ಪನೀರ್​ ಹೆಸರಲ್ಲಿ ವಿಷ? ಗೌರಿ ಖಾನ್​ ವಿವಾದದ ಬೆನ್ನಲ್ಲೇ ರೆಸ್ಟೋರೆಂಟ್​ಗಳಿಗೆ ಹೊರಟಿತು ಖಡಕ್​ ಆದೇಶ!

Published : Apr 30, 2025, 06:22 PM ISTUpdated : May 02, 2025, 03:56 PM IST
ಪನೀರ್​ ಹೆಸರಲ್ಲಿ ವಿಷ? ಗೌರಿ ಖಾನ್​ ವಿವಾದದ ಬೆನ್ನಲ್ಲೇ ರೆಸ್ಟೋರೆಂಟ್​ಗಳಿಗೆ ಹೊರಟಿತು ಖಡಕ್​ ಆದೇಶ!

ಸಾರಾಂಶ

ನಕಲಿ ಪನೀರ್ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕ ವ್ಯವಹಾರಗಳ ಇಲಾಖೆ ರೆಸ್ಟೋರೆಂಟ್‌ಗಳಿಗೆ ಮೆನುವಿನಲ್ಲಿ ಪನೀರ್‌ನ ವಿಧವನ್ನು (ಡೈರಿ, ಅನಲಾಗ್ ಅಥವಾ ಡೈರಿಯೇತರ) ಸ್ಪಷ್ಟವಾಗಿ ಉಲ್ಲೇಖಿಸಲು ಸೂಚಿಸಿದೆ. ಕಡಿಮೆ ಬೆಲೆಯ ನಕಲಿ ಪನೀರ್‌ನಲ್ಲಿ ಸಸ್ಯಜನ್ಯ ಕೊಬ್ಬು, ಪಿಷ್ಟ ಬಳಸಲಾಗುತ್ತಿದ್ದು, ಆರೋಗ್ಯಕ್ಕೆ ಹಾನಿಕಾರಕ ಎಂಬ ಆರೋಪಗಳಿವೆ. ಜೊಮ್ಯಾಟೊ, ಟೋರಿ ರೆಸ್ಟೋರೆಂಟ್‌ಗಳು ಇತ್ತೀಚೆಗೆ ಈ ವಿವಾದದಲ್ಲಿ ಸಿಲುಕಿದ್ದವು.

ಪನೀರ್​ ಎಂದರೆ ಬಹುತೇಕ ಎಲ್ಲರಿಗೂ ಪ್ರೀತಿಯ ಆಹಾರವಾಗಿದೆ. ಅದರಲ್ಲಿಯೂ ಮಕ್ಕಳಿಗೆ ಪನೀರ್ ಎಂದರೆ ಬಹಳ ಖುಷಿ. ಆದರೆ ಇತ್ತೀಚಿನ ದಿನಗಳಲ್ಲಿ ನಕಲಿ ಪನೀರ್​ ಹಾವಳಿ ಹೆಚ್ಚಾಗಿದೆ. ಅಸಲಿ ಪನೀರ್​ ದರಕ್ಕಿಂತ ಕಡಿಮೆ ರೇಟ್​ನಲ್ಲಿ ಪನೀರ್​ ಮಾರುತ್ತಿರುವವರು ಹೆಚ್ಚಾಗುತ್ತಿದ್ದು, ಕಡಿಮೆ ಬೆಲೆ ಎಂದು ಅದನ್ನು ತಿಂದು ಕ್ಯಾನ್ಸರ್​ನಂಥ ಮಾರಕ ರೋಗಗಳಿಗೂ ಈಡಾಗುವವರು ಇದ್ದಾರೆ. ಆದರೆ, ಇದು ಹೆಚ್ಚು ಗಮನ ಸೆಳೆದದ್ದು ಈಚೆಗೆ,  ಬಾಲಿವುಡ್‌ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್  ನೇತೃತ್ವದ ಟೋರಿ ರೆಸ್ಟೋರೆಂಟ್ ಬಗೆಗಿನ ವಿವಾದದಿಂದಾಗಿ.   ಸಾರ್ಥಕ್ ಸಚ್‌ದೇವಾ ಎನ್ನುವವರು ತಮಗೆ ನಕಲಿ ಪನೀರ್ ನೀಡಲಾಗಿದೆ ಎಂದು ಆರೋಪಿಸಿ ಪ್ರಕಟಿಸಿದ ವಿಡಿಯೋ, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ರೆಸ್ಟೋರೆಂಟ್ ತಕ್ಷಣವೇ ಈ ಆರೋಪವನ್ನು ನಿರಾಕರಿಸಿ, ಪನೀರ್‌ ನ ಶುದ್ಧತೆಯನ್ನು ಪರೀಕ್ಷಿಸಲು ಬಳಸಿದ ಅಯೋಡಿನ್ ವಿಧಾನವು ಪಿಷ್ಟ ಪತ್ತೆಗೆ ಮಾತ್ರ ಉಪಯುಕ್ತವಾದರೂ, ಪನೀರ್‌ನ ನೈಜತೆಯನ್ನು ನಿರ್ಧರಿಸಲು ಸೂಕ್ತವಲ್ಲ ಎಂದು ಹೇಳಿತ್ತು. ಟೋರಿ ರೆಸ್ಟೋರೆಂಟ್ ಅವರು ಉತ್ತಮ ಗುಣಮಟ್ಟದ ಪದಾರ್ಥಗಳ ಬಳಕೆಗೆ ಬದ್ಧವಾಗಿದ್ದು, ಸೋಯಾ ಆಧರಿತ ಪದಾರ್ಥಗಳಿಂದ ಉಂಟಾಗುವ ಅಡ್ಡಪ್ರತಿಕ್ರಿಯೆಗಳ ಬಗ್ಗೆ ಸ್ಪಷ್ಟನೆ ನೀಡಿತ್ತು.

ಸ್ಪಷ್ಟನೆ ಏನೇ ಇದ್ದರೂ, ಪನೀರ್​ ಹೆಸರಿನಲ್ಲಿ ವಿಷವನ್ನು ಉಣಬಡಿಸುತ್ತಿರುವ ಆಘಾತಕರಾಗಿ ಸಂಗತಿ ಇದಾಗಲೇ ಬಯಲಾಗಿದೆ. ಈ ಹಿನ್ನೆಲೆಯಲ್ಲಿ,  ಭವಿಷ್ಯದಲ್ಲಿ ಇಂಥ ತೊಂದರೆಯನ್ನು ತಪ್ಪಿಸುವ ಸಲುವಾಗಿ, ಗ್ರಾಹಕ ವ್ಯವಹಾರಗಳ ಇಲಾಖೆಯು, ಬಳಸುವ ಪನೀರ್ ಬಗೆಗೆ ಸ್ಪಷ್ಟತೆ ನೀಡುವಂತೆ ರೆಸ್ಟೋರೆಂಟ್​ಗಳಿಗೆ ಆದೇಶಿಸಿದೆ. ತಮ್ಮ ತಮ್ಮ ರೆಸ್ಟೋರೆಂಟ್​ಗಳಲ್ಲಿ, ಬಳಸುವ ಪನೀರ್​, ಸಾಂಪ್ರದಾಯಿಕ ಡೈರಿ ಆಧರಿತ ಪನೀರೋ, ನಕಲಿ ಎನ್ನುವ 'ಅನಲಾಗ್' ಪನೀರೋ ಅಥವಾ ಡೈರಿಯೇತರ ಪನೀರೋ ಎನ್ನುವುದನ್ನು  ಮೆನುವಿನಲ್ಲಿ ನಿರ್ದಿಷ್ಟಪಡಿಸಬೇಕಾಗುತ್ತದೆ ಎಂದಿದೆ.  

ಪನೀರ್​ ಎಂದು ಪ್ರಾಣಕ್ಕೆ ಕುತ್ತಾಗ್ತಿರೋ ವಿಷ ಸೇವಿಸ್ತಾ ಇದ್ದೀರಾ? ನಕಲಿ ಕಂಡುಹಿಡಿಯೋ ಸುಲಭದ ಉಪಾಯ ಹೀಗಿದೆ..

ಕೆಲ ದಿನಗಳ ಹಿಂದಷ್ಟೇ ಜೊಮ್ಯಾಟೋ ಇದೇ ವಿವಾದ ಹುಟ್ಟುಹಾಕಿತ್ತು.   ಜೊಮೆಟೋ  ಪ್ರಸ್ತುತ ತನ್ನ B2B ಸೇವೆಯಾದ Zomato Hyperpure ಮೂಲಕ ರೆಸ್ಟೋರೆಂಟ್‌ಗಳಿಗೆ 'ಅನಲಾಗ್ ಪನೀರ್' ಎಂದು ಕರೆಯಲ್ಪಡುವ 'ನಕಲಿ ಪನೀರ್' ಅನ್ನು ಸಪ್ಲೈ ಮಾಡುತ್ತಿದೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಉತ್ಪನ್ನವನ್ನು ತಮ್ಮ ವೆಬ್‌ಸೈಟ್‌ನಲ್ಲಿ "ಅನಲಾಗ್ ಪನೀರ್" ಎಂದು ಸ್ಪಷ್ಟವಾಗಿ ಗುರುತಿಸಲಾಗಿದ್ದರೂ, ಇದು ಟಿಕ್ಕಾ ಮತ್ತು ಗ್ರೇವಿ ಪನೀರ್‌ನಂತಹ ಜನಪ್ರಿಯ ಭಕ್ಷ್ಯಗಳಿಗೆ ಸೂಕ್ತವಾಗಿದೆ ಎಂದು ಪ್ರಚಾರ ಮಾಡಲಾಗುತ್ತಿದೆ. ಇದನ್ನು ತಿನ್ನುತ್ತಾ ಬಂದರೆ ಪ್ರಾಣಕ್ಕೆ ಸಂಚಕಾರ ತರಬಹುದು ಇಲ್ಲದೇ ಹೋದರೆ ಅಪಾಯಕಾರಿ ಅನಾರೋಗ್ಯ ಸಮಸ್ಯೆ ಬಾಧಿಸಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಅದಾದ ಬಳಿಕ ಗೌರಿ ಖಾನ್​ ವಿವಾದ ಭುಗಿಲೆದ್ದಿತ್ತು. 

ಅಷ್ಟಕ್ಕೂ, ಅನಲಾಗ್ ಪನೀರ್ ಎಂದರೆ ಸಿಂಥೆಟಿಕ್ ಪನೀರ್ ಎಂದೂ ಇದನ್ನು ಕರೆಯುತ್ತಾರೆ.  ಇದನ್ನು ಮೊಸರು ಮಾಡಿದ ಹಾಲಿನಿಂದ ತಯಾರಿಸಲಾಗುತ್ತದೆ. ಈ ಫಾಕ್ಸ್ ಪನೀರ್ ಸಾಮಾನ್ಯವಾಗಿ ಹಾಲಿನ ಬದಲಿಗೆ ತರಕಾರಿ ಕೊಬ್ಬುಗಳು ಮತ್ತು ಪಿಷ್ಟಗಳಂತಹ ಪದಾರ್ಥಗಳನ್ನು ಒಳಗೊಂಡಿರುತ್ತದೆ. Zomato Hyperpure ನ ವೆಬ್‌ಸೈಟ್‌ನಲ್ಲಿ, ಇದನ್ನು ಕೆನೆ ತೆಗೆದ ಹಾಲು ಮತ್ತು ಸಸ್ಯಜನ್ಯ ಎಣ್ಣೆಯಿಂದ ತಯಾರಿಸಲಾಗುತ್ತದೆ ಎಂದು ವಿವರಿಸಲಾಗಿದೆ, ಹಾಲಿನ ಕೊಬ್ಬನ್ನು ತರಕಾರಿ ಕೊಬ್ಬಿನಿಂದ ಬದಲಾಯಿಸಲಾಗುತ್ತದೆ. ರೆಸ್ಟಾರೆಂಟ್‌ಗಳು ಅನಲಾಗ್ ಪನೀರ್ ಅನ್ನು ಬಳಸುವ ಮುಖ್ಯ ಕಾರಣವೆಂದರೆ  ಕಡಿಮೆ ಬೆಲೆ.  ನೈಜ ಪನೀರ್ ಪ್ರತಿ ಕೆಜಿಗೆ ಸುಮಾರು ₹450 ಆಗಿದ್ದರೆ, ಇದು 200 ರೂಪಾಯಿ ಆಸು ಪಾಸಲ್ಲಿ ಲಭ್ಯ.  
 

ಮಸಾಲೆ ದೋಸೆಯಲ್ಲಿ ಅಡಗಿದ್ದ ಯಮರಾಯ! 3 ವರ್ಷದ ಬಾಲಕಿ ಸಾವು...

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಫ್ರಿಡ್ಜ್ ಎಷ್ಟು ವರ್ಷ ಬಾಳಿಕೆ ಬರುತ್ತೆ?, ನಿಮ್ಗೆ ಈ ವಿಚಾರ ಗೊತ್ತಿಲ್ಲವೆಂದ್ರೆ ಕರೆಂಟ್ ಬಿಲ್ ಜಾಸ್ತಿ ಬರುತ್ತೆ
ಭಾರತದ ನಗರ ಪೈಕಿ ಬೆಂಗಳೂರು ಬೆಸ್ಟ್ ಫುಡ್ ಸಿಟಿ, ಸ್ಕಾಟಿಶ್ ಪ್ರವಾಸಿಗನ ಮನತಣಿಸಿದ ಬ್ರೇಕ್‌ಪಾಸ್ಟ್