ಬರೋಬ್ಬರಿ 100 ವರ್ಷದಿಂದ ಮೆನುವನ್ನೇ ಬದಲಿಸದ ಹೋಟೆಲ್‌, ಗ್ರಾಹಕರ ಸಂಖ್ಯೆ ಕಡಿಮೆಯೇನಿಲ್ಲ!

By Kannadaprabha News  |  First Published Feb 16, 2023, 11:22 AM IST

ಹೋಟೆಲ್‌ಗಳು ಕಾಲಕಾಲಕ್ಕೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಂಡು ಬಂದಿರುವುದನ್ನು ನಾವು ನೋಡಿರುತ್ತೇವೆ. ಆದರೆ, ಪುಣೆ ನಗರದ ದೋರಬ್ಜಿ ಆ್ಯಂಡ್‌ ಸನ್ಸ್‌ ಎಂಬ ಹೋಟೆಲು 1878ರಿಂದಲೂ ಒಂದೇ ಮೆನುವನ್ನು ಬಳಸುತ್ತಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.


ಒಂದೇ ಆಹಾರವನ್ನು ನಮ್ಮಿಂದ ಎಷ್ಟ್‌ ಸಾರಿ ತಿನ್ನೋಕೆ ಸಾಧ್ಯ. ಅದೆಷ್ಟೇ ಟೇಸ್ಟೀಯಾಗಿದ್ರೂ ಬೋರಾಗೋಕೆ ಶುರುವಾಗುತ್ತೆ ಅಲ್ವಾ. ಒಂದೇ ರೀತಿಯ ಫುಡ್ ಸಿಗುತ್ತೆ ಅಂದ್ರೆ ನಾವು ಆ ಹೊಟೇಲ್‌ಗೆ ಹೋಗೋದನ್ನೇ ಬಿಟ್ ಬಿಡ್ತೀವಿ. ಇನ್ನೂ ಡಿಫರೆಂಟ್ ಆಗಿ ಆಹಾರ ತಯಾರಿಸೋ, ವೆರೈಟಿ ಮೆನು ಇರೋ ಬೇರೆ ಹೊಟೇಲ್ ಸೆಲೆಕ್ಟ್ ಮಾಡ್ಕೊಳ್ತೀವಿ. ಹೀಗಾಗಿಯೇ ಹೊಟೇಲ್‌ಗಳು ತಮ್ಮ ಇಂಟೀರಿಯರ್‌ನ್ನು ಆಗಾಗ ಬದಲಾಯಿಸುತ್ತಿರುತ್ತವೆ, ಮಾತ್ರವಲ್ಲ ಮೆನುವನ್ನು ಸಹ ರಿಫ್ರೆಶ್ ಮಾಡಿಕೊಳ್ಳುತ್ತವೆ. ಗ್ರಾಹಕರನ್ನು ಸೆಳೆಯೋಕೆ ಈ ಟೆಕ್ನಿಕ್ ಫಾಲೋ ಮಾಡೋದು ಅನಿವಾರ್ಯ ಕೂಡಾ ಹೌದು. ಆದ್ರೆ ಈ ಹೊಟೇಲ್‌ನಲ್ಲಿ ಮಾತ್ರ 1878ರಿಂದಲೂ ಇಲ್ಲಿಯ ವರೆಗೆ ಒಂದೇ ಮೆನು ಇದೆ.

1878ರಿಂದಲೂ ಮೆನು ಬದಲಿಸದ ಹೋಟೆಲ್‌
ನಾವು ಭಾರತದಲ್ಲಿ ಹಾಗೂ ವಿಶ್ವದಲ್ಲಿ ಎಂತೆಂತಹ ಹೋಟೆಲುಗಳನ್ನು ನೋಡಿರುತ್ತೇವೆ ಹಾಗೂ ಹಳೆ ಹೋಟೆಲುಗಳು ತಮ್ಮಲ್ಲಿ ಕಾಲಕಾಲಕ್ಕೆ ತಕ್ಕಂತೆ ಬದಲಾವಣೆ (Changes)ಗಳನ್ನು ಮಾಡಿಕೊಂಡು ಬಂದಿರುವುದನ್ನು ನೋಡಿರುತ್ತೇವೆ. ಆದರೆ, ಪುಣೆ ನಗರದ ದೋರಬ್ಜಿ ಆ್ಯಂಡ್‌ ಸನ್ಸ್‌ ಎಂಬ ಹೋಟೆಲು 1878ರಿಂದಲೂ ಒಂದೇ ಮೆನುವನ್ನು ಬಳಸುತ್ತಿದೆ. ಈ ಹೋಟೆಲನ್ನು 1878ರಲ್ಲಿ ಸೋರಬ್ಜಿ ಎಂಬುವರು ಶುರು ಮಾಡಿದ್ದು, ಈಗ ಅವರ ಮರಿ ಮೊಮ್ಮಗ ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಹೋಟೆಲಿನಲ್ಲಿ ಅವರು ಪಾರ್ಸಿ ರೀತಿಯ ಮಾಂಸಾಹಾರವನ್ನು ನೀಡುತ್ತಿದ್ದಾರೆ. ಇದರಲ್ಲಿ ಹೆಚ್ಚಾಗಿ ಹಿರಿಯ ನಾಗರಿಕರೇ ಖಾಯಂ ಗಿರಾಕಿಯಾಗಿದ್ದಾರೆ ಎಂದು ಹೋಟೆಲ್‌ ಮಾಲೀಕ ಹೇಳಿದ್ದಾರೆ.

Tap to resize

Latest Videos

ಒಂದೇ ಕೈಯಲ್ಲಿ 16 ದೋಸೆ ಪ್ಲೇಟ್ ಬ್ಯಾಲೆನ್ಸ್, ವಿದ್ಯಾರ್ಥಿಭವನದ ಸರ್ವರ್‌ಗೆ ಆನಂದ್ ಮಹೀಂದ್ರಾ ಮೆಚ್ಚುಗೆ

ಕೃಷಿ ಕುಟುಂಬದಲ್ಲಿ ಜನಿಸಿದ ಡೋರಾಬ್ಜಿಯಿಂದ ಹೊಟೇಲ್ ಆರಂಭ
ಡೋರಾಬ್ಜಿ ಅಂಡ್ ಸನ್ಸ್‌ನ ಮಾಲೀಕ ಡೇರಿಯಸ್ ಡೊರಾಬ್ಜಿ ಈಗಲೂ ಸಾಕಷ್ಟು ಹಿರಿಯ ನಾಗರೀಕರು ಇಲ್ಲಿಂದ ಆಹಾರ (Food) ಕೊಂಡೊಯ್ಯುತ್ತಿರುವಾಗಿ ಹೇಳಿದರು. ಅವರ ತಂದೆ ಮರ್ಜಾಬಾನ್ ದೊರಾಬ್ಜಿ ಅವರು ಚುಕ್ಕಾಣಿ ಹಿಡಿದಾಗಿನಿಂದ ರೆಸ್ಟೋರೆಂಟ್‌ಗೆ ಭೇಟಿ ನೀಡುತ್ತಿರುವ ಬಹಳಷ್ಟು ಹಿರಿಯ ಗ್ರಾಹಕರನ್ನು ಹೊಟೇಲ್ ಹೊಂದಿದೆ. 'ನಾನು ಅವರೊಂದಿಗೆ ಉತ್ತಮ ಸಂಬಂಧವನ್ನು ನಿರ್ವಹಿಸುತ್ತೇನೆ. ಏಕೆಂದರೆ ದೊರಾಬ್ಜಿ ಮತ್ತು ಸನ್ಸ್ ಹೊಟೇಲ್‌ ಬಗ್ಗೆ ಜನರು ಇಟ್ಟಿರುವ ಪ್ರೀತಿಯ ಬಗ್ಗೆ ನನಗೆ ತಿಳಿದಿದೆ' ಎಂದು ಡೇರಿಯಸ್ ಸೇರಿಸುತ್ತಾರೆ.

ಡೋರಾಬ್ಜಿ ರೆಸ್ಟೋರೆಂಟ್ ಅನ್ನು 1878ರಲ್ಲಿ ಡೇರಿಯಸ್ ಅವರ ಮುತ್ತಜ್ಜ ಸೊರಾಬ್ಜಿ ದೊರಾಬ್ಜಿ ಆರಂಭಿಸಿದರು. ಬ್ರಿಟಿಷರ ಕಾಲದಲ್ಲಿ ಪುಣೆ ಕಂಟೋನ್ಮೆಂಟ್‌ನಲ್ಲಿ ರುಚಿಕರವಾದ ಆಹಾರ ಸೇವಿಸಲು ಮತ್ತು ಸ್ನೇಹಿತರೊಂದಿಗೆ ಸಂಜೆಯನ್ನು ಕಳೆಯಬಹುದಾದ ಏಕೈಕ ಸ್ಥಳ ಇದಾಗಿತ್ತು.

ಸೊರಾಬ್ಜಿಯವರು ಗುಜರಾತ್‌ನ ನವಸಾರಿಯಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು ಮತ್ತು ಉತ್ತಮ ಜೀವನೋಪಾಯವನ್ನು ಗಳಿಸಲು ತಮ್ಮ ಸಹೋದರ ಪೆಸ್ಟೋಂಜಿ ದೊರಾಬ್ಜಿಯೊಂದಿಗೆ ಪುಣೆಗೆ ಬಂದರು. ಅವರ ಸಹೋದರ ಪಾರ್ಸಿ ಆಚರಣೆಗಳು ಮತ್ತು ಪದ್ಧತಿಗಳಿಗೆ ಅಗತ್ಯವಾದ ವಸ್ತುಗಳ ಅಂಗಡಿಯನ್ನು ಪ್ರಾರಂಭಿಸಿದಾಗ, ಸೊರಾಬ್ಜಿ ಮೂರು ಬಂಗಲೆಗಳನ್ನು ಬಾಡಿಗೆಗೆ ಪಡೆದರು ಮತ್ತು ರೈಲ್ವೇ ನಿಲ್ದಾಣ ಮತ್ತು ರೇಸ್‌ಕೋರ್ಸ್ ನಡುವೆ ಸಂಚರಿಸುವ ಟಾಂಗಾ ವಾಲಾಗಳಿಗೆ ಚಹಾವನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ಆರು ತಿಂಗಳೊಳಗೆ, ಅವರು ಗ್ರಾಹಕರ (Customers) ಬೇಡಿಕೆಯನ್ನು ಗ್ರಹಿಸಿದರು ಮತ್ತು ಪಾರ್ಸಿ ಪಾಕಪದ್ಧತಿಯನ್ನು ನೀಡಲು ಪ್ರಾರಂಭಿಸಿದರು.

ಭಾರತದ ಸಾದಾ ಹಪ್ಪಳ ಮಲೇಷಿಯನ್​ ರೆಸ್ಟೋರೆಂಟ್‌ನಲ್ಲಿ 'ಏಷ್ಯನ್​ ನಾಚೋಸ್​', ಬೆಲೆ ಕೇಳಿದ್ರೆ ದಂಗಾಗ್ತೀರಾ!

ಸೊರಾಬ್ಜಿಯವರನ್ನು ಅವರ ಮಗ ಜಲ್ ದೊರಾಬ್ಜಿ ಇದನ್ನೇ ಅನುಸರಿಸಿದರು. ಅವರು ರೆಸ್ಟೋರೆಂಟ್‌ನ ಕಟ್ಟುನಿಟ್ಟಾದ ವ್ಯವಸ್ಥಾಪಕರಾಗಿದ್ದರು, ಅವರು ತಮ್ಮ ಎಂಬತ್ತರ ಹರೆಯದಲ್ಲೂ ಪ್ರತಿದಿನ ಸೈಕಲ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಅವರ ಮಗ, ಮರ್ಜಾಬಾನ್, ರೆಸ್ಟೊರೆಂಟ್‌ಗೆ ಭೇಟಿ ನೀಡಿದ ಜನರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡು ಸುಲಭವಾಗಿ ಮತ್ತು ಸಾಮಾಜಿಕವಾಗಿ ವರ್ತಿಸುತ್ತಿದ್ದರು. ಅವರು ಫಿಟ್ನೆಸ್ ಪ್ರಜ್ಞೆಯನ್ನು ಹೊಂದಿದ್ದರು ಮತ್ತು 1970 ರ ದಶಕದಲ್ಲಿ ಮನೆಯಲ್ಲಿ ಜಿಮ್ ಹೊಂದಿದ್ದ ಕೆಲವರಲ್ಲಿ ಒಬ್ಬರಾಗಿದ್ದರು ಎಂದು 1985 ರಲ್ಲಿ ತರಬೇತಿಗಾಗಿ ಮತ್ತು ವೃತ್ತಿಪರವಾಗಿ 1995 ರಲ್ಲಿ ರೆಸ್ಟೋರೆಂಟ್‌ಗೆ ಸೇರಿದ ಡೇರಿಯಸ್ ಹೇಳುತ್ತಾರೆ. ಕುಟುಂಬದ ನಾಲ್ಕು ತಲೆಮಾರುಗಳು ರೆಸ್ಟೋರೆಂಟ್ ಅನ್ನು ವೈಯಕ್ತಿಕ ಸ್ಪರ್ಶದೊಂದಿಗೆ ಪಾರ್ಸಿ ಪಾಕಪದ್ಧತಿಯನ್ನು ಒದಗಿಸುವ ಸಂಸ್ಥೆಯಾಗಿ ಪರಿವರ್ತಿಸಿದ್ದಾರೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.

click me!