ಇಟಲಿಯಿಂದ ಆರಂಭಗೊಂಡ ಫ್ರಾನ್ಸ್ ವರೆಗೆ ಹಡಗಿನಲ್ಲಿ ಆಯೋಜಿಸಿದ್ದ ಅನಂತ್ ಅಂಬಾನಿ ಪ್ರೀ ವೆಡ್ಡಿಂಗ್‌ನಲ್ಲಿ ಬೆಂಗಳೂರಿನ ರಾಮೇಶ್ವರಂ ಕೆಫೆ ಆಹಾರ ಮೇಳೈಸಿದೆ. ಇಡ್ಲಿ, ದೋಸೆ ಸೇರಿದಂತೆ ಹಲವು ಮೆನು ಕೂಡ ಬಹಿರಂಗವಾಗಿದೆ.
ಮುಂಬೈ(ಜೂನ್ 01) ಉದ್ಯಮಿ ಮುಕೇಶ್ ಅಂಬಾನಿ ಕಿರಿಯ ಪುತ್ರ ಅನಂತ್ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ 2ನೇ ಪ್ರೀ ವೆಡ್ಡಿಂಗ್ ಅದ್ಧೂರಿಯಾಗಿ ನಡೆದಿದೆ. ಮೇ 29 ರಿಂದ ಜೂನ್ 1ರ ವರೆಗೆ ಹಡಗಿನಲ್ಲಿ ಈ ಪ್ರೀ ವೆಡ್ಡಿಂಗ್ ಆಯೋಜಿಸಲಾಗಿತ್ತು. ಬಾಲಿವುಡ್‌ನ ಬಹುತೇಕ ಸೆಲೆಬ್ರೆಟಿಗಳು, ಅಂತಾರಾಷ್ಟ್ರೀಯ ಸೆಲೆಬ್ರೆಟಿಗಳು ಸೇರಿದಂತೆ 600ಕ್ಕೂ ಹೆಚ್ಚು ಆಹ್ವಾನಿತ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಇಟಲಿಯಿಂದ ಹಡಗು ಪ್ರಯಾಣ ಆರಂಭಿಸಿ ಸ್ಪೇನ್ ಮೂಲಕ ದಕ್ಷಿಣ ಫ್ರಾನ್ಸ್‌ನಲ್ಲಿ ಕಾರ್ಯಕ್ರಮ ಅಂತ್ಯಗೊಂಡಿದೆ. ವಿಶೇಷ ಅಂದರೆ ಈ ಕಾರ್ಯಕ್ರಮಕ್ಕೆ ಬೆಂಗಳೂರಿನ ರಾಮೇಶ್ವರಂ ಕೆಫೆ ಆಹಾರ ಪೂರೈಸಿದೆ.
ಹೌದು, ಬೆಂಗಳೂರಿನ ರಾಮೇಶ್ವರಂ ಕೆಫೆ ದಕ್ಷಿಣ ಭಾರತದ ಆಹಾರವನ್ನು ನೀಡಿದೆ. ಹಡಗಿನಲ್ಲಿ ಭಾರತೀಯ ಆಹಾರ ಸ್ಟಾಲ್ ಇಡಲಾಗಿತ್ತು. ಇದರಲ್ಲಿ ರಾಮೇಶ್ವರಂ ಕೆಫೆ, ದಕ್ಷಿಣ ಭಾರತದ ತಿಂಡಿ ತಿನಿಸುಗಳನ್ನು ಪೂರೈಸಿತ್ತು. ಪೋಡಿ ಇಡ್ಲಿ, ಪೋಡಿ ದೋಸೆ ಸೇರಿದಂತೆ ದಕ್ಷಿಣ ಭಾರತದ ಜನಪ್ರಿಯ ತಿನಸುಗಳನ್ನು ನೀಡಲಾಗಿದೆ. ಫಿಲ್ಟರ್ ಕಾಫಿಯನ್ನೂ ರಾಮೇಶ್ವರಂ ಕೆಫೆ ನೀಡಿದೆ. ಆಹ್ವಾನಿತ ಗಣ್ಯರು ರಾಮೇಶ್ವರಂ ಕೆಫೆ ಆಹಾರ ಸೇವಿಸಿದ್ದಾರೆ.
undefined
ಕ್ಷಮೆಯಾಚಿಸಿದ ರಾಮೇಶ್ವರಂ ಕೆಫೆ ಮಾಲೀಕ; ಇದು ಕ್ಷಮೆಯೋ? ಬೆದರಿಕೆಯೋ? ಎಂದು ಕೇಳಿದ ನೆಟ್ಟಿಗರು
ಈ ಕರಿತ ಸಂತಸವನ್ನು ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ಸಾಮಾಜಿಕ ಮಾಧ್ಯಮದ ಮೂಲಕ ಹಂಚಿಕೊಂಡಿದ್ದಾರೆ. ರಾಮೇಶ್ವರಂ ಕೆಫೆಗೆ ಮತ್ತೊಂದು ಗರಿ. ವಿಶ್ವದ ಅತ್ಯುತ್ತಮ ಪ್ರೀ ವೆಡ್ಡಿಂಗ್ ಕಾರ್ಯಕ್ರಮದ ಭಾಗವಾಗಿರುವುದು ನಮ್ಮ ಸಂತಸ ಇಮ್ಮಡಿಗೊಳಿಸಿದೆ. ಸ್ಪೇನ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ನಾವು ದಕ್ಷಿಣ ಭಾರತದ ಅತ್ಯುತ್ತಮ ಆಹಾರ ನೀಡಿದ್ದೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಇದೀಗ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಅನಂತ್ ಅಂಬಾನಿ ಮತ್ತು ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಪುತ್ರಿ ರಾಧಿಕಾ ಮರ್ಚೆಂಟ್ ಜು.12 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ವಿವಾಹವಾಗಲಿದ್ದಾರೆ. ಜು.14 ರಂದು ಮದುವೆಯ ಆರತಕ್ಷತೆ ಏರ್ಪಡಿಸಿಲಾಗಿದೆ. ಸಾಂಪ್ರದಾಯಿಕ ವೈದಿಕ ಹಿಂದೂ ಸಾಂಪ್ರದಾಯದಂತೆ ವಿವಾಹ ಕಾರ್ಯಗಳು ಮತ್ತು ಸಮಾರಂಭ ನಡೆಯಲಿದೆ. ಅನಂತ್ ಅಂಬಾನಿ ರಾಧಿಕಾ ಅವರನ್ನು ಮದುವೆಯಾಗಲಿದ್ದಾರೆ ಎಂದು 2019ರಲ್ಲಿ ಘೋಷಿಸಲಾಗಿತ್ತು. ಕಳೆದ ಜನವರಿಯಲ್ಲಿ ಗುಜರಾತ್‌ನ ಜಾಮ್‌ನಗರ ಸಮೀಪ ಅದ್ಧೂರಿ ನಿಶ್ಚಿತಾರ್ಥ ನಡೆದಿತ್ತು. ಇದರಲ್ಲಿ ಜಾಗತಿಕ ಗಣ್ಯರು ಭಾಗಿಯಾಗಿದ್ದರು.
ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್, ಹುಬ್ಬಳ್ಳಿಯಲ್ಲಿ LeT ಭಯೋತ್ಪಾದನೆ ಪ್ರಕರಣದ ಶೊಯಿಬ್ ಅರೆಸ್ಟ್!