ಅನಂತ್-ರಾಧಿಕಾ ಪ್ರಿ ವೆಡ್ಡಿಂಗ್‌ನಲ್ಲಿ ದಕ್ಷಿಣಭಾರತದ ಆಹಾರ ಒದಗಿಸುವ ಬೆಂಗಳೂರಿನ ರೆಸ್ಟೋರೆಂಟ್‌ ಇದೇ ನೋಡಿ!

By Vinutha Perla  |  First Published Jun 2, 2024, 11:20 AM IST

ಅನಂತ್‌-ರಾಧಿಕಾ ಮೊಲದ ಪ್ರಿ ವೆಡ್ಡಿಂಗ್‌ ಇವೆಂಟ್‌ನಲ್ಲಿ ಭೋಜನ ಸಂಪೂರ್ಣ ಸಮಾರಂಭದ ಹೈಲೈಟ್ ಆಗಿತ್ತು. ಹೀಗಾಗಿ ಸೆಕೆಂಡ್ ಪ್ರಿ ವೆಡ್ಡಿಂಗ್‌, ಮದುವೆಯ ಔತಣ ಹೇಗಿರಬಹುದು ಅನ್ನೋ ಕುತೂಹಲ ಎಲ್ಲರಲ್ಲಿದೆ. ಅದರಲ್ಲೂ ಈ ಬಾರಿ ಬೆಂಗಳೂರಿನ ರೆಸ್ಟೋರೆಂಟ್‌ವೊಂದು ಈ ಇವೆಂಟ್‌ನಲ್ಲಿ ದಕ್ಷಿಣಭಾರತದ ಫುಡ್ ಸರ್ವ ಮಾಡಲಿದೆ. ಆ ರೆಸ್ಟೋರೆಂಟ್ ಯಾವುದು?


ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ ನಡೆಯಲಿದೆ. ಜುಲೈ 12ರಂದು ಜೋಡಿ ವಿವಾಹವಾಗಲಿದ್ದಾರೆ. ಅನಂತ್-ರಾಧಿಕಾ ಅವರ ಕ್ರೂಸ್ ಪಾರ್ಟಿಯಲ್ಲಿ ಪಾಲ್ಗೊಳ್ಳಲು ಶಾರುಖ್ ಖಾನ್‌ನಿಂದ ಸಲ್ಮಾನ್ ಖಾನ್ವರೆಗೆ ಎಲ್ಲಾ ಬಾಲಿವುಡ್ ತಾರೆಯರು ಇಟಲಿ ತಲುಪಿದ್ದಾರೆ. ಅನೇಕ ವಿದೇಶಿ ಸೆಲೆಬ್ರಿಟಿಗಳು ಸಹ ಈ ಆಚರಣೆಯ ಭಾಗವಾಗುತ್ತಿದ್ದಾರೆ. ಅಂಬಾನಿ ಕುಟುಂಬ ಅದ್ಧೂರಿ ಮದುವೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ತಿದೆ. ಅದರಲ್ಲೂ ಔತಣಕೂಟ ಮದುವೆಯ ಹೈಲೈಟ್ ಆಗಲಿದೆ.

ಅನಂತ್‌-ರಾಧಿಕಾ ಪ್ರಿ ವೆಡ್ಡಿಂಗ್‌ ಇವೆಂಟ್‌ನಲ್ಲೂ ಭೋಜನ ಸಂಪೂರ್ಣ ಸಮಾರಂಭದ ಹೈಲೈಟ್ ಆಗಿತ್ತು. ಬರೋಬ್ಬರಿ 200 ಕೋಟಿ ರೂ. ವೆಚ್ಚವನ್ನು ಆಹಾರ ಸಿದ್ಧಗೊಳಿಸಲು ವ್ಯಯಿಸಲಾಗಿತ್ತು. ಹೀಗಾಗಿ ಸೆಕೆಂಡ್ ಪ್ರಿ ವೆಡ್ಡಿಂಗ್‌ ಮದುವೆಯ ಔತಣ ಹೇಗಿರಬಹುದು ಅನ್ನೋ ಕುತೂಹಲ ಎಲ್ಲರಲ್ಲಿದೆ.

Tap to resize

Latest Videos

undefined

ಅನಂತ್ ರಾಧಿಕಾ ವಿವಾಹ ಆಮಂತ್ರಣ ಪತ್ರಿಕೆ ಔಟ್; ಮದುವೆ ಯಾವಾಗ, ಎಲ್ಲಿ ನಡೆಯುತ್ತೆ ವಿವರ ಇಲ್ಲಿದೆ..

ಅಚ್ಚರಿಯ ವಿಷಯವೆಂದರೆ ದಕ್ಷಿಣಭಾರತದ ಹೆಸರಾಂತ ಹೊಟೇಲ್‌ವೊಂದು ಅನಂತ್‌-ರಾಧಿಕಾ ಪ್ರಿ ವೆಡ್ಡಿಂಗ್ ಇವೆಂಟ್‌ನಲ್ಲಿ ಸೌತ್ ಇಂಡಿಯನ್ ಆಹಾರವನ್ನು ಸರ್ವ್ ಮಾಡ್ತಿದೆ. ಆ ರೆಸ್ಟೋರೆಂಟ್ ಮತ್ಯಾವುದೂ ಅಲ್ಲ ರಾಮೇಶ್ವರಂ ಕೆಫೆ. ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರಾಮೇಶ್ವರಂ ಕೆಫೆ ಈ ಬಗ್ಗೆ ಹೇಳಿಕೊಂಡಿದೆ. ಮೆನುವಿನಲ್ಲಿ ಪುಡಿ ಇಡ್ಲಿ, ಪುಡಿ ದೋಸೆ ಮೊದಲಾದ ಐಟಂಗಳು ಇರಲಿವೆ ಎನ್ನಲಾಗ್ತಿದೆ. 

ಸೆಲೆಬ್ರಿಟಿ ಕ್ರೂಸ್‌ನಲ್ಲಿ ಅತ್ಯುತ್ತಮ ವಿವಾಹ ಪೂರ್ವ ಆಚರಣೆಗಳ ಭಾಗವಾಗಿರುವುದಕ್ಕೆ ರೆಸ್ಟೋರೆಂಟ್ ತನ್ನ ಸಂತೋಷವನ್ನು ವ್ಯಕ್ತಪಡಿಸಿದೆ. 'ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಇತ್ತೀಚಿನ ವಿವಾಹಪೂರ್ವ ಉತ್ಸವಗಳಲ್ಲಿ ದಕ್ಷಿಣ ಭಾರತದ ಪಾಕಪದ್ಧತಿಯನ್ನು ಒದಗಿಸುವ ಏಕೈಕ ರೆಸ್ಟೋರೆಂಟ್ ರಾಮೇಶ್ವರಂ ಕೆಫೆ' ಎಂದು ಸಂಸ್ಥೆಯ ಸಹಸಂಸ್ಥಾಪಕರಾದ ರಾಘವೇಂದ್ರ ರಾವ್ ಹೇಳಿದ್ದಾರೆ. ಮಾತ್ರವಲ್ಲ, 'ಸೆಲೆಬ್ರಿಟಿ ಕ್ರೂಸ್‌ನಲ್ಲಿ ನಡೆಯುತ್ತಿರುವ ಪ್ರಪಂಚದ ಅತ್ಯುತ್ತಮ ಪೂರ್ವ ವಿವಾಹ ಆಚರಣೆಗಳ ಭಾಗವಾಗಲು ನಾವು ಸಂತೋಷಪಡುತ್ತೇವೆ' ಎಂದು ಈ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

ಅಂಬಾನಿ ಮದುವೆ, ರಿಹಾನ್ನಾ 66 ಕೋಟಿ ರೂ, ಬಿಯೊನ್ಸ್ 33 ಕೋಟಿ, ಆರ್ಟಿಸ್ಟ್ ಚಾರ್ಜ್ ಇಷ್ಟೊಂದಾ?

ಇನ್‌ಸ್ಟಾಗ್ರಾಂನಲ್ಲಿ ಮಾಡಿರೋ ಪೋಸ್ಟ್ ಬಹು ಬೇಗನೇ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಒಬ್ಬ ಬಳಕೆದಾರರು, 'ರಾಮೇಶ್ವರಂ ಕೆಫೆ ತಂಡ ಭೂಮಿಯನ್ನು ವಶಪಡಿಸಿಕೊಂಡಿದೆ, ಈಗ ಸಮುದ್ರ, ಮುಂದೆ ವಾಯುಪ್ರದೇಶ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ಈ ಗಮನಾರ್ಹ ಸಾಧನೆಗೆ ಅಭಿನಂದನೆಗಳು. ನಮ್ಮ ಬೆಂಗಳೂರು ಬ್ರ್ಯಾಂಡ್ ಈಗ ಎಲ್ಲೆಡೆ ಹಬ್ಬಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. 

ಬಿಲಿಯನೇರ್ ಮುಖೇಶ್ ಅಂಬಾನಿಯವರ ಪುತ್ರ ಅನಂತ್ ಅಂಬಾನಿ ಅವರು ಜುಲೈ 12 ರಂದು ಮುಂಬೈನಲ್ಲಿ ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಸಮಾರಂಭವು ಮುಂಬೈನ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್ (BKC) ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ.

click me!