ಮೈಸೂರು ಕೆಫೆ ಓನರ್‌ ಗುರುತಿಸಿ ರಾಧಿಕಾಳನ್ನು ಕರೆದು ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅನಂತ್ ಅಂಬಾನಿ!

By Gowthami K  |  First Published Jul 16, 2024, 7:55 PM IST

ಮೈಸೂರು ಕೆಫೆಯ ಶಾಂತೇರಿ ನಾಯಕ್ ಅವರನ್ನು ಅನಂತ್ ಗುರುತಿಸಿ ಪತ್ನಿ ರಾಧಿಕಾಳನ್ನು ಬಹಳ ಉತ್ಸಾಹದಿಂದ ಕರೆದು ಮೈಸೂರು ಕೆಫೆ ಓನರ್‌ ಎಂದು ಪರಿಚಯಿಸಿರುವುದು ಮಾತ್ರವಲ್ಲ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು.


ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಮತ್ತು ನೀತಾ ಅಂಬಾನಿ ಪುತ್ರ ಅನಂತ್‌ ಮತ್ತು ರಾಧಿಕಾ ಮರ್ಚೆಂಟ್‌ ಅದ್ಧೂರಿ ವಿವಾಹ ಕಾರ್ಯಕ್ರಮ ನಡೆದಿದೆ. ಮೂರು ದಿನದ ಅದ್ಧೂರಿ ಮದುವೆಯಲ್ಲಿ ಜಾಗತಿಕ ನಾಯಕರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳು ಭಾಗವಹಿಸಿದ್ದರು. 

ವಿಶೇಷ ಅಂದ್ರೆ ಮೈಸೂರು ಕೆಫೆಯ ಮಾಲೀಕರಾದ ನರೇಶ್ ನಾಯಕ್ ಅವರ ತಾಯಿ ಶಾಂತೇರಿ ನಾಯಕ್ ಉಪಸ್ಥಿತರಿದ್ದರು.  ಮಗ ನರೇಶ್ ಗೆ ಕೆಫೆಯನ್ನು ಹಸ್ತಾಂತರಿಸುವ ಮೊದಲು ಶಾಂತೇರಿ ನಾಯಕ್ ಅದರ ಮುಖ್ಯಸ್ಥರಾಗಿದ್ದರು. ಆದರೆ ವಿಷ್ಯ ಅದಲ್ಲ ಮದುವೆಯಲ್ಲಿ ಮೈಸೂರು ಕೆಫೆಯ ಶಾಂತೇರಿ ನಾಯಕ್ ಅವರನ್ನು ಅನಂತ್ ಗುರುತಿಸಿ ಪತ್ನಿ ರಾಧಿಕಾಳನ್ನು ಬಹಳ ಉತ್ಸಾಹದಿಂದ ಕರೆದು ಮೈಸೂರು ಕೆಫೆ ಓನರ್‌ ಎಂದು ಪರಿಚಯಿಸಿರುವುದು ಮಾತ್ರವಲ್ಲ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದರು. ಹಾಗೇ ಪ್ರತಿ ಭಾನುವಾರ, ನಾವು ನಿಮ್ಮ ಆಹಾರವನ್ನು ನಮ್ಮ ಮನೆಯಲ್ಲಿ ಮಿಸ್‌ ಮಾಡದೆ ತಿನ್ನುತ್ತೇವೆ ಎಂದು ಧನ್ಯವಾದ ಹೇಳುವುದು ಕೂಡ ಕಾಣಿಸಿದೆ. ನವವಿವಾಹಿತ ಜೋಡಿಗಳ ಜೊತೆಗೆ ಶೋಕ್ಲಾ ಮೆಹ್ತಾ, ಅನಂದ್ ಪಿರಾಮಳ್ ಕೂಡ ಇದ್ದರು.

Tap to resize

Latest Videos

undefined

ಅಂಬಾನಿ ಮದ್ವೆಯಲ್ಲಿ ಕಾಣಿಸಿಕೊಳ್ಳದ ತಾರೆಯರಿವರು, ಓರ್ವನಿಗೆ ಕೋವಿಡ್‌, ಮತ್ತೋರ್ವನನ್ನು ಕರೆದೇ ಇಲ್ಲ!

ಈ ವಿಡಿಯೋ ವೈರಲ್ ಆಗುತ್ತಿದ್ದು, ಮೈಸೂರು ಕೆಫೆಯ ಹಿರಿಯ ಮಹಿಳೆಯ ಪಾದಗಳನ್ನು ಮುಟ್ಟಿ ನಮಸ್ಕರಿಸುತ್ತಿದ್ದಾರೆ. ಎಂತಹ ಸಂಸ್ಕಾರ ಅದ್ಭುತವಾಗಿದೆ.  ಅಂಬಾನಿ ಕುಟುಂಬ ಡೌನ್ ಟು ಅರ್ಥ್ ಎಂದು ಕಮೆಂಟ್‌ ಮಾಡಿದ್ದಾರೆ.   ಮುಕೇಶ್ ಮತ್ತು ನೀತಾ ತಮ್ಮಿಷ್ಟದ ಆಹಾರ ಇಲ್ಲಿ ತಿನ್ನುತ್ತಿದ್ದರು. ತುಂಬು ಕುಟುಂಬ ಈಗಲೂ ಅಲ್ಲಿಗೆ ಹೋಗುತ್ತಾರೆ. ಮೈಸೂರು ಮಸಾಲೆ ದೋಸೆ ಎಂದರೆ ಅಂಬಾನಿಗೆ ಬಲು ಇಷ್ಟ. ಅವರು ಹಲವು ಬಾರಿ ಈ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಮೈಸೂರು ಕೆಫೆ ಓನರ್‌ನನ್ನು ಮದುವೆಗೆ ಆಹ್ವಾನಿಸಲು ಮರೆಯಲಿಲ್ಲ. ಮಾತ್ರವಲ್ಲ ಅಂಬಾನಿ ಮಕ್ಕಳಿಗೆ ಸಂಸ್ಕಾರವನ್ನು ಹೇಳಿ ಕೊಡುವುದು ಕೂಡ ಮರೆಯಲಿಲ್ಲ ಎಂಬುದು ಕೂಡ ವಿಶೇಷವಾಗಿದೆ.

ಮದುವೆ ಬಳಿಕ 10 ಸಾವಿರ ಅತಿಥಿಗಳನ್ನು ಗಂಟೆಗಟ್ಟಲೆ ನಿಂತೇ ಗೌರವಿಸಿದ ಅಂಬಾನಿ ಕುಟುಂಬ!

ಮುಂಬೈನ ಮಾಟುಂಗಾ ಪ್ರದೇಶದಲ್ಲಿ ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ತಿನಿಸುಗಳನ್ನು ನೀಡುವ ಮೈಸೂರ್ ಕೆಫೆ ಇದ್ದು, ಅಂಬಾನಿ ಕುಟುಂಬದ ಫೇವರಿಟ್‌ ಸ್ಟಾಟ್‌ ಆಗಿದೆ. ಮುಕೇಶ್ ಅಂಬಾನಿ ಅವರ ಕಾಲೇಜು ದಿನಗಳಿಂದಲೂ ಅಲ್ಲಿಗೆ ಹೋಗುತ್ತಿದ್ದಾರೆ. ಮತ್ತು ಅವರ ಮಕ್ಕಳು ಕೂಡ ಚಿಕ್ಕಂದಿನಿಂದಲೇ ಅಲ್ಲಿ ತಿಂದಿದ್ದಾರೆ. ಭಾನುವಾರ ಅಂಬಾನಿ ಮನೆಯಲ್ಲಿ ಮೈಸೂರು ಮಸಲಾ ದೋಸೆ ಇದ್ದೇ ಇರುತ್ತದೆ ಅದು ಇಲ್ಲಿಂದಲೇ ರವಾನೆಯಾಗುತ್ತದೆ. 

ವಿಶ್ವದ ಅತಿ ಶ್ರೀಮಂತ ಹಾಗೂ ಪ್ರತಿಷ್ಠಿತ ಅಂಬಾನಿ ಮನೆತನದ ಕುಡಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭದಲ್ಲಿ ವಿವಿಧ ರೀತಿಯ ಭಕ್ಷಗಳು, ಹಣ್ಣುಗಳು, ಕೇಕ್‌ಗಳ ನಡುವೆ ವಿವಿಧ ಖಾದ್ಯಗಳು ಅತಿಥಿಗಳ ಮನಸೆಳೆದಿದ್ದವು.

 

The elderly lady here is Mrs.Shanteri Nayak,owner of Cafe Mysore,a very popular South Indian eatery in Matunga,Mumbai.
Mukesh Ambani has been going there since his college days nd his kids have grown up eating from there,it’s a weekly ritual in their house on Sundays.
They didn’t… pic.twitter.com/FVNshgz1Vg

— Lotus 🪷🇮🇳 (@LotusBharat)
click me!