ಸಿಲಿಕಾನ್ ಸಿಟಿಯ ಚರ್ಚ್ ಸ್ಟ್ರೀಟ್‌ನಲ್ಲಿ ಹೊಸ ಅವತಾರದಲ್ಲಿ ಕ್ವೀನ್ಸ್ ರೆಸ್ಟೋರೆಂಟ್ ತಲೆ ಎತ್ತುತ್ತಿದೆ. ಪಂಜಾಬಿ ಶೈಲಿಯ ಹೋಮ್ ಮೇಡ್ ತಿಂಡಿಗಳನ್ನು ಬೆಂಗಳೂರಿಗೆ ಪರಿಚಯಿಸಿದ ಕೀರ್ತಿ ಹೊಂದಿರುವ ಕ್ವೀನ್ಸ್ ರೆಸ್ಟೋರೆಂಟ್ 50 ನೇ ವರ್ಷದ ಸಂಭ್ರಮಾಚರಣೆಯಲ್ಲಿರುವುದು ಮತ್ತೊಂದು ವಿಶೇಷ.
ಬೆಂಗಳೂರು (ಜ.04): ಸಿಲಿಕಾನ್ ಸಿಟಿಯ ಚರ್ಚ್ ಸ್ಟ್ರೀಟ್‌ನಲ್ಲಿ ಹೊಸ ಅವತಾರದಲ್ಲಿ ಕ್ವೀನ್ಸ್ ರೆಸ್ಟೋರೆಂಟ್ ತಲೆ ಎತ್ತುತ್ತಿದೆ. ಪಂಜಾಬಿ ಶೈಲಿಯ ಹೋಮ್ ಮೇಡ್ ತಿಂಡಿಗಳನ್ನು ಬೆಂಗಳೂರಿಗೆ ಪರಿಚಯಿಸಿದ ಕೀರ್ತಿ ಹೊಂದಿರುವ ಕ್ವೀನ್ಸ್ ರೆಸ್ಟೋರೆಂಟ್ 50 ನೇ ವರ್ಷದ ಸಂಭ್ರಮಾಚರಣೆಯಲ್ಲಿರುವುದು ಮತ್ತೊಂದು ವಿಶೇಷ. ಸೋನಿಲಂ ಮತ್ತು ಅನಿಲ್ ಕುಮಾರ್ ಚೋಢಾ 1974 ರಲ್ಲಿ ಈ ರೆಸ್ಟೋರೆಂಟ್ ಪ್ರಾರಂಭಿಸಿದ್ದರು. ಬಳಿಕ ಕೊರೋನಾ ಕಾಲಘಟ್ಟದಲ್ಲಿ ಆರ್ಥಿಕ ಸಂಕಷ್ಟದಿಂದ ಈ ರೆಸ್ಟೋರೆಂಟ್ ಮುಚ್ಚಲ್ಪಟ್ಟಿತ್ತು. ಸಾಕಷ್ಟು ಹೆಸರುವಾಸಿಯಾಗಿದ್ದ ಈ ರೆಸ್ಟೋರೆಂಟ್ ಮುಚ್ಚಲ್ಪಟ್ಟಿದ್ದು ಸಾಕಷ್ಟು ಆಹಾರ ಪ್ರಿಯರಿಗೆ ನಿರಾಸೆ ತಂದಿತ್ತು.
ಬಳಿಕ ಕೆಲವೇ ವರ್ಷಗಳಲ್ಲಿ ನ್ಯೂ ಬಿಇಎಲ್ ರೋಡ್ನಲ್ಲಿರುವ ಆರ್.ಎಂ.ವಿ ಎಕ್ಸ್ಟಂನ್ಷನ್‌ನಲ್ಲಿ ಮತ್ತು ವೈಟ್ ಫೀಲ್ಡ್‌ನಲ್ಲಿ ಪುನಃ ತೆರೆದ ಕ್ವೀನ್ಸ್ ರೆಸ್ಟೋರೆಂಟ್ ಮಳಿಗೆ ಗಳು ಯಶಸ್ವಿಯಾಗಿ ಸದ್ಯ ಚರ್ಚ್ ಸ್ಟ್ರೀಟ್‌ನಲ್ಲಿ ಮತ್ತೆ ಮಳಿಗೆ ತೆರೆಯಲು ಸಿದ್ದವಾಗಿದೆ. ಇದು ನಗರದ ಆಹಾರ ಪ್ರಿಯರಿಗೆ ನಗರದ ಮಧ್ಯಭಾಗದಲ್ಲಿಯೇ ಕ್ವೀನ್ಸ್ ರೆಸ್ಟೋರೆಂಟ್ ಸವಿ ಉಣಿಸುವ ಅವಕಾಶ ಕೊಡಲಿದೆ. ಫುಲ್ಕಾ ಚಾಟ್ಸ್, ಕೇಸರಿ ಖೀರ್ ಸೇರಿದಂತೆ ಹಲವು ಪಂಜಾಬಿ ಸ್ಟೈಲ್ ಖಾದ್ಯಗಳ ತಯಾರಿ ಮುಂದುವರಿಯಲಿದೆ.
undefined
ಸಿರಿಧಾನ್ಯ ಉತ್ಪಾದನೆಯಲ್ಲಿ ರಾಜ್ಯವನ್ನು ನಂ.1 ಮಾಡುವ ಸಂಕಲ್ಪ: ಸಚಿವ ಚಲುವರಾಯಸ್ವಾಮಿ
ಕ್ವೀನ್ಸ್ ರೆಸ್ಟೋರೆಂಟ್‌ನ ಮ್ಯಾನೇಜಿಂಗ್ ಪಾರ್ಟ್ನರ್ ಜಗದೀಶ್ ಬೆಂಗಳೂರು ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಈ ಬಗ್ಗೆ ಪ್ರತಿಕ್ರಿಯಿಸಿ 'ಚರ್ಚ್ ಸ್ಟ್ರೀಟ್‌ನಲ್ಲಿ ಕ್ವೀನ್ ಈಸ್ ಬ್ಯಾಕ್ ಹೋಮ್' ಪ್ರಾರಂಭಿಸುವುದರೊಂದಿಗೆ ನಮ್ಮ ರೆಸ್ಟೋರೆಂಟ್ ಪರಂಪರೆಯ ಸಂಭ್ರಮಾಚರಿಸಲು ನಾವು ಪುಳಕಿತರಾಗಿದ್ದೇವೆ. ಚರ್ಚ್ ಸ್ಟ್ರೀಟ್ ನಮ್ಮ ಜನಪ್ರಿಯ ಪ್ರಯಾಣದ ಮೂಲ. ನಾವು ಜನರಿಗೆ ಈಗ ಮತ್ತೆ ಹತ್ತಿರವಾಗುತ್ತಿದ್ದೇವೆ ಎಂದರು.