ಧಾರವಾಡ ಅಂದ್ರೆ ತಕ್ಷಣಕ್ಕೆ ನೆನಪಾಗೋದು ಧಾರವಾಡ ಪೇಡಾ. ಕೇಂದ್ರ ರೇಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪ್ರಲ್ಹಾದ ಜೋಶಿ ಧಾರವಾಡ ರೇಲ್ವೆ ನಿಲ್ದಾಣದ ಉದ್ಘಾಟನೆ ವೇಳೆ ಇದನ್ನು ನೀಡಿದ್ದು, ಸಚಿವ ಅಶ್ವಿನ್ ವೈಷ್ಣವ್ ಪೇಡಾ ಸವಿದು ವಾವ್ ಅಂದಿದ್ದಾರೆ. ಹಾಗಿದ್ರೆ ಟೇಸ್ಟಿ ಧಾರವಾಡ ಪೇಡಾ ಮಾಡೋದು ಹೇಗೆ ತಿಳ್ಕೊಳ್ಳೋಣ.
ಧಾರವಾಡ ಪೇಡ ಕರ್ನಾಟಕ ರಾಜ್ಯದ ಹುಬ್ಬಳ್ಳಿ-ಧಾರವಾಡಗಳಲ್ಲಿ ಪ್ರಸಿದ್ಧವಾಗಿರುವ ಸಿಹಿ ತಿಂಡಿಯಾಗಿದೆ. ಇದು ಉತ್ತರ ಕರ್ನಾಡಕದ ಧಾರವಾಡ ಸ್ಥಳದಲ್ಲಿನ ಉತ್ಪಾದನೆಯಾಗಿದೆ. ಹೀಗಾಗಿ ಸ್ಥಳನಾಮವನ್ನು ಇಟ್ಟುಕೊಂಡೇ ಈ ಸಿಹಿತಿಂಡಿ ಹೆಸರುವಾಸಿಯಾಗಿದೆ. ಧಾರವಾಡ ಪೇಡ ಎಂಬ ಹೆಸರಲ್ಲೇ ದೇಶಾದ್ಯಂತ ಪ್ರಸಿದ್ಧವಾಗಿದೆ. ಹುಬ್ಬಳ್ಳಿಯಲ್ಲಿ ಈ ಸಿಹಿಯು ಉತ್ತಮ ದರ್ಜೆಯಲ್ಲಿ ಠಾಕೂರರ ಪೇಡೆ ಅಂಗಡಿಯಲ್ಲಿ ದೊರೆಯುತ್ತದೆ. ಈ ಸಿಹಿಯು ಸುಮಾರು 175 ವರ್ಷಗಳಷ್ಟು ಹಿಂದಿನಿಂದ ಬಳಕೆಯಲ್ಲಿದೆ.. ಧಾರವಾಡ ಫೇಡವು ಭಾರತದ ಭೌಗೋಳಿಕ ಚಿಹ್ನೆಗಳಲ್ಲಿ ಒಂದಾಗಿದೆ. ಇದರ GI ಟ್ಯಾಗ್ ಸಂಖ್ಯೆಯು 85 ಆಗಿದೆ. ದೇಶಾದ್ಯಂತ ಹೆಸರುವಾಸಿಯಾಗಿರುವ ಪೇಡಾವನ್ನು ಕೇಂದ್ರ ರೇಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಪ್ರಲ್ಹಾದ ಜೋಶಿ ಧಾರವಾಡ ರೇಲ್ವೆ ನಿಲ್ದಾಣದ ಉದ್ಘಾಟನೆ ವೇಳೆ ನೀಡಿದ್ದಾರೆ. ಸಚಿವರು ಇದನ್ನು ಸವಿದು ವಾವ್ ಅಂದಿದ್ದಾರೆ.
ಧಾರವಾಡದವರು ಫೇಡಾ ಕೊಟ್ಡರೆ ವಂದೇ ಭಾರತ್ ಕೊಡುತ್ತೇನೆ. ಇದೀಗ ಪೇಡಾ ಸಿಕ್ಕಿದೆ ನನಗೆ ನಾನು ಪೇಡಾ ತೆಗೆದುಕೊಂಡು ಜೋಶಿ ಅವರೊಂದಿಗೆ ಮೋದಿ ಬಳಿ ಹೋಗುತ್ತೇನೆ. ಧಾರವಾಡಕ್ಕೆ ವಂದೇ ಭಾರತ್ ನೀಡುವಂತೆ ಕೇಳುತ್ತೇನೆ ಎಂದು ಕೇಂದ್ರ ರೇಲ್ವೆ ಸಚಿವ ಅಶ್ವಿನ್ ವೈಷ್ಣವ್ ಹೇಳಿದ್ದಾರೆ. ಹೀಗಿರುವಾಗ ದೇಶಾದ್ಯಂತ ಖ್ಯಾತಿ ಪಡೆದಿರುವ ಧಾರವಾಡದ ಪೇಡಾ ಇತಿಹಾಸ, ಅದರ ಪ್ರಾಮುಖ್ಯತೆ..ಅದನ್ನು ಮಾಡೋದು ಹೇಗೆ ತಿಳಿಯೋಣ.
undefined
ಧಾರವಾಡ ಪೇಡದಷ್ಟೇ ಗೊಟ್ಟದ ಉಪ್ಪಿನಕಾಯಿ ಫೇಮಸ್
ಧಾರವಾಡ ಪೇಡ ಆರಂಭವಾಗಿದ್ದು ಯಾವಾಗ ?
ಧಾರವಾಡದ ಪೇಡಕ್ಕೆ ಸುಮಾರು ಒಂದೂವರೆ ಶತಮಾನದಷ್ಟು ಸುದೀರ್ಘ ಇತಿಹಾಸವಿದೆ. ಬೇರೆ ಪೇಡಾಗಳಿಗೆ ಹೋಲಿಸಿದರೆ ಇದು ತನ್ನದೇ ಆದ ವಿಶಿಷ್ಠ ರುಚಿ (Taste)ಯಿಂದ ಹೆಸರು ಗಳಿಸಿದೆ. ಶತಮಾನಗಳ ಹಿಂದೆ ಉತ್ತರ ಭಾರತದ ಲಖ್ನೋ ನಗರದಿಂದ ವಲಸೆಬಂದ 'ಥಾಕೂರ್ ಪರಿವಾರ', ಜೀವನೋಪಾಯಕ್ಕಾಗಿ ಪಾರಂಪರಿಕವಾಗಿ ಚಾಲ್ತಿಯಲ್ಲಿದ್ದ ಪೇಡಾ ತಯಾರಿಕೆಯನ್ನು ಧಾರವಾಡದಲ್ಲೂ ಮುಂದುವರೆಸಿದರು. ಮೊದಲು ಥಾಕೂರ್ ಫೇಡ ಎಂದು ಹೇಳಿ ಮಾರುತ್ತಿದ್ದ ಸಿಹಿತಿನಿಸು, ಕಾಲಕ್ರಮೇಣದಲ್ಲಿ 'ಧಾರವಾಡ್ ಪೇಡ' ಎಂಬ ಹೆಸರಿನಿಂದ ಜನಪ್ರಿಯಗೊಂಡಿತು ಎಂದು ತಿಳಿದುಬಂದಿದೆ. ಕೃತಕಬಣ್ಣ ಇಲ್ಲವೇ ರಾಸಾಯನಿಕಗಳ ಬಳಕೆ ಇಲ್ಲದ ಶುದ್ಧವಾದ ಹಾಲು, ಸಕ್ಕರೆಗಳ ಹದವಾದ ಮಿಶ್ರಣದಿಂದ ಧಾರವಾಡ ಪೇಡಾವನ್ನು ತಯಾರಿಸುತ್ತಾರೆ.
ಥಾಕುರ್ ಕುಟುಂಬ ಅತಿ ಶ್ರದ್ಧೆ ಮತ್ತು ಸಂಯಮದಿಂದ ಧಾರವಾಡ ಪೇಡಾ ಸಿಹಿತಿಂಡಿಯನ್ನು ತಯಾರಿಸುತ್ತಾ ಬಂದಿದೆ. ಕೇವಲ ಅತ್ಯುತ್ತಮ ರುಚಿ ಮತ್ತು ಗುಣಮಟ್ಟ (Quality)ವನ್ನು ಕಾಯ್ದುಕೊಂಡು ಬಂದು ಈಗ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ವಲಯದಲ್ಲೂ ಹೆಸರು ಗಳಿಸಿದೆ. ಪ್ರತಿದಿನವು ತಾಜಾವಾಗಿ ತಯಾರಾಗುವ ಈ ಸಿಹಿತಿಂಡಿ ಕೊಳ್ಳಲು ಗ್ರಾಹಕರು (Customers) ಸರತಿಯಲ್ಲಿ ಕಾಯುತ್ತಾರೆ. ಎಲ್ಲರ ನೆಚ್ಚಿನ ಧಾರವಾಡ ಪೇಡಾಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಬಾಯಲ್ಲಿಟ್ಟರೆ ಕರಗೋ ಬೆಣ್ಣೆ ದೋಸೆ ಬೆಂಗಳೂರಲ್ಲಿ ಎಲ್ಲೆಲ್ಲಾ ಸಿಗುತ್ತೆ ?
ಧಾರವಾಡ ಪೇಡ ತಯಾರಿಸುವುದು ಹೇಗೆ ?
ಬೇಕಾಗುವ ಸಾಮಗ್ರಿಗಳು
ಹಾಲು 1 ಲೀಟರ್
ಅರ್ಧ ಕಪ್ ನಷ್ಟು ಸಕ್ಕರೆ
ತುಪ್ಪ 1 ದೊಡ್ಡ ಚಮಚ
ಲಿಂಬೆ ರಸ 3 ದೊಡ್ಡ ಚಮಚ
ಮಾಡುವ ವಿಧಾನ
ಹಂತ 1: 1 ಲೀಟರ್ ಹಾಲನ್ನು ಕುದಿಸಿಕೊಂಡು ನಂತರ ಅದಕ್ಕೆ ಲಿಂಬೆ ರಸ (Lemon juice) ಹಿಂಡಿ ಮಿಕ್ಸ್ ಮಾಡಬೇಕು. ಒಡೆದ ಹಾಲನ್ನು ಒಂದು ಬಟ್ಟೆಯ ಮೂಲಕ ಗಾಳಿಸಿ ತಣ್ಣೀರನ್ನು ಮೇಲ್ಗಡೆ ಹಾಕಿಕೊಳ್ಳಬೇಕು. ಹೀಗೆ ತೆಗೆದ ಪನೀರನ್ನು ಬಟ್ಟೆಯಲ್ಲಿ 15 ನಿಮಿಷ ಹಾಗೆಯೇ ಬಿಡಬೇಕು..
ಹಂತ 2: ಪನೀರನ್ನು ಒಂದು ಪಾತ್ರೆ ಅಥವಾ ಬಾಣಲೆಗೆ ಹುಡಿ ಮಾಡಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಬೇಕು.ತಲಾ 1 ಚಮಚ ತುಪ್ಪ (Ghee) ಮತ್ತು ಸಕ್ಕರೆ (Sugar) ಹಾಕಿ ಚೆನ್ನಾಗಿ ಮಿಶ್ರಣ ಮಾಡಿ 5 ನಿಮಿಷ ಹುರಿದು ನಂತರ ಮತ್ತೆ ಒಂದು ಚಮಚ ಸಕ್ಕರೆ ಹಾಕಬೇಕು.ಮತ್ತೆ 15 ನಿಮಿಷ ಅಥವಾ ಕಂದು ಬಣ್ಣಕ್ಕೆ ತಿರುಗುವ ತನಕ ಹುರಿದು ನಂತರ ಅದನ್ನು ಒಂದು ಗ್ರೈಂಡರ್ ಗೆ ಹಾಕಿ ರುಬ್ಬಬೇಕು.
ಹಂತ 3: ರುಬ್ಬಿದ ಪುಡಿಯನ್ನು ಪುನಃ ಅದೇ ಬಾಣಲೆಗೆ ಹಾಕಿ ೫ ನಿಮಿಷ ಹುರಿದು ನಂತರ ಪುನಃ 1 ದೊಡ್ಡ ಚಮಚ ಸಕ್ಕರೆ,೩ ಚಮಚ ಹಾಲು ಹಾಕಿ ಹುರಿಯುತ್ತಿರಬೇಕು.ಇನ್ನೂ 10 ನಿಮಿಷ ಹಾಗೆ ಹುರಿದು ಕೆಳಗಿಳಿಸಿ ಸ್ವಲ್ಪ ತಣಿಸಿ ನಂತರ ಪುನಃ ಗ್ರೈಂಡರ್ ಗೆ ಹಾಕಿ ರುಬ್ಬಿ ಪುಡಿ ಮಾಡಬೇಕು.ಹೀಗೆ ರುಬ್ಬಿದ ಪುಡಿಯಿಂದ ಪೇಡಾ ಕಟ್ಟಿ ಸಕ್ಕರೆ ಮೇಲೆ ಹೊರಳಿಸಿದರೆ ಧಾರವಾಡ ಪೇಡಾ ಸವಿಯಲು ಸಿದ್ಧ.