ಭಾರತದ ರಸಂಗೆ ಅಮೆರಿಕನ್ನರು ಫಿದಾ..! ವೈರಲ್ ಆಯ್ತು ಸಿಂಪಲ್ ಅಡುಗೆ

By Suvarna News  |  First Published Dec 4, 2020, 4:23 PM IST

ರಸಂ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ..? ಭಾರತದ ಈ ಸಿಂಪಲ್ ಅಡುಗೆ ಎಲ್ಲರ ಮನೆಯಲ್ಲೂ ಸಾಮಾನ್ಯ. ಕೇರಳದಲ್ಲಿ ಲೋಟದಲ್ಲಿ ರಸಂ ಕುಡಿದರೆ, ಇನ್ನೂ ಕೆಲವು ಕಡೆ ಅನ್ನದ ಜೊತೆ ಸವಿಯುತ್ತಾರೆ. ಈ ರಸಂ ಈಗ ಅಮೆರಿದಲ್ಲೂ ಫೇಮಸ್ ಆಗಿದೆ


ಜಗತ್ತೇ ಅಮೆರಿಕ ಕೊರೋನಾ ಔಷಧರಿ ತಯಾರಿಸುತ್ತೆ ಎಂದು ಎದುರು ನೋಡುತ್ತಿರುವಾಗ ಅಮೆರಿಕದ ಜನ ಭಾರತದ ಸೌತ್ ಇಂಡಿಯನ್ ಅಡುಗೆ ಬಗ್ಗೆ ಯೋಚಿಸ್ತಿದ್ದಾರೆ, ಅದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅಂತೂ ಇಂತೂ ಭಾರತದ ರಸಂ ಅಮೆರಿಕದಲ್ಲಿ ಸುದ್ದಿ ಮಾಡಿದೆ. ಈ ವೈರಲ್ ಟ್ರೆಂಡ್ ಹಿಂದೆ ಇರೋರು ತಮಿಳುನಾಡಿನ ಶೆಫ್.

ಅಮೆರಿಕದಲ್ಲಿ ಲಾಕ್‌ಡೌನ್ ಸಂದರ್ಭ ಹೀಗೆ ಕುಳಿತಿದ್ದಾಗ ಶೆಫ್ ಅರುಣ್ ರಾಜದುರೈ ಅವರಿಗೆ ಈ ಐಡಿಯಾ ಬಂತು. ರಸಂ ಮಾಡೋಕೆ ಬಳಸೋ ಅರಶಿನ, ಬೆಳ್ಳುಳ್ಳಿ, ಶುಂಠಿ ಎಲ್ಲವೂ ಇಮ್ಯುನಿಟಿ ಹೆಚ್ಚಿಸುವ ಅಂಶಗಳು. ಇದು ಕೊರೋನಾ ರೋಗಿಗಳಿಗೆ ನೆರವಾಗಬಹುದು ಎಂದು ಅವರಿಗನಿಸಿತು.

Latest Videos

undefined

ಚುಮುಚುಮು ಚಳಿಗಾಲಕ್ಕೆ 5 ಬಿಸಿಬಿಸಿ, ಖಾರಖಾರ ರಸಂ ಹಾಗೂ ತಿಳಿಸಾರು ರೆಸಿಪಿಗಳು!

ಅರುಣ್ ಮೂರು ಆಸ್ಪತ್ರೆಗಳಲ್ಲಿ ಕೊರೋನಾ ರೋಗಿಗಳಿಗೆ ಆಹಾರವನ್ನು ಒದಗಿಸುತ್ತಿದ್ದರು. ಹಾಗಾಗಿ ರಸಂ ಅನ್ನು ಕಾಂಪ್ಲಿಮೆಂಟರಿ ಡಿಶ್ ಆಗಿ ಸೇರಿಸಿಕೊಳ್ಳಲು ನಿರ್ಧರಿಸಿದ್ರು. ಇದಕ್ಕೆ ಅದ್ಭುತ ಪ್ರತಿಕ್ರೊಯೆ ಸಿಕ್ಕಿದ್ದಲ್ಲದೆ, ಬೇಡಿಕೆ ಹೆಚ್ಚಾಯ್ತು.

ಈ ಇಮ್ಯುನಿಟಿ ಬೂಸ್ಟರ್ ಸೂಪ್ ಅರುಣ್ ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲಿಯೂ ಪ್ರಮುಖ ಮೆನುಗಳಲ್ಲಿ ಸೇರಿಕೊಂಡಿತು. ನಂತರ ಇದುವೇ ಬೆಸ್ಟ್ ಸೆಲ್ಲರ್ ಆಗಿಯೂ ಮೂಡಿ ಬಂತು. ಈ ಮೂಲಕ ನ್ಯೂಯಾರ್ಕ್, ನ್ಯೂಜೆರ್ಸಿ, ಕೆನಡಾ ಬ್ರಾಂಚ್‌ಗಳಲ್ಲಿಯೂ ರಸಂ ಸಿಕ್ಕಾಪಟ್ಟೆ ಫೇಮಸ್ ಆಯ್ತು. ಇದೀಗ ಪ್ರತಿದಿನ 500-600 ಕಪ್ ರಸಂ ಮಾರಾಟವಾಗುತ್ತಿದೆ.

ದಿನಾ ಒಂದ್ ಲೋಟ ರಸಂ ಕುಡೀರಿ, ರೋಗಕ್ಕೆ ಗುಡ್ ಬೈ ಹೇಳಿ...

ನಾನಿದನ್ನು ಸುಮ್ಮನೆ ಮನೆಯಲ್ಲಿದ್ದಾಗ ಪ್ರಯೋಗ ಮಾಡಿದೆ ಅಷ್ಟೇ. ಆದದರೆ ಈ ರೀತಿ ಸ್ಪಂದನೆ ಸಿಗುತ್ತೆ ಎಂದುಕೊಂಡಿರಲಿಲ್ಲ ಎನ್ನುತ್ತಾರೆ ಅರುಣ್. ಅರಿಯಾಲೂರಿನ ಜಯನ್‌ಕೊಂಡಂನ ಮೀನ್‌ಸುರುಟ್ಟಿ ಮೂಲದವರು ಅರುಣ್. 5 ವರ್ಷದ ಹಿಂದೆ ಅವರು ನ್ಯೂಜೆರ್ಸಿಗೆ ಶಿಫ್ಟ್ ಆಗಿದ್ದರು. 2018ರ ಬೆಸ್ಟ್ ಸೌತ್ ಈಸ್ಟ್ ಏಷ್ನ್ ಶೆಫ್ ಅವಾರ್ಡ್ ಕೂಡಾ ಪಡೆದಿದ್ದಾರೆ.

click me!