ನಾಳೆ ಬೆಳಗ್ಗಿನ ತಿಂಡಿಗೆ ಉತ್ತಪ್ಪ ಟ್ರೈ ಮಾಡಿ

By Suvarna News  |  First Published Jan 25, 2020, 4:22 PM IST

ಇಲ್ಲಿ ಬಹಳ ಸುಲಭವಾಗಿ ಉತ್ತಪ್ಪ ಮಾಡೋ ವಿಧಾನ ಇದೆ. ನಾನಾ ತರಕಾರಿಗಳ ಟಾಪಿಂಗ್ ಇರೋ ಪಕ್ಕಾ ಸೌತ್ ಇಂಡಿಯನ್ ಬೆಳಗಿನ ಉಪಹಾರದ ತಿಂಡಿ ಇದು.


ವೀಕೆಂಡ್ ಬಂದ್ರೆ ಸಾಕು, ಒಂದು ಕಾಲು ಹೊರಗೇ ಇರುತ್ತೆ. ಕ್ಯೂ ನಿಂತರೂ ಸರಿ, ಹೊಟೇಲ್ ನಲ್ಲಿ ಅದೇ ದೋಸೆ, ಇಡ್ಲಿ ತಿನ್ನೋದು. ನಮ್ಮ ಟೈಮು, ದುಡ್ಡು ಎಲ್ಲಾ ಗೋತಾ! ಅದರ ಬದಲಿಗೆ ಮನೆಯಲ್ಲೇ ಉತ್ತಪ್ಪದಂಥಾ ಡಿಫರೆಂಟ್ ಟೇಸ್ಟ್‌ನ ತಿಂಡಿ ಮಾಡ್ಕೊಂಡು ತಿಂದ್ರೆ ವಾರದ ಕೊನೆಯಲ್ಲಿ ಜೇಬು ಖಾಲಿಯಾಗೋದು ತಪ್ಪುತ್ತೆ. ಸಮಯ ಉಳಿತಾಯ ಆಗುತ್ತೆ. ಮನೇಲೇ ಮಾಡಿರೋ ಕಾರಣ ಆರೋಗ್ಯಕ್ಕೂ ಒಳ್ಳೆಯದು. ಹೊಟ್ಟೆ ಚುರುಕಾಗಿದ್ರೆ ಮನಸ್ಸೂ ಉಲ್ಲಸಿತ. ಇಲ್ಲಿ ಬಹಳ ಸುಲಭವಾಗಿ ಉತ್ತಪ್ಪ ಮಾಡೋ ವಿಧಾನ ಇದೆ. ನಾನಾ ತರಕಾರಿಗಳ ಟಾಪಿಂಗ್ ಇರೋ ಪಕ್ಕಾ ಸೌತ್ ಇಂಡಿಯನ್ ಬೆಳಗಿನ ಉಪಹಾರದ ತಿಂಡಿ ಇದು. ಪಾರಂಪರಿಕ ಉತ್ತಪ್ಪದಲ್ಲಿ ದೋಸೆ ಮೇಲೆ ಬರೀ ಈರುಳ್ಳಿ ಹಾಕಿರ್ತಾರೆ. ಆದರೆ ನಾವು ಮಾಡುವಾಗ ಒಂದಿಷ್ಟು ತರಕಾರಿಗಳನ್ನು ಇದಕ್ಕೆ ಸೇರಿಸಬಹುದು. ಸಾಫ್ಟ್ ಆದ ತುಸು ದಪ್ಪಗಿನ ದೋಸೆ ವೆರೈಟಿ ಇದು. ಕ್ರಿಸ್ಪಿ ದೋಸೆ ಆದ್ರೆ ಟೇಸ್ಟ್ ಏನೋ ಚೆನ್ನಾಗಿರುತ್ತೆ, ಆದರೆ ಹೊಟ್ಟೆ ತುಂಬಲ್ಲ. ಈ ದೋಸೆ ತಿಂದರೆ ಹೊಟ್ಟೆ ತುಂಬುವ ಜೊತೆಗೆ ತರಕಾರಿ ಎಲ್ಲ ಇರೋದರಿಂದ ಚೆನ್ನಾಗಿ ಜೀರ್ಣ ಆಗುತ್ತೆ.

ಸಂದರ್ಭ : ಬೆಳಗಿನ ಉಪಹಾರ

Tap to resize

Latest Videos

ಬೇಕಾದ ಸಮಯ - ಅಕ್ಕಿ, ಹಿಟ್ಟು ನೆನೆಸುವ ಅವಧಿ ಬಿಟ್ಟರೆ ಅರ್ಧ ಗಂಟೆ ಸಾಕು.

 

ಪೇಪರ್‌ನಷ್ಟು ತೆಳ್ಳಗಿರೋ ರುಚಿರುಚಿ ನೀರುದೋಸೆ ಮಾಡೋದು ಹೇಗೆ?

 

ಮಾಡಲು ಬೇಕಾಗುವ ಸಾಮಗ್ರಿ :

ದೋಸೆಗೆ : ಎರಡು ಕಪ್ ಇಡ್ಲಿಅಕ್ಕಿ, ಅರ್ಧ ಕಪ್ ಉದ್ದು, ಅರ್ಧ ಚಮಚ ಮೆಂತೆ, ಬೇಕಿದ್ರೆ ಇಂಗು, ೧ ಕಪ್ ಪೇಪರ್ ಅವಲಕ್ಕಿ, ನೀರು, ಉಪ್ಪು, ಎಣ್ಣೆ.

ತರಕಾರಿಗಳು : ಚಿಕ್ಕದಾಗಿ ಹೆಚ್ಚಿರುವ ಒಂದು ಈರುಳ್ಳಿ, ತುರಿದ ಕ್ಯಾರೆಟ್ ಸ್ವಲ್ಪ, ಟೊಮ್ಯಾಟೋ, ಕ್ಯಾಪ್ಸಿಕಂ, ಶುಂಠಿ, ಹಸಿಮೆಣಸಿನ ಕಾತಿ, ಕರಿಬೇವಿನ ಸೊಪ್ಪು, ಕಪತ್ತಂಬರಿ ಸೊಪ್ಪು,

 

ಮಾಡುವ ವಿಧಾನ

- ಅಕ್ಕಿ, ಉಪ್ಪು, ಮೆಂತೆಯನ್ನು ದೊಡ್ಡ ಬೌಲ್ ಗೆ ಹಾಕಿ ಐದು ಗಂಟೆ ನೆನೆಹಾಕಿ.

- ನೀರು ಸೋಸಿ ಮಿಕ್ಸಿಗೆ ಹಾಕಿ ಬೇಕಾದಷ್ಟು ನೀರು ಹಾಕಿ ರುಬ್ಬಿ.

- ಸಣ್ಣಗೆ ದಪ್ಪಗೆ ಹಿಟ್ಟು ರೆಡಿ ಮಾಡ್ಕೊಳ್ಳಿ.

- ಒಂದು ಬೌಲ್ ಗೆ ಪೇಪರ್ ಅವಲಕ್ಕಿ ಹಾಕಿ ನೆನೆಸಿ. ಚೆನ್ನಾಗಿ ನೆನೆಯಲಿ.

- ನೆನೆದ ಪೇಪರ್ ಅವಲಕ್ಕಿಯನ್ನು ಮಿಕ್ಸಿಗೆ ಹಾಕಿ ರುಬ್ಬಿ.

- ಇದನ್ನು ಮೊದಲೇ ಮಾಡಿಟ್ಟ ಹಿಟ್ಟಿಗೆ ಸೇರಿಸಿ.

- ಇವಿಷ್ಟು ಕೆಲಸ ರಾತ್ರಿಯೇ ಮುಗಿಸಿ, ಹಿಟ್ಟನ್ನು ಬೆಚ್ಚನೆಯ ಜಾಗದಲ್ಲಿ ಮುಚ್ಚಿಡಿ. ಇದು ಏಳರಿಂದ ಎಂಟು ಗಂಟೆ ಹೀಗೇ ಇರಬೇಕು.

- ರಾತ್ರಿಯಿಡೀ ನೆನೆದ ಹಿಟ್ಟಿಗೆ ಬೆಳಗ್ಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ.

- ಈರುಳ್ಳಿ, ಕ್ಯಾಪ್ಸಿಕಂ, ಕ್ಯಾರೆಟ್‌, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು ಇತ್ಯಾದಿ ತರಕಾರಿಗಳನ್ನು ಚಿಕ್ಕದಾಗಿ ಹೆಚ್ಚಿ ರೆಡಿ ಮಾಡಿ ಇಟ್ಟುಕೊಳ್ಳಿ.

- ಶುಂಠಿ ತುರಿದಿಟ್ಟುಕೊಳ್ಳಿ.

- ಈ ಎಲ್ಲ ತರಕಾರಿ, ಶುಂಠಿ, ಕೊತ್ತಂಬರಿ, ಕರಿಬೇವನ್ನು ಚೆನ್ನಾಗಿ ಮಿಕ್ಸ್ ಮಾಡಿ.

- ಕಾವಲಿ ಇಟ್ಟು ಬಿಸಿಯಾದಾಗ ದೋಸೆ ಹುಯ್ಯಿರಿ'.

- ಹಿಟ್ಟು ಸ್ವಲ್ಪ ಬೆಂದಮೇಲೆ ಮೇಲ್ಭಾಗಕ್ಕೆ ತರಕಾರಿಯನ್ನು ಸ್ಪ್ರೆಡ್‌ ಮಾಡಿ.

- ಮೇಲಿಂದ ಎಣ್ಣೆ ಹಾಕಿ.

- ಪಾನ್ ಮುಚ್ಚಳ ಮುಚ್ಚಿ ಬೇಯಲು ಬಿಡಿ.

- ಚೆನ್ನಾಗಿ ಬೆಂದ ಮೇಲೆ ಹುಷಾರಾಗಿ ಮಗುಚಿ ಹಾಕಿ.

- ಬಿಸಿ ಬಿಸಿ ಉತ್ತಪ್ಪವನ್ನು ಚಟ್ನಿ ಜೊತೆಗೆ ಮೆಲ್ಲಬಹುದು.

 

ಮನೇಲೇ ಮಾಡಿ ನೋಡಿ ಸಿಂಪಲ್ಲಾಗೊಂದು ವೆಜ್ ಕಟ್ಲೇಟ್

 

- ಮೀಡಿಯಂ ಫ್ಲೇಮ್‌ನಲ್ಲಿ ದೋಸೆ ಬೇಯಬೇಕು, ಜೊತೆಗೆ ಒಳಗಿರುವ ತರಕಾರಿಯೂ ಬೇಯಬೇಕು ಅನ್ನೋದು ಗಮನದಲ್ಲಿರಲಿ. ಬೇಗ ತೆಗೆದರೆ ತರಕಾರಿ ಸರಿಯಾಗಿ ಬೇಯದೇ ರುಚಿ ಕೆಡಬಹುದು. ದೋಸೆಯ ಮೇಲ್ಭಾಗ ರೋಸ್ಟ್ ಆಗಬೇಕು.

- ತರಕಾರಿ ಹೆಚ್ಚಲು ಟೈಮ್ ಇಲ್ಲ ಅಂದರೆ ಈರುಳ್ಳಿ, ಕೊತ್ತಂಬರಿ ಕರಿಬೇವು ಇಷ್ಟೇ ಹಾಕಿ ಮಾಡಬಹುದು.

- ಇದನ್ನು ಬಿಸಿಬಿಸಿ ಇರುವಾಗಲೇ ತಿಂದರೆ ರುಚಿ ಹೆಚ್ಚು.
 

(ಕೃಪೆ : ಹೆಬ್ಬಾರ್ ಕಿಚನ್)

click me!