ಬೆಂಗಳೂರಿನ ಪಿಜ್ಜಾ ಪ್ರಿಯರಿಗೆ ಗುಡ್‌ ನ್ಯೂಸ್‌, ಇಪ್ಪತ್ತೇ ನಿಮಿಷದಲ್ಲಿ ಡೊಮಿನೋಸ್ ಡೆಲಿವರಿ

By Vinutha Perla  |  First Published Mar 10, 2023, 1:39 PM IST

ಬೆಂಗಳೂರಿನ ಟ್ರಾಫಿಕ್ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಪಿಜ್ಜಾ ತಿನ್ಲೇಬೇಕು ಅಂತ ಆಸೆಯಾದಾಗ ಆರ್ಡರ್ ಮಾಡಿದ್ರೆ ಪಿಜ್ಜಾ ಮನೆ ಬಾಗಿಲಿಗೆ ತಲುಪೋಕೆ ಏನಿಲ್ಲಾಂದ್ರೂ ಒಂದು ಗಂಟೆ ಬೇಕು. ಆದ್ರೆ ಇನ್ಮುಂದೆ ಆ ಕಷ್ಟ ಇರಲ್ಲ. ಆರ್ಡರ್ ಮಾಡಿದ ಇಪ್ಪತ್ತೇ ನಿಮಿಷದಲ್ಲಿ ಪಿಜ್ಜಾ ಡೆಲಿವರಿ ಮಾಡುತ್ತೆ ಡೊಮಿನೋಸ್.


ಪಿಜ್ಜಾ ಅಂದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ತರಕಾರಿ, ಕಾರ್ನ್, ಚೀಸ್, ಮೆಯೋನೀಸ್ ಎಲ್ಲವನ್ನೂ ಸೇರಿಸಿದ ಪಿಜ್ಜಾ ನೋಡೋಕಷ್ಟೇ ಯಮ್ಮಿ ಅಲ್ಲ ಟೇಸ್ಟ್ ಕೂಡಾ ಅದ್ಭುತ. ಅದ್ರಲ್ಲೂ ಬೆಂಗಳೂರಿಗರ ನೆಚ್ಚಿನ ಫುಡ್ ಪಿಜ್ಜಾ. ಮೀಟಿಂಗ್, ಫಂಕ್ಷನ್‌ ಹೀಗೆ ಎಲ್ಲಾ ಸಂದರ್ಭದಲ್ಲಿ ಪಿಜ್ಜಾಗೆ ಮೊದಲ ಆದ್ಯತೆ. ಮಾರ್ನಿಂಗ್‌ ಬ್ರೇಕ್‌ಫಾಸ್ಟ್‌, ಮಧ್ಯಾಹ್ನದ ಲಂಚ್, ರಾತ್ರಿಯ ಊಟಕ್ಕೂ ಪಿಜ್ಜಾ ಇದ್ರೆ ನಡೆಯುತ್ತೆ. ಮದ್ವೆ, ಬರ್ತ್‌ಡೇ ಪಾರ್ಟಿ ಕೊಡ್ಸೋದಾದ್ರೂ ಹೆಚ್ಚಿನವರು ಪಿಜ್ಜಾ ಆರ್ಡರ್ ಮಾಡಿಬಿಡ್ತಾರೆ. ಬೆಂಗಳೂರಿಯನ್ಸ್ ಮೆಚ್ಚಿನ ಪಿಜ್ಜಾ ಮೇಲಿರುವ ಒಂದೇ ಒಂದು ಕಂಪ್ಲೇಂಟ್ ಅಂದ್ರೆ ಆರ್ಡರ್ ಮಾಡಿ ಡೆಲಿವರಿಯಾಗೋಕೆ ಗಂಟೆಗಟ್ಟಲೆ ತಗೊಳುತ್ತೆ ಅನ್ನೋದು.

ಬೆಂಗಳೂರಿನಲ್ಲಿ 20 ನಿಮಿಷಗಳ ಡೆಲಿವರಿ ಸೇವೆ ಆರಂಭಿಸಿದ ಡೊಮಿನೋಸ್‌!
ಬೆಂಗಳೂರಿನಲ್ಲಿ ಪಿಜ್ಜಾ ತಿನ್ಲೇಬೇಕು ಅಂತ ಆಸೆಯಾದಾಗ ಆರ್ಡರ್ ಮಾಡಿದ್ರೆ ಪಿಜ್ಜಾ ಮನೆ ಬಾಗಿಲಿಗೆ ತಲುಪೋಕೆ ಒಂದು ಗಂಟೆ ಬೇಕು. ಗಂಟೆಗಟ್ಟಲೆ ಕಾದು ಕಾದು ಸುಸ್ತಾಗಿರುತ್ತೆ ಅನ್ನೋದು ಹಲವರ ದೂರು (Complaint). ಆದ್ರೆ ಇನ್ಮುಂದೆ ಆ ತೊಂದ್ರೆ ಇರಲ್ಲ. ಡೊಮಿನೋಸ್‌, ಬೆಂಗಳೂರಿನಲ್ಲಿ 20 ನಿಮಿಷಗಳ ಪಿಜ್ಜಾ ಡೆಲಿವರಿ ಸೇವೆ ಆರಂಭಿಸಿದೆ. ಇದರಿಂದ ಗ್ರಾಹಕರು (Customers) ಆರ್ಡರ್ ಮಾಡಿದ ಕೇವಲ ಇಪ್ಪತ್ತೇ ನಿಮಿಷದಲ್ಲಿ ಬಿಸಿ ಬಿಸಿ ಪಿಜ್ಜಾವನ್ನು ಟೇಸ್ಟ್ ಮಾಡಬಹುದಾಗಿದೆ.

Tap to resize

Latest Videos

30 ದಿನ, ಮೂರು ಹೊತ್ತು ಪಿಜ್ಜಾ ತಿಂದುಕೊಂಡೇ ತೂಕ ಕಡಿಮೆ ಮಾಡ್ಕೊಂಡ ಭೂಪ!

ಡೊಮಿನೋಸ್‌ ಇಂಡಿಯಾ ಈಗಾಗಲೇ ಭಾರತದ 14 ನಗರಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭಿಸಿದೆ. ಈ ಬಗ್ಗೆ ಡಿಸೆಂಬರ್ 2022ರಲ್ಲಿ ಮಾಹಿತಿ ಮಾಡಿದೆ. ಈ 14 ನಗರಗಳಲ್ಲಿ ಬೆಂಗಳೂರು ಕೂಡಾ ಒಂದಾಗಿದೆ. ಪ್ರಸ್ತುತ ಡೊಮಿನೋಸ್ ಬೆಂಗಳೂರಿನ ಸುಮಾರು 170 ಔಟ್‌ಲೇಟ್‌ಗಳಲ್ಲಿ 20 ನಿಮಿಷಗಳ ಡೆಲಿವರಿ ಸೇವೆಯನ್ನು ಆರಂಭ ಮಾಡಿದೆ. ಡೊಮಿನೋಸ್‌ ಅನ್ನು ನಿರ್ವಹಣೆ ಮಾಡುವ ಜ್ಯೂಬಿಲಂಟ್ ಫುಡ್‌ ವರ್ಕ್ ಈ ಬಗ್ಗೆ ಮಾಹಿತಿ ನೀಡಿದೆ.

ಟ್ರಾಫಿಕ್ ಪೊಲೀಸರಿಗೆ ಸಮಸ್ಯೆಯಾಗುತ್ತಾ?
ಡೊಮಿನೋಸ್‌ನ ಈ ಹೊಸ ಡೆಲಿವರಿ ಸೇವೆಯು ಪ್ರಮುಖವಾಗಿ ಟ್ರಾಫಿಕ್ ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಫುಡ್ ಡೆಲಿವರಿ ಮಾಡುವ ಸಂದರ್ಭದಲ್ಲಿ ಚಾಲಕರ ಸುರಕ್ಷತೆಯಿಲ್ಲ (Safe) ಎಂಬುದೇ ಪ್ರಮುಖ ಕಾರಣವಾಗಿದೆ. ಈ ಹಿಂದೆ ಝೊಮ್ಯಾಟೋ 10 ನಿಮಿಷಗಳಲ್ಲಿ ಫುಡ್ ಡೆಲಿವರಿ ಮಾಡುವ ಸೇವೆಯನ್ನು ಆರಂಭ ಮಾಡಿತ್ತು. ಆದರೆ ಇದು ಫುಡ್ ಡೆಲಿವರಿ ಬಾಯ್‌ಗಳಿಗೆ ಅಪಾಯಕಾರಿ (Dangerous) ಎಂದು ಭಾರೀ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇದನ್ನು ಹಿಂಪಡೆಯಲಾಗಿತ್ತು. ಸೇವೆ ಆರಂಭವಾದ ವರ್ಷದೊಳಗೆ ಇದನ್ನು ಸ್ಥಗಿತಗೊಳಿಸಲಾಗಿತ್ತು.

ಹಾಗೆಯೇ ಈಗ ಡೊಮಿನೋಸ್‌ 20 ನಿಮಿಷಗಳ ಫುಡ್ ಡೆಲಿವರಿ ಸೇವೆಯನ್ನು ಆರಂಭ ಮಾಡಿರೋದು ಆತಂಕಕ್ಕೆ ಕಾರಣವಾಗಿದೆ. ಆದರೆ ಇದಕ್ಕೂ ಸಹ ಡೊಮಿನೋಸ್ ಸ್ಪಷ್ಟನೆ ನೀಡಿದೆ ಕಳೆದ ಒಂದು ವರ್ಷದಲ್ಲಿ ಸಿಗ್ನಲ್ ಜಂಪ್ ಮಾಡಿ ಹೋದ ಪ್ರಕರಣದಲ್ಲಿ ಚೆನ್ನೈ ಪೊಲೀಸರು 970 ಡೆಲಿವರಿ ಬಾಯ್‌ಗಳ ಮೇಲೆ ದೂರು ದಾಖಲು ಮಾಡಿದ್ದಾರೆ. ಆದರೆ ಡೊಮಿನೋಸ್‌ನ ಈ ಸೇವೆಯು ಯಾವುದೇ ಸುರಕ್ಷತೆಯ ಅಪಾಯವನ್ನು ಹೊಂದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ.

ಫ್ರೋಝನ್ ಪಿಜ್ಜಾ ತಿನ್ನೋ ಮುಂಚೆ ತಿಳ್ಕೊಂಡಿರಿ, ಇದು ಆಯಸ್ಸು ಕಡಿಮೆ ಮಾಡುತ್ತೆ

ಡೆಲಿವರಿ ಬಾಯ್‌ಗಳು ತುಂಬಾ ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ
ಇಪ್ಪತ್ತೇ ನಿಮಿಷದಲ್ಲಿ ಪಿಜ್ಜಾ ಡೆಲಿವರಿ ಮಾಡುವ ಪ್ಲಾನ್‌ನಲ್ಲಿ  ಡೆಲಿವರಿ ಬಾಯ್‌ಗಳು ತುಂಬಾ ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ. 'ಫಾಸ್ಟ್ ಆಗಿ ಡೆಲಿವರಿ ಮಾಡಿದರೆ, ನಾವು ಅಧಿಕವಾಗಿ ಭತ್ಯೆ ನೀಡುತ್ತೇವೆ ಎಂಬ ನಿಯಮ ನಮ್ಮಲ್ಲಿ ಇಲ್ಲ. ಆದ್ದರಿಂದಾಗಿ ಡೆಲಿವರಿ ಬಾಯ್‌ಗಳು ತುಂಬಾ ರಿಸ್ಕ್ ತೆಗೆದುಕೊಳ್ಳಬೇಕಾಗಿಲ್ಲ' ಎಂದು ಜ್ಯೂಬಿಲಂಟ್ ಫುಡ್‌ ವರ್ಕ್ ಸಿಇಒ ಸಮೀರ್ ಖೇತರ್‌ಪಾಲ್ ತಿಳಿಸಿದ್ದಾರೆ. ತಜ್ಞರ ಸಲಹೆ ಪಡೆದು, ತಂತ್ರಜ್ಞಾನದ ಆಧಾರದಲ್ಲಿ ನಾವು ಈ 20 ನಿಮಿಷಗಳ ಫುಡ್ ಡೆಲಿವರಿ ಸೇವೆಯನ್ನು ಆರಂಭ ಮಾಡಿದ್ದೇವೆ ಎಂದು ಕೂಡಾ ಮಾಹಿತಿ ನೀಡಿದ್ದಾರೆ. 

click me!