತೆ ಕೆಲವರು ಪ್ರಶ್ನೆ ಮಾಡಿದ್ದಾರೆ. ಇಷ್ಟು ಪ್ರಮಾಣದಲ್ಲಿ ಹಲ್ವಾ ಮಾಡಿದ್ದು, ಅದನ್ನು ಯಾರು ತಿನ್ನುತ್ತಾರೆ ಎಂದು ಮತ್ತೆ ಕೆಲ ಬಳಕೆದಾರರು ಪ್ರಶ್ನಿಸಿದ್ದಾರೆ. ಹಲ್ವಾ ತಯಾರಿಸೋ ಟೆಕ್ನಿಕ್ ನಮ್ಮ ದೇಶದಿಂದ ಬೇರೆ ದೇಶಕ್ಕೆ ಹೋಗ್ಬಾರದು ಎಂದು ಇನ್ನೊಬ್ಬ ಬಳಕೆದಾರ ಹೇಳಿದ್ರೆ ಆಹಾರವನ್ನು ಹದಡಿಸಲಾಗಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಇಷ್ಟದ ಆಹಾರದ ಮೇಲೆ ಆಗ್ತಿರೋ ಅನ್ಯಾಯವನ್ನು ಬಳಕೆದಾರರು ಖಂಡಿಸಿದ್ದಾರೆ. 
 

click me!