ಕೆಲವೊಂದು ಹಣ್ಣುಗಳು ಚಿಕ್ಕದಾಗಿದ್ರೂ ದೊಡ್ಡ ಲಾಭ ನೀಡುತ್ವೆ. ಅದ್ರಲ್ಲಿ ಸ್ಟ್ರಾಬೆರಿ ಕೂಡ ಒಂದು. ಕಟ್ಟಾ ಮೀಟಾ ಈ ಹಣ್ಣು ಬಾರಿಗೆ ಮಾತ್ರ ರುಚಿಯಲ್ಲ, ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದೆ.
ಸುಂದರ ಹಣ್ಣುಗಳಲ್ಲಿ ಸ್ಟ್ರಾಬೆರಿ ಕೂಡ ಒಂದು. ನೋಡ್ತಿದ್ದಂತೆ ಬಾಯಲ್ಲಿ ನೀರು ಬರುತ್ತೆ. ಸ್ಟ್ರಾಬೆರಿಯನ್ನು ಸೂಪರ್ ಫುಡ್ ಎಂದೂ ಕರೆಯಲಾಗುತ್ತದೆ. ಋತುವಿನ ಹಣ್ಣಾಗಿರುವ ಸ್ಟ್ರಾಬೆರಿ ನಿಮಗೆ ಏಪ್ರಿಲ್ – ಮೇನಲ್ಲಿ ಹೆಚ್ಚಾಗಿ ಸಿಗುತ್ತದೆ. ರಸಭರಿತವಾಗಿರುವ ಈ ಹಣ್ಣು (Fruit) ರುಚಿಕರ ಮಾತ್ರವಲ್ಲದೆ ಪೌಷ್ಟಿಕವೂ ಹೌದು. ಸ್ಟ್ರಾಬೆರಿಯಲ್ಲಿ ಪ್ರೋಟೀನ್, ಕ್ಯಾಲೋರಿ, ಫೈಬರ್, ಅಯೋಡಿನ್, ಫೋಲೇಟ್, ಒಮೆಗಾ 3, ಪೊಟ್ಯಾಸಿಯಮ್, ಮೆಗ್ನೀಸಿಯಮ್, ರಂಜಕ, ಜೀವಸತ್ವಗಳು ಮುಂತಾದ ಅನೇಕ ಪೌಷ್ಟಿಕಾಂಶ (Nutrition) ಗಳು ಕಂಡುಬರುತ್ತವೆ. ಹಾಗಾಗಿಯೇ ಇದನ್ನು ಸೂಪರ್ ಫುಡ್ (Superfood) ಎಂದು ಕರೆಯಲಾಗುತ್ತದೆ.
ಸ್ಟ್ರಾಬೆರಿ ಸೇವನೆ ಹೇಗೆ? : ಅನೇಕರಿಗೆ ಸ್ಟ್ರಾಬೆರಿಯನ್ನು ಹಾಗೆಯೇ ಸೇವನೆ ಮಾಡೋದು ಕಷ್ಟವಾಗುತ್ತದೆ. ಅಂಥವರು ಅದನ್ನು ನಾನಾ ವಿಧದಲ್ಲಿ ಸೇವನೆ ಮಾಡ್ಬಹುದು.
ಸಲಾಡ್ (Salad) ಜೊತೆ ಸ್ಟ್ರಾಬೆರಿ : ಹುಳಿ ಮಿಶ್ರಿತ ಸಿಹಿಯನ್ನು ಹೊಂದಿರುವ ಸ್ಟ್ರಾಬೆರಿಯನ್ನು ನೀವು ತರಕಾರಿ ಜೊತೆ ಸಲಾಡ್ ರೂಪದಲ್ಲಿ ಸೇವನೆ ಮಾಡ್ಬಹುದು. ಮಧ್ಯಾಹ್ನದ ಊಟದ ಜೊತೆ ಸಲಾಡ್ ಆಗಿ ಇದನ್ನ ತಿನ್ನೋದು ಒಳ್ಳೆಯದು.
ಸ್ಟ್ರಾಬೆರಿ ಜ್ಯೂಸ್ : ಸ್ಟ್ರಾಬೆರಿ ಜ್ಯೂಸ್ ತಯಾರಿಸಿ ನೀವು ಕುಡಿಯಬಹುದು. ಸೇಬು ಅಥವಾ ಬಾಳೆ ಹಣ್ಣಿನ ಜೊತೆ ಬೆರೆಸಿ ಜ್ಯೂಸ್ ತಯಾರಿಸಬಹುದು. ನೀವು ಬಯಸಿದ್ರೆ ಬೇರೆ ಹಣ್ಣಿನ ಜೊತೆಯೂ ಇದನ್ನು ಸೇರಿಸಬಹುದು.
ಖಾಲಿ ಹೊಟ್ಟೇಲಿ ಮಕ್ಕಳಿಗೆ ಈ ಫುಡ್ ಕೊಟ್ಟು, ಮ್ಯಾಜಿಕ್ ನೋಡಿ!
ಸ್ಟ್ರಾಬೆರಿ ಮಿಲ್ಕ್ ಶೇಕ್ : ಜ್ಯೂಸ್ ಬೇಡ ಅನ್ನೋರು ಸ್ಮೂಥಿ ತಯಾರಿಸಿ ಕುಡಿಯಬಹುದು. ಸ್ಟ್ರಾಬೆರಿಗೆ ಹಾಲು ಹಾಗೆ ಸಕ್ಕರೆಯನ್ನು ಹಾಕಿ ಮಿಕ್ಸಿ ಮಾಡಿ ಮಿಲ್ಕ್ ಶೇಕ್ ರೂಪದಲ್ಲಿ ಕುಡಿಯಬಹುದು. ನೀವು ಕ್ಯಾರೆಟ್ ಜೊತೆ ಬೆರೆಸಿಯೂ ಇದನ್ನು ಸೇವನೆ ಮಾಡ್ಬಹುದು.
ಸ್ಟ್ರಾಬೆರಿ ರೈತಾ : ಒಂದೇ ರೀತಿ ರೈತಾ ಸೇವನೆ ಮಾಡಿ ನಿಮಗೆ ಬೋರ್ ಆಗಿದ್ರೆ ನೀವು ಅದಕ್ಕೆ ಸ್ಟ್ರಾಬೆರಿ ಮಿಕ್ಸ್ ಮಾಡಿ. ಇದು ರೈತಾ ರುಚಿಯನ್ನು ಹೆಚ್ಚಿಸುತ್ತದೆ.
ಸ್ಟ್ರಾಬೆರಿ ಸ್ಯಾಂಡ್ವಿಚ್ : ಸ್ಟ್ರಾಬೆರಿಗಳ ಸಹಾಯದಿಂದ ಟೇಸ್ಟಿ ಸ್ಯಾಂಡ್ವಿಚ್ ಸಹ ತಯಾರಿಸಬಹುದು. ಸ್ಟ್ರಾಬೆರಿಗಳು ನಿಮ್ಮ ಸ್ಯಾಂಡ್‌ವಿಚ್‌ಗೆ ಉತ್ತಮ ರುಚಿಯನ್ನು ನೀಡುತ್ತದೆ.
ಸ್ಟ್ರಾಬೆರಿ ಪ್ರಯೋಜನಗಳು :
ಹೃದಯಕ್ಕೆ ಒಳ್ಳೆಯದು : ಈಗಿನ ದಿನಗಳಲ್ಲಿ ಪ್ರಪಂಚದಾದ್ಯಂತ ಲಕ್ಷಾಂತರ ಜನರು ಹೃದಯಕ್ಕೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಧೂಮಪಾನ ಹೃದಯಕ್ಕೆ ಅಪಾಯಕಾರಿಯಾಗಿದೆ. ತೂಕದ ಬಗ್ಗೆ ಕಾಳಜಿ ವಹಿಸಿದ್ರೆ ಮತ್ತು ಸಮತೋಲಿತ ಆಹಾರ ಸೇವನೆ ಮಾಡಿದ್ರೆ ಹೃದಯದ ಆರೋಗ್ಯ ಕಾಪಾಡಬಹದು. ಸ್ಟ್ರಾಬೆರಿ ಸೇವನೆಯು ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚಳ : ಸ್ಟ್ರಾಬೆರಿಗಳು ಸಾಕಷ್ಟು ಪ್ರಮಾಣದ ವಿಟಮಿನ್ ಬಿ ಮತ್ತು ಸಿ ಅನ್ನು ಹೊಂದಿರುತ್ತವೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದ್ರ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುತ್ತದೆ.
ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿ : ಸ್ಟ್ರಾಬೆರಿ ಅನೇಕ ಆಂಟಿಆಕ್ಸಿಡೆಂಟ್‌ಗಳು, ಫ್ಲೇವನಾಯ್ಡ್ ಗಳು ಮತ್ತು ವಿಟಮಿನ್‌ಗಳನ್ನು ಹೊಂದಿದೆ. ಅದು ದೇಹಕ್ಕೆ ಕ್ಯಾನ್ಸರ್‌ನಂತಹ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿಯನ್ನು ನೀಡುತ್ತದೆ.
ತೂಕ ಇಳಿಕೆಗೆ ಸಹಕಾರಿ : ಸ್ಟ್ರಾಬೆರಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದನ್ನು ಸೇವನೆ ಮಾಡಿದ್ರೆ ನಿಮಗೆ ಬೇಗ ಹಸಿವಾಗುವುದಿಲ್ಲ. ಆಗ ಅನಾರೋಗ್ಯಕರ ಆಹಾರ ಸೇವನೆ ಕಡಿಮೆಯಾಗುತ್ತದೆ. ಇದು ತೂಕ ಇಳಿಕೆಗೆ ನೆರವಾಗುತ್ತದೆ.
Health Tips: ಇದರಲ್ಲಿ ಡೈರಿ ಉತ್ಪನ್ನಗಳಿಗಿಂತ ಹೆಚ್ಚು ಕ್ಯಾಲ್ಸಿಯಂ ಇರುತ್ತೆ
ಮಲಬದ್ಧತೆ (Constipation) ಗೆ ಮದ್ದು : ಸ್ಟ್ರಾಬೆರಿಯಲ್ಲಿರುವ ನಾರಿನಂಶ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮಲಬದ್ಧತೆ, ಅಸಿಡಿಟಿ, ಅಜೀರ್ಣ, ಗ್ಯಾಸ್ ಸಮಸ್ಯೆಗಳಿಂದ ನಮ್ಮ ದೇಹವನ್ನು ದೂರವಿಡುತ್ತದೆ.