
ರಕ್ಷಾ ಬಂಧನದಂದು (Raksha Bandhan) ತಯಾರಿಸುವ ಸಿಹಿ ತಿಂಡಿ (Sweets)ಗಳ ಮಾಧುರ್ಯ, ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತೆ. ಈ ಬಾರಿ ಆಗಸ್ಟ್ 9 ರಂದು ರಕ್ಷಾ ಬಂಧನ ಆಚರಿಸಲಾಗ್ತಿದೆ. ಪ್ರತಿ ಬಾರಿ ಅದೇ ಜಾಮೂನು, ಪಾಯಸ ಮಾಡಿ ಬೋರ್ ಆಗಿದೆ ಅನ್ನೋರು ಈ ಬಾರಿ ರಕ್ಷಾ ಬಂಧನಕ್ಕೆ ಹೊಸ ಸಿಹಿ ತಯಾರಿಸಿ, ನಿಮ್ಮ ಸಹೋದರರಿಗೆ ಸರ್ಪ್ರೈಸ್ ನೀಡ್ಬಹುದು. ನಿಮಗಾಗಿ ಒಂದಿಷ್ಟು ಸಿಹಿ ತಿಂಡಿಗಳ ರೆಸಿಪಿ ಇಲ್ಲಿದೆ.
ಖರ್ಜೂರದ ಲಡ್ಡು ಮಾಡಲು ಬೇಕಾಗುವ ಪದಾರ್ಥ :
1 ಕಪ್ ಖರ್ಜೂರ
1/2 ಕಪ್ ಕತ್ತರಿಸಿದ ಬಾದಾಮಿ
1/2 ಕಪ್ ಕತ್ತರಿಸಿದ ವಾಲ್ನಟ್ಸ್
1/4 ಕಪ್ ತುರಿದ ತೆಂಗಿನಕಾಯಿ
1 ಟೀಸ್ಪೂನ್ ಏಲಕ್ಕಿ ಪುಡಿ
ಖರ್ಜೂರದ ಲಡ್ಡು ಮಾಡುವ ವಿಧಾನ :
• ಮೊದಲು ಖರ್ಜೂರದ ಬೀಜ ತೆಗೆದು ಅದನ್ನು ನಯವಾದ ಪೇಸ್ಟ್ ಮಾಡ್ಕೊಳ್ಳಿ.
• ಇದಕ್ಕೆ ಕತ್ತರಿಸಿದ ಬಾದಾಮಿ, ಕತ್ತರಿಸಿದ ವಾಲ್ನಟ್ ಮತ್ತು ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ.
• ಕೈಗೆ ತುಪ್ಪ ಸವರಿಕೊಂಡು ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ
• ಈ ಉಂಡೆಗಳನ್ನು ತೆಂಗಿನಕಾಯಿ ತುರಿಯಲ್ಲಿ ಉರುಳಿಸಿ.
• ಈ ಉಂಡೆಯನ್ನು 30 ನಿಮಿಷಗಳ ಕಾಲ ಫ್ರಿಜ್ ನಲ್ಲಿ ಇಡಿ.
• ರುಚಿಯಾದ ಮತ್ತು ಆರೋಗ್ಯಕರ ಲಡ್ಡು ಸಿದ್ಧ.
ಬೇಯಿಸಿದ ಆಪಲ್ ಖೀರ್ ಮಾಡಲು ಬೇಕಾಗುವ ಪದಾರ್ಥ :
2 ಮಧ್ಯಮ ಗಾತ್ರದ ಸೇಬು
2 ಕಪ್ ಹಾಲು
1/4 ಕಪ್ ಬೆಲ್ಲಅಥವಾ ಜೇನುತುಪ್ಪ
1/4 ಕಪ್ ಅಕ್ಕಿ
1/4 ಟೀಸ್ಪೂನ್ ಏಲಕ್ಕಿ ಪುಡಿ
ಒಣಗಿದ ಹಣ್ಣು (ಬಾದಾಮಿ, ಪಿಸ್ತಾ)
1 ಟೀಸ್ಪೂನ್ ತುಪ್ಪ
ಬೇಯಿಸಿದ ಆಪಲ್ ಖೀರ್ ಮಾಡುವ ವಿಧಾನ :
• ಓವನ್ ಅನ್ನು 180°C (350°F) ಗೆ ಮೊದಲೇ ಕಾಯಿಸಿ. ಸಿಪ್ಪೆ ತೆಗೆದು ಕತ್ತರಿಸಿದ ಸೇಬುಗಳನ್ನು ಬೇಕಿಂಗ್ ಟ್ರೇನಲ್ಲಿ ಹಾಕಿ. ತುಪ್ಪ/ತೆಂಗಿನ ಎಣ್ಣೆಯನ್ನು ಚಿಮುಕಿಸಿ ಮತ್ತು ಮೃದುವಾಗುವವರೆಗೆ 20-25 ನಿಮಿಷಗಳ ಕಾಲ ಬೇಯಿಸಿ.
• ಅತಿ ಕಡಿಮೆ ನೀರನ್ನು ಹಾಕಿ, ಗ್ಯಾಸ್ ಒಲೆ ಮೇಲೆಯೂ ನೀವು ಬೇಯಿಸಿಕೊಳ್ಳಬಹುದು.
• ಒಂದು ಪ್ಯಾನ್ನಲ್ಲಿ ಅಕ್ಕಿಯನ್ನು ಹಾಲಿನ ಜೊತೆ ಸೇರಿಸಿ ಬೇಯಿಸಿ. ಅನ್ನ ಮೃದುವಾಗಬೇಕು.
• ಅನ್ನ ಬೇಡ ಎನ್ನುವವರು ಅಕ್ಕಿಯನ್ನು ಸ್ಕಿಪ್ ಮಾಡ್ಬಹುದು.
• ಬೆಂದ ಹಾಲಿನ ಅನ್ನಕ್ಕೆ ಬೇಯಿಸಿದ ಸೇಬುಗಳನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
• ಇದಕ್ಕೆ ಬೆಲ್ಲ/ಜೇನುತುಪ್ಪ ಮತ್ತು ಏಲಕ್ಕಿ ಸೇರಿಸಿ ಮಿಕ್ಸ್ ಮಾಡಿ
• ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯ ಬೇಯಿಸಿ ನಂತ್ರ ಅದಕ್ಕೆ ಡ್ರೈ ಫ್ರೂಟ್ಸ್ ಸೇರಿಸಿ.
ಓಟ್ಸ್ ಮತ್ತು ಬಾದಾಮಿ ಬರ್ಫಿಗೆ ಬೇಕಾಗುವ ಪದಾರ್ಥ :
1 ಕಪ್ ರೋಲ್ಡ್ ಓಟ್ಸ್
1/2 ಕಪ್ ಬಾದಾಮಿ ಹಿಟ್ಟು
1/4 ಕಪ್ ಜೇನುತುಪ್ಪ
1/4 ಕಪ್ ತೆಂಗಿನ ಎಣ್ಣೆ
1 ಟೀಸ್ಪೂನ್ ವೆನಿಲ್ಲಾ ಎಕ್ಸ್ಟ್ರಾಕ್ಟ್
ಚಿಟಿಕೆ ಉಪ್ಪು
ಅಲಂಕರಿಸಲು ಕತ್ತರಿಸಿದ ಬಾದಾಮಿ
ಓಟ್ಸ್ ಬಾದಾಮಿ ಬರ್ಫಿ ಮಾಡುವ ವಿಧಾನ :
• ಓಟ್ಸ್ ಅನ್ನು ಬಾಣಲೆಗೆ ಹಾಕಿ ಗೋಲ್ಡನ್ ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ನಂತ್ರ ಗ್ಯಾಸ್ ಬಂದ್ ಮಾಡಿ ಪಕ್ಕಕ್ಕಿಡಿ.
• ಓಟ್ಸ್ ತಣ್ಣಗಾದ ನಂತ್ರ ಅದನ್ನು ಪುಡಿ ಮಾಡಿ.
• ಒಂದು ಬಟ್ಟಲಿನಲ್ಲಿ ಓಟ್ಸ್ ಪುಡಿ, ಬಾದಾಮಿ ಹಿಟ್ಟು, ಜೇನುತುಪ್ಪ, ತೆಂಗಿನ ಎಣ್ಣೆ, ವೆನಿಲ್ಲಾ ಎಕ್ಸ್ಟ್ರಾಕ್ಸ್ ಮತ್ತು ಉಪ್ಪು ಹಾಕಿ.
• ಇದನ್ನು ಚೆನ್ನಾಗಿ ಮಿಕ್ಸ್ ಮಾಡಿ. ನಂತ್ರ ಇದನ್ನು ತುಪ್ಪ ಸವರಿದ ಟ್ರೇಗೆ ಸುರಿಯಿರಿ. ಅಲಂಕಾರಕ್ಕೆ ಅದ್ರ ಮೇಲೆ ಬಾದಾಮಿ ಸೇರಿಸಿ.
• ಇದನ್ನು 1-2 ಗಂಟೆಗಳ ಕಾಲ ಫ್ರಿಡ್ಜ್ ನಲ್ಲಿಡಿ.
• ನಂತ್ರ ಫ್ರಿಜ್ ನಿಂದ ತೆಗೆದು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ ಸರ್ವ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.