ಮಧುಮೇಹ ಇರೋರು ನೇರಳೆ ಹಣ್ಣು ಯಾಕೆ ತಿನ್ಬೇಕು ?

By Suvarna News  |  First Published Apr 1, 2022, 5:31 PM IST

ಬೇಸಿಗೆ (Summer)ಯಲ್ಲಿ ಸಿಗೋ ರುಚಿಕರವಾದ ಹಣ್ಣುಗಳಲ್ಲೊಂದು ನೇರಳೆ ಹಣ್ಣು (Purple Fruit Jamun). ರಸಭರಿತವಾಗಿರುವ ಈ ಹಣ್ಣು ತಿನ್ನಲು ರುಚಿಯಾಗಿರುವುದು ಮಾತ್ರವಲ್ಲದೆ ಹಲವು ಆರೋಗ್ಯ (Health)ಕರ ಗುಣಗಳನ್ನು ಸಹ ಹೊಂದಿದೆ. ಅದರಲ್ಲೂ ಮಧುಮೇಹ (Diabetes) ನಿರ್ವಹಣೆಗೆ ನೇರಳೆ ಹಣ್ಣಿನ ಸೇವನೆ ಬೆಸ್ಟ್.


ಬೇಸಿಗೆ (Summer)ಯಲ್ಲಿ ಹೆಚ್ಚು ಲಭ್ಯವಾಗುವ ನೇರಳೆ ಹಣ್ಣು (Purple Fruit Jamun ) ಕಪ್ಪಾಗಿದ್ದು, ರಸಭರಿತವಾಗಿರುತ್ತದೆ. ಈ ಹಣ್ಣುಗಳು ಬಾಯಿಗೆ ರುಚಿಯಾಗಿರುವುದು ಮಾತ್ರವಲ್ಲದೆ ಆರೋಗ್ಯ (Health)ಕ್ಕೂ ಉತ್ತಮವಾಗಿದೆ. ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ನಿಯಂತ್ರಣದಲ್ಲಿರುತ್ತದೆ. ನೇರಳೆ ಹಣ್ಣಿನಲ್ಲಿ ಕಾರ್ಬೋಹೈಡ್ರೇಟ್, ಪ್ರೋಟೀನ್ (Protein), ಕೊಬ್ಬು, ಕ್ಯಾಲ್ಸಿಯಂ, ಮೆಗ್ನೀಸಿಯಮ್, ರಂಜಕ, ಪೊಟ್ಯಾಸಿಯಮ್, ಸೋಡಿಯಂ, ಕಬ್ಬಿಣ, ವಿಟಮಿನ್ ಸಿ, ಥಯಾಮಿನ್, ರೈಬೋಫ್ಲಾವಿನ್, ನಿಯಾಸಿನ್, ಆಂಟಿ-ಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ (Vitamin) ಬಿ 6 ಹೇರಳವಾಗಿದ್ದು, ಇದು ಉತ್ತಮ ಆರೋಗ್ಯಕ್ಕೆ ಉಪಯುಕ್ತವಾಗಿದೆ.

ನಾರಿನಂಶವಿರುವ ಬೆರ್ರಿ ಹಣ್ಣುಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆಯು ಉತ್ತಮವಾಗಿರುತ್ತದೆ. ಮಲಬದ್ಧತೆ ದೂರವಾಗುತ್ತದೆ. ನೇರಳೆ ಹಣ್ಣಿನ ಸೇವನೆಯು ಸಕ್ಕರೆ ಮತ್ತು ಅದರ ಪ್ರಯೋಜನಗಳನ್ನು ಹೇಗೆ ನಿಯಂತ್ರಿಸುತ್ತದೆ ಎಂಬುದನ್ನು ನಾವು ತಿಳಿಯೋಣ.

Latest Videos

undefined

ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಸುಧಾರಿಸುತ್ತದೆ: ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ನೇರಳೆ ಹಣ್ಣು ಅನೇಕ ರೋಗಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ಜಂಬೋಲಿನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನೇರಳೆ ಪ್ರೋಟೀನ್, ಫೈಬರ್, ಉತ್ಕರ್ಷಣ ನಿರೋಧಕಗಳು, ಕ್ಯಾಲ್ಸಿಯಂ, ಕಬ್ಬಿಣ, ರಂಜಕ, ಪೊಟ್ಯಾಸಿಯಮ್, ಮ್ಯಾಂಗನೀಸ್, ವಿಟಮಿನ್ ಸಿ ಮತ್ತು ಬಿ 6ಗಳಲ್ಲಿ ಹೇರಳವಾಗಿದೆ. ಬೇಸಿಗೆಯ ಆಹಾರದಲ್ಲಿ ಈ ಹಣ್ಣನ್ನು ಸೇರಿಸುವುದರಿಂದ ಆರೋಗ್ಯವನ್ನು ಸುಧಾರಿಸಬಹುದು.

ಸಕ್ಕರೆ ಮಾತ್ರವಲ್ಲ, ಈ ಆರೋಗ್ಯಕರ ವಸ್ತುಗಳಿಂದಲೂ Diabetes ಬರಬಹುದು

ಟೈಪ್ 2 ಮಧುಮೇಹಕ್ಕೆ ಪರಿಣಾಮಕಾರಿ: ನೇರಳೆ ಹಣ್ಣಿನ ಸೇವನೆ ಟೈಪ್ 2 ಮಧುಮೇಹ (Diabetes)ದ ಲಕ್ಷಣಗಳನ್ನು ಗುಣಪಡಿಸುತ್ತದೆ. ಮಧುಮೇಹವು ಆಗಾಗ್ಗೆ ಮೂತ್ರ ವಿಸರ್ಜನೆ ಮತ್ತು ಬಾಯಾರಿಕೆಗೆ ಕಾರಣವಾಗುತ್ತದೆ. ಮಧುಮೇಹಿಗಳು ನೇರಳೆ ಹಣ್ಣನ್ನು ತಿಂದರೆ ಮಧುಮೇಹದ ಈ ಲಕ್ಷಣಗಳು ಕಡಿಮೆಯಾಗುತ್ತವೆ. ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹಣ್ಣು. ಹೀಗಾಗಿ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯಗೊಳಿಸುತ್ತದೆ. ಇದು ಟೈಪ್ 2 ಮಧುಮೇಹದ ಅಪಾಯವನ್ನು ತಡೆಯಬಹುದು.

ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ: ವಿಟಮಿನ್ ಸಿ ಮತ್ತು ಕಬ್ಬಿಣ (Iron)ದಿಂದ ಸಮೃದ್ಧವಾಗಿರುವ ನೇರಳೆ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಈ ಹಣ್ಣಿನಲ್ಲಿರುವ ಕಬ್ಬಿಣವು ರಕ್ತವನ್ನು ಶುದ್ಧೀಕರಿಸುತ್ತದೆ.

ರಕ್ತವನ್ನು ಶುದ್ಧೀಕರಿಸುತ್ತದೆ: ನೇರಳೆ ಹಣ್ಣಿನ ಸೇವನೆಯು ಚರ್ಮ (Skin)ವನ್ನು ತೆರವುಗೊಳಿಸುವುದಲ್ಲದೇ, ರಕ್ತವನ್ನು ಶುದ್ಧೀಕರಿಸುತ್ತದೆ. ಅಲ್ಲದೇ, ಕಣ್ಣಿನ ಸಮಸ್ಯೆಗಳಿಂದ ಪಾರು ಮಾಡುತ್ತದೆ.ವೈದ್ಯರ ಪ್ರಕಾರ ನೇರಳೆ ಹಣ್ಣು ನೈಸರ್ಗಿಕವಾದ ಸಂಕೋಚಕ ಗುಣವನ್ನು ಹೊಂದಿರುವುದರಿಂದ ತ್ವಚೆಯ ಮೇಲಿನ ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಈ ವಿಚಿತ್ರ Diabetes ಲಕ್ಷಣಗಳನ್ನು ನಿರ್ಲಕ್ಷಿಸಿದ್ರೆ ಅಪಾಯ ತಪ್ಪಿದ್ದಲ್ಲ

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ: ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿರುವ ನೇರಳೆ ಹಣ್ಣುಗಳು, ಅಪಧಮನಿಗಳ ಆರೈಕೆಯ ಮೂಲಕ ಅಧಿಕ ರಕ್ತದೊತ್ತಡ, ಹೃದಯ ಕಾಯಿಲೆ (Heart Disease) ಮತ್ತು ಪಾರ್ಶ್ವವಾಯು ಮುಂತಾದ ಕಾಯಿಲೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.

ನೋವನ್ನು ನಿವಾರಿಸುತ್ತದೆ: ಹೊಟ್ಟೆ ನೋವು (Stomach Pain) ಮತ್ತು ಸಂಧಿವಾತಕ್ಕೆ ಈ ಹಣ್ಣಿನ ಸೇವನೆ ಅತ್ಯುತ್ತಮ ಮನೆಮದ್ದುಗಳಲ್ಲಿ ಒಂದಾಗಿದೆ. ಜೀರ್ಣಾಂಗವ್ಯೂಹದ ತೊಂದರೆಗಳಾದ ಭೇದಿ ಮತ್ತು ವಾಯುವನ್ನು ಕಡಿಮೆ ಮಾಡಲು ಈ ಹಣ್ಣು ಸಹಕಾರಿಯಾಗಿದೆ.

ತೂಕ ನಷ್ಟಕ್ಕೆ ಸಹಕಾರಿ: ರಸಭರಿತ ನೇರಳೆ ಹಣ್ಣಿನ ಸೇವನೆಯಿಂದ ನಿಮ್ಮ ತೂಕ (Weight Loss)ವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಇರುವ ಕಾರಣ ದೇಹದಲ್ಲಿನ ಕೊಬ್ಬನ್ನು ತಗ್ಗಿಸಲು ಸಹಾಯ ಮಾಡುತ್ತದೆ. ನೇರಳೆ ಹಣ್ಣನ್ನು ತೊಳೆದು ಹಾಗೆಯೇ ತಿನ್ನಬಹುದು. ಅಥವಾ ಇದರ ಜ್ಯೂಸ್ ಮಾಡಿಯೂ ಕುಡಿಯಬಹುದು. ನೇರಳೆ ಹಣ್ಣಿನ ಬೀಜಗಳನ್ನು ಒಣಗಿಸಿ ಪುಡಿ ಮಾಡಿ ಬಳಸಿದರೆ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಜಾಮೂನಿನ ತೊಗಟೆಯ ಕಷಾಯವನ್ನು ಕುಡಿದರೆ ಹೊಟ್ಟೆನೋವು, ಅಜೀರ್ಣದಂತಹ ಸಮಸ್ಯೆಗಳು ದೂರವಾಗುತ್ತವೆ. 

click me!