ದಾಳಿಂಬೆ, ಬೀಟ್‌ರೂಟ್‌ ಸೇರಿದಂತೆ ನೆಲ್ಲಿಕಾಯಿ ಜ್ಯೂಸ್‌ ನಲ್ಲಿ ಯಾವ್ದು ನಂಬರ್‌ ಒನ್ ?

Published : Oct 27, 2026, 03:04 PM IST
juice

ಸಾರಾಂಶ

health tips: ಬೆಳಗ್ಗೆ ಎದ್ದ ತಕ್ಷಣ ದೇಹದಲ್ಲಿ ಶಕ್ತಿಯೇ ಇಲ್ಲ, ಏನಾದರೂ ಕೆಲಸ ಮಾಡೋಣ ಅಂದ್ರೆ ಸುಸ್ತು, ಯಾವಾಗಲೂ ಆಯಾಸ ಅನ್ನಿಸುತ್ತಿದೆಯಾ? ಹಾಗಾದರೆ ದಿನವನ್ನು ಫ್ರೆಶ್ ಆಗಿ ಆರಂಭಿಸಲು ಏನಾದರೂ ಆರೋಗ್ಯಕರ ಪಾನೀಯ ಕುಡಿಯಬೇಕು ಅಂತ ನಿಮಗೂ ಅನಿಸಬಹುದು.

ಧಾವಂತದ ಜೀವನದಲ್ಲಿ ಎಲ್ಲರೂ ಫಿಟ್ ಆಗಿರಬೇಕು, ದಿನವಿಡೀ ಆ್ಯಕ್ಟಿವ್ ಆಗಿರಬೇಕು ಅಂತ ಬಯಸ್ತಾರೆ. ಜ್ಯೂಸ್‌ ನಮ್ಮ ದೇಹಕ್ಕೆ ಶಕ್ತಿ ನೀಡುತ್ತೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಯಾವ ಜ್ಯೂಸ್‌ ಹೆಚ್ಚು ಪ್ರಯೋಜನಕಾರಿ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ದಾಳಿಂಬೆ ಜ್ಯೂಸ್, ಬೀಟ್ರೂಟ್ ಮತ್ತು ಕ್ಯಾರೆಟ್ ಜ್ಯೂಸ್ ಅಥವಾ ನೆಲ್ಲಿಕಾಯಿ ಜ್ಯೂಸ್ ಇವುಗಳಲ್ಲಿ ಯಾವುದು ಹೆಚ್ಚು ಪ್ರಯೋಜನಕಾರಿ ಗೊತ್ತಾ?

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್ನಲ್ಲಿ ಆ್ಯಂಟಿಆಕ್ಸಿಡೆಂಟ್ಗಳು, ವಿಟಮಿನ್ ಸಿ ಮತ್ತು ಫೋಲೇಟ್ನಂತಹ ಪೋಷಕಾಂಶಗಳಿವೆ. ಇದು ಆರೋಗ್ಯಕರ ಆಹಾರದ ಭಾಗ. ದಾಳಿಂಬೆಯಲ್ಲಿ ಸ್ವಲ್ಪ ಪ್ರಮಾಣದ ಕಬ್ಬಿಣದ ಅಂಶವಿದೆ. ದಾಳಿಂಬೆ ಜ್ಯೂಸ್ ಕುಡಿದ ತಕ್ಷಣ ರಕ್ತ ಹೆಚ್ಚಾಗುತ್ತದೆ ಅಥವಾ ಸುಸ್ತು ಮಾಯವಾಗುತ್ತದೆ ಎಂದರ್ಥವಲ್ಲ. ದೇಹದಲ್ಲಿ ಹಿಮೋಗ್ಲೋಬಿನ್ ಕಡಿಮೆಯಿದ್ದರೆ, ವೈದ್ಯರ ಸಲಹೆಯಂತೆ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಆಹಾರ ಮತ್ತು ಚಿಕಿತ್ಸೆಯನ್ನು ಪಡೆಯುವುದು ಕೂಡ ಮುಖ್ಯ.

ಬೀಟ್ರೂಟ್ ಮತ್ತು ಕ್ಯಾರೆಟ್ ಮಿಕ್ಸ್ ಜ್ಯೂಸ್

ಬೀಟ್ರೂಟ್ ಮತ್ತು ಕ್ಯಾರೆಟ್ ಎರಡನ್ನೂ ಸೇರಿಸಿ ಜ್ಯೂಸ್ ತಯಾರಿಸಬಹುದು. ಕ್ಯಾರೆಟ್ನಲ್ಲಿ ಬೀಟಾ ಕ್ಯಾರೋಟಿನ್ ಇದ್ದರೆ, ಬೀಟ್ರೂಟ್ನಲ್ಲಿ ನೈಟ್ರೇಟ್ಗಳು ಸೇರಿದಂತೆ ಹಲವು ಉಪಯುಕ್ತ ಸಂಯುಕ್ತಗಳಿವೆ. ಬೀಟ್ರೂಟ್ನಲ್ಲಿರುವ ನೈಟ್ರೇಟ್ಗಳು ದೇಹದಲ್ಲಿ ರಕ್ತದ ಹರಿವು ಮತ್ತು ವ್ಯಾಯಾಮದ ಕಾರ್ಯಕ್ಷಮತೆಗೆ ಸಹಾಯ ಮಾಡುತ್ತದೆ. ವರ್ಕ್‌ ಔಟ್ ಮಾಡುವವರಿಗೆ ಇದು ಉಪಯುಕ್ತ ಆಯ್ಕೆಯಾಗಬಹುದು.

ನೆಲ್ಲಿಕಾಯಿ ಮತ್ತು ಅಲೋವೆರಾ ಜ್ಯೂಸ್

ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿರುತ್ತದೆ. ಇದು ದೇಹದ ಸಾಮಾನ್ಯ ರೋಗನಿರೋಧಕ ಕಾರ್ಯಕ್ಕೆ ಸಹಾಯ ಮಾಡುತ್ತದೆ. ಜೊತೆಗೆ ಸಸ್ಯಾಹಾರದಿಂದ ಸಿಗುವ ಕಬ್ಬಿಣವನ್ನು ದೇಹ ಹೀರಿಕೊಳ್ಳಲು ವಿಟಮಿನ್ ಸಿ ನೆರವಾಗುತ್ತದೆ. ನೆಲ್ಲಿಕಾಯಿ ಮತ್ತು ಅಲೋವೆರಾ ಜ್ಯೂಸ್ ನಮ್ಮ ದೇಹದಲ್ಲಿ ಅಧ್ಬುತ ಕೆಲಸ ಮಾಡುತ್ತದೆ. ಹೊಟ್ಟೆಯನ್ನು ಕ್ಲೀನ್‌ ಮಾಡುತ್ತವೆ. ಮುಖಕ್ಕೆ ಹೊಳಪನ್ನು ತರುತ್ತವೆ.

ಜ್ಯೂಸ್ ಕುಡಿಯುವಾಗ ಇದು ನೆನಪಿರಲಿ

• ಸಾಧ್ಯವಾದಷ್ಟು ತಾಜಾ ಜ್ಯೂಸ್ ಸೇವಿಸಿ.

• ಹೆಚ್ಚುವರಿ ಸಕ್ಕರೆ ಸೇರಿಸಬೇಡಿ.

• ಜ್ಯೂಸ್ಗಿಂತ ಇಡೀ ಹಣ್ಣು ತಿನ್ನುವುದು ಉತ್ತಮ ಆಯ್ಕೆ. ಏಕೆಂದರೆ ಅದರಲ್ಲಿ ಫೈಬರ್ ಹೆಚ್ಚು ಸಿಗುತ್ತದೆ.

• ಬೆಳಗ್ಗೆ ಖಾಲಿ ಹೊಟ್ಟೆಯಲ್ಲೇ ಜ್ಯೂಸ್ ಕುಡಿಯುವುದು ಹೆಚ್ಚು ಪ್ರಯೋಜನಕಾರಿ.

• ಫೈಬರ್ ಸಿಗುವಂತೆ ನೋಡಿಕೊಳ್ಳಲು ಅದನ್ನು ಸೋಸದೆ ರಸವನ್ನು ಕುಡಿಯಿರಿ.

• ಯಾವ ಜ್ಯೂಸ್ ಕೂಡ ದೇಹಕ್ಕೆ ತಕ್ಷಣ ಶಕ್ತಿ ನೀಡುವ ಮ್ಯಾಜಿಕ್ ಪಾನೀಯವಲ್ಲ. ಸಾಕಷ್ಟು ನಿದ್ರೆ, ಸಮತೋಲಿತ ಆಹಾರ, ನೀರು ಮತ್ತು ನಿಯಮಿತ ವ್ಯಾಯಾಮ ಕೂಡ ಅಷ್ಟೇ ಮುಖ್ಯ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Weight Loss Drinks: ಸಿಕ್ಕಾಪಟ್ಟೆ ತೂಕ ಹೆಚ್ಚಾಗಿದ್ಯಾ? ದೇಹದ ಭಾರ ಇಳಿಸಲು ಮನೆಯಲ್ಲೇ ತಯಾರಿಸಿ ಕುಡಿಯಿರಿ ಈ ಪಾನೀಯ
ಮನೆಯೊಳಕ್ಕೂ ಬೆಳೆಯುವ ಸಾಂಬಾರ್ ಸೊಪ್ಪು: ಈ ಎಲೆಯನ್ನು ಬಳಸಿ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನ ಪಡೆಯಬಹುದು ನೋಡಿ!