ಸಿಹಿಯನ್ನು ಪ್ರೀತಿಸುವ ಯುಕೆ ಪ್ರಧಾನಿ ರಿಷಿ ಸುನಾಕ್ ವಾರಾಂತ್ಯದಲ್ಲಿ 36 ಗಂಟೆ ಉಪವಾಸ ಮಾಡ್ತಾರೆ!

By Suvarna News  |  First Published Feb 1, 2024, 12:39 PM IST

ಯುಕೆ ಪ್ರಧಾನಿ, ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿಯವರ ಅಳಿಯ ರಿಷಿ ಸುನಾಕ್ ಅವರ ವೆಲ್‌ನೆಸ್ ರೂಟೀನ್ ಕೊಂಚ ವಿಭಿನ್ನವಾಗಿದೆ. ವಾರದಲ್ಲಿ 36 ಗಂಟೆ ಉಪವಾಸ ಕೈಗೊಳ್ಳುವ ಅವರ 5:2 ಆಹಾರ ಪದ್ಧತಿ ಹೀಗಿದೆ.


ವಾರಾಂತ್ಯ ಬಂದರೆ ಸಾಕು, ಯಾವೆ ರೆಸ್ಟೋರೆಂಟ್‌ಗೆ ಹೋಗಿ ಏನು ಹೊಸತು ಟ್ರೈ ಮಾಡೋಣ ಎಂದು ಯೋಚಿಸುವವರೇ ಹೆಚ್ಚಿನವರು. ಇಂಥವರಿಗೆ ಯುಕೆ ಪ್ರಧಾನಿ ರಿಷಿ ಸುನಾಕ್ ಉಪವಾಸದ ಕತೆ ಕೇಳಿದ್ರೆ ಇವೆಲ್ಲ ಸಾಧ್ಯನಾ ಅನ್ನಿಸ್ಬೋದು. ಆದ್ರೆ ರಿಷಿ ಅವರು ಭಾನುವಾರ ಸಂಜೆ 5 ಗಂಟೆಯಿಂದ ಮಂಗಳವಾರ ಬೆಳಗ್ಗೆ 5 ಗಂಟೆಯವರೆಗೆ ಉಪವಾಸ ಮಾಡ್ತಾರೆ ಅನ್ನೋ ವಿಷಯ ಈಗ ಅಚ್ಚರಿ ತರೋದ್ರ ಜೊತೆ ಬೆಚ್ಚಿ ಬೀಳಿಸ್ತಿದೆ. 

ಹೌದು, ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ರಿಷಿ ಹೇಳಿಕೊಂಡಿದ್ದಾರೆ. ಅವರು ವಾರದಲ್ಲಿ 36 ಗಂಟೆ ನೀರು, ಟೀ ಅಥವಾ ಕ್ಯಾಲೋರಿರಹಿತ ಡ್ರಿಂಕ್ ಹೊರತಾಗಿ ಏನನ್ನೂ ಸೇವಿಸುವುದಿಲ್ಲವಂತೆ.

Tap to resize

Latest Videos

undefined

ಈ ಬಗ್ಗೆ ರಿಷಿ ಹೇಳುವುದು ಹೀಗೆ, 'ಎಲ್ಲರಂತೆ ನಾನು ವಾರವನ್ನು ಶಿಸ್ತಿನಿಂದ ಆರಂಭಿಸಲು ಬಯಸುತ್ತೀನಿ. ನನಗೆ ಸ್ವೀಟ್ ಎಂದರೆ ಇಷ್ಟ. ವಾರದ ದಿನಗಳಲ್ಲಿ ನಾನು  ಬಹಳಷ್ಟು ಸಕ್ಕರೆ ಪೇಸ್ಟ್ರಿಗಳನ್ನು ತಿನ್ನುತ್ತೇನೆ. ನಾನು ನನ್ನ ಆಹಾರವನ್ನು ಪ್ರೀತಿಸುತ್ತೇನೆ, ನನ್ನ ಕೆಲಸದ ಕಾರಣದಿಂದಾಗಿ ನಾನು ಮೊದಲಿನಂತೆ ವ್ಯಾಯಾಮ ಮಾಡಲಾಗುವುದಿಲ್ಲ. ಹಾಗಾಗಿ, ವಾರದ ಆರಂಭದಲ್ಲಿ ದೇಹವನ್ನು ಡಿಟಾಕ್ಸ್ ಮಾಡಿ ರಿಸೆಟ್ ಮಾಡುವ ಉದ್ದೇಶದಿಂದ ಉಪವಾಸವಿರುತ್ತೇನೆ' ಎಂದಿದ್ದಾರೆ.

ಸ್ಪೇಸ್‌ನಿಂದ ಭಾರತಕ್ಕೆ ಕಲ್ಪನಾ ಚಾವ್ಲಾರ ಕಡೆಯ ಸಂದೇಶ; ಇಲ್ಲಿದೆ ವಿಡಿಯೋ

ಇದು ಆರೋಗ್ಯಕರವೇ?
ಬ್ರಿಟಿಷ್ ಪ್ರಧಾನಿಯ ಈ ಡಯಟ್ ರೂಟೀನ್ ಆರೋಗ್ಯಕರವೇ? ಈ ಬಗ್ಗೆ ಆಹಾರ ತಜ್ಞರೇನಂತಾರೆ ನೋಡೋಣ.
ಇದು ಜನಪ್ರಿಯ 5:2 ಆಹಾರದ ಹೆಚ್ಚು ಕಟ್ಟುನಿಟ್ಟಾದ ಆವೃತ್ತಿಯಾಗಿದೆ. ಇದರಲ್ಲಿ ಜನರು ವಾರಕ್ಕೆ ಎರಡು ಬಾರಿ 500-600 ಕ್ಯಾಲೊರಿಗಳಿಗೆ ತಮ್ಮನ್ನು ನಿರ್ಬಂಧಿಸುತ್ತಾರೆ. 5:2 ಆಹಾರಕ್ರಮವು ಪ್ರತಿ ವಾರ ಐದು ದಿನಗಳವರೆಗೆ ಸಾಮಾನ್ಯ, ಆರೋಗ್ಯಕರ ಆಹಾರವನ್ನು ಸೇವಿಸುವುದನ್ನು ಒಳಗೊಂಡಿರುತ್ತದೆ ಮತ್ತು ಉಳಿದ ಎರಡು ದಿನಗಳವರೆಗೆ 'ಉಪವಾಸ'ವನ್ನು ಒಳಗೊಂಡಿರುತ್ತದೆ.

36 ಗಂಟೆಗಳ ಉಪವಾಸದ ಪ್ರಯೋಜನಗಳು

ಡಿಟಾಕ್ಸ್
ಒತ್ತಡ, ನಿಷ್ಕ್ರಿಯತೆ, ಅಥವಾ ಅತಿಯಾಗಿ ತಿನ್ನುವುದು ಮತ್ತು ಕುಡಿಯುವುದನ್ನು ಒಳಗೊಂಡಿರುವ ಆಧುನಿಕ ಆಹಾರ ಮತ್ತು ಜೀವನಶೈಲಿಯ ಒತ್ತಡವನ್ನು ನಿಭಾಯಿಸಲು ಇದು ನಿಮ್ಮ ಜೀವಾಳಗಳಿಗೆ ಸಹಾಯ ಮಾಡುತ್ತದೆ.

ತೂಕ ಇಳಿಕೆ
ಸಹಿಷ್ಣುತೆ ಅಥವಾ ಶಕ್ತಿ ತರಬೇತಿಯಂತಹ ವ್ಯಾಯಾಮದೊಂದಿಗೆ ಸಂಯೋಜಿಸಿದಾಗ 36-ಗಂಟೆಗಳ ಮಧ್ಯಂತರ ಉಪವಾಸವು ಹೆಚ್ಚು ಪರಿಣಾಮಕಾರಿ ಎಂದು ತಜ್ಞರು ನಂಬುತ್ತಾರೆ. ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಜೊತೆಗೆ ತೂಕ ನಷ್ಟದ ಸಮಯದಲ್ಲಿ ಸ್ನಾಯುವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ವರನೇ ಇಲ್ಲದೆ 568 ಹೆಣ್ಣುಮಕ್ಕಳ ವಿವಾಹ! ಅಬ್ಬಬ್ಬಾ, ಹಣಕ್ಕಾಗಿ ಏನೇನ್ ನೌಟಂಕಿ ನಾಟ್ಕ ಮಾಡ್ತಾರಪ್ಪಾ?!

ಸುಧಾರಿತ ಇನ್ಸುಲಿನ್ ಸಂವೇದನೆ
ಆರೋಗ್ಯಕರ ತೂಕ ನಷ್ಟಕ್ಕೆ ಸಹಾಯ ಮಾಡುವುದರ ಜೊತೆಗೆ, ಕ್ಯಾಲೋರಿ ನಿರ್ಬಂಧವನ್ನು ಕ್ರಮಬದ್ಧಗೊಳಿಸಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಇದು ಇನ್ಸುಲಿನ್ ಮಟ್ಟದಲ್ಲಿ ಪರಿಣಾಮಕಾರಿ ಇಳಿಕೆಗೆ ಕಾರಣವಾಗುತ್ತದೆ.

click me!