Food: ಸಾಮಾನ್ಯ ಉಪ್ಪಿನಕಾಯಿ ಬಿಡಿ, ಸವಿದು ನೋಡಿ 'ಕ್ಯಾರಂಬೋಲಾ' ಸ್ಟಾರ್ ಉಪ್ಪಿನಕಾಯಿ!

Published : Oct 27, 2026, 11:45 AM IST
Star Carambola Fruit

ಸಾರಾಂಶ

ಕ್ಯಾರಂಬೋಲಾ ಅಥವಾ ನಕ್ಷತ್ರ ಹಣ್ಣು ತನ್ನ ವಿಶಿಷ್ಟ ಆಕಾರ ಮತ್ತು ಹುಳಿ-ಸಿಹಿ ರುಚಿಯಿಂದ ಉಪ್ಪಿನಕಾಯಿ ತಯಾರಿಕೆಗೆ ಹೇಳಿಮಾಡಿಸಿದಂತಿದೆ. ವಿಟಮಿನ್ ಸಿ ಮತ್ತು ನಾರಿನಂಶ ಹೊಂದಿರುವ ಇದು ಮಧುಮೇಹ ಸೇರಿದಂತೆ ಹಲವು ರೋಗಗಳಿಗೆ ರಾಮಬಾಣವಾಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಬಾದಾಮಿ ಆಕಾರದ ಈ ಹಣ್ಣನ್ನು ಅಡ್ಡಲಾಗಿ ಕತ್ತರಿಸಿದರೆ ಐದು ಅಥವಾ ಆರು ಬಾಹುಗಳ 'ನಕ್ಷತ್ರ'ದಂತೆ (ಸ್ಟಾರ್) ಕಾಣುವ 'ಕ್ಯಾರಂಬೋಲಾ ನಕ್ಷತ್ರ ಹಣ್ಣು' ಕಂಗೊಳಿಸುತ್ತದೆ. ಹಾಗಾಗಿ ಇದರಿಂದ ತಯಾರಾಗುವ ಉಪ್ಪಿನಕಾಯಿ ನೋಡಲು ತುಂಬಾ ಆಕರ್ಷಕ ಮತ್ತು ವಿಭಿನ್ನ.ಅಷ್ಟೇ ಅಲ್ಲ ಇಂಡೋನೇಷ್ಯಾ ಮೂಲದ ಈ ಹಣ್ಣನ್ನು ಕ್ಯಾರಂಬೋಲ, ಸ್ಟಾರ್ ಫ್ರೂಟ್, ನಕ್ಷತ್ರ ಹಣ್ಣು, ದಾರೆಕಾಯಿ, ದಾರೆಹುಳಿ, ಕರಂಬಳ ಎಂದೆಲ್ಲಾ ಕರೆಯಲಾಗುತ್ತದೆ. ಇದು ಕೇವಲ ಹುಳಿಯಲ್ಲ, ಹುಳಿ ಮಿಶ್ರಿತ ಸಿಹಿ ರುಚಿಯನ್ನು ಹೊಂದಿರುವುದರಿಂದ ಇದರ ಉಪ್ಪಿನಕಾಯಿ ನಾಲಿಗೆಯಲ್ಲಿ ನೀರೂರಿಸುವುದು ಗ್ಯಾರಂಟಿ. ಈ ಕುರಿತು ಅದರ ಹಲವು ಉಪಯೋಗಗಳನ್ನು ನೋಡೋಣ ಬನ್ನಿ.

ಉಪ್ಪಿನಕಾಯಿಗೆ ಇದು ಯಾಕೆ ಬೆಸ್ಟ್?

ಇದರಲ್ಲಿ ಶೇ. 6 ರಷ್ಟು ಆಕ್ಸಾಲಿಕ್ ಆಮ್ಲೀಯತೆ ಇರುವುದರಿಂದ ಉಪ್ಪಿನಕಾಯಿಗೆ ಬೇಕಾದ ನೈಸರ್ಗಿಕ ಹುಳಿ ಫ್ಲೇವರ್ ಇದರಲ್ಲಿ ಸಮೃದ್ಧವಾಗಿದೆ. ಇದರಲ್ಲಿ ಹುಳಿ ಮಿಶ್ರಿತ ಹಾಗೂ ಗಾತ್ರದ ಸಿಹಿ ಮಿಶ್ರಿತ ಎಂಬ ಎರಡು ತಳಿಗಳಿದ್ದು, ಶೇ. 1 ರಷ್ಟು ಆಸಿಡ್ ಹೊಂದಿರುವ ಹುಳಿ ಹಣ್ಣಿನ ತಳಿ ಉಪ್ಪಿನಕಾಯಿ ತಯಾರಿಕೆಗೆ ಅತ್ಯಂತ ಸೂಕ್ತ. ಕೇವಲ ಸಾಂಪ್ರದಾಯಿಕ ಉಪ್ಪಿನಕಾಯಿ ಮಾತ್ರವಲ್ಲದೆ, ಇದರಿಂದ ಗೊಜ್ಜು, ಚಟ್ನಿ, ಜ್ಯಾಮ್, ಜ್ಯೂಸ್ ಹಾಗೂ ಕ್ಯಾಂಡಿಗಳನ್ನು ಕೂಡ ಇದರಿಂದ ತಯಾರಿಸಬಹುದು.

ಆರೋಗ್ಯ ರಕ್ಷಕ ಈ ಹಣ್ಣು!

ವಿಟಮನ್ ಸಿ ಮತ್ತು ನಾರಿನಂಶ ಇದರಲ್ಲಿ ಅತ್ಯಧಿಕ ಪ್ರಮಾಣದಲ್ಲಿದೆ. ಆದ್ದರಿಂದ ಕಫ, ಕೆಮ್ಮು, ನೆಗಡಿ, ಅಲ್ಸರ್, ಪಿತ್ತ, ಗ್ಯಾಸ್ಟ್ರಿಕ್ ಹಾಗೂ ಮಲಬದ್ಧತೆಯಂತಹ ಹೊಟ್ಟೆಯ ರೋಗಗಳಿಗೆ ದಿನಕ್ಕೊಂದರಂತೆ 10 ದಿನ ತಿಂದರೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಮಧುಮೇಹವನ್ನೂ (ಶುಗರ್) ಇದು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲ ಇದರಲ್ಲಿ ಆಕ್ಸಾಲಿಕ್ ಆಮ್ಲ ಹೆಚ್ಚಿರುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಮಾತ್ರ ಇದನ್ನು ಹೆಚ್ಚು ತಿನ್ನಬಾರದು.

ರೈತರಿಗೆ ಪ್ಲಸ್ ಪಾಯಿಂಟ್ಸ್ ಏನು!

ಇದು ಹೆಚ್ಚಾಗಿ ಪಶ್ಚಿಮ ಘಟ್ಟದ ಅರಣ್ಯ ಭಾಗದಲ್ಲಿ ಕಾಣಸಿಗುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಉತ್ತಮ ಬೇಡಿಕೆ ಸೃಷ್ಟಿಸಬಹುದಾಗಿದೆ. ಅದರೊಂದಿಗೆ ಕಸಿ (ಗ್ರಾಫ್ಟಿಂಗ್) ಮಾಡಿದ ಗಿಡಗಳು ನಾಟಿ ಮಾಡಿದ 1 ರಿಂದ 2 ವರ್ಷದಲ್ಲೇ ಫಸಲು ನೀಡಲು ಆರಂಭಿಸುತ್ತವೆ. ಅಲ್ಲದೇ ಇದು ಕ್ರೈಮ್ಯಾಕ್ಟೀರಿಕ್ ಅಲ್ಲದ ಹಣ್ಣು (ಗಿಡದಿಂದ ಕಿತ್ತ ಮೇಲೆ ಹಣ್ಣಾಗುವುದಿಲ್ಲ). ಆದ್ದರಿಂದ ಶೇ. 50 ರಷ್ಟು ಹಳದಿ ಬಣ್ಣಕ್ಕೆ ತಿರುಗಿದಾಗ ಉಪ್ಪಿನಕಾಯಿಗೆ ಪಕ್ಕಾ ಹದವಾಗಿರುತ್ತದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Cumin Tea Benefits: ಪ್ರತಿದಿನ ಜೀರಿಗೆ ಟೀ ಕುಡಿದರೆ ಏನಾಗುತ್ತೆ ಗೊತ್ತಾ? ಹಲವರಿಗೆ ಇದರ ಪ್ರಯೋಜನದ ಅರಿವಿಲ್ಲ!
Black Coffee Benefits: ಬ್ಲ್ಯಾಕ್ ಕಾಫಿ ದಿನಾಲೂ ಕುಡಿದರೆ ಈ ಕಾಯಿಲೆಗಳು ನಿಮ್ಮ ಹತ್ತಿರವೂ ಸುಳಿಯಲ್ಲ!