ಧಾರವಾಡ ಪೇಡದಷ್ಟೇ ಗೊಟ್ಟದ ಉಪ್ಪಿನಕಾಯಿ ಫೇಮಸ್

life | Wednesday, May 23rd, 2018
Suvarna Web Desk
Highlights

ಊಟದಲ್ಲಿ ಉಪ್ಪಿನಕಾಯಿ ಇದ್ದರೆ ಆ ಮಜಾನೇ ಬೇರೆ. ಅದರಲ್ಲೂ ಉತ್ತರ ಕರ್ನಾಟಕದ ಮಂದಿಗಂತೂ ರೊಟ್ಟಿ, ಕಾಳ ಪಲ್ಲೆ, ಶೇಂಗಾ ಚೆಟ್ನಿ, ಕೆಂಪು ಖಾರದ ಜೊತೆಗೆ ಗೊಟ್ಟದ ಉಪ್ಪಿನಕಾಯಿ ನಂಜಿಕೊಂಡರೆ ಸ್ವರ್ಗ ಸುಖ.

ಊಟದಲ್ಲಿ ಉಪ್ಪಿನಕಾಯಿ ಇದ್ದರೆ ಆ ಮಜಾನೇ ಬೇರೆ. ಅದರಲ್ಲೂ ಉತ್ತರ ಕರ್ನಾಟಕದ ಮಂದಿಗಂತೂ ರೊಟ್ಟಿ, ಕಾಳ ಪಲ್ಲೆ, ಶೇಂಗಾ ಚೆಟ್ನಿ, ಕೆಂಪು ಖಾರದ ಜೊತೆಗೆ ಗೊಟ್ಟದ ಉಪ್ಪಿನಕಾಯಿ ನಂಜಿಕೊಂಡರೆ ಸ್ವರ್ಗ ಸುಖ.

ಧಾರವಾಡ ಭಾಗದಲ್ಲಿ ಉಪ್ಪಿನಕಾಯಿ ಅದರಲ್ಲೂ ಗೊಟ್ಟ ಸಮೇತ ಇರುವ ಉಪ್ಪಿನಕಾಯಿ ಧಾರವಾಡ ಪೇಡೆಯಷ್ಟೇ ಪ್ರಸಿದ್ಧಿ ಪಡೆದಿದೆ. ಕಳೆದ ವರ್ಷ ಹಾಕಿದ್ದ ಉಪ್ಪಿನಕಾಯಿಯ ಭರಣಿಗಳು ಇದೀಗ ತಳ ಹತ್ತಿವೆ. ಹೀಗಾಗಿ ಮತ್ತೇ ಮಾವಿನ ಸುಗ್ಗಿ ಬಂದಿದ್ದು ಮತ್ತೆ ಉಪ್ಪಿನಕಾಯಿ ಹಾಕಲು ಈ ಭಾಗದ ಜನ ಸಿದ್ಧತೆ ನಡೆಸಿದ್ದಾರೆ. ಏಪ್ರಿಲ್, ಮೇ ತಿಂಗಳ ಮಾವಿನ ಸುಗ್ಗಿಯಲ್ಲಿ ಪ್ರತಿಯೊಂದು ಮನೆಯಲ್ಲಿ ಒಂದಿಷ್ಟು ಮಾವಿನ ಕಾಯಿಗಳನ್ನು ಉಪ್ಪಿನಕಾಯಿ ಹಾಕಲೆಂದೇ ಬಳಸುತ್ತಾರೆ.

ಹುಳಿ ಇದ್ದಷ್ಟು ಬಾಳಿಕೆ 

ಮಾವಿನ ಕಾಯಿ ಹುಳಿ ಇದ್ದಷ್ಟು ಉಪ್ಪಿನಕಾಯಿ ಬಾಳಿಕೆ ಬರಲಿದೆ ಎನ್ನುವ ಕಾರಣ ಹುಳಿ ಮಾವಿನಕಾಯಿಗಳನ್ನೇ ಇದಕ್ಕೆ ಆಯ್ಕೆ ಮಾಡಲಾಗುತ್ತದೆ. ಅದರಲ್ಲೂ ಉಪ್ಪಿನಕಾಯಿಗೆ ಧಾರವಾಡ ಹಾಗೂ ಸುತ್ತಲು ಬೆಳೆಯುವ ನೀಲಂ ತಳಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಆದರೆ, ಇತ್ತೀಚೆಗೆ ನೀಲಂ ಜೊತೆಗೆ ಆಪೂಸ್ ತಳಿ ಸಹ ಹೆಚ್ಚು ಬಳಕೆಯಲ್ಲಿರುವುದು ವಿಶೇಷ.

ಉಪ್ಪಿನಕಾಯಿಗೂ ಬೇಕು ಕೈ ಗುಣ 

ಉಪ್ಪಿನಕಾಯಿ ಹಾಕುವುದೆಂದರೆ ಅದೇನು ಮಹಾ! ಒಂದಿಷ್ಟು ಮಾವಿನ ಕಾಯಿ ತಂದು ಕತ್ತರಿಸಿ ಅದಕ್ಕೆ ಮಸಾಲಾ ವಸ್ತುಗಳನ್ನು ಹಾಕಿದರೆ ಸಾಕು ಉಪ್ಪಿನಕಾಯಿ ಸಿದ್ಧ ಎನ್ನುವುದಲ್ಲ. ಉಪ್ಪಿನಕಾಯಿ ಹಾಕಲು ಕೈಗುಣ ಬೇಕು ಎನ್ನುತ್ತಾರೆ ಹಿರಿಯರು. ಚಿಕ್ಕಪುಟ್ಟ ತಪ್ಪುಗಳಿಂದಾಗಿ ಸಾಕಷ್ಟು ಬಾರಿ ತಿಂಗಳೊಪ್ಪತ್ತಿನಲ್ಲಿಯೇ ಕೆಜಿಗಟ್ಟಲೇ ಉಪ್ಪಿನಕಾಯಿ ಬೂಸ್ಟ್ ಹಿಡಿದಿರುವ ಉದಾಹರಣೆಗಳಿವೆ. ಹೀಗಾಗಿ ಉಪ್ಪಿನಕಾಯಿ ಬಗ್ಗೆ ಪಕ್ಕಾ ಮಾಹಿತಿ ಇದ್ದವರು ಮಾತ್ರ ಈ ಪಾಕ ಮಾಡಲು ಮುಂದಾಗುತ್ತಾರೆ.

ಹೇಗೆ ಮಾಡುತ್ತಾರೆ ಉಪ್ಪಿನಕಾಯಿ

ಮೊದಲಿಗೆ ಮಾವಿನಕಾಯಿಗಳನ್ನು ತೊಳೆದು ಶುದ್ಧವಾದ ಬಟ್ಟೆಯಿಂದ ಒರೆಸಿಕೊಳ್ಳಬೇಕು. ನೀರಿನ ಅಂಶ ಉಳಿದರೆ ಉಪ್ಪಿನಕಾಯಿ ಬೇಗ ಹಾಳಾಗುತ್ತದೆ. ಒರೆಸಿದ ನಂತರ ಮಾವಿನಕಾಯಿಗಳನ್ನು ಬೇಕಾದ ಗಾತ್ರಕ್ಕೆ ಕಟ್ ಮಾಡಿಕೊಳ್ಳಬೇಕು. ಕೆಲವೊಮ್ಮೆ ಗೊಟ್ಟದಲ್ಲಿ ಕಪ್ಪಾದ ವಸ್ತುವಿದ್ದರೆ ಅದನ್ನು ಬಟ್ಟೆಯಿಂದ ಒರೆಯಿಸಿಕೊಳ್ಳಬೇಕು. ಇಲ್ಲೂ ತೇವಾಂಶ ಇರದಂತೆ ತುಸು ಹೊತ್ತು ಆರಲು ಬಿಡಬೇಕು. ಅಷ್ಟರಲ್ಲಿ ಕೆಂಪು ಖಾರ, ಬೆಳ್ಳುಳ್ಳಿ, ಮೆಂತೆ, ಸಾಸಿವೆ, ಇಂಗು, ಜೀರಿಗೆ, ಬೆಲ್ಲ, ಉಪ್ಪು ಹಾಗೂ ಅರಿಶಿನವನ್ನು ಮಿಕ್ಸರ್‌ಗೆ ಹಾಕಿ ಎಣ್ಣೆಯ ಒಗ್ಗರಣೆ ಕೊಟ್ಟು ಸಿದ್ಧಪಡಿಸಿಕೊಂಡಿರಬೇಕು.

ಈ ಒಗ್ಗರಣೆಗೆ ಮಾವಿನ ಕಾಯಿ ಹಾಕಿ ಎಲ್ಲ ಮಿಕ್ಸ್ ಆಗುವವರೆಗೂ ಕಲೆಸಬೇಕು. ಎಷ್ಟು ಪ್ರಮಾಣದಲ್ಲಿ ಮಾವಿನ ಕಾಯಿ ಇರುತ್ತದೆಯೋ ಅಷ್ಟು ಪ್ರಮಾಣದಲ್ಲಿ ಒಗ್ಗರಣೆ ನೀಡಬೇಕು. ಈ ಪದ್ಧತಿ ಮೂಲಕ ಮಾಡಿದ ಉಪ್ಪಿನಕಾಯಿಗೆ ಯಾವುದೇ ರಾಸಾಯನಿಕ (ವಿನೆಗಾರ್) ವಸ್ತುವಿನ ಅಗತ್ಯವೇ ಇಲ್ಲ. ಭರಣಿಯಲ್ಲಿ ಹಾಕಿಟ್ಟರೆ ಸಾಕು ವರ್ಷಗಟ್ಟಲೇ ಉಪ್ಪಿನ ಕಾಯಿ ರುಚಿ ನೋಡಬಹುದು. ಉಪ್ಪಿನಕಾಯಿ ಕಳಿತಷ್ಟು (ಹೆಚ್ಚು ದಿನ ಹೋದಷ್ಟು) ರುಚಿ ಬರುತ್ತದೆ. 
  

Comments 0
Add Comment

  Related Posts

  Attack On Lawyer in Broad Daylight

  video | Monday, February 5th, 2018

  Attack On Lawyer in Broad Daylight

  video | Monday, February 5th, 2018
  Shrilakshmi Shri