
ಜಗತ್ತಿನಾದ್ಯಂತ ಭಿನ್ನ-ವಿಭಿನ್ನ ಜೀವನಶೈಲಿ (Lifestyle)ಯಿದೆ. ಜೊತೆಗೆ ಆಹಾರ ಸೇವನೆಯ ಶೈಲಿಯೂ (Eating style) ವ್ಯತ್ಯಸ್ಥವಾಗಿದೆ. ಉದಾಹರಣೆಗೆ ತಿನ್ನುವ ವಿಧಾನವನ್ನು ತೆಗೆದುಕೊಳ್ಳಿ, ರೋಮ್ ಮತ್ತು ಗ್ರೀಸ್‌ನ ನಾಗರಿಕತೆಯಲ್ಲಿ, ಮಲಗಿ ತಿನ್ನುವುದು ಫ್ಯಾಷನ್‌ನಲ್ಲಿತ್ತು. ಆದರೆ ಭಾರತೀಯ ನಾಗರಿಕತೆಯ ಪ್ರಕಾರ, ನೆಲದ ಮೇಲೆ ಕುಳಿತು ಆಹಾರ (Food)ವನ್ನು ಸೇವಿಸುವುದು ಉತ್ತಮವೆಂದು ಪರಿಗಣಿಸಲಾಗಿದೆ. ಆದರೆ ಇಂದಿನ ಬ್ಯುಸಿ ಲೈಫ್ ನಲ್ಲಿ ನಿಲ್ಲುವುದು, ನಡೆಯುವುದು ಮುಂತಾದ ರೀತಿಯಲ್ಲಿ ತಮ್ಮ ಅನುಕೂಲಕ್ಕೆ ತಕ್ಕಂತೆ ಆಹಾರ ಸೇವಿಸಲು ಜನರು ಇಷ್ಟಪಡುತ್ತಾರೆ.
ಹಿಂದೆಲ್ಲಾ ಊಟ ಮಾಡಲು ಜನರು ನಿರ್ಧಿಷ್ಟ ಕ್ರಮವನ್ನು ಅನುಸರಿಸುತ್ತಿದ್ದರು. ಶಿಸ್ತುಬದ್ಧವಾಗಿ ನೆಲದಲ್ಲಿ ಕುಳಿತು ಅನ್ನಕ್ಕೆ ನಮಸ್ಕರಿಸಿ ಕ್ರಮಬದ್ಧವಾಗಿ ಊಟ ಮಾಡುತ್ತಿದ್ದರು. ಆದರೆ ಕಾಲ ಬದಲಾದಂತೆ ಜನರಿಗೆ ಆಚಾರ-ವಿಚಾರವೇ ಮರೆತು ಹೋಗಿದೆ. ಅಥವಾ ಗಡಿಬಿಡಿಯ ಜೀವನದ ನಡುವೆ ಯಾವ ಕ್ಮವನ್ನೂ ಅನುಸರಿಸುವುದು ಬೇಕಾಗಿಲ್ಲ. ಬಿಝಿ ಲೈಫ್‌ಸ್ಟೈಲ್‌ನ್ನು ಅನುಸರಿಸುತ್ತಿರುವ ಜನರು ಊಟ ಮಾಡಲು, ನಿದ್ದೆ ಮಾಡಲು ಹೀಗೆ ದಿನಚರಿಯ ಪ್ರಮುಖ ಕೆಲಸಗಳನ್ನು ಮಾಡಲು ಕೂಡಾ ಸಮಯವಿಲ್ಲದೆ ಒದ್ದಾಡುತ್ತಿದ್ದಾರೆ. ಹೀಗಿರುವಾಗ ತಿನ್ನುವ ವಿಚಾರದಲ್ಲಿ ನಿರ್ಧಿಷ್ಟ ಕ್ರಮವನ್ನು ಅನುಸರಿಸುವ ಪ್ರಮೇಯ ಎಲ್ಲಿಂದ ಬಂತು. ಒಟ್ಟಾರೆ ತಿಂದರಾಯಿತು ಅಷ್ಟೆ. ನಿಂತುಕೊಂಡು, ನಡೆದುಕೊಂಡು, ಮಲಗಿಕೊಂಡು ಹೇಗೆ ಬೇಕಾದರೆ ಹಾಗಿದ್ದು ತಿನ್ನುತ್ತಾರೆ.
ಆಹಾರ ಸೀದು ಹೋಗಿದ್ರೂ ಮತ್ತೆ ಬಳಸ್ಬೋದು, ಈ ಟ್ರಿಕ್ಸ್ ಯೂಸ್ ಮಾಡಿ
ಅದರಲ್ಲೂ ಹೆಚ್ಚಾಗಿ ನಿಂತುಕೊಂಡು ತಿನ್ನುವ ಅಭ್ಯಾಸ (Habit)ಸಾಮಾನ್ಯವಾಗಿದೆ. ಹೊಟೇಲ್, ಕ್ಯಾಂಟೀನ್‌ಗಳಲ್ಲಿ ಸ್ಟ್ಯಾಂಡ್ ರೀತಿಯ ವ್ಯವಸ್ಥೆಯನ್ನು ಮಾಡಿ ತಿನ್ನುವ ಅಭ್ಯಾಸವನ್ನು ಸಾಮಾನ್ಯಗೊಳಿಸಲಾಗಿದೆ. ಇನ್ನು ಕಾಲೇಜು, ಆಫೀಸು ಎಂದು ಗಡಿಬಿಡಿಯಲ್ಲಿರುವವರು ಪ್ರತಿದಿನ ನಿಂತುಕೊಂಡು ತಿನ್ನುವ ಅಭ್ಯಾಸವನ್ನೇ ರೂಢಿ ಮಾಡಿಕೊಂಡಿರುತ್ತಾರೆ. ಆದರೆ, ಆಹಾರವನ್ನು ತಿನ್ನಲು ಉತ್ತಮ ಮಾರ್ಗ ಯಾವುದು? ನಿಂತಲ್ಲೇ ಊಟ (Dinner) ಮಾಡಿದರೆ ಏನಾಗುತ್ತದೆ? ಆ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳೋಣ
ಕುಳಿತುಕೊಂಡು ತಿನ್ನುವುದು, ನಿಂತುಕೊಂಡು ತಿನ್ನುವುದು ಯಾವುದು ಒಳ್ಳೆಯದು
ಆಹಾರವನ್ನು ಯಾವ ಸ್ಥಾನದಲ್ಲಿ ಸೇವಿಸಬೇಕು ಎಂಬುದರ ಬಗ್ಗೆ ನೀವು ಸ್ವಲ್ಪ ಗಮನ ಹರಿಸಿರಬೇಕು. ಆದರೆ ಒಂದೇ ಕಡೆ ಕುಳಿತು (Sitting) ಊಟ ಮಾಡಬೇಕು ಎಂದು ಮನೆಯ ಹಿರಿಯರು ಹೇಳುವುದನ್ನು ನೀವು ಆಗಾಗ ಕೇಳಿರಬಹುದು. ನೀವು ಅವರ ಮಾತುಗಳನ್ನು ಇಲ್ಲಿಯವರೆಗೆ ನಿರ್ಲಕ್ಷಿಸುತ್ತಿದ್ದರೆ, ನಿಂತುಕೊಂಡು ತಿನ್ನುವುದರಿಂದ ದೇಹದಲ್ಲಿ ಅನೇಕ ರೀತಿಯ ಅಸ್ವಸ್ಥತೆಗಳು ಉದ್ಭವಿಸುತ್ತವೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸುತ್ತವೆ ಎಂದು ತಿಳಿಯಿರಿ.
ಆಹಾರ ಮರು ಬಿಸಿ ಮಾಡಲು ಮೈಕ್ರೋವೇವ್ ಬಳಸೋ ಮುನ್ನ ಇವಿಷ್ಟು ಗೊತ್ತಿರ್ಲಿ
ಕುಳಿತು ಊಟ ಮಾಡಿದರೆ ಬೊಜ್ಜಿನ ಅಪಾಯವಿಲ್ಲ: ಒಂದು ಅಧ್ಯಯನದ ಪ್ರಕಾರ, ಕುಳಿತು ಊಟ ಮಾಡುವುದರಿಂದ ನಿಮ್ಮ ಮೆದುಳಿಗೆ ನೀವು ಆಹಾರವನ್ನು ಸೇವಿಸಿರುವ ಸಂದೇಶವನ್ನು ರವಾನಿಸುತ್ತದೆ. ಇದು ಊಟದ ಸಮಯದಲ್ಲಿ ಅತಿಯಾಗಿ ತಿನ್ನುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಬೊಜ್ಜು (Obesity) ಹೆಚ್ಚಾಗುವ ಅಪಾಯವೂ ಕಡಿಮೆಯಾಗುತ್ತದೆ.
ನಿಂತುಕೊಂಡು ತಿಂದರೆ ತ್ವರಿತ ಜೀರ್ಣಕ್ರಿಯೆ: ತ್ವರಿತ ಜೀರ್ಣಕ್ರಿಯೆಯು ಅಪಾಯಕಾರಿ ಏಕೆಂದರೆ ಇದು ಪೋಷಕಾಂಶಗಳನ್ನು ಹೀರಿಕೊಳ್ಳಲು ಕಡಿಮೆ ಸಮಯವನ್ನು ನೀಡುತ್ತದೆ ಮತ್ತು ಅನಿಲ ಮತ್ತು ಉಬ್ಬುವಿಕೆಗೆ ಕಾರಣವಾಗುತ್ತದೆ. ಕಾರ್ಬೋಹೈಡ್ರೇಟ್‌ಗಳು ಸರಿಯಾಗಿ ಜೀರ್ಣವಾಗದಿದ್ದಾಗ, ಅದು ಗ್ಯಾಸ್ (Gas) ಮತ್ತು ಉಬ್ಬುವಿಕೆಗೆ ಕಾರಣವಾಗಬಹುದು ಎಂದು ಸಾಬೀತಾಗಿದೆ.
ಬೇಗನೆ ಹಸಿವಿನ ಭಾವನೆ: ನಿಂತುಕೊಂಡು ತಿನ್ನುವ ಮೂಲಕ ಆಹಾರದ ಜೀರ್ಣಕ್ರಿಯೆಯು (Digestion) 30% ವೇಗವಾಗಿರುತ್ತದೆ ಮತ್ತು ತಿನ್ನುವ ಕೆಲವು ಗಂಟೆಗಳ ನಂತರ ಮಾತ್ರ ಹಸಿವಿನ ಭಾವನೆಯನ್ನು ಉಂಟುಮಾಡುತ್ತದೆ. ಅಧ್ಯಯನವೊಂದರ ಪ್ರಕಾರ ಆರಾಮವಾಗಿ ಕುಳಿತು ಊಟ ಮಾಡುವವರಿಗೆ ಈ ಸಮಸ್ಯೆ ಬರುವುದಿಲ್ಲ.
ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ: ತಿನ್ನುವಾಗ ನಿಮ್ಮ ಸ್ಥಾನವು ನಿಮ್ಮ ಜೀರ್ಣಕ್ರಿಯೆಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ನಿಂತಿರುವಾಗ ತಿನ್ನುವುದು ಹೊಟ್ಟೆಯನ್ನು ವೇಗವಾಗಿ ಖಾಲಿ ಮಾಡುತ್ತದೆ ಮತ್ತು ಆಹಾರವು ಸೂಕ್ಷ್ಮ ಕಣಗಳಾಗಿ ಒಡೆಯುವ ಮೊದಲು ಕರುಳಿನಲ್ಲಿ ಹಾದುಹೋಗುತ್ತದೆ. ಇದು ಕರುಳಿನ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಸ್ವಲ್ಪ ಮಟ್ಟಿಗೆ, ಹೊಟ್ಟೆಯಿಂದ ಕರುಳಿಗೆ ಆಹಾರದ ತಕ್ಷಣದ ಚಲನೆಯು ಗುರುತ್ವಾಕರ್ಷಣೆಯ ಬಲದಿಂದ ಉಂಟಾಗುತ್ತದೆ ಎಂದು ನಂಬಲಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.