1 ರುಪಾಯಿಗೆ ಕಂಪ್ಲೀಟ್ ಊಟ ಕೊಡುತ್ತೆ ಈ ರೆಸ್ಟೋರೆಂಟ್..!

By Suvarna NewsFirst Published Dec 1, 2020, 1:33 PM IST
Highlights

1 ರೂಪಾಯಿಗೆ ಉಪ್ಪಿನಕಾಯಿ, ಪಲ್ಯ, ಅನ್ನ, ಸಾರು, ಸಾಂಬಾರು ಸೇರಿ ಕಂಪ್ಲೀಟ್ ಊಟವನ್ನು ಯಾರು ಕೊಡ್ತಾರೆ..? ಕೊಟ್ಟರೂ ಹೋಟೆಲ್ ಮುಚ್ಚಬೇಕಾದೀತು ಅಂತೀರಾ..? ಇಲ್ಲೊಂದು ರೆಸ್ಟೋರೆಂಟ್ 1 ರುಪಾಯಿಗೆ ಕಂಪ್ಲೀಟ್ ಊಟ ಕೊಡುತ್ತೆ.

ಭೂತೋವಾಲಿ ಗಲಿಯಲ್ಲಿರೋ ನಂಗ್ಲೋಯ್‌ನ ಶ್ಯಾಮ್‌ ರಸೋಯ್‌ ಹೋಟೆಲ್ ಮುಂದೆ ಬೆಳಗ್ಗೆ 11ರಿಂದ 1 ಗಂಟೆಯ ಮಧ್ಯೆ ಜನರ ದೊಡ್ಡ ಕ್ಯೂ ಇರುತ್ತದೆ. ಬಡ ಜನರು ಮಾತ್ರವಲ್ಲ ಶ್ರೀಮಂತರು, ಮಧ್ಯಮ ವರ್ಗದ ಜನ, ಅಲ್ಲಿ ಓಡಾಡೋ ಜನರೂ ಅಲ್ಲಿಗೆ ಭೇಟಿ ಕೊಡ್ತಾರೆ.

ಇವರೆಲ್ಲ ಇಲ್ಲಿ ಕಾಯೋದು 1 ರೂಪಾಯಿ ಊಟ ಮಾಡೋಕೆ. ಎರಡು ವರ್ಷದಿಂದ ಶ್ಯಾಮ್ ರಸೋಯ್ ಹೋಟೆಲ್ ನಡೆಸಿಕೊಂಡು ಬಂದಿರುವುದು ಪ್ರವೀಣ್ ಕುಮಾರ್ ಗೋಯಲ್. ದಿನವೂ ನಾವು 1 ಸಾವಿರದಿಂದ 1,100 ಜನರಿಗೆ ಆಹಾರ ಒದಗಿಸುತ್ತೇವೆ. ಹತ್ತಿರದ ಪ್ರದೇಶದ ಜನರಿಗೆ ಪಾರ್ಸೆಲ್‌ಗಳನ್ನೂ ಕಳುಹಿಸುತ್ತೇವೆ. ಇಂದ್ರಲೋಕ್, ಸಾಯಿ ಮಂದಿರ್‌ನಂತಹ ಪ್ರದೇಶಕ್ಕೆ ಆಟೋ ರಿಕ್ಷಾ ಮೂಲಕ ಆಹಾ ಒದಗಿಸಲಾಗುತ್ತದೆ. ಶ್ಯಾಮ್‌ ಕೀ ರಸೋಯ್‌ನಿಂದ ಒಟ್ಟು ಸುಮಾರು 2000 ಜನರು ಪ್ರತಿ ದಿನ ಉಣ್ಣುತ್ತಾರೆ ಎನ್ನುತ್ತಾರೆ ಪ್ರವೀಣ್.

ಚುಮುಚುಮು ಚಳಿಗಾಲಕ್ಕೆ 5 ಬಿಸಿಬಿಸಿ, ಖಾರಖಾರ ರಸಂ ಹಾಗೂ ತಿಳಿಸಾರು ರೆಸಿಪಿಗಳು!

ನಮಗೆ ಜನರು ಡೊನೇಷನ್ ಕೊಡುತ್ತಾರೆ. ನಿನ್ನೆ ಬಡ ವೃದ್ಧೆಯೊಬ್ಬರು ಬಂದು ನಮಗೆ ಸಾಮಾಗ್ರಿಗಳನ್ನು ಕೊಟ್ಟರು. ಇನ್ನೊಂದು ದಿನ ಒಬ್ಬರು ಗೋಧಿ ಕೊಟ್ಟರು. ಹಾಗಾಗಿ ಕಳೆದ 2 ತಿಂಗಳಿಂದ ಜನರಿಗಾಗಿ ನಾವಿದನ್ನು ನಡೆಸುತ್ತಿದ್ದೇವೆ ಎಂದಿದ್ದಾರೆ.

ಡಿಜಿಟಲ್ ಪೇಮೆಂಟ್ ಮೂಲಕವೂ ಜನರು ನಮಗೆ ಪಾವತಿಸುತ್ತಾರೆ. ಇನ್ನೂ 7 ದಿನ ಇದೇ ರೀತಿ ಆಹಾರ ಕೊಡುವ ಸಾಮರ್ಥ್ಯವಿದೆ. ಎಲ್ಲರೂ ಸಾಮಾಗ್ರಿಗಳನ್ನು ತಂದುಕೊಟ್ಟು ಇದನ್ನು ಹೀಗೆಯೇ ಮುಂದುವರಿಯಲು ಅವಕಾಶ ಮಾಡಿಕೊಡಿ ಎನ್ನುತ್ತಾರೆ ಪ್ರವೀಣ್

ಸೂಪರ್ ಆಗಿ ಅಡುಗೆ ಮಾಡ್ತಾರೆ ಅಮೆರಿಕದ ಭಾವೀ ಉಪಾಧ್ಯಕ್ಷೆ: ಜನರಿಗೆ ಥ್ಯಾಂಕ್ಸ್ ಹೇಳಿದ್ದು ಹೀಗೆ

ಪ್ರವೀಣ್ ಅವರಿಗೆ 6 ಜನ ಸಹಾಯಕರಿದ್ದಾರೆ. ಇವರಿಗೆ ವ್ಯಾಪಾರ ನಡೆದ ಆಧಾರದಲ್ಲಿ 300-400 ರೂಪಾಯಿ ನೀಡಲಾಗುತ್ತದೆ. ಇವರಿಲ್ಲದಿದ್ದರೆ ಕಾಲೇಜು ಹುಡುಗರು ಬಂದು ಇವರಿಗೆ ನೆರವಾಗುತ್ತಾರೆ. ಮೊದಲು ಥಾಲಿಗೆ 10 ರೂಪಾಯಿ ಇತ್ತು. ಹೆಚ್ಚು ಜನರನ್ನು ಆಕರ್ಷಿಸಲು 1 ರೂಪಾಯಿ ಮಾಡಲಾಯಿತು ಎನ್ನುತ್ತಾರೆ ಮಾಲೀಕ. ಉದ್ಯಮಿ ರಂಜೀತ್ ಎಂಬರು ಇವರಿಗೆ ಹೋಟೆಲ್ ನಡೆಸಲು ಸ್ಥಳ ನೀಡಿದ್ದಾರೆ.

click me!